Tag: ಚೆಸ್ಕಾಂ

  • ಮಂಡ್ಯ | ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವು – ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ಮಂಡ್ಯ | ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವು – ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ಮಂಡ್ಯ: ವಿದ್ಯುತ್ ಲೈನ್ ಸರಿ ಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ರೊಟ್ಟಿಕಟ್ಟೆ ಗ್ರಾಮದಲ್ಲಿ ನಡೆದಿದೆ.

    ರೊಟ್ಟಿಕಟ್ಟೆ ಗ್ರಾಮದ ಮಳವಳ್ಳಿ-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದೆ. ಮಹಮ್ಮದ್ ಅರ್ಷದ್ ಅಲಿ(28) ಮೃತ ಲೈನ್‌ಮ್ಯಾನ್. ಇದನ್ನೂ ಓದಿ: ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ

    ಅರ್ಷದ್ ಅಲಿ ವಿದ್ಯುತ್ ಕಂಬಕ್ಕೆ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬದ ಮೇಲೆ ಪ್ರಾಣ ಬಿಟ್ಟಿದ್ದಾರೆ. 11ಕೆವಿ ಲೈನ್‌ನಲ್ಲಿ ಓವರ್ ಲೋಡ್‌ನಿಂದ ಪದೇ ಪದೇ ವಿದ್ಯುತ್ ಕಡಿತವಾಗುತ್ತಿತ್ತು. ಅಧಿಕಾರಿಗಳ ಸೂಚನೆಯಂತೆ ಮೂವರು ಲೈನ್‌ಮ್ಯಾನ್‌ಗಳು ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಅಮ್ಮ ನನ್ನ ಯಾಕೆ ಬಿಟ್ಟು ಹೋದೆ: ಅಗಲಿದ ತಾಯಿಯ ಬಗ್ಗೆ ಶುಭಾ ಪೂಂಜಾ ಪೋಸ್ಟ್

    ಹೀಗಾಗಿ ಅರ್ಷದ್ ಅಲಿ, ಸುರೇಶ್, ಜಗದೀಶ್ ಫ್ಯೂಸ್ ತೆಗೆದು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಕಂಬದಲ್ಲಿದ್ದ ಅರ್ಷದ್ ಅಲಿ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆಲಸ ಮುಗಿಸಿ ಮಾಹಿತಿ ನೀಡುವ ಮೊದಲೇ ವಿದ್ಯುತ್ ಪ್ರವಹಿಸಿದ್ದು, ಕೆಇಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: 11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?

    ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳಿಂದಲೇ (Guarantee Scheme) ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ. ಪ್ರತಿ ವರ್ಷ ಸರ್ಕಾರದಿಂದ ಎಸ್ಕಾಂಗಳಿಗೆ (ESCOM) ಪಾವತಿಸಬೇಕಿದ್ದ ಹಣವನ್ನು ಜನರಿಂದಲೇ ಸಂಗ್ರಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಹೌದು. ಪ್ರತಿ ವರ್ಷ ಸರ್ಕಾರ ಎಸ್ಕಾಂಗಳಿಗೆ 1,602 ಕೋಟಿ ರೂ. ಸಬ್ಸಿಡಿ ಸರ್ಕಾರ ಪಾವತಿಸಬೇಕು. ಆದ್ರೆ ಇದು ಪಾವತಿಯಾಗದೇ ಇರುವುದರಿಂದ ಜನರಿಂದಲೇ ವಸೂಲಿಗೆ ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಆದರೆ ನಿರ್ದೇಶನ ಕೊಡದ ಹೊರತು ಹಣ ವಸೂಲಿ ಮಾಡದಂತೆ ಕೆಇಆರ್‌ಸಿ (KERC) ಸೂಚಿಸಿದೆ. ಒಂದು ವೇಳೆ ಕೆಇಆರ್‌ಸಿ ಏನಾದರೂ ಸೂಚನೆ ಕೊಟ್ಟರೆ 1.79 ಕೋಟಿ ಗೃಹಜ್ಯೋತಿ (Gruhajyothi) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಲಿದೆ.

    ಜನರಿಂದಲೇ ಗೃಹಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಚೆಸ್ಕಾಂ ಕೆಇಆರ್‌ಸಿಗೆ ಪತ್ರ ಬರೆದಿದೆ. ಕೆಇಆರ್‌ಸಿ ಆಕ್ಟ್ ಅಡಿ ಅವಕಾಶ ಕೊಡುವಂತೆ ಪತ್ರ ಬರೆಯಲಾಗಿದೆ. 2008ರ ಕೆಇಆರ್‌ಸಿ ಆಕ್ಟ್ ಅನ್ನು ಚೆಸ್ಕಾಂ ಪತ್ರದಲ್ಲಿ ಉಲ್ಲೇಖಿಸಿದೆ. ಸರ್ಕಾರ ಸಬ್ಸಿಡಿ ಕೊಡದೇ ಹೋದಲ್ಲಿ ಜನರಿಂದ ಅದನ್ನ ಪಾವತಿ ಮಾಡಿಸಿಕೊಳ್ಳಬೇಕು. ಇದಕ್ಕೆ ಕೆಇಆರ್‌ಸಿ ಖುದ್ದು ಅನುಮತಿ ಕೊಡಬೇಕು, ವಸೂಲಿಗೆ ನಿರ್ದೇಶನ ಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಕೆಇಆರ್‌ಸಿಯಿಂದ ವಿಚಾರಣೆ ಬಾಕಿ ಇದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಕೆಇಆರ್‌ಸಿ ನಿರ್ದೇಶನ ಕೊಡದ ಹೊರತು ಜನರಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವಂತಿಲ್ಲ.

    ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪ ಒಪ್ಪಿದ್ರೆ ಏನಾಗುತ್ತೆ?
    * ಗೃಹಜ್ಯೋತಿ ಬಳಕೆದಾರರೇ ಮೊದಲು ಬಿಲ್ ಪಾವತಿಸಬೇಕಾಗುತ್ತದೆ.
    * ಸದ್ಯ 1.71ಕೋಟಿ ಅರ್ಹರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ.
    * ಇದರಲ್ಲಿ 1.65 ಕೋಟಿ ಕುಟುಂಬಗಳಿಗೆ ಶೂನ್ಯ ಬಿಲ್ ಬರುತ್ತಿದೆ.
    * ಬೆಸ್ಕಾಂ ವ್ಯಾಪ್ತಿಯಲ್ಲೇ 70 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ.
    * ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರೆ ಎಲ್ಲಾ ಎಸ್ಕಾಂಗಳಿಗೂ ಇದು ಅನ್ವಯ ಆಗಲಿದೆ.
    * ಈಗಾಗಲೇ ಸರ್ಕಾರ ಸಬ್ಸಿಡಿ ಹಣವನ್ನು ಮುಂಗಡವಾಗಿ ನೀಡುವ ಬದಲು ಎರಡು ತಿಂಗಳು ಬಾಕಿ ಉಳಿಸಿಕೊಳ್ಳುತ್ತಿದೆ.
    * 2008ರ ಕೆಇಆರ್‌ಸಿ ನಿಯಮಗಳ ಪ್ರಕಾರ ಪರಿಗಣಿಸಿದರೆ ಅವಕಾಶ ಕೊಡಬೇಕಾಗಬಹುದು.
    * ಆದರೆ ಇದೇ ತಿಂಗಳು 27ರಂದು ಕೆಇಆರ್‌ಸಿ ಅಂತಿಮ ಸಭೆ ಇದೆ.
    * ಆ ಸಭೆಯಲ್ಲಿ ಏನು ತೀರ್ಮಾನ ಮಾಡುತ್ತೆ ಎಂಬುದರ ಮೇಲೆ ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಸಿಗುತ್ತಾ? ರಿಲೀಫ್ ಸಿಗುತ್ತಾ ಎಂದು ಗೊತ್ತಾಗಲಿದೆ.

  • ಕೊಡಗಿನಲ್ಲಿ ಗಾಳಿ, ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ – ಚೆಸ್ಕಾಂಗೆ ಕೋಟಿ ಕೋಟಿ ನಷ್ಟ

    ಕೊಡಗಿನಲ್ಲಿ ಗಾಳಿ, ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ – ಚೆಸ್ಕಾಂಗೆ ಕೋಟಿ ಕೋಟಿ ನಷ್ಟ

    ಕೊಡಗು: ಜಿಲ್ಲೆಯಲ್ಲಿ ಸಾಕಷ್ಟು ಗಾಳಿ, ಮಳೆ ಸುರಿಯುವುದರಿಂದ ಭಾರಿ ನಷ್ಟ ಅನುಭವಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಹಿಂದೆಂದಿಗಿಂತ ಈ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಚೆಸ್ಕಾಂಗೆ ನಷ್ಟ ಉಂಟಾಗಿದೆ.

    ಕಳೆದ ಜುಲೈ, ಅಗಸ್ಟ್ ತಿಂಗಳಲ್ಲಿ ಬಿಟ್ಟು ಬಿಡದೆ ಸುರಿದಿದ್ದ ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಪ್ರವಾಹದ ರೂಪ ಪಡೆದಿತ್ತು. ಅದಕ್ಕಿಂತ ಮುಖ್ಯವಾಗಿ ಮಳೆಯ ಜೊತೆಗೆ ಬೀಸಿದ್ದ ಭೀಕರ ಗಾಳಿ ಸಾವಿರಾರು ಮರ, ವಿದ್ಯುತ್ ಕಂಬಗಳು ಧರಾಶಾಯಿ ಮಾಡಿತ್ತು. ಮರಗಳು ವಿದ್ಯುತ್ ಲೈನ್‌ಗಳ ಮೇಲೆ ಉರುಳಿ ಬಿದ್ದ ಪರಿಣಾಮ, 3,077 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಜೊತೆಗೆ 150 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ ಎಂದು ಸ್ವತಃ ಚೆಸ್ಕಾಂ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇದರಿಂದ ಇಲಾಖೆಗೆ 4.83 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೊಡಗು ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಮಾಹಿತಿ ನೀಡಿದ್ದಾರೆ.

    ಜಿಲ್ಲೆ, ಸೆಪ್ಟೆಂಬರ್ ತಿಂಗಳಲ್ಲಿಯೂ ಮಳೆ ಆರ್ಭಟ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತೆ ಜಿಲ್ಲಾಮಟ್ಟದ ಅಧಿಕಾರಿಗಳು ಅಲಟ್9 ಇರುವಂತೆಯೂ ಸೂಚನೆ ನೀಡಿದ್ದಾರೆ. ಅಲ್ಲದೇ ಚೆಸ್ಕಾಂ ಇಲಾಖೆಯ ನಷ್ಟದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೆಂಕಟರಾಜ, ವಿದ್ಯುತ್ ಇಲಾಖೆಯಿಂದ ಈಗಾಗಲೇ ನಷ್ಟ ಉಂಟಾಗಿರುವ ಕುರಿತು ವರದಿಯನ್ನು ಸಲ್ಲಿಸಿದ್ದಾರೆ. ಅದರ ಬಗ್ಗೆ ಅವರಿಗೆ ಮಾರ್ಗಸೂಚಿ ಪ್ರಕಾರ ಇಲಾಖೆಗೆ ಪರಿಹಾರದ ಹಣವನ್ನು ಕೊಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಇಷ್ಟು ನಷ್ಟ ಉಂಟಾಗಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಅಡಚಣೆ ಆಗದಂತೆ ಉತ್ತಮ ರೀತಿಯಲ್ಲಿ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಈಗಾಗಲೇ ವಿದ್ಯುತ್ ಸರಬರಾಜು ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಕಳೆದ ಕೆಲವು ಎರಡು-ಮೂರು ವರ್ಷಗಳಲ್ಲಿ ನೋಡಿದರೆ, ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದ ಸಂಖ್ಯೆ ಕಡಿಮೆ. ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಉರುಳಿ ಬಿದ್ದರೂ ವಿದ್ಯುತ್ ಲೈನ್ ತುಂಡಾಗುತ್ತಿದ್ದವೇ ಹೊರತ್ತು, ಕಂಬಗಳು ಮುರಿದು ಬೀಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಸಣ್ಣ ಗಾಳಿ ಮಳೆಗೂ ಮುರಿದು ಬೀಳುತ್ತಿವೆ. ಲೈನ್‌ಗಳ ಮೇಲೆ ಮರದ ಸಣ್ಣ ಕೊಂಬೆಗಳು ಮುರಿದು ಬಿದ್ದರೂ ವಿದ್ಯುತ್ ಕಂಬಗಳೇ ಮುರಿದು ಬೀಳುತ್ತಿವೆ. ಇದು ಸಾರ್ವಜನಿಕ ಅನುಮಾನಕ್ಕೆ ಕಾರಣವಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್

    ಬೆಂಗಳೂರು: ಕಾಡುಗೋಡಿ (Kadugodi) ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಪತಿಯ ಕಣ್ಮುಂದೆಯೇ ಸುಟ್ಟು ಕರಕಲಾಗಿದ್ರು. 11 ಕೆವಿ ಸಾಮಥ್ರ್ಯದ ವಿದ್ಯುತ್ ತಂತಿ ತುಂಡಾದ ಎರಡು ಗಂಟೆಗಳ ನಂತರ ಈ ದುರಂತ ನಡೆದಿತ್ತು.

    ಯಾರಾದ್ರೂ ದಾರಿ ಹೋಕರು, ಸ್ಥಳೀಯರು ಎಚ್ಚೆತ್ತು ಬೆಸ್ಕಾಂಗೆ (BESCOM) ದೂರು ಕೊಟ್ಟಿದ್ರೆ. ಬೆಸ್ಕಾಂ ಸಿಬ್ಬಂದಿ ಆ ಹೊತ್ತಲ್ಲಿಯೇ ಸ್ಪಂದಿಸಿದ್ರೆ ಘೋರ ದುರಂತ ತಪ್ಪುತ್ತಿತ್ತು. ಘನಘೋರ ದುರಂತದ ದೃಶ್ಯಾವಳಿ ಹಾಗೂ ದುರಂತಕ್ಕೆ ಮುನ್ನ ಮತ್ತು ನಂತರ ಏನೆಲ್ಲಾ ನಡೆಯಿತು ಎಂಬುದರ ದೃಶ್ಯಾವಳಿ ಪಬ್ಲಿಕ್ ಟಿವಿ ಲಭ್ಯವಾಗಿದೆ.

    ‌ಅಂದು ಏನೇನಾಗಿತ್ತು..?: ನವೆಂಬರ್ 19 ಮುಂಜಾನೆ 3.41ಕ್ಕೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದು ಹೊತ್ತಿ ಉರಿದಿದೆ. 3.43ಕ್ಕೆ ಅದೇ ದಾರಿಯಲ್ಲಿ ಬರುತ್ತಿದ್ದ ಪಾದಾಚಾರಿಯೊಬ್ಬ ಬೆದರಿ ಓಡಿಹೋಗಿದ್ದಾನೆ. ಇನ್ನು 5.41ಕ್ಕೆ ಅದೇ ದಾರಿಯಲ್ಲಿ ಗಂಡ-ಹೆಂಡತಿ ಹಾಗೂ ಮಗು ಆಗಮಿಸಿದ್ದಾರೆ. 5.42ಕ್ಕೆ ಮಗು ಎತ್ತಿಕೊಂಡಿದ್ದ ತಾಯಿ ವೈರ್ ತುಳಿದಿದ್ದಾರೆ. 5.42ಕ್ಕೆ ಅಸಹಾಯಕನಾಗಿ ತಂದೆ ಪರದಾಡಿದ್ದಾರೆ. 5.42ಕ್ಕೆ ಬೆಸ್ಕಾಂ ವಾಹನ ಸ್ಥಳಕ್ಕೆ ಬಂದಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು

    ಈ ಸುದ್ದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿದ ಕೂಡಲೇ ಎಚ್ಚೆತ್ತ ಬೆಸ್ಕಾಂ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಸಾರ್ವಜನಿಕರೇ ಗಮನಿಸಿ, ವಿದ್ಯುತ್ ಮಾರ್ಗದಲ್ಲಿ ವೈರ್ ತುಂಡಾಗಿದೆಯಾ? ವೈರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ಯಾ? ಇತರೆ ಅಪಾಯಕಾರಿ ಸನ್ನಿವೇಶ ಕಂಡು ಬಂದಿದ್ಯಾ?. ಈ ಕೂಡಲೇ 1912 ಬೆಸ್ಕಾಂ ಸಹಾಯವಾಣಿ ಕರೆ ಮಾಡಿ ಎಂದು ಪ್ರಕಟಣೆ ಹೊರಡಿಸಿದೆ. ಈ ನಡುವೆ ಚೆಸ್ಕಾಂ ನಿರ್ಲಕ್ಷ್ಯಕ್ಕೆ ಕೆಆರ್ ಪೇಟೆಯ ಬೆಳತೂರು ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ರವಿಕುಮಾರ್ ಸಾವನ್ನಪ್ಪಿದ್ದಾರೆ.

  • ಭಾರೀ ಮಳೆಗೆ ತುಂಡಾದ ವಿದ್ಯುತ್ ತಂತಿ ತುಳಿದು 2 ಹಸು, ಮಹಿಳೆ ಸಾವು

    ಭಾರೀ ಮಳೆಗೆ ತುಂಡಾದ ವಿದ್ಯುತ್ ತಂತಿ ತುಳಿದು 2 ಹಸು, ಮಹಿಳೆ ಸಾವು

    ಹಾಸನ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ (Woman ) ಹಾಗೂ ಹಸು ಸಾವನ್ನಪ್ಪಿರುವ ಘಟನೆ ಬೇಲೂರಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ.

    ರಂಗಮ್ಮ (60) ಮೃತ ದುರ್ದೈವಿ. ಭಾರೀ ಗಾಳಿ, ಮಳೆಯಿಂದ ಜನರು ಓಡಾಡುವ ರಸ್ತೆ ಮಧ್ಯೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದೇ ದಾರಿಯಲ್ಲಿ ರಂಗಮ್ಮ ಹಸು ಮೇಯಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?

    ತಂತಿ ತುಂಡಾಗಿ ಬೀಳುವಂತಿದ್ದು ದುರಸ್ತಿ ಮಾಡುವಂತೆ ಒಂದು ತಿಂಗಳಿನಿಂದ ಗ್ರಾಮಸ್ಥರು ಚೆಸ್ಕಾಂ (Cheskam) ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೂ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

    ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರಂಗಮ್ಮ ಬಾಮೈದ ಯಜಮಾನ್ ಗೌಡ ಎಂಬುವವರು ಸಾವಿಗೀಡಾಗಿದ್ದರು.

    ಜಿಲ್ಲೆಯಲ್ಲಿ ಮತ್ತೊಂದು ಇದೇ ಬಗೆಯ ಘಟನೆ ನಡೆದಿದ್ದು, ಮೇಯಲು ಬಿಟ್ಟ ಹಸು ತುಂಡಾಗಿದ್ದ ವಿದ್ಯುತ್ ತಂತಿ ತುಳಿದು ಸಾವಿಗೀಡಾದ ಘಟನೆ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಪಾಡಲು ಹೋದ ರೈತ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಸ್ಥಳೀಯರು ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಚೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ದುರಸ್ತಿ ಮಾಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದನ್ನೂ ಓದಿ: ಉತ್ತಮ ಶಿಕ್ಷಣ ಒದಗಿಸುವ ಸಲುವಾಗಿ ರಾಜ್ಯ ಶಿಕ್ಷಣ ನೀತಿ ಜಾರಿ: ಮಧು ಬಂಗಾರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೂನ್‌ 14 ಆದ್ರೂ ಇನ್ನೂ ಬಂದಿಲ್ಲ ವಿದ್ಯುತ್‌ ಬಿಲ್‌!

    ಜೂನ್‌ 14 ಆದ್ರೂ ಇನ್ನೂ ಬಂದಿಲ್ಲ ವಿದ್ಯುತ್‌ ಬಿಲ್‌!

    ಮಂಡ್ಯ: ವಿದ್ಯುತ್‌ ಬಿಲ್‌ (Electricity Bill) ಏರಿಕೆಯಾಗಿದೆ ಎಂದು ರಾಜ್ಯದ ಹಲವು ಕಡೆ ಜನರು ಪ್ರತಿಭಟನೆ ನಡೆಸುತ್ತಿದ್ದರೆ ಮಂಡ್ಯ ನಗರದಲ್ಲಿ (Mandya) ಇನ್ನೂ ವಿದ್ಯುತ್‌ ಬಿಲ್‌ ಜನರ ಕೈ ಸೇರಿಲ್ಲ.

    ಸಾಧಾರಣ ರಾಜ್ಯದೆಲ್ಲಡೆ ಪ್ರತಿ ತಿಂಗಳ ಮೊದಲ ವಾರ ಮೀಟರ್‌ ರೀಡರ್‌ ಮನೆಗೆ ಬಂದು ಲೆಕ್ಕ ಹಾಕಿ ಬಿಲ್‌ ನೀಡುತ್ತಾರೆ. ಆದರೆ ಈ ಬಾರಿ ಜೂನ್‌ 14 ಆದರೂ ಮೀಟರ್‌ ರೀಡರ್‌ ಮನೆ ಬಂದಿಲ್ಲ.  ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಪತಿಯನ್ನೇ ಮುಗಿಸಿದ ಖತರ್ನಾಕ್ ಲೇಡಿ – ಕೊನೆಗೇನಾಯ್ತು ನೋಡಿ

    ಅರ್ಧ ತಿಂಗಳು ಕಳೆದ ಬೆನ್ನಲ್ಲೇ ಜನರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್‌ ಜಾಸ್ತಿ ಮಾಡಲು ಚೆಸ್ಕಾಂ (CHESCOM) ಮುಂದಾಗಿದ್ಯಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಶೀಘ್ರವೇ ಬಿಲ್‌ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಬಿಲ್‌ ಇನ್ನೂ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.

    ಮಂಡ್ಯ ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ವಿದ್ಯುತ್‌ ಬಿಲ್‌ ಮನೆ ಮಾಲೀಕರಿಗೆ ಸಿಕ್ಕಿಲ್ಲ.

  • ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

    ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

    ಚಾಮರಾಜನಗರ: ಕಾಂಗ್ರೆಸ್ (Congress) ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಹಿನ್ನೆಲೆಯಲ್ಲಿ ಬಿಲ್ ಕಟ್ಟಲ್ಲ ಎಂದು ಚೆಸ್ಕಾಂ (CHESCOM) ಸಿಬ್ಬಂದಿಯನ್ನು ಗ್ರಾಮಸ್ಥರು ವಾಪಸ್ ಕಳುಹಿಸಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಜಿಲ್ಲೆಯ ಯಳಂದೂರು (Yelandur) ತಾಲೂಕಿನ ಹೊನ್ನೂರಿನಲ್ಲಿ (Honnuru) ಈ ಘಟನೆ ನಡೆದಿದ್ದು, ಗ್ರಾಮಸ್ಥರು ವಿದ್ಯುತ್ ಶುಲ್ಕ ಪಾವತಿಸದೇ ಮೀಟರ್ ರೀಡರ್‌ಗೆ ಬಂದಿದ್ದ ವ್ಯಕ್ತಿಯನ್ನು ವಾಪಸ್ ಕಳುಹಿಸಿದ್ದಾರೆ. ವಿದ್ಯುತ್ ನಿಮಗೂ ಫ್ರೀ, ನಮಗೂ ಫ್ರೀ ಹಾಗೂ ಅಧಿಕಾರಗಳಿಗೂ ಫ್ರೀ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಸಹ ನೀಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ

    ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚಾಮರಾಜನಗರ ಜಿಲ್ಲೆಯಿಂದ ಮೂವರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ನಾವು ಯಾಕೆ ಬಿಲ್ ಕಟ್ಟಬೇಕು ಎಂದು ಬಿಲ್ ಪಡೆಯಲು ನಿರಾಕರಿಸಿ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ನೀವೇ ಸಿಎಂ ಆಗಿ – ಡಿಕೆಶಿ ಪಟ್ಟು, ಧರ್ಮ ಸಂಕಟದಲ್ಲಿ ಖರ್ಗೆ

  • ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಮಡಿಕೇರಿ: ಕೊಡಗಿನ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ ಎಂದು ಚೆಸ್ಕಾಂ ಕಾರ್ಯನಿರ್ವಹಕ ಎಂಜಿನಿಯರ್.ಬಿ.ಸೋಮಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿಪರೀತ ಗಾಳಿ-ಮಳೆ ಆಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್ ಇಲಾಖೆ ಪ್ರತೀ ಮಳೆಗಾಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. 2018ರಿಂದ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರು.

    ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಸಿಬ್ಬಂದಿ ರೆಡಿಯಾಗಿದ್ದಾರೆ. ಈಗಾಗಲೇ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳನ್ನು ಸಂಗ್ರಹಿಸಿದ್ದೇವೆ. ಮಳೆಗಾಲದಲ್ಲಿ ಅಧಿಕ ಕೆಲಸ ಇರುವುದರಿಂದ ಅಗತ್ಯವಿರುವ ಸಿಬ್ಬಂದಿಯ ಜೊತೆಗೆ 150 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ. ಸಾಮಾನ್ಯವಾಗಿ 5 ವಾಹನಗಳನ್ನು ಬಳಸುತ್ತಿದ್ದ ಸಿಬ್ಬಂದಿ ಈ ಸಂದರ್ಭದಲ್ಲಿ 20 ವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಸೂರ್ಲಬ್ಬಿ, ಮಾದಾಪುರ, ಮಡಿಕೇರಿ ತಾಲೂಕಿನ ಭಾಗಮಂಡಲ ಹಾಗೂ ಪಾಲಿಬೆಟ್ಟ ಭಾಗಗಳಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತವೆ. ಟ್ರಾನ್ಸ್ ಫಾರ್ಮರ್ನಿಂದ ವಿದ್ಯುತ್ ಲೈನ್‍ಗಳು 50 ರಿಂದ 60 ಕಿ.ಮೀಟರ್ ದೂರಕ್ಕೆ ಸಂಪರ್ಕ ಕಲ್ಪಿಸಿರುವುದರಿಂದ ಸಮಸ್ಯೆಗಳು ಎದುರಾಗುತ್ತವೆ ಎಂದರು.

  • ಕಂಬದಲ್ಲಿ ನೇತಾಡುವಂತೆ ಮಾಡ್ತೀನಿ – ಚೆಸ್ಕಾಂ ನೌಕರನಿಗೆ ಪೊಲೀಸ್ ಆವಾಜ್

    ಕಂಬದಲ್ಲಿ ನೇತಾಡುವಂತೆ ಮಾಡ್ತೀನಿ – ಚೆಸ್ಕಾಂ ನೌಕರನಿಗೆ ಪೊಲೀಸ್ ಆವಾಜ್

    – ಬಿಲ್ ಕಟ್ಟದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತ
    – ಬೆಸ್ಕಾಂ ನೌಕರನಿಗೇ ಪೊಲೀಸ್ ಆವಾಜ್

    ಹಾಸನ: ಇನ್ನೊಂದ್ಸಲ ವಿದ್ಯುತ್ ಸಂಪರ್ಕ ಕಟ್ ಮಾಡಲು ಬನ್ನಿ. ನೀವು ಕಂಬದಲ್ಲಿ ನೇತಾಡುತ್ತಿರಬೇಕು ಹಾಗೇ ಮಾಡ್ತೀನಿ ಎಂದು, ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಚೆಸ್ಕಾಂ ನೌಕರನಿಗೆ ಪೊಲೀಸರೊಬ್ಬರು ಆವಾಜ್ ಹಾಕಿದ್ದಾರೆ.

    ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ಬಿಲ್ ಸಂಗ್ರಹಿಸಲು ಚೆಸ್ಕಾಂ ಸಿಬ್ಬಂದಿ ಬುಧವಾರ ಬೆಳಗ್ಗೆ ಪೊಲೀಸ್ ಕ್ವಾಟ್ರಸ್‍ಗೆ ತೆರಳಿದ್ದಾರೆ. ಈ ವೇಳೆ ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ. ಇದರಿಂದ ಕೆರಳಿದ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು,”ಇನ್ನೊಂದ್ಸಲ ಕ್ವಾಟ್ರಸ್‍ಗೆ ಲೈನ್ ಕಟ್ ಮಾಡಲು ಬನ್ನಿ ಮಾಡ್ತೀನಿ. ಕಳ್ಳರನ್ನೆಲ್ಲ ಬಿಟ್ಟು ಇಲ್ಲಿ ಬಂದಿದ್ದೀರಾ ಎಂದು ನಡು ಬೀದಿಯಲ್ಲೇ” ಆವಾಜ್ ಹಾಕಿದ್ದಾರೆ.

    ಈ ವೇಳೆ ಚೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಇಬ್ಬರು ಸರ್ಕಾರಿ ನೌಕರರ ಮಾತಿನ ಚಕಮಕಿ ವಿಡಿಯೋ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಆದಿವಾಸಿ ಕುಟುಂಬಗಳಿಗೆ ಬರೋಬ್ಬರಿ ರೂ. 7,000 ವಿದ್ಯುತ್ ಬಿಲ್

    ಆದಿವಾಸಿ ಕುಟುಂಬಗಳಿಗೆ ಬರೋಬ್ಬರಿ ರೂ. 7,000 ವಿದ್ಯುತ್ ಬಿಲ್

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬಗಳಿಗೆ ವಿದ್ಯುತ್ ಬರೆ ಅಚ್ಚರಿ ಮೂಡಿಸಿದೆ.

    ದಿಡ್ಡಳ್ಳಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ತಮ್ಮ ಕುಟುಂಬ ನಿರ್ವಹಣೆಗಾಗಿ ನಿತ್ಯ ಕೂಲಿಗಾಗಿ ಪರಿತಪಿಸುತ್ತಿರುವ ಇಂತಹ ಕುಟುಂಬಗಳಿಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮ ನೀಡಿರುವ ವಿದ್ಯುತ್ ಬಿಲ್‍ಗೆ ಜನರು ಅಚ್ಚರಿ ಆಗಿದ್ದಾರೆ.

    ಪುನರ್ವಸತಿ ಕೇಂದ್ರದಲ್ಲಿರುವ ಮನೆಗಳಿಗೆ ಕನಿಷ್ಠ ಮೂರರಿಂದ ನಾಲ್ಕು ವಿದ್ಯುತ್ ಲೈಟ್ ಪಾಯಿಂಟ್ ಇರಬಹುದು. ಅಲ್ಲದೆ ಈ ಮನೆಗಳಿಗೆ ಸರ್ಕಾರದ ವತಿಯಿಂದಲೇ ಎಲ್‍ಇಡಿ ಬಲ್ಪ್ ಗಳನ್ನು ನೀಡಲಾಗಿದೆ. ಇಲ್ಲಿನ ಮನೆಗಳಲ್ಲಿ ವಾಷಿಂಗ್ ಮಿಷನ್, ಫ್ರಿಜ್, ಮಿಕ್ಸಿಗಳಿಲ್ಲ. ಪ್ರತಿ ಕುಟುಂಬ ತಿಂಗಳ ಪೂರ್ತಿ ವಿದ್ಯುತ್ ಬಳಸಿದರೆ ಕನಿಷ್ಠ 400 ರೂ.ಯಿಂದ 500 ರೂ. ಬಿಲ್ ಬರಬಹುದು. ಆದರೆ ಇಲ್ಲಿನ ಮನೆಯೊಂದಕ್ಕೆ ಚೆಸ್ಕಾಂ ವತಿಯಿಂದ ನೀಡಿರುವ ಬಿಲ್ ರೂ. 7561 ಜೊತೆಗೆ ಇತರೆ ಮನೆಗಳಿಗೆ ಸಾವಿರಾರೂ ರೂಗಳ ವಿದ್ಯುತ್ ಶುಲ್ಕ ನೀಡಿದ್ದಾರೆ.

    ಅಲ್ಲದೆ ಬಿಲ್ ಪೂರ್ಣವಾಗಿ ಪಾವತಿಸದೆ ಹೋದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಚೆಸ್ಕಾಂ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಬಿಲ್ ನೋಡಿ ಶಾಕ್ ಆಗಿರುವ ಇಲ್ಲಿನ ಜನರು ಚೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸದೆ ಹೋದರೂ ಕೂಡ ಇಷ್ಟೊಂದು ಬಿಲ್ ಹೇಗೆ ಬಂತು ಎಂದು ಪ್ರಶ್ನಿಸಿರುವ ಹಾಡಿ ಮುಖಂಡ ಅಪ್ಪು ಹಾಗೂ ಮಲ್ಲಪ್ಪ ಈ ಕೂಡಲೇ ಚೆಸ್ಕಾಂ ನೀಡಿರುವ ಬಿಲ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.