Tag: ಚೌಕ

  • ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

    ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

    ಬೆಂಗಳೂರು: ಬಳ್ಳಾರಿ ಜೈಲಿಗೆ (Ballari Jail) ದರ್ಶನ್‌ (Darshan) ಎರಡನೇ ಬಾರಿ ಹೋಗುತ್ತಿದ್ದಾರೆ.

    ಹೌದು. 2017ರಲ್ಲಿ ತೆರೆ ಕಂಡಿದ್ದ ಕನ್ನಡದ ಚೌಕ (Chowka) ಸಿನಿಮಾದ ಶೂಟಿಂಗ್‌ (Shooting) ಈ ಜೈಲಿನಲ್ಲಿ ನಡೆದಿತ್ತು. ಕೊನೆ ಭಾಗವನ್ನು ಜೈಲಿನಲ್ಲಿರುವ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.

    ಈ ಚಿತ್ರದ ಶೂಟಿಂಗ್‌ಗಾಗಿ ದರ್ಶನ್‌ ಜೈಲಿಗೆ ಆಗಮಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ರಾಬರ್ಟ್ ಹೆಸರಿನ ಪಾತ್ರ ಮಾಡಿದ್ದರು. ಅಂದು ಶೂಟಿಂಗ್‌ಗಾಗಿ ಆಗಮಿಸಿದ್ದ ದರ್ಶನ್‌ ಈಗ ಅದೇ ಜೈಲಿನಲ್ಲಿ ಸೆರೆವಾಸಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ; ಮತ್ತೆ ಮೂವರು ಪೊಲೀಸರು ಅಮಾನತು

     ಬಳ್ಳಾರಿ ಜೈಲಿನಲ್ಲಿ ವಿವಿಐಪಿ ಅತಿಥ್ಯ ಸಿಗಲು ಸಾಧ್ಯವಿಲ್ಲ. ಭೀಮಾ ತೀರದ ಹಂತಕರು, ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳು. ನಟೋರಿಯಸ್‌ ರೌಡಿಗಳನ್ನು ಇದೇ ಬಳ್ಳಾರಿ ಜೈಲಿಗೆ ತಂದು ಹಾಕಲಾಗಿತ್ತು. ಬಳ್ಳಾರಿ ಜೈಲಲ್ಲಿ ಯಾವುದೇ ವಿಲಾಸಿ ಜೀವನಕ್ಕೆ ಅವಕಾಶ ಇಲ್ಲ.

    ಇಂದು ದರ್ಶನ್‌ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರೆದುರು ಹಾಜರುಪಡಿಸಲಾಗುತ್ತದೆ. ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯಿದೆ.

    ನ್ಯಾಯಾಧೀಶರು ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ಬಳಿಕ ಮಧ್ಯಾಹ್ನ 1 ಗಂಟೆ ಬಳಿಕ ಬಿಗಿ ಭದ್ರತೆಯಲ್ಲಿ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಿದ್ದಾರೆ.

     

  • ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ಕ್ತಕಣ್ಣೀರು (Rakthakanniru), ಶ್ರೀರಾಮ್, ಚೌಕ, ದಶರಥ, ಲಾಲಿ ಹಾಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಅಭಿರಾಮಿ(Abhirami)  ಅವರು ವಿಶ್ವ ತಾಯಂದರ ದಿನದಂದು ಹೊಸ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಗು ಆಗದೇ ಇರೋದಕ್ಕೆ ತಮ್ಮ ಜೀವನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ‘ಲಾಲಿಹಾಡು’ (Lalihaadu) ಖ್ಯಾತಿಯ ಅಭಿರಾಮಿ ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ನಟನೆಯ ‘ಕೋಟಿಗಿಬ್ಬ-3’ (Kotigobba -3) ಚಿತ್ರದಲ್ಲಿ ಆಕೆ ನಟಿಸಿದ್ದರು. ವಿಶ್ವ ತಾಯಂದಿರ ದಿನಾಚರಣೆಯ ಸಂಭ್ರಮದಲ್ಲೇ ನಟಿ ಅಭಿರಾಮಿ ಅಭಿಮಾನಿಗಳ ಜೊತೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗರ್ಭಿಣಿ ಆಗದೇ ಮಗು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Abhirami (@abhiramiact)

    20019ರಲ್ಲಿ ನಟಿ ಅಭಿರಾಮಿ, ರಾಹುಲ್ ಪವನನ್ ಎಂಬುವವರ ಕೈ ಹಿಡಿದಿದ್ದರು. ರಾಹುಲ್ ಮಲಯಾಳಂನ ಖ್ಯಾತ ಸಾಹಿತಿ ಪುತನ್ ವಿಟಿಲ್ ನಾರಾಯಣನ್ ನಾಯರ್ ಮೊಮ್ಮಗ. ನಟಿ ಅಭಿರಾಮಿ- ರಾಹುಲ್ ದಂಪತಿ ಕಳೆದ ವರ್ಷ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳು ಆಗದ ಕಾರಣಕ್ಕೆ ಆಕೆ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಲಿವುಡ್‌ನಲ್ಲಿ ಹೇಳಲಾಗುತ್ತಿದೆ. ಆಕೆಯ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಯಂದಿರ ದಿನದ ಸಂಭ್ರಮದಲ್ಲೇ ತಾವು ಮಗು ದತ್ತು ಪಡೆದಿರುವ ವಿಚಾರವನ್ನು ಅಭಿರಾಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ- ಮಗಳ ಫೋಟೊ ಸಮೇತ ಆಕೆ ಪೋಸ್ಟ್ ಮಾಡಿ, ಗುಡ್ ನ್ಯೂಸ್ ಹೇಳಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜೋಡಿಯಾಗಲಿದ್ದಾರೆ ದೀಪಿಕಾ ಪಡುಕೋಣೆ

     

    View this post on Instagram

     

    A post shared by Abhirami (@abhiramiact)

    ಆತ್ಮೀಯ ಸ್ನೇಹಿತರೇ, ರಾಹುಲ್ ಹಾಗೂ ನಾನು ಈಗ ‘ಕಲ್ಕಿ’ (Kalki) ಎನ್ನುವ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ ಎಂದು ಹೇಳಲು ಥ್ರಿಲ್ಲಾಗುತ್ತಿದೆ. ನಾವು ಕಳೆದ ವರ್ಷ ಮಗಳನ್ನು ದತ್ತು ಪಡೆದುಕೊಂಡಿದ್ದೆವು. ಇದು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ನಾನು ಕೂಡ ತಾಯಿಯಾಗಿ ಇವತ್ತು ತಾಯಂದಿರ ದಿನ ಆಚರಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ನಾನು- ನಮ್ಮ ಕುಟುಂಬ ನನ್ನ ಹೊಸ ಪಾತ್ರ ನಿಭಾಯಿಸಲು ನಿಮ್ಮ ಆಶೀರ್ವಾದ ಕೋರುತ್ತಿದ್ದೇವೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.