Tag: ಚೇತನ್ ಗೌಡ

  • ಪೆನ್‌ಡ್ರೈವ್ ಹಂಚಿಕೆ ಪ್ರಕರಣ – ಚೇತನ್, ಲಿಖಿತ್‌ಗೌಡಗೆ ಜಾಮೀನು ಮಂಜೂರು

    ಪೆನ್‌ಡ್ರೈವ್ ಹಂಚಿಕೆ ಪ್ರಕರಣ – ಚೇತನ್, ಲಿಖಿತ್‌ಗೌಡಗೆ ಜಾಮೀನು ಮಂಜೂರು

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್‌ಡ್ರೈವ್ (Pendrive Case) ಹಂಚಿಕೆ ಪ್ರಕರಣದ ಆರೋಪಿಗಳಾದ ಚೇತನ್ ಹಾಗೂ ಲಿಖಿತ್ ಗೌಡಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು (Bail) ಮಂಜೂರಾಗಿದೆ.

    ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಆರು ಮತ್ತು ಏಳನೇ ಆರೋಪಿಗಳಾಗಿದ್ದ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾದ ಯಲಗುಂದ ಚೇತನ್ ಹಾಗೂ ಲಿಖಿತ್‌ಗೌಡರನ್ನು ಮೇ 12 ರಂದು ಎಸ್‌ಐಟಿ ತಂಡ ಬಂಧಿಸಿ ವಿಚಾರಣೆ ನಡೆಸಿದ ನಂತರ ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಹದಿನೆಂಟು ದಿನಗಳ ಬಳಿಕ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಸದ್ಯ ಹಾಸನದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಚೇತನ್ ಹಾಗೂ ಲಿಖಿತ್‌ಗೌಡ ಇದ್ದು, ಇಂದು ಸಂಜೆ ಅಥವಾ ನಾಳೆ (ಶುಕ್ರವಾರ) ಇಬ್ಬರೂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಬ್ಬರು ಆರೋಪಿಗಳ ಪರ ವಕೀಲ ಹರೀಶ್ ಬಾಬು ವಾದ ಮಂಡಿಸಿದ್ದರು. ಇದನ್ನೂ ಓದಿ: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡಲ್ಲ: ಎಂಬಿ ಪಾಟೀಲ್

  • ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಗೆ ಮುಂದಾದ ಎಲ್.ಆರ್.ಶಿವರಾಮೇಗೌಡ ಪುತ್ರ

    ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಗೆ ಮುಂದಾದ ಎಲ್.ಆರ್.ಶಿವರಾಮೇಗೌಡ ಪುತ್ರ

    ಬೆಂಗಳೂರು: ಪದ್ಮನಾಭನಗರದಲ್ಲಿ ಸಚಿವ ಆರ್.ಅಶೋಕ್ ಎದುರು ಪರಾಜಿತಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಪುತ್ರ ಚೇತನ್‍ಗೌಡ ಇದೀಗ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ.

    ಚೇತನ್ ಗೌಡ ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಅವರ ಪುತ್ರರಾಗಿದ್ದು, ಜೆಡಿಎಸ್‍ನಿಂದ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ. ಪದ್ಮನಾಭನಗರ ಎಂಎಲ್‍ಎ ಚುನಾವಣೆಯಲ್ಲಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಚೇತನ್ ಸೋಲು ಕಂಡಿದ್ದರು. ರಾಜಕೀಯ ಭವಿಷ್ಯಕ್ಕಾಗಿ ಇದೀಗ ಜಿಲ್ಲಾ ಪಂಚಾಯತ್‍ನಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.

    ಮಂಡ್ಯ ಜಿಲ್ಲೆ ನಾಗಮಂಗಲದ ಬಿಂಡಿಗನವಿಲೆ ಜಿ.ಪಂ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತಯಾರಿ ಆರಂಭಿಸಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದಂತೆ ಚೇತನ್ ಜಿಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ. ಕೈ ನಾಯಕರನ್ನ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಚೇತನ್ ರಾಜೀನಾಮೆ ನೀಡಿದ್ದಾನೆ, ಈಗಾಗಲೇ JDS ಪಕ್ಷ ಸೇರ್ಪಡೆಗೆ ವರಿಷ್ಠರ ಸಮ್ಮತಿ ಸಿಕ್ಕಿದೆ. ಕೆಲ ದಿನಗಳಲ್ಲಿ ಮಂಡ್ಯ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತೇನೆ. ತಂದೆ ಮಗ ಬೇರೆ ಬೇರೆ ಪಕ್ಷ ಎಂಬ ಟೀಕೆಗಳಿದ್ದವು. ತಂದೆಯ ಮಾರ್ಗದರ್ಶನದಂತೆ ನಡೆಯಲು ಜೆಡಿಎಸ್ ಸೇರಿದ್ದೇನೆ. ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾ ಪಂಚಾಯತ್‍ಗೆ ಸ್ಪರ್ಧಿಸುತ್ತೇನೆ ಎಂದು ಚೇತನ್ ಹೇಳಿದ್ದಾರೆ. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!

    ಈ ಮೂಲಕ ಮಗನನ್ನ ಜೆಡಿಎಸ್‍ಗೆ ಕರೆತಂದಿರುವ ಶಿವರಾಮೇಗೌಡ ನಾಗಮಂಗಲ ಕ್ಷೇತ್ರದ ಎಂಎಲ್‍ಎ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆ ಇದೆ. ನಾನು ಸ್ಪರ್ಧೆ ಮಾಡಿದ್ರೆ ಹಾಲಿ ಶಾಸಕ ಸುರೇಶ್‍ಗೌಡರನ್ನ ಮನೆಗೆ ಕಳುಹಿಸಲ್ಲ, ಅವರಿಗೆ ನನಗಿಂತ ಹೆಚ್ಚು ಭಾಷೆ ಗೊತ್ತಿದೆ. ಹಾಗಾಗಿ ಅವರನ್ನ ಲೋಕಸಭೆಗೆ ಪ್ರಮೋಷನ್ ಮಾಡೋಣ, ನಾನು ಅಥವಾ ಎಂಎಲ್‍ಸಿ ಅಪ್ಪಾಜಿಗೌಡ ಅಭ್ಯರ್ಥಿಯಾಗುತ್ತೇವೆ ಎಂದು ನಾಗಮಂಗಲದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!