Tag: ಚೇತರಿಕೆ

  • ಮಲೇಷ್ಯಾದಲ್ಲಿ ದೋಣಿ ಅಪಘಾತ: ನಟ ವಿಜಯ್  ಆಂಟನಿ ಚಿಕಿತ್ಸೆಗೆ ಸ್ಪಂದನೆ

    ಮಲೇಷ್ಯಾದಲ್ಲಿ ದೋಣಿ ಅಪಘಾತ: ನಟ ವಿಜಯ್ ಆಂಟನಿ ಚಿಕಿತ್ಸೆಗೆ ಸ್ಪಂದನೆ

    ಪಿಚ್ಚೈಕಾರನ್ 2 (Picchaikaran 2) ಸಿನಿಮಾದ ಶೂಟಿಂಗ್ ವೇಳೆ ದೋಣಿ (boat) ಅಪಘಾತದಲ್ಲಿ (accident) ತೀವ್ರ ಗಾಯಗೊಂಡಿದ್ದ ತಮಿಳಿನ ಖ್ಯಾತ ನಟ ವಿಜಯ್ ಆಂಟನಿ (Vijay Antony) ಸ್ಥಿತಿ ಗಂಭೀರ ಎಂದು ಹೇಳಲಾಗಿತ್ತು. ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಿಜಯ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದೂ ಹೇಳಿದ್ದಾರೆ.

    ‘ಪಿಚ್ಚೈಕಾರನ್ 2’ ಸಿನಿಮಾದ ಶೂಟಿಂಗ್ ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿತ್ತು. ಕೂಡಲೇ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರ ಹೇಳಿಕೆಯ ಪ್ರಕಾರ, ‘ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ಮಲೇಷ್ಯಾದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು. ಅಲ್ಲದೇ, ಅವರನ್ನು ಚೆನ್ನೈಗೆ ಕರೆತರುವ ಕುರಿತು ಪತ್ನಿ ಫಾತಿಮಾ ಹೇಳಿಕೆ ನೀಡಿದ್ದರು. ಅದರಂತೆ ಚೆನ್ನೈಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೊದಲು ಸ್ಥಿತಿ ಚಿಂತಾಜನಕವಾಗಿದ್ದರಿಂದ ವಿಜಯ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು.

    ಅಪಘಾತದ ರಭಸಕ್ಕೆ ವಿಜಯ್ ಅವರ ಹಲ್ಲು ಮತ್ತು ದವಡೆಗೆ ತೀವ್ರತರಹದ ಪೆಟ್ಟು ಬಿದ್ದಿದೆ. ಮೂಳೆಗಳು ಮುರಿದಿವೆ ಎಂದು ಹೇಳಲಾಗುತ್ತಿದೆ. ಮಲೇಷ್ಯಾದ ಆಸ್ಪತ್ರೆಯಲ್ಲಿ ವಿಜಯ್ ಇರುವಾಗ ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರಿಗೆ ಪ್ರಜ್ಞೆ ಕೂಡ ಬಂದಿದೆ. ಪಿಚ್ಚೈಕಾರನ್ 2 ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡುವುದಾಗಿ ಮೊನ್ನೆಯಷ್ಟೇ ಘೋಷಿಸಿ ಅವರು ಚಿತ್ರೀಕರಣದಲ್ಲಿ ತೊಡಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ವಾಷಿಂಗ್ಟನ್: ಶುಕ್ರವಾರ ನ್ಯೂಯಾರ್ಕ್ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರನ್ನು ನಿನ್ನೆ ರಾತ್ರಿ ವೆಂಟಿಲೇಟರ್‌ನಿAದ ತೆಗೆಯಲಾಗಿದೆ. ರಶ್ದಿ ಅವರು ಇದೀಗ ಮಾತನಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಚಾಕು ಇರಿತಕ್ಕೊಳಗಾದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ದಾಳಿಯಿಂದ ರಶ್ದಿಯ ತೋಳಿನ ನರಗಳು ಹಾಗೂ ಪಿತ್ತಜನಕಾಂಗ ಹಾನಿಗೊಂಡಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದ ಆರೋಪಿ ಹದಿ ಮತರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆತ ಪೂರ್ವಯೋಜಿತ ದಾಳಿ ನಡೆಸಿ, ರಶ್ದಿಗೆ 10 ಬಾರಿ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

    ಸದ್ಯ ಇದೀಗ ರಶ್ದಿ ಅವರು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ. ಈಗ ಅವರು ಮಾತನಾಡುತ್ತಿದ್ದಾರೆ. ಅವರು ಬೇಗನೆ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣ ಗುಣಮುಖ

    ದೇಶದ ಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣ ಗುಣಮುಖ

    ತಿರುವನಂತಪುರಂ: ಭಾರತದ ಮೊದಲ ಮಂಕಿಪಾಕ್ಸ್ ಸೋಂಕು ಕೇರಳದ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದ್ದು, ಅವರು ಇದೀಗ ವೈರಸ್‌ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಕೊಲ್ಲಂ ಮೂಲದ ವ್ಯಕ್ತಿ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಇಂದು ಬಿಡುಗಡೆಯಾಗಿದ್ದಾರೆ.

    ಜುಲೈ 12ರಂದು ದುಬೈನಿಂದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮರಳಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣ ಕಂಡು ಬಂದು, ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ: ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಇದೀಗ ಭಾರತದ ಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದಲ್ಲಿ ಕಂಡುಬಂದಿದ್ದ ಗುಳ್ಳೆಗಳು ಸಂಪೂರ್ಣವಾಗಿ ಗುಣವಾಗಿದೆ. ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದರು. ಇದನ್ನೂ ಓದಿ: ಮಳೆ ನೀರಿಗೆ ಕೊಚ್ಚಿ ಹೋದ ನಿರ್ಮಾಣ ಹಂತದ ಸೇತುವೆ

    ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿದ್ದ ಇನ್ನಿಬ್ಬರ ಆರೋಗ್ಯದ ಸ್ಥಿತಿಯೂ ಸುಧಾರಿಸುತ್ತಿದೆ. ಭಾರತದಲ್ಲಿ ಮೊದಲ 3 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದ ನೆರೆಯ ಕೇರಳದಲ್ಲಿ ಅಲ್ಲಿನ ಸರ್ಕಾರ ರೋಗ ತಡೆಗಟ್ಟುವಿಕೆ ಹಾಗೂ ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಭಯ ಬೇಡ, ಲಾಲೂ ಪ್ರಸಾದ್ ಚೇತರಿಸಿಕೊಳ್ಳುತ್ತಿದ್ದಾರೆ: ಪುತ್ರಿ ಮಿಸಾ ಭಾರ್ತಿ

    ಭಯ ಬೇಡ, ಲಾಲೂ ಪ್ರಸಾದ್ ಚೇತರಿಸಿಕೊಳ್ಳುತ್ತಿದ್ದಾರೆ: ಪುತ್ರಿ ಮಿಸಾ ಭಾರ್ತಿ

    ನವದೆಹಲಿ: ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸುಧಾರಿಸುತ್ತಿದೆ. ಶೀಘ್ರದಲ್ಲೇ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಪುತ್ರಿ ಮಿಸಾ ಭಾರ್ತಿ ಮಾಹಿತಿ ನೀಡಿದ್ದಾರೆ.

    ಮಿಸಾ ಭಾರ್ತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಾಲೂ ಪ್ರಸಾದ್ ಅವರ ಚೇತರಿಕೆಯ ಸುದ್ದಿಯನ್ನು ತಿಳಿಸಿದ್ದು, ಆಸ್ಪತ್ರೆಯಲ್ಲಿರುವ ಲಾಲೂ ಅವರ ಕೆಲವು ಭಾವನಾತ್ಮಕ ಫೊಟೋಗಳನ್ನೂ ಹಂಚಿಕೊಂಡಿದ್ದಾರೆ.

    ನಿಮ್ಮೆಲ್ಲರ ಪ್ರಾರ್ಥನೆಯಿಂದ ಹಾಗೂ ದೆಹಲಿಯ ಏಮ್ಸ್ ಆಸ್ಪತ್ರೆಯ ಉತ್ತಮ ವೈದ್ಯಕೀಯ ಆರೈಕೆಯಿಂದ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಈಗ ಅವರು ಹಾಸಿಗೆಯಿಂದ ಎದ್ದು ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ. ಇತರರ ಸಹಾಯದಿಂದ ಎದ್ದು ನಿಲ್ಲಲು ಅವರು ಸಮರ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಬೆಯೊಂದಿಗಿನ ಹಳೆ ಕ್ಷಣ ನೆನೆದ ಮೋದಿ – ಜುಲೈ 9ರಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ

    ಪ್ರತಿಯೊಂದು ಸಮಸ್ಯೆಯ ವಿರುದ್ಧ ಹೋರಾಡುವ ಕಲೆ ಲಾಲೂ ಪ್ರಸಾದ್ ಯಾದವ್ ಅವರಿಗಿಂತ ಚೆನ್ನಾಗಿ ಯಾರಿಗೆ ತಿಳಿದಿದೆ? ನಿಮ್ಮೆಲ್ಲರ ಸ್ಥೈರ್ಯ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ಲಾಲೂ ಅವರ ಸ್ಥಿತಿ ಈಗ ಉತ್ತಮವಾಗಿದೆ. ದಯವಿಟ್ಟು ವದಂತಿಗಳಿಗೆ ಗಮನ ಕೊಡಬೇಡಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಲಾಲೂ ಅವರನ್ನು ನೆನೆಸಿಕೊಳ್ಳಿ ಎಂದು ಹೇಳಿದ್ದಾರೆ.

    ಲಾಲೂ ಯಾದವ್ ಅವರ ಆರೋಗ್ಯದ ಬಗ್ಗೆ ತಿಳಿಸಿದ ಏಮ್ಸ್‌ನ ವೈದ್ಯರು, ಲಾಲೂ ಯಾದವ್ ಅವರ ಭುಜ ಹಾಗೂ ತೊಡೆಯಲ್ಲಿ ಸಣ್ಣ ಮೂಳೆ ಮುರಿತವಾಗಿದೆ. ಆದ್ದರಿಂದ ಅವರಿಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಭಿಕ್ಷೆ ಬೇಡಿದ್ದ ಹಣ ಎಲ್ಲಿ ಹೋಯ್ತು?- ಬೊಮ್ಮಾಯಿ ತಿರುಗೇಟು

    ವಾಸ್ತವವಾಗಿ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಲಾಲೂ ಯಾದವ್ ಜುಲೈ 3 ರಂದು ತಮ್ಮ ನಿವಾಸದ ಮೆಟ್ಟಿಲುಗಳಿಂದ ಜಾರಿ ಬಿದ್ದಿದ್ದರು. ಇದರಿಂದ ಅವರ ಭುಜ ಹಾಗೂ ತೊಡೆಗಳಲ್ಲಿ ಮೂಳೆ ಮುರಿತವಾಗಿತ್ತು. ಮೊದಲಿಗೆ ಅವರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಉತ್ತಮ ಚಿಕಿತ್ಸೆಗಾಗಿ ಅವರನ್ನು ಬುಧವಾರ ಏರ್ ಆಂಬುಲೆನ್ಸ್ ಮುಖಾಂತರ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಸ್ಥಿತಿ ಗಣನೀಯವಾಗಿ ಚೇತರಿಕೆ ಕಂಡಿದೆ.

    Live Tv
    [brid partner=56869869 player=32851 video=960834 autoplay=true]

  • 24 ಗಂಟೆಯಲ್ಲಿ 81,533 ಮಂದಿ ಕೊರೊನಾ ಮುಕ್ತ – ಭಾರತದಲ್ಲಿ ಚೇತರಿಕೆ ಪ್ರಮಾಣ ಏರಿಕೆ

    24 ಗಂಟೆಯಲ್ಲಿ 81,533 ಮಂದಿ ಕೊರೊನಾ ಮುಕ್ತ – ಭಾರತದಲ್ಲಿ ಚೇತರಿಕೆ ಪ್ರಮಾಣ ಏರಿಕೆ

    ನವದೆಹಲಿ: ದೇಶದಲ್ಲಿ ಕೊರೊನಾದಿಂದ ಗುಣಮುಖಗೊಳ್ಳುವವರ ಪ್ರಮಾಣ 77.77% ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 81,533 ಮಂದಿ ಚೇತರಿಕೆ ಕಂಡಿದ್ದು, ಇದು ಒಂದೇ ದಿನದಲ್ಲಿ ಗುಣಮುಖಗೊಂಡವರ ಗರಿಷ್ಠ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ಒಂದು ಕಡೆ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದು ಸಾವು ಸಂಭವಿಸುತ್ತಿವೆ. ಮತ್ತೊಂದು ಕಡೆ ಚೇತರಿಕೆ ಪ್ರಮಾಣವೂ ಕೂಡಾ ಹೆಚ್ಚಾಗಿದೆ. ಈ ಮೂರು ವಲಯಗಳಲ್ಲಿ ಐದು ರಾಜ್ಯಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಈವರೆಗೂ ದೇಶದಲ್ಲಿ 36,24,196 ಮಂದಿ ಗುಣಮುಖವಾಗಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ 60% ಮಂದಿ ಚೇತರಿಕೆ ಕಂಡಿದ್ದಾರೆ.

    ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಈ ಐದು ರಾಜ್ಯದ 60% ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿಯಲ್ಲಿ 69% ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್‍ಪಿಬಿ ಪುತ್ರ

    ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್‍ಪಿಬಿ ಪುತ್ರ

    ಚೆನ್ನೈ: ಹಿರಿಯ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅಪ್ಪ ಸಂಗೀತ ಕೇಳುತ್ತಿದ್ದಾರೆ. ಜೊತೆಗೆ ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ಅವರು ಮಾಹಿತಿ ನೀಡಿದ್ದಾರೆ.

    ಅಗಸ್ಟ್ 5ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್‍ಪಿಬಿಯವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಸ್ವಲ್ಪ ಗಂಭೀರವಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಎಸ್‍ಪಿಬಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಅವರು ನಿನ್ನೆಗಿಂತ ಹೆಚ್ಚು ಗುಣಮುಖರಾಗಿದ್ದಾರೆ ಎಂದು ಅವರ ಪುತ್ರ ಚರಣ್ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಮಾಡಿದ್ದಾರೆ.

    https://www.instagram.com/p/CEWl_Qjhbsa/

    ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚರಣ್, ತಂದೆಯ ಆರೋಗ್ಯ ನಿನ್ನೆಗಿಂತ ಇಂದು ಹೆಚ್ಚು ಸುಧಾರಣೆಗೊಂಡಿದೆ. ಅವರ ಶ್ವಾಸಕೋಶಗಳು ಉತ್ತಮ ಸ್ಥಿತಿಗೆ ಮರುಳುತ್ತಿವೆ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಜೊತೆಗೆ ತಂದೆ ಆರೋಗ್ಯವಾಗಿದ್ದು, ನನಗೆ ಏನ್ನನ್ನೋ ಬರೆದು ಹೇಳಲು ಬಂದರು. ಆದರೆ ಅವರ ಕೈಯಲ್ಲಿ ಪೆನ್ ಹಿಡಿದುಕೊಳ್ಳಲು ಆಗಲಿಲ್ಲ. ಇನ್ನೂ ಒಂದು ವಾರದಲ್ಲಿ ತಂದೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

    ಅಪ್ಪ ಇನ್ನೂ ವೆಂಟಿಲೇಟರ್ ನಲ್ಲೇ ಇದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡಿದೆ. ಅವರು ಸಂಗೀತವನ್ನು ಕೇಳುತ್ತಿದ್ದಾರೆ. ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಗಿಂತ ಅಪ್ಪ ಇಂದು ಬಹಳ ಚೇತರಿಸಿಕೊಂಡಿದ್ದಾರೆ. ಅಪ್ಪನ ಆರೋಗ್ಯಕ್ಕಾಗಿ, ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಚರಣ್ ಇನ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕೊರೊನಾ ಸೋಂಕು ತಗಲಿ ಅವರ ಶ್ವಾಸಕೋಶಗಳಿಗೆ ಹಾನಿಯಾಗಿತ್ತು.

  • ಡಯಟ್, ಧ್ಯಾನದಿಂದ ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಡಯಟ್, ಧ್ಯಾನದಿಂದ ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಹೈದರಾಬಾದ್: ಆಂಧ್ರ ಪ್ರದೇಶ ಕರ್ನೂಲ್‌ನಲ್ಲಿ ಮಹಾಮಾರಿ ಕೊರೊನಾದಿಂದ 105 ವರ್ಷದ ಅಜ್ಜಿ ಚೇತರಿಸಿಕೊಂಡಿದ್ದಾರೆ.

    ಬಿ.ಮೋಹನಮ್ಮ ಕೊರೊನಾದಿಂದ ಗೆದ್ದ 105 ವರ್ಷದ ಅಜ್ಜಿ. ಮೋಹನಮ್ಮ ಕಳೆದ ತಿಂಗಳು ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ನಂತರ ಜುಲೈ 13 ರಂದು ಅವರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಇತ್ತೀಚೆಗೆ ಅಜ್ಜಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. “ಇದು ಹೆಚ್ಚು ಆತ್ಮವಿಶ್ವಾಸ, ಸರಿಯಾದ ಆಹಾರ, ಔಷಧಿ ಮತ್ತು ಯೋಗದಿಂದ ಮಾತ್ರ ಸಾಧ್ಯ. ಜೊತೆಗೆ ಪ್ರತಿದಿನ ಸಮತೋಲಿತ ಆಹಾರ ಸೇವಿಸುತ್ತಿದ್ದೆ. ಅಲ್ಲದೇ ಧ್ಯಾನ ಮತ್ತು ವಾಕಿಂಗ್ ಮಾಡುತ್ತಿದ್ದೆ ಎಂದಿದ್ದಾರೆ.

    ಕರ್ನೂಲ್‌ನಲ್ಲಿ ಅಜ್ಜಿ ತಮ್ಮ ಮಗನೊಂದಿಗೆ ವಾಸಿಸುತ್ತಿದ್ದು, ಇವರಿಗೆ 26 ಮೊಮ್ಮಕ್ಕಳು. ಅಜ್ಜಿ ವಾಸಿಸುವ ಬೀದಿ ಕರ್ನೂಲ್‌ನಲ್ಲಿ ಹೆಚ್ಚು ಕೊರೊನಾ ಪ್ರಕರಣ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿವೆ.

    ಸಮತೋಲಿತ ಆಹಾರ, ಔಷಧಿ ಮತ್ತು ಧ್ಯಾನದಂತಹ ಅಭ್ಯಾಸಗಳು ಅವರ ಚೇತರಿಕೆಗೆ ಸಹಾಯ ಮಾಡಿದವು. ಅವರು ಆಸ್ಪತ್ರೆಯ ಸಿಬ್ಬಂದಿಗೆ ಭಯವಿಲ್ಲದೆ ಸಹಕರಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಜಿ.ನರೇಂದ್ರನಾಥ ರೆಡ್ಡಿ ಹೇಳಿದ್ದಾರೆ. ಕೊರೊನಾ ಪ್ರೋಟೋಕಾಲ್ ಪ್ರಕಾರ 12 ದಿನಗಳ ನಂತರ ಅಜ್ಜಿಯನ್ನು ಬಿಡುಗಡೆ ಮಾಡಲಾಗಿದೆ.

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ವಿಐಪಿಗಳ ಭೇಟಿ ನಿಲ್ಲಿಸಬೇಕು: ವೈದ್ಯರ ಮನವಿ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ವಿಐಪಿಗಳ ಭೇಟಿ ನಿಲ್ಲಿಸಬೇಕು: ವೈದ್ಯರ ಮನವಿ

    ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದು, ಆದರೆ ಪದೇ ಪದೇ ವಿಐಪಿಗಳು ಭೇಟಿ ನೀಡುವುದನ್ನು ನಿಲ್ಲಿಸಬೇಕು ಎಂದು ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮಗಳಿಗೆ ಶ್ರೀ ಗಳ ಆರೊಗ್ಯದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಹೆಚ್ಚು ಉತ್ತಮವಾಗುತ್ತಿದ್ದು, ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಆದರೆ ಶ್ರೀಗಳ ದರ್ಶನ ಪಡೆಯಲು ವಿಐಪಿಗಳು ಪದೇ ಪದೇ ಮಠಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಬೇಕು. ಆ ಮೂಲಕ ಶ್ರೀಗಳ ಚಿಕಿತ್ಸೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಚೆನ್ನೈ ಮೂಲದ ಸೋಂಕು ತಜ್ಞ ಡಾ.ಸುಬ್ರಾ ಅವರು ಮಾತನಾಡಿ, ಶ್ರೀಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದು, ಅವರಿಗೆ ವಯಸ್ಸಾಗಿರುವುದರಿಂದ ಚೇತರಿಕೆ ನಿಧಾನವಾಗುತ್ತಿದೆ. ಶ್ವಾಸಕೋಶ ಸೋಂಕು ಕೂಡ ಕಡಿಮೆಯಾಗುತ್ತಿದ್ದು, ಆಹಾರ ಸ್ವೀಕರಿಸಿಸುವುದು ನಿಧಾನವಾಗಿ ಹೆಚ್ಚುತ್ತಿದೆ. ಮಠದಲ್ಲೇ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯ ಇರುವುದರಿಂದ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಜನರ ಪ್ರಾರ್ಥನೆ ಹಾಗೂ ಶ್ರೀಗಳ ವಿಲ್ ಪವರ್ ನಿಂದ ಬಹುಬೇಗ ಚೇತರಿಸಿಕೊಳ್ಳಲಿದ್ದಾರೆ. ಮಠದಲ್ಲೇ ಎಲ್ಲಾ ವೈದ್ಯಕೀಯ ವ್ಯವಸ್ಥೆ ಇರುವುದರಿಂದ, ಅವರನ್ನು ಬೇರೆ ಎಲ್ಲೂ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

    ಶ್ರೀಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿಲ್ಲ, ಇದರಲ್ಲೇ ಅವರ ಆರೋಗ್ಯ ಪ್ರಗತಿಯ ಬಗ್ಗೆ ತಿಳಿಯುತ್ತದೆ. ಜನರ ಪ್ರಾರ್ಥನೆಯೇ ಅವರ ಚೇತರಿಕೆ ಪ್ರಮುಖ ಕಾರಣವೂ ಆಗಲಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ

    ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಡಾ. ಪರಮೇಶ್ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

    ಡಾ. ಪರಮೇಶ್ ನೇತೃತ್ವದಲ್ಲಿ ಸಿದ್ದಗಂಗಾ ಹಳೇ ಮಠದ ಶ್ರೀಗಳ ಕೊಠಡಿಯಲ್ಲಿಯೇ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯ ಸಿದ್ದಗಂಗಾ ಮಠಕ್ಕೆ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಅವರು ಆಗಮಿಸುವ ಸಾಧ್ಯತೆ ಇದೆ. ಶ್ರೀಗಳ ಆರೋಗ್ಯ ವಿಚಾರಿಸಲು ಮಧ್ಯಾಹ್ನದ ವೇಳೆ ಡಾ. ರವೀಂದ್ರ ಮಠಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    ಮಂಗಳವಾರದಂದು ಶ್ರೀಗಳ ರಕ್ತ ಪರೀಕ್ಷೆಗಾಗಿ ರಕ್ತ ಮಾದರಿಯನ್ನು ವೈದ್ಯರು ಪಡೆದುಕೊಂಡು ಹೋಗಿದ್ದರು. ಇಂದು ಮಧ್ಯಾಹ್ನದ ಬಳಿಕ ಶ್ರೀಗಳ ಆರೋಗ್ಯ ಸಂಬಂಧ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಇನ್ನಷ್ಟು ಚೇತರಿಕೆ ಕಂಡುಬರುತ್ತಿದೆ. ಭಕ್ತರು ಚಿಂತಿಸುವ ಅಗತ್ಯವಿಲ್ಲ ಎಂದು ಮಠದ ಸದಸ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಡಿಸ್ಚಾರ್ಜ್ ಬಗ್ಗೆ ಶೀಘ್ರವೇ ನಿರ್ಧಾರ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಡಿಸ್ಚಾರ್ಜ್ ಬಗ್ಗೆ ಶೀಘ್ರವೇ ನಿರ್ಧಾರ

    ಚೆನ್ನೈ: ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಪಿತ್ತಕೋಶ ಸೋಂಕಿನ ಆಪರೇಷನ್ ಗೆ ಒಳಗಾಗಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ.

    ಮಂಗಳವಾರದಿಂದ ಶ್ರೀಗಳು ದ್ರವರೂಪದ ಆಹಾರವನ್ನು ಸೇವಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು ಇಂದು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸ್ವಲ್ಪ ಮಟ್ಟಿಗೆ ಇಂದು ವೈದ್ಯರು ಶ್ರೀಗಳನ್ನು ವಾಕಿಂಗ್ ಮಾಡಿಸುವ ಸಾಧ್ಯತೆ ಇದೆ.

    ಈಗಾಗಲೇ ದ್ರವ ರೂಪದ ಆಹಾರವನ್ನು ನೀಡಿರೋ ವೈದ್ಯರು, ಇಂದು ಸಹ ದ್ರವರೂಪದ ಆಹಾರವನ್ನು ಮುಂದುವರಿಸಲಿದ್ದಾರೆ. ಇಂದು ಬೆಳೆಗ್ಗೆ ಮತ್ತೊಮ್ಮೆ ವಿವಿಧ ರೀತಿಯ ಪರೀಕ್ಷೆಗಳನ್ನು ವೈದ್ಯರು ಮಾಡಲಿದ್ದಾರೆ. ವೈದ್ಯರು ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv