Tag: ಛಂಗೂರ್‌ ಬಾಬಾ

  • ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    – ಬಡವರು, ವಿಧವೆಯರು, ದುರ್ಬಲ ಮನಸ್ಥಿತಿಯ ಯುವತಿಯರೇ ಟಾರ್ಗೆಟ್
    – ಮುಸ್ಲಿಂ ರಾಷ್ಟ್ರಗಳಿಂದ 500 ಕೋಟಿ ರೂ. ಫಂಡಿಂಗ್

    ಲಕ್ನೋ: ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ (Chhangur Baba), ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ (Love Jihad) ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಸ್ಫೋಟಕ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಬಡವರು, ವಿಧವೆಯರು ಮತ್ತು ದುರ್ಬಲ ಮನಸ್ಥಿತಿಯ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮತಾಂತರ ನಡೆಸಲಾಗುತ್ತಿತ್ತು. ಇದಕ್ಕೆ ಕಳೆದ ಮೂರು ವರ್ಷದಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ಸುಮಾರು 500 ಕೋಟಿ ರೂ. ಪಡೆದಿದ್ದ. ಯುವಕರನ್ನು ಬಳಸಿಕೊಂಡು ಬಡ ಕುಟುಂಬದ ಯುವತಿಯರಿಗೆ, ವಿಧವೆಯರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ಒಡ್ಡಿ ಮತಾಂತರಿಸಲಾಗುತ್ತಿತ್ತು. ಇದನ್ನೂ ಓದಿ: ಮಾದಕದ್ರವ್ಯ ಮಾರಾಟ – ಪ್ರಿಯಾಂಕ್‌ ಖರ್ಗೆ ಆಪ್ತ ಅರೆಸ್ಟ್‌

    ಇನ್ನು ಹಿಂದೂ ಯುವತಿಯರನ್ನು ಮತಾಂತರಿಸಿದ್ದಕ್ಕಾಗಿ ಛಂಗೂರ್ ಬಾಬಾ ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮುಸ್ಲಿಂ ಪುರುಷರಿಗೆ ಹಣ ಪಾವತಿಯನ್ನೂ ಮಾಡಿದ್ದಾನೆ. ಛಂಗೂರ್ ಬಾಬಾ ಜೊತೆಗೆ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ನನ್ನು ಸಹ ಬಂಧಿಸಿ ಏಳು ದಿನಗಳ ಎಟಿಎಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ವಿದೇಶಿ ಫಂಡಿಂಗ್ ಪತ್ತೆಹಚ್ಚಲು ಮತ್ತು ಹೆಚ್ಚಿನ ಸಂಪರ್ಕಗಳನ್ನು ಪತ್ತೆಹಚ್ಚುವ ಸಲುವಾಗಿ ಗುಪ್ತಚರ ಬ್ಯೂರೋ (IB) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಛಂಗೂರ್ ಬಾಬಾ ಮಗ ಮೆಹಬೂಬ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಲಕ್ನೋ ಜಿಲ್ಲಾ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಐಎಸ್‌ಐ ಜೊತೆ ನಂಟಿಗೆ ಯತ್ನ:
    ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಮತಾಂತರ ಮಾತ್ರವಲ್ಲದೇ ಛಂಗೂರ್ ಬಾಬಾ ನೇಪಾಳಕ್ಕೆ ತೆರಳಿದ್ದು, ಪಾಕ್ ಜೊತೆಗಿನ ಸಂಬಂಧವನ್ನು ಬಲಪಡಿಸಲು ಅಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

    ಮತಾಂತರಕ್ಕೆ ಕೋಡ್‌ವರ್ಡ್ ಬಳಕೆ:
    ಛಂಗೂರ್ ಬಾಬಾ ತಾನು ಮಾಡುತ್ತಿರುವ ಕೃತ್ಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಪ್ರತ್ಯೇಕ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದ. ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಹಾಗೂ ದರ್ಶನ್ ಎಂಬ ಕೋಡ್‌ವರ್ಡ್‌ಗಳ ಮೂಲಕ ಯುವತಿಯರ ಮತಾಂತರ ನಡೆಯುತ್ತಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ

  • ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ಲಕ್ನೋ: ಮತಾಂತರ ಮಾಸ್ಟರ್‌ಮೈಂಡ್‌ ಛಂಗೂರ್‌ ಬಾಬಾನ (Chhangur Baba) ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮತಾಂತರಕ್ಕಾಗಿ ಹಲವಾರು ಕೋಡ್‌ ವರ್ಡ್‌ಗಳನ್ನು ಬಳಸಿರುವುದು ಬಯಲಾಗಿದೆ.

    ‘ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಮತ್ತು ದರ್ಶನ’ ಇವು ಜಮಾಲುದ್ದೀನ್‌ ಅಲಿಯಾಸ್‌ ಛಂಗೂರ್‌ ಬಾಬಾ ಬಳಸುತ್ತಿದ್ದ ಕೋಡ್‌ ವರ್ಡ್‌ಗಳು. ಹೆಚ್ಚಾಗಿ ಮಹಿಳೆಯರನ್ನು, ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆ, ಬೆದರಿಕೆ ಮೂಲಕ ಮತಾಂತರಕ್ಕೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ – ಬುಲ್ಡೋಜರ್‌ನಿಂದ ನೆಲಸಮ

    ಮಹಿಳೆಯರ ಮತಾಂತರಕ್ಕೆ ಪ್ರಾಜೆಕ್ಟ್‌, ಮಿಟ್ಟಿ ಪಲಟ್ನಾ ಎಂದರೆ ಧಾರ್ಮಿಕ ಮತಾಂತರ. ಕಾಜಲ್‌ ಲಗಾನಾ ಎಂದರೆ ಕುಶಲತೆ, ದರ್ಶನ ಎಂದರೆ ಸಂತ್ರಸ್ತೆ ಎಂದು ಸಂತ್ರಸ್ತರು ಎಂದು ಛಂಗೂರ್‌ ಬಾಬಾ ಉಲ್ಲೇಖಿಸುತ್ತಿದ್ದ.

    ಈ ವಿವರಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಹಿರಂಗಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಛಂಗೂರ್ ಬಾಬಾಗೆ ಸಂಬಂಧಿಸಿದ 18 ಬ್ಯಾಂಕ್ ಖಾತೆಗಳಿಂದ 68 ಕೋಟಿ ರೂ.ಗಳ ವಹಿವಾಟು ನಡೆದಿದೆ. ಮೂರು ತಿಂಗಳ ಅವಧಿಯಲ್ಲಿ ಈ ಖಾತೆಗಳಲ್ಲಿ ಸುಮಾರು 7 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

    ಜು.5 ರಂದು, ಧಾರ್ಮಿಕ ಮತಾಂತರ ಮಾಸ್ಟರ್‌ಮೈಂಡ್ ಛಂಗೂರ್ ಬಾಬಾ ಮತ್ತು ಆತನ ಸಹಾಯಕಿ ನೀತು ಅಲಿಯಾಸ್ ನಸ್ರೀನ್ ಇಬ್ಬರನ್ನೂ ಬಂಧಿಸಲಾಯಿತು. ಈ ಇಬ್ಬರು ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಮಾಧಪುರ ನಿವಾಸಿಗಳು. ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಆತನ ಬಂಧನಕ್ಕೆ 50,000 ರೂ. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

  • ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

    ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

    – 40 ಬ್ಯಾಂಕ್‌ ಖಾತೆಗಳಲ್ಲಿ ಬರೋಬ್ಬರಿ 106 ಕೋಟಿ ಹಣ ಹೊಂದಿರೋ ಆರೋಪಿ

    ನವದೆಹಲಿ: ಒಂದು ಕಾಲದಲ್ಲಿ ಸೈಕಲ್‌ನಲ್ಲಿ ತಾಯತಗಳನ್ನು ಮಾರಾಟ ಮಾಡುತ್ತಿದ್ದ, ಧಾರ್ಮಿಕ ಮತಾಂತರ (Religious Conversion) ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಜಮಾಲುದ್ದೀನ್‌ ಬಳಿ ಈಗ ಬರೋಬ್ಬರಿ 106 ಕೋಟಿ ಆಸ್ತಿ ಪತ್ತೆಯಾಗಿದೆ.

    ಜಮಾಲುದ್ದೀನ್‌ ಅಲಿಯಾಸ್‌ ಛಂಗೂರ್‌ ಬಾಬಾ (Chhangur Baba) ಸೈಕಲ್‌ ಹೊಡೆಯುತ್ತಾ ತಾಯತಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ನಂತರ ಧಾರ್ಮಿಕ ಮತಾಂತರ ಕೆಲಸಕ್ಕೆ ಇಳಿದ. ಈಗ ಆತನ ಬಳಿ 40 ಬ್ಯಾಂಕ್‌ ಖಾತೆಗಳಿದ್ದು, ಕೋಟ್ಯಂತರ ಹಣ ಹೊಂದಿದ್ದಾನೆ. ಇದನ್ನೂ ಓದಿ: Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

    ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಮತಾಂತರ ದಂಧೆಗೆ ಸಂಬಂಧಿಸಿದಂತೆ ಛಂಗೂರ್ ಬಾಬಾ ಮತ್ತು ಆತನ ಆಪ್ತ ಸಹಚರ ನೀತು ಅಲಿಯಾಸ್ ನಸ್ರೀನ್ ಎಂಬವನನ್ನು ಶನಿವಾರ ಲಕ್ನೋದ ಹೋಟೆಲ್ ಒಂದರಿಂದ ಬಂಧಿಸಲಾಯಿತು. ಅಂದಿನಿಂದ, ಜಮಾಲುದ್ದೀನ್ ಸುತ್ತ ಕುಣಿಕೆ ಬಿಗಿಯಾಗುತ್ತಿದೆ.

    ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗಗಳು ಮತ್ತು ವಿಧವೆ ಮಹಿಳೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ವಿವಾಹದ ಭರವಸೆ ಅಥವಾ ಬೆದರಿಕೆಯ ಮೂಲಕ ಬಲವಂತವಾಗಿ ಆಮಿಷವೊಡ್ಡಿರುವುದು ಬೆಳಕಿಗೆ ಬಂದಿದೆ. ಇದು ಧಾರ್ಮಿಕ ಮತಾಂತರಕ್ಕೆ ಸ್ಥಾಪಿತ ಕಾರ್ಯವಿಧಾನಗಳನ್ನು ಉಲ್ಲಂಘಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಈ ಗ್ಯಾಂಗ್‌ಗೆ ಭಯೋತ್ಪಾದಕ ಸಂಬಂಧವಿದೆಯೇ ಎಂದು ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ತನಿಖೆ ನಡೆಸುತ್ತಿದೆ. ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕೂಡ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಬಲರಾಂಪುರದಲ್ಲಿ ಈ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ವ್ಯಕ್ತಿಗಳ ಬಗ್ಗೆಯೂ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.