Tag: ಚೇತನ್ ರಾಜ್

  • ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಸ್ಯಾಂಡಲ್‌ವುಡ್ ನಟಿ ವಿನಯಾ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್, ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದೆದ್ದಿದ್ದಾರೆ. ಹಲವು ನಟಿಯರು ಈ ಕುರಿತು ಮಾತನಾಡಿದ್ದರು, ಈಗ ವಿನಯಾ ಪ್ರಸಾದ್ ಪುತ್ರಿ ಬಾಡಿ ಶೇಮಿಂಗ್ ಬಗ್ಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ

    ಈಗ ತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಅಂತಾ ಕಣ್ತುಂಬ ಕನಸುಗಳನ್ನಿಟ್ಟು ಬಂದಿರೋ ನಟಿ, ಕೆಲ ದಿನಗಳ ಹಿಂದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಚೇತನಾ ರಾಜ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್ ಮಾತನಾಡಿದ್ದಾರೆ. ಜೊತೆಗೆ ತಮಗಾದ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಚೇತನಾ ರಾಜ್ ತೀರಿಕೊಂಡಿದ್ದ ಹಿಂದಿನ ದಿನವಷ್ಟೇ ಭೇಟಿಯಾಗಿದ್ದೆ, ಬೆಳಿಗ್ಗೆ ಏಳುವಷ್ಟರಲ್ಲಿ ಆಕೆ ಇಲ್ಲ ಅನೋದಾದ್ರೆ ಹೇಗೆ ಎಂದು ಪ್ರಥಮ ಪ್ರಸಾದ್ ಪ್ರಶ್ನಿಸಿದ್ದಾರೆ. ಈ ರೀತಿ ಯಾರಿಗೂ ಆಗಬಾರದು. ಇದು ನನ್ನ ದೇಹ ನನ್ನಗಿಷ್ಟವಾದ ರೀತಿಯಲ್ಲಿ ನಾವು ಬದುಕಬೇಕು ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಪ್ರಥಮ ಪ್ರಸಾದ್ ಮಾತನಾಡಿದ್ದಾರೆ.

    ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಥಮ ಪ್ರಸಾದ್‌ಗೆ ಸಣ್ಣಗಾಗುವ ಕುರಿತು ಪ್ರತಿನಿತ್ಯ ನೂರಾರು ಮೆಸೇಜ್‌ಗಳು ಬರುತ್ತಂತೆ. ತಾಯಿ ವಿನಯಾ ಪ್ರಸಾದ್‌ಗೆ ಹೋಲಿಕೆ ಮಾಡಿ, ನಿಮ್ಮ ತಾಯಿ ಅಷ್ಟು ಸಣ್ಣಗೆ ಇದ್ದೀರೆ ನೀವು ಯಾಕೆ ಅಷ್ಟು ದಪ್ಪಗೆ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದು ನನ್ನ ದೇಹ, ನನ್ನ ದೇಹದ ಜೊತೆ ಕೊನೆ ಉಸಿರು ಇರುವರೆಗೂ ಇರುತ್ತೇನೆ. ನಾನು ಯಾರ ಮಾತಿಗೂ ತಲೆಕೆಡಿಸಿಕೊಳ್ಳವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ ಎಂದು `ಮಹಾದೇವಿ’ ಸೀರಿಯಲ್ ಖ್ಯಾತಿಯ ಪ್ರಥಮಾ ಪ್ರಸಾದ್ ಮಾತನಾಡಿದ್ದಾರೆ.

  • ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

    ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

    ಬೆಂಗಳೂರು: ಫ್ಯಾಟ್ ಸರ್ಜರಿಗೆ ಒಳಗಾಗಿ ಪ್ರಾಣ ಬಿಟ್ಟ ಕಿರುತೆರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.

    ಚೇತನಾ ಅವರ ಸಾವಿನ ಕುರಿತು ಇಂದು ಹೆಚ್ಚಿನ ವಿವರಣೆಗಾಗಿ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ಕೊಟ್ಟಿದೆ. ಈ ವೇಳೆ ಆಸ್ಪತ್ರೆಯ ಬಾಗಿಲು ಹಾಕಲಾಗಿತ್ತು. ಹೀಗಾಗಿ ಖುದ್ದು ಆರೋಗ್ಯಾಧಿಕಾರಿಗಳ ಕಚೇರಿಗೆ ಬಂದು ಪ್ರಕರಣದ ವಿವರಣೆ ನೀಡುವಂತೆ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಬಸವೇಶ್ವರ ಮೂರ್ತಿಗೆ ಮುಸ್ಲಿಂರಿಂದ ಸ್ವಾಗತ

    ನೋಟಿಸ್‍ನಲ್ಲಿ ಏನಿದೆ?
    ಚೇತನಾ ರಾಜ್ ಮರಣದ ಕುರಿತು ತನಿಖೆ ಮಾಡಲು ಮಂಗಳವಾರ ಮಧ್ಯಾಹ್ನ 2 ಗಂಟಗೆ ಆರೋಗ್ಯಾಧಿಕಾರಿಗಳ ತಂಡವು ಡಾ. ಶೆಟ್ಟಿಸ್ ಕಾಸ್ಮೆಟಿಕ್ ಆಸ್ಪತ್ರೆಗೆ ಭೇಟಿ ನೀಡಿತ್ತು. ಈ ವೇಳೆ ನಿಮ್ಮ ಸಂಸ್ಥೆಯು ಮುಚ್ಚಲಾಗಿತ್ತು. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ನಮ್ಮ ಮೇಲಾಧಿಕಾರಿಗಳಿಗೆ ವರದಿ ನೀಡಲು ಸಾಧ್ಯವಾಗಿರುವುದಿಲ್ಲ. ಆದುದರಿಂದ ಮೇಲಾಧಿಕಾರಿಗಳ ಆದೇಶದ ಮೇರೆಗೆ ಈ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳೊಂದಿಗೆ ವಿವರಣೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿಯಾಗುವಂತೆ ನೋಟಿಸ್‍ನಲ್ಲಿ ಸೂಚಿಸಿದೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಚೇತನಾ ಸಾವು:
    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಬೆಸಿಟಿ ಸರ್ಜರಿ ವೇಳೆ ತೀವ್ರ ಅಸ್ವಸ್ಥರಾದ ಸೀರಿಯಲ್ ನಟಿ, 21 ವರ್ಷದ ಚೇತನಾರಾಜ್ ಮೃತಪಟ್ಟಿದ್ದಾರೆ. ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರು ಸೇರಿಕೊಂಡ ಪರಿಣಾಮ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    ಸುಬ್ರಹ್ಮಣ್ಯ ನಗರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೂವರು ವೈದ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚೇತನಾರಾಜ್ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಬ್ಬಿಗೆರೆಯ ತೋಟದಲ್ಲಿ ಅಂತ್ಯಕ್ರಿಯೆ ನಡೀತು. ಗೀತಾ, ದೊರೆಸಾನಿ ಧಾರವಾಹಿಯಲ್ಲಿ ಚೇತನಾರಾಜ್ ನಟಿಸಿದ್ರು. ಒಲವಿನ ನಿಲ್ದಾಣ ಎಂಬ ಸೀರಿಯಲ್‍ನಲ್ಲಿ ಮುಖ್ಯಪಾತ್ರಕ್ಕೆ ಆಯ್ಕೆಯಾಗಿದ್ರು.