Tag: ಚೈತ್ರಾ ಕೋಟೂರು

  • ನಟ ತಬಲಾ ನಾಣಿಗೆ ಹೆಂಡತಿ ಬೇಕಂತೆ

    ನಟ ತಬಲಾ ನಾಣಿಗೆ ಹೆಂಡತಿ ಬೇಕಂತೆ

    ಈ‌ ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370  ಎಂಬ ಚಿತ್ರ ನಿರ್ದೇಶಿಸಿದ್ದ ಕೆ.ಶಂಕರ್ (K. Shankar) ಅವರೀಗ ಕಾಮಿಡಿ ಜಾನರ್  ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್  ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ  ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ, ಕೆ.ಶಂಕರ್ ನಿರ್ದೇಶನವಿರುವ  ಆ ಚಿತ್ರದ ಹೆಸರು ‘ನನಗೂ ಹೆಂಡ್ತಿ ಬೇಕು’ (Nanagu Hendti Beku).  ದೃಷ್ಟಿ ವಿಕಲಚೇತನನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ  ಪ್ರಸಂಗಗಗಳನ್ನು  ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ  ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್  ಚಿತ್ರವಾಗಿದೆ.

    ಮದುವೆಯಾಗಲು ಹೊರಟು  ಒಂದು ಹೆಣ್ಣುಕೂಡ  ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ (Tabla Nani) ಅವರು  ಕಾಣಿಸಿಕೊಂಡಿದ್ದಾರೆ. ತಬಲ ನಾಣಿಗೆ ಎದುರು ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್  ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು  ಫೈಟ್ ಮತ್ತು ಎರಡು ಹಾಡುಗಳಿದ್ದು,  ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.

     

    ಇಡೀ ಚಿತ್ರದ ಚಿತ್ರೀಕರಣ  ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್ (Chaitra Kotooru), ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ  ನಟಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘I Am In Love’ ಎಂದ ಬಿಗ್‍ಬಾಸ್ ಖ್ಯಾತಿಯ ಚೈತ್ರಾ

    ‘I Am In Love’ ಎಂದ ಬಿಗ್‍ಬಾಸ್ ಖ್ಯಾತಿಯ ಚೈತ್ರಾ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್-7’ರ ಖ್ಯಾತಿಯ ನಟಿ ಚೈತ್ರಾ ಕೋಟೂರು ಬಿಗ್‍ಬಾಸ್‍ ಮನೆಯಲ್ಲಿದ್ದಾಗ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು. ಇದೀಗ ಪ್ರೀತಿ ಮಾಡುತ್ತಿದ್ದೀನಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

    ನಟಿ ಚೈತ್ರಾ ಬಿಗ್‍ಬಾಸ್ ಮುಗಿದ ಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಇದೀಗ ನಟಿ ಚೈತ್ರಾ ಕೋಟೂರು ‘ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

    ಚೈತ್ರಾ ಅವರು ಫೇಸ್‍ಬುಕ್ ಪೇಜಿನಲ್ಲಿ “ನಾನು ಪ್ರೀತಿಯಲ್ಲಿದ್ದೇನೆ. ಯಾರ ಜೊತೆಗೆ ಅಂತ ಕೇಳಬೇಡಿ. ನಾನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಗುವ ಎಮೋಜಿಯನ್ನು ಹಾಕಿ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

    ಚೈತ್ರಾ ಈ ರೀತಿ ಪೋಸ್ಟ್ ಮಾಡಿದ ತಕ್ಷಣ ಅನೇಕರು ಕಮೆಂಟ್ ಮಾಡುವ ಮೂಲಕ ಹುಡುಗ ಯಾರು? ಎಂದು ಕೇಳುತ್ತಿದ್ದಾರೆ. ಕೆಲವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

     

    ಬಿಗ್‍ಬಾಸ್ ಮನೆಯಲ್ಲಿ ಇದ್ದಾಗ ಚೈತ್ರಾ, ಶೈನ್ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೇ ಸ್ವತಃ ಚೈತ್ರಾ ಅವರೇ ನನಗೆ ಸೊಪ್ಪು ಮಾರುವವರ ಜೊತೆ ಮದುವೆಯಾಗಿದೆ ಎಂದು ಹೇಳಿ ಶಾಕ್ ನೀಡಿದ್ದರು. ಆದರೀಗ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೀನಿ ಎಂದು ಹೇಳಿದ್ದಾರೆ.

  • ಬಿಗ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ

    ಬಿಗ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ ನೀಡಿದ್ದು, ಮನೆಯ ಸದಸ್ಯರು ಶಾಕ್ ಆಗಿದ್ದಾರೆ.

    ಮಂಗಳವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನರಂಜನೆ ನೀಡಲು ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನು ಮನೆಗೆ ಕಳುಹಿಸಿದ್ದರು. ಗಣೇಶ್ ಅವರು ಬೆಡ್ ರೂಂ, ಡೈನಿಂಗ್ ಟೇಬಲ್, ಲಿವಿಂಗ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸುವುದಾಗಿ ಹೇಳಿ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋದರು.

    ಗಣೇಶ್ ಮನೆಯ ಮುಖ್ಯದ್ವಾರದ ಬಳಿ ಹೋಗಿ ಮ್ಯಾಜಿಕ್ ಮಾಡಿದ್ದಾರೆ. ಈ ವೇಳೆ ಚೈತ್ರಾ ಕೋಟೂರು ಅಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚೈತ್ರಾ ಅವರನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಶಾಕ್ ಆದರು. ಚೈತ್ರಾ ಅವರು ಮನೆಯೊಳಗೆ ಹೋಗುತ್ತಿದ್ದಂತೆ ಗಣೇಶ್ ಅಲ್ಲಿಂದ ಹೊರಟು ಹೋಗಿದ್ದಾರೆ.

    ಚೈತ್ರಾ ಮನೆಯೊಳಗೆ ಬಂದ ನಂತರ ನಾನು ಮೊದಲೇ ಹೇಳಿದೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಟೈಂ ಬಂದಾಗ ಎಲ್ಲರೂ ಹೋಗಬೇಕು. ಮತ್ತೆ ಟೈಂ ಬಂದಾಗ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಚೈತ್ರಾ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವುದರಿಂದ ಮನೆಯ ಕೆಲವು ಸದಸ್ಯರು ಶಾಕ್‍ನಲ್ಲಿದ್ದು, ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

    ಸೋಮವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಎಂಟ್ರಿ ಕೊಟ್ಟ ಮರುದಿನವೇ ಚೈತ್ರಾ ಕೋಟೂರು ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶಿಸಿದ್ದಾರೆ.