Tag: ಚೈನಾ

  • ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

    ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

    ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

    4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

    ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

    ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
    ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.

  • ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ಬೀಜಿಂಗ್: ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಕಂಪೆನಿಯು ಮುಂದುಗಡೆ 16 ಎಂಪಿ ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಬಿಡುಗಡೆ ಮಾಡಿದೆ.

    ರೆಡ್‍ಮೀ ಎಸ್2 ಫೋನನ್ನು ಬಿಡುಗಡೆ ಮಾಡಿದ್ದು, 2 ಮೈಕ್ರಾನ್ ಪಿಕ್ಸೆಲ್ ಜೊತೆಗೆ 16 ಎಂಪಿ ಕ್ಯಾಮೆರಾ, ಹಿಂದುಗಡೆ 12 ಎಂಪಿ ಕ್ಯಾಮೆರಾವನ್ನು ನೀಡಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನನ್ನು ತಯಾರಿಸಿದ್ದು, ರೆಡ್‍ಮಿಯ ಅತ್ಯುತ್ತಮ ಸೆಲ್ಫಿ ಫೋನ್ ಎಂದು ಕ್ಸಿಯೋಮಿ ತಿಳಿಸಿದೆ.

    ರೋಸ್ ಗೋಲ್ಡ್, ಷಾಂಪೇನ್ ಗೋಲ್ಡ್, ಪ್ಲಾಟಿನಂ ಸಿಲ್ವರ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಮೆ 17 ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಸಾಧಾರಣವಾಗಿ ಕ್ಸಿಯೋಮಿ ಫೋನ್ ಹೈಬ್ರಿಡ್ ಸಿಮ್ ಸ್ಲಾಟ್ ಗಳನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಎರಡು ಸಿಮ್ ಜೊತೆ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಭಾರತಕ್ಕೆ ಈ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

     

    ಬೆಲೆ ಎಷ್ಟು?
    3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 999 ಯುವಾನ್(ಅಂದಾಜು 10,600 ರೂ). 4 ಜಿಬಿ ರ‍್ಯಾಮ್ /64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1299 ಯುವಾನ್(ಅಂದಾಜು 13,700 ರೂ) ನಿಗದಿ ಮಾಡಿದೆ.

    ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    160.7* 77.3 * 8.1 ಮಿ.ಮೀ., 170 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ, 269 ಪಿಪಿಐ).

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1(ಓರಿಯೊ), ಕ್ವಾಲಕಂ ಎಂಎಸ್ ಎಂ 8953 ಸ್ನ್ಯಾಪ್ ಡ್ರಾಗನ್ 625 ಪ್ರೊಸೆಸರ್, ಆಕ್ಟಾ ಕೋರ್ 2.0 ಉಊz ಕಾರ್ಟೆಕ್ಸ್-ಎ53 ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,  3ಜಿಬಿ ರ‍್ಯಾಮ್/32 ಜಿಬಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಮತ್ತು ಇತರೇ:
    12 ಎಂಪಿ ಹಿಂಭಾಗ, 16 ಎಂಪಿ ಮುಂಭಾಗದ ಕ್ಯಾಮೆರಾ, ಎಲ್‍ಇಡಿ ಫ್ಲಾಶ್, ಫೇಸ್ ಡಿಟೆಕ್ಶನ್ ಆಟೋ ಫೋಕಸ್, ಜಿಯೋ-ಟ್ಯಾಗಿಂಗ್, ಟಚ್ ಫೋಕಸ್. 3080 ಎಂಎಎಚ್ ಬ್ಯಾಟರಿ.

  • 3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್ ಪತ್ರಿಕೆ ವರದಿ ಮಾಡಿದೆ.

    ರಸ್ತೆಯಲ್ಲಿ ಇತರೆ ಬಾಲಕಿಯರೊಂದಿಗೆ ಚೆನ್ ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲರೂ ಕಟ್ಟಡವೊಂದರ ಬಳಿ ನಿಂತು ಮೇಲೆ ನೋಡುತ್ತಿರ್ತಾರೆ. ಕೆಲವು ಸೆಕೆಂಡ್‍ಗಳ ಕಾಲ ಚೆನ್ ಕೂಡ ಅಲ್ಲೇ ನಿಂತು ನೋಡಿದ್ದಾಳೆ. ನಂತರ ತನ್ನ ಎರಡೂ ಕೈ ಚಾಚಿ ಕಟ್ಟಡದ ಬಳಿ ಓಡುತ್ತಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಗು ಕೆಳಗೆ ಬೀಳುತ್ತದೆ. ನಂತರ ಚೆನ್ ಓಡಿಹೋಗಿ ಮಗುವನ್ನ ಎತ್ತಿಕೊಂಡು ಗಾಯವೇನಾದ್ರೂ ಆಯಿತಾ ಅಂತ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

    ಕೆಳಗೆ ಬೈಕ್‍ಗಳು ನಿಂತಿದ್ದರಿಂದ ಅದರ ಮೇಲೆ ಮೊದಲು ಬಿದ್ದು ನಂತರ ಮಗು ನೆಲಕ್ಕೆ ಬಿದ್ದಿದ್ದರಿಂದ ದೊಡ್ಡ ಅನಾಹುತವಾಗೋದು ತಪ್ಪಿದೆ. ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು ತನ್ನ ತಾಯಿಗಾಗಿ ಹುಡುಕಾಡುತ್ತಾ ಕಿಟಿಕಿಯ ಮೇಲೆ ಹತ್ತಿದ್ದು, ಈ ವೇಳೆ ಕೆಳಗೆ ಬಿದ್ದಿದೆ. ಘಟನೆ ನಡೆದ ನಂತರ ಮಗುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಅಂತ ವೈದ್ಯರು ಹೇಳಿರೋದಾಗಿ ವರದಿಯಾಗಿದೆ.

    https://www.youtube.com/watch?v=oiWpN-4fKus