Tag: ಚೇರ್

  • ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    – ಕೋರ್ಟ್ ಆದೇಶ ಬರುವವರೆಗೂ ಚೇರ್ ಕೊಡದಿರಲು ನಿರ್ಧಾರ

    ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೇ ಬೇಡಿಕೆ ಇಡುತ್ತಿರುವ ದರ್ಶನ್ ಇದೀಗ ಚೇರ್‌ಗೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲಧಿಕಾರಿಗಳು ತಣ್ಣೀರು ಎರಚಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು (Ballary Central Jail) ನರದಕರ್ಶನ ಮಾಡಿಸುತ್ತಿದೆ. ಮ್ಯಾನುವಲ್ ಬಿಟ್ಟು ಹೆಚ್ಚುವರಿಯಾಗಿ ಅದೇನೇ ಬೇಡಿಕೆ ಇಟ್ಟರೂ ಜೈಲಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಜಿಕಲ್ ಕಮೋಡ್, ವಿಟಮಿನ್ ಟ್ಯಾಬ್ಲೇಟ್ ಹಾಗೂ ಟಿವಿ ಬಳಿಕ ಇದೀಗ ಕುಳಿತುಕೊಳ್ಳೋಕೆ ಚೇರ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ದರ್ಶನ್‌ಗೆ ಜೈಲಧಿಕಾರಿಗಳು ನಿಜ ಜೈಲು ಹೇಗಿರುತ್ತದೆ ಎಂಬ ರುಚಿಯನ್ನು ತೋರಿಸುತ್ತಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಾಣಭಿಕ್ಷೆಗೆ ಅಂಗಲಾಚುತ್ತಿರೋದು ‘ಎಐ’ ಫೋಟೊ? – ಆರೋಪಿ ಮೊಬೈಲ್ ಮತ್ತೆ FSL ಪರೀಕ್ಷೆಗೆ

    ಆರೋಪಿ ದರ್ಶನ್ (Actor Darshan) ಎಂತಹ ದೊಡ್ಡ ಸ್ಟಾರ್ ಆಗಿದ್ದರೂ ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ಅವರನ್ನು ಸ್ಟ್ರಿಕ್ಟ್ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಆದ ಕಾರಣ ದರ್ಶನ್ ಜೈಲಿನ ಮ್ಯಾನುವಲ್ ಪ್ರಕಾರವೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಯಾವುದೂ ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ಒಂದೊಂದೇ ಬೇಡಿಕೆಯನ್ನ ಜೈಲಧಿಕಾರಿಗಳ ಮುಂದೆ ಇಡುತ್ತಿದ್ದಾರೆ.

    ಜೈಲಧಿಕಾರಿಗಳು ಟಿವಿ ನೀಡಿದ ಬಳಿಕ ವಿಟಮಿನ್ ಟ್ಯಾಬ್ಲೇಟ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆರೋಪಿ ದರ್ಶನ್ ಚೇರ್ ಬೇಡಿಕೆ ಇಟ್ಟ ಬಳಿಕ ಜೈಲಧಿಕಾರಿಗಳು ಚೇರ್ ಕೊಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಿನ್ನೆ (ಸೆ.17) ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆ ವೇಳೆ ಆರೋಪಿ ದರ್ಶನ್ ಪರ ವಕೀಲರು ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂಡುವುದಕ್ಕೂ ಅಗುತ್ತಿಲ್ಲ. ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕೆ ಜೈಲಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಎಲ್ಲ ವ್ಯವಸ್ಥೆ ಇದೆ. ಎನ್‌ಐಎ ಕೇಸ್‌ನಲ್ಲಿರುವ ಆರೋಪಿಗಳಿಗೆ ವ್ಯವಸ್ಥೆ ಇದೆ. ಆದರೆ ದರ್ಶನ್‌ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಫುಲ್ ಹೈ ಸೆಕ್ಯೂರಿಟಿ ಎಂದು ಹೇಳುತ್ತಾರೆ. ಸರಿಯಾದ ವ್ಯವಸ್ಥೆ ಕೂಡ ಸಿಗುತ್ತಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ವಿರುದ್ಧ ಮಾರುದ್ದ ಆರೋಪ ಮಾಡಿದ್ದರು.

    ಆರೋಪಿ ದರ್ಶನ್ ಜೈಲಿನಲ್ಲಿ ಚೇರ್ ಕೇಳೇ ಇಲ್ಲವಂತೆ. ಬೆನ್ನು ನೋವಿದೆ ಎಂದು ಒಂದು ದಿಂಬನ್ನು ಕೇಳಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಇದ್ದರೆ ಕೊಡುತ್ತಾರೆ ಅಂದಿದ್ದರು. ಆದರೆ ಜೈಲಿನ ಮ್ಯಾನುವಲ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜೈಲಧಿಕಾರಿಗಳು ದಿಂಬನ್ನು ಕೊಟ್ಟಿಲ್ಲ. ಚೇರ್ ಕೊಡುವ ಬಗ್ಗೆ ಕೋರ್ಟ್ ಆದೇಶ ಮಾಡಿದರೆ ಮಾತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಳ್ಳಾರಿ ಜೈಲಿನ ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.

    ಒಟ್ಟಿನಲ್ಲಿ ಆರೋಪಿ ದರ್ಶನ್ ಅವರನ್ನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇಟ್ಟ ನಂತರ ಭದ್ರತೆ ದೃಷ್ಟಿಯಿಂದ ರಕ್ತ ಸಂಬಂಧಿಕರನ್ನು ಬಿಟ್ಟು ಯಾರೊಬ್ಬರನ್ನು ಭೇಟಿ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ನೀಡಿದ ಬಳಿಕ ಆಪ್ತರ ಬೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಬಂದಿದ್ದರು.ಇದನ್ನೂ ಓದಿ: ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    ಇನ್ನೂ ಚೇರ್ ವಿಚಾರದಲ್ಲೂ ಕ್ಲೀಯರ್ ಆಗಿರುವ ಬಳ್ಳಾರಿ ಜೈಲಧಿಕಾರಿಗಳು ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳದೇ ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ನಿರ್ಧಾರಕ್ಕೆ ಬಂದಿರುವುದು ದರ್ಶನ್ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.

  • ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಕ್ಯಾಂಪಲ: ಉಗಾಂಡದ ಸಂಸತ್ ಅಧಿವೇಶನದ ವೇಳೆ ಸದಸ್ಯರು ಚರ್ಚೆಯೊಂದರಲ್ಲಿ ಆಕ್ರೋಶ ಭರಿತರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಉಂಗಾಡ ಅಧ್ಯಕ್ಷರಾಗಲು ಗರಿಷ್ಟ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯುತಿತ್ತು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದು ತಳ್ಳಾಟ ನೂಕಾಟ ನಡೆದಿದೆ.

    ಉಗಾಂಡದ ಕಾನೂನಿನ ಪ್ರಕಾರ 75 ವರ್ಷ ಮೀರಿದವರು ಅಧ್ಯಕ್ಷರಾಗಲು ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಈಗಿನ ಅಧ್ಯಕ್ಷ ಯೊವೆರೆ ಮ್ಯೂಸೆವೆನಿ ಅವರಿಗೆ 73 ವರ್ಷವಾಗಿದ್ದು ಮತ್ತೆ ಅಧ್ಯಕ್ಷರಾಗಲು ಬಯಸಿದ್ದಾರೆ. ಹೀಗಾಗಿ ಕಾನೂನು ತಿದ್ದುಪಡಿ ಮಾಡಲು ಆಡಳಿತ ಪಕ್ಷದವರು ಪಟ್ಟು ಹಿಡಿದರೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

    ಚರ್ಚೆ ವಿಕೋಪಕ್ಕೆ ತಿರುಗಿ ಮೈಕ್ ಹಿಡಿದು ಟೇಬಲ್ ಮೇಲೆ ನಿಂತು ಸದಸ್ಯರು ರಂಪಾಟ ಮಾಡಿದ್ದಾರೆ. ಪುರುಷ ಸದಸ್ಯರು ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

  • ಚೇರ್ ಮೇಲೆ ಜಿಗಿಯುವಾಗ ಪ್ಲೈವುಡ್ ಕತ್ತು ಸೀಳಿ 3 ವರ್ಷದ ಬಾಲಕ ಸಾವು

    ಚೇರ್ ಮೇಲೆ ಜಿಗಿಯುವಾಗ ಪ್ಲೈವುಡ್ ಕತ್ತು ಸೀಳಿ 3 ವರ್ಷದ ಬಾಲಕ ಸಾವು

    ಮುಂಬೈ: ಆಟವಾಡುವ ವೇಳೆ ಚೇರ್ ಮೇಲೆ ಜಿಗಿಯಲು ಹೋಗಿ ಪ್ಲೈವುಡ್ ಕುತ್ತಿಗೆ ಸೀಳಿ 3 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಮನಕಲಕುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ವದಾಲಾದ ಪಠಾಣ್ ಮಸೀದಿ ಕಾಂಪೌಂಡ್ ನಿವಾಸಿಯಾದ ಮೊಹಮ್ಮದ್ ಅರಾಹಂ ಮೃತ ಬಾಲಕ. ಶನಿವಾರ ಸಂಜೆ ಅರಾಹಂ ಪಕ್ಕದಮನೆಗೆ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದ. ಈ ವೇಳೆ ಆತ ಅವರ ಮನೆಯಲ್ಲಿದ್ದ ಏಣಿಯನ್ನ ಹತ್ತಿದ್ದಾನೆ. ನಂತರ ಅಲ್ಲಿಂದ ಮುಂದೆ ಇದ್ದ ಪ್ಲಾಸ್ಟಿಕ್ ಚೇರ್ ಮೇಲೆ ಜಿಗಿಯಲು ಯತ್ನಿಸಿದ್ದಾನೆ. ಆದ್ರೆ ಈ ವೇಳೆ ಆಯ ತಪ್ಪಿ ಚೇರ್ ಪಕ್ಕ ಇಟ್ಟಿದ್ದ ಪ್ಲೈವುಡ್ ಮೇಲೆ ಬಾಲಕ ಬಿದ್ದಿದ್ದಾನೆ. ಪ್ಲೈವುಡ್‍ನ ಒಂದು ಭಾಗ ಬಾಲಕನ ಕುತ್ತಿಗೆಯನ್ನ ಸೀಳಿದೆ.

    ಕೂಡಲೇ ಆತನನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತಾದ್ರೂ ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಬಾಲಕ ಸಾವನ್ನಪ್ಪಿರುವುದಾಗಿ ಹೇಳಿದ್ರು ಅಂತ ಘಟನೆ ಬಗ್ಗೆ ಪಕ್ಕದಮನೆಯವರು ವಿವರಿಸಿದ್ದಾರೆ.

    ಅರಾಹಂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಯೋನ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರ್‍ಎ ಕಿದ್ವಾಯ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ನಾವು ಅರಾಹಂನ ಸ್ನೇಹಿತರೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದ್ರೆ ಅವರೆಲ್ಲಾ ಘಟನೆ ನಂತರ ತುಂಬಾ ಭಯದಲ್ಲಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಮನೆಯ ಅಂದ ಹೆಚ್ಚಿಸುವ ಫರ್ನಿಚರ್ ಆಯ್ಕೆಗೆ ಇಲ್ಲಿದೆ 5 ಟಿಪ್ಸ್

    ಮನೆಯ ಅಂದ ಹೆಚ್ಚಿಸುವ ಫರ್ನಿಚರ್ ಆಯ್ಕೆಗೆ ಇಲ್ಲಿದೆ 5 ಟಿಪ್ಸ್

    ನೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಅದನ್ನ ಚೆನ್ನಾಗಿ ಸಿಂಗರಿಸಿದರೆ ಎಂಥ ಮನೆಯೂ ಅಂದವಾಗಿ ಕಾಣುತ್ತದೆ. ಅದರಲ್ಲೂ ಸರಿಯಾದ ಪೀಠೋಪಕರಣಗಳನ್ನ ಆಯ್ಕೆ ಮಾಡಿ ಮನೆಯನ್ನ ಐಶಾರಾಮಿಯಾಗಿ ಕಾಣುವಂತೆ ಮಾಡಬಹುದು. ಅದಕ್ಕಾಗಿ ಇಲ್ಲಿದೆ 5 ಟಿಪ್ಸ್

    1. ಕಡಿಮೆ ಉದ್ದಳತೆ ಇರೋ ಚೇರ್‍ಗಳಿಂದ ರೂಮಿನ ಎತ್ತರವನ್ನ ದೊಡ್ಡದಾಗಿ ಕಾಣುವಂತೆ ಮಾಡಬಹುದು. ರೂಮಿನಲ್ಲಿ ಉದ್ದವಾದ ನಿಲುವುಗನ್ನಡಿ ಇರಲಿ. ಜೊತೆಗೆ ಚೇರ್‍ಗಳ ಉದ್ದಳತೆ ಕಡಿಮೆಯಾಗಿದ್ದರೆ ಆಗ ನಿಮ್ಮ ರೂಮ್ ಉದ್ದವಾಗಿ ಕಾಣುತ್ತದೆ.

    2. ಮನೆಯಲ್ಲಿ ಪುಟ್ಟ ಮಕ್ಕಳಿದ್ರೆ ಸೋಫಾ ತುಳಿದು ಹಾಳುಮಾಡಿಬಿಡ್ತಾರೆ ಅಂತ ಸೋಫಾ ಖರೀದಿಸೋದನ್ನ ಮುಂದೂಡಬೇಡಿ. ಅದರ ಬದಲು ಸೋಫಾ ಮೇಲೆ ಚಿಕ್ಕ ಚಿಕ್ಕ ದಿಂಬುಗಳನ್ನ ಹಾಕಿದ್ರೆ ಅದರ ಅಂದ ಮತ್ತಷ್ಟು ಹೆಚ್ಚುತ್ತದೆ.

    3. ಹಾಲ್‍ನ ಮೂಲೆಯಲ್ಲೋ ಅಥವಾ ಮನೆಯ ಇನ್ಯಾವುದೇ ಸ್ಥಳದಲ್ಲಿ ಜಾಗ ಖಾಲಿ ಕಾಣುತ್ತಿದೆ ಎಂದಾದ್ರೆ ಒಂದು ಸುಂದರವಾದ, ವಿಶಿಷ್ಟವಾದ ಚೇರ್ ಆ ಜಾಗವನ್ನ ಅಂದಗೊಳಿಸುತ್ತದೆ.

    4. ಮನೆಯ ಫರ್ನಿಚರ್‍ಗಳ ಬಣ್ಣದ ಆಯ್ಕೆಯಲ್ಲೂ ಎಚ್ಚರ ವಹಿಸಿ. ಗೋಡೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಫರ್ನಿಚರ್‍ಗಳು ಇರಲಿ. ಹಾಗಂತ ಗೋಡೆ, ಸೋಫಾ, ಚೇರ್, ಎಲ್ಲವೂ ಒಂದೇ ಬಣ್ಣದಲ್ಲಿರಬೇಕು ಅಂತಲ್ಲ. ಒಂದು ಬಣ್ಣಕ್ಕೆ ಮತ್ತೊಂದು ಪೂರಕವಾಗಿರಬೇಕು. ಉದಾಹರಣೆಗೆ ಬಿಳಿ, ಕಂದು ಹಾಗೂ ತಿಳಿ ಹಸಿರು ಬಣ್ಣಗಳು ಒಟ್ಟಿಗೆ ಚೆನ್ನಾಗಿ ಕಾಣುತ್ತದೆ.

    5. ಕೋಣೆ ದೊಡ್ಡದಾಗಿದೆಯೋ ಚಿಕ್ಕದಾಗಿಯೋ ಎಂಬುದಕ್ಕೆ ತಕ್ಕಂತೆ ಫರ್ನಿಚರ್‍ಗಳ ಗಾತ್ರವನ್ನ ನಿರ್ಧರಿಸಿ. ಹಾಲ್‍ನಲ್ಲಿ ಅರ್ಧದಷ್ಟು ಜಾಗವನ್ನು ಆಕ್ರಮಿಸುವಂತಹ ಸೋಫಾ ಹಾಕಿದ್ರೆ ಓಡಾಡೋಕೂ ಕಷ್ಟವಾಗಬಹುದು. ಹೀಗಾಗಿ ನಿಮ್ಮ ಹಾಲ್‍ನ ಅಳತೆಗೆ ತಕ್ಕಂತಹ ಫರ್ನಿಚರ್ ಆಯ್ಕೆ ಮಾಡಿ.

    ಇದು ಫರ್ನಿಚರ್ ಖರೀದ್ಲೋ ಸ್ಪಾನ್ಸರ್ ಸ್ಟೋರಿ. ನಿಮ್ಮ ಬಜೆಟ್‍ಗೆ ತಕ್ಕಂತೆ ಫ್ಯಾಕ್ಟರಿ ದರದಲ್ಲಿ ಕಲಾತ್ಮಕ ಹಾಗೂ ಆಕರ್ಷಕ ಫರ್ನಿಚರ್‍ಗಳನ್ನು ಖರೀದಿಸಲು ಉತ್ಪಾದನಾ ಘಟಕಕ್ಕೆ ಒಮ್ಮೆ ಭೇಟಿ ನೀಡಿ.

    ವಿಳಾಸ: ಗ್ರೌಂಡ್ ಫ್ಲೋರ್, 299-50,3 ಸಿ ಮೇನ್ ರೋಡ್,
    ಸಾರಕ್ಕಿ, ಜೆಪಿ ನಗರ, ಮೊದಲನೇ ಹಂತ
    ಬೆಂಗಳೂರು – 560078
    ಫೋನ್ ನಂಬರ್: 9901516515

    ಫೇಸ್‍ಬುಕ್ ಲಿಂಕ್: https://www.facebook.com/Furniturekharidlo/