Tag: ಚೇತೇಶ್ವರ ಪೂಜಾರಾ

  • ಪೂಜಾರಾ ನೀರು ಕುಡಿಯೋದನ್ನು ಕಂಡು ಅಚ್ಚರಿಗೊಂಡ ಪ್ರೇಕ್ಷಕರು – ವಿಡಿಯೋ ವೈರಲ್

    ಪೂಜಾರಾ ನೀರು ಕುಡಿಯೋದನ್ನು ಕಂಡು ಅಚ್ಚರಿಗೊಂಡ ಪ್ರೇಕ್ಷಕರು – ವಿಡಿಯೋ ವೈರಲ್

    ರಾಜ್‍ಕೋಟ್: ಇಂಡೋ, ವೆಸ್ಟ್ ಇಂಡಿಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಚೇತೇಶ್ವರ ಪೂಜಾರ ತಮ್ಮ ಜೇಬಿನಲ್ಲಿ ಸಣ್ಣ ನೀರಿನ ಬಾಟಲ್ ನೊಂದಿಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.

    ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಡುವೆ ಚೇತೇಶ್ವರ ಪೂಜಾರಾ ವಿರಾಮ ಇಲ್ಲದಿದ್ದರೂ ನೀರಿನ ಬಾಟಲಿ ತಂದು ನೀರು ಕುಡಿದಿದ್ದರು. ಇದನ್ನು ಕಂಡ ಪ್ರೇಕ್ಷಕರು ಕ್ಷಣ ಕಾಲ ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಬ್ಯಾಟಿಂಗ್ ವೇಳೆ ನೀರು ಕುಡಿದಿರುವುದು ಇದೇ ಮೊದಲು ಎಂದು ತಿಳಿಸಿದೆ.

    https://twitter.com/KabaliOf/status/1047725468076531712?

    ಸಾಮಾಜಿಕ ಜಾಲತಾಣದಲ್ಲಿ ಪೂಜಾರಾ ಅವರ ವಿಡಿಯೋ ವೈರಲ್ ಆಗಿದ್ದು, ಹಲವರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಮರುಟ್ವೀಟ್ ಮಾಡಿದ್ದಾರೆ. ಬ್ಯಾಟ್ಸ್ ಮನ್‍ಗಳು ರನ್ ಸಿಡಿಸಲು ಹೆಲ್ಮೆಟ್, ಗ್ಲೌಸ್, ಪ್ಯಾಡ್ ತಂದರೆ ಪೂಜಾರಾ ನೀರಿನ ಬಾಟಲ್ ತಂದಿದ್ದಾರೆ. ಆದರೆ ಅದರೊಂದಿಗೆ ಲಾಂಚ್ ಬಾಕ್ಸ್ ತರಲು ಮರೆತಿದ್ದಾರೆ ಎಂದು ಕಾಲೆಳೆದಿದ್ದಾರೆ.

    ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಪೂಜಾರಾ 130 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 86 ರನ್ ಸಿಡಿಸಿದರು. ಇತ್ತ ಪೃಥ್ವಿ ಶಾ ಜೊತೆಗೆ 2ನೇ ವಿಕೆಟ್ ಗೆ 206 ರನ್ ಜೊತೆಯಾಟ ನೀಡಿದ ಪೂಜಾರ ಉತ್ತಮ ಮೊತ್ತ ಪೇರಿಸಲು ಕಾರಣರಾದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಇದುವೆಗೂ ಪೂಜಾರಾ 49.57 ಸರಾಸರಿಯಲ್ಲಿ 4,809 ರನ್ ಸಿಡಿಸಿದ್ದು, 5 ಸಾವಿರ ರನ್ ಪೂರೈಸುವ ಸನಿಹದಲ್ಲಿದ್ದಾರೆ. ಇದರಲ್ಲಿ 15 ಶತಕಗಳು, 18 ಅರ್ಧ ಶತಕಗಳು ಸೇರಿದೆ.

    ಮೊದಲ ದಿನದಾಟಕ್ಕೆ ಭಾರತ 89 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿದೆ. ವಿರಾಟ್ ಕೊಹ್ಲಿ 72 ರನ್(137 ಎಸೆತ, 4 ಬೌಂಡರಿ) ರಿಷಬ್ ಪಂತ್ 17 ರನ್(21 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv