Tag: ಚೆಲುವಿನ ಚಿತ್ತಾರ

  • ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಅಮೂಲ್ಯ (Amulya)  ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಮದುವೆ, ಸಂಸಾರ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಟ್ರಡಿಷನಲ್ ಫೋಟೋಶೂಟ್‌ನಿಂದ ಗೋಲ್ಡನ್ ಕ್ವೀನ್ ಅಮೂಲ್ಯ ಮಿಂಚಿದ್ದಾರೆ.

    ಬಾಲನಟಿಯಾಗಿ ಪಾದಾರ್ಪಣೆ ಮಾಡಿ, ಚಂದನವನದಲ್ಲಿ ನಾಯಕಿಯಾಗಿ `ಚೆಲುವಿನ ಚಿತ್ತಾರ’ (Cheluvina Chittara) ಸಿನಿಮಾದಿಂದ ಅಮೂಲ್ಯ ಗಮನ ಸೆಳೆದರು. ಬಳಿಕ ಗಜಕೇಸರಿ, ಮಳೆ, ನಾನು ನನ್ನ ಕನಸು ಹೀಗೆ ಸಾಕಷ್ಟು ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇದನ್ನೂ ಓದಿ:ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್

     

    View this post on Instagram

     

    A post shared by Amulya (@nimmaamulya)

    ಬೇಡಿಕೆಯಿರುವಾಗಲೇ ಜಗದೀಶ್ (Jagadeesh) ಜೊತೆ ಅಮೂಲ್ಯ ಹಸೆಮಣೆ (Wedding) ಏರಿದ್ದರು. ಈಗ ನಟಿ ಅವಳಿ ಮಕ್ಕಳ ಆರೈಕೆಯತ್ತ ಗಮನ ಕೊಡ್ತಿದ್ದಾರೆ. ಯುಗಾದಿ ಹಬ್ಬದಂದು (ಮಾ.22) ಕೇಸರಿ ಬಣ್ಣದ ಸೀರೆಯುಟ್ಟು ಮುದ್ದಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಬ್ಬದ ದಿನದಂದು ಚೆಂದದ ಫೋಟೋವನ್ನ ಅಪ್‌ಲೋಡ್‌ ಮಾಡಿದ್ದಾರೆ.

    ಇನ್ನೂ ಮತ್ತೆ ಸಿನಿಮಾಗೆ ಅಮೂಲ್ಯ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕರೆ ಖಂಡಿತಾ ಮಾಡ್ತೀನಿ ಎಂದು ಅಮೂಲ್ಯ ಕೂಡ ಹಲವು ಕಾರ್ಯಕ್ರಮಗಳಲ್ಲಿ ತಿಳಿಸಿದ್ದಾರೆ.

  • ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ಸ್ಯಾಂಡಲ್‌ವುಡ್(Sandalwood) ಗೋಲ್ಡನ್ ಕ್ವೀನ್ ಅಮೂಲ್ಯ(Actree Amulya) ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳ ನಾಮಕರಣವನ್ನ ಅದ್ದೂರಿಯಾಗಿ ಮಾಡಿದ್ದರು. ಈ ಬೆನ್ನಲ್ಲೇ ಅವಳಿ ಮಕ್ಕಳ ಮುಡಿ ಅಮೂಲ್ಯ ಮುಡಿ ಕೊಟ್ಟಿದ್ದಾರೆ.

    `ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಅಮೂಲ್ಯ ಇದೀಗ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗೆ ಬ್ರೇಕ್ ಹಾಕಿ, ಮದುವೆ, ಪತಿ ಮತ್ತು ಮಕ್ಕಳು ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಇಡೀ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾರೆ. ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಹೊಸ ಲುಕ್‌ಲ್ಲಿ ಕಾಣಿಸಿಕೊಂಡಿರುವ ಅಥರ್ವ್ ಮತ್ತು ಆಧವ್ ಜೊತೆ ಇಡೀ ಕುಟುಂಬ ಕ್ಯಾಮರಾಗೆ ಪೋಸ್ ನೀಡಿದೆ. ಅಥರ್ವ ಮತ್ತು ಆಧವ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಿರುಪತಿ ದೇವ್ಥಾನದ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಚೆಲುವಿನ ಚಿತ್ತಾರ’ ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ: ಅಮೂಲ್ಯ ಭಾವುಕ

    `ಚೆಲುವಿನ ಚಿತ್ತಾರ’ ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ: ಅಮೂಲ್ಯ ಭಾವುಕ

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ, ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡು ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೂಲ್ಯ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಐಸು ನಾ ನೆನಪು ಮಾಡಿದ್ದಾರೆ. ಸ್ಟಾರ್ ನಾಯಕಿ ಪಟ್ಟ ತಂದು ಚೆಲುವಿನ ಚಿತ್ತಾರ ಚಿತ್ರದ ಬಗ್ಗೆ ಭಾವುಕರಾಗಿದ್ದಾರೆ.

    ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಅಮೂಲ್ಯ, ಬಳಿಕ `ಚೆಲುವಿನ ಚಿತ್ತಾರ’ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗುವ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟರು. ಸ್ಟಾರ್ ನಾಯಕಿ ಪಟ್ಟ ತಂದು ಕೊಟ್ಟಿರೋ `ಚೆಲುವಿನ ಚಿತ್ತಾರ’ ಚಿತ್ರ ತೆರೆಕಂಡು ಇದೀಗ 15 ವರ್ಷಗಳಾಗಿದೆ. ಈ ವೇಳೆ ತನ್ನ ಸಿನಿಮಾ ಜರ್ನಿಯ ಐಸು ಪಾತ್ರವನ್ನು ನೆನೆದು ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.

    `ಚೆಲುವಿನ ಚಿತ್ತಾರ’ ಎಂಬ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ, ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನನ್ನನ್ನು ನಾಯಕಿ ನಟಿಯಾಗಿ ಪರಿಚಯಿಸಿ, ಕನ್ನಡ ಜನತೆಯ ಮನಸ್ಸಲ್ಲಿ ಐಸೂ ಎನ್ನುವ ಹೆಸರಿನೊಂದಿಗೆ ಎಂದು ಅಮೂಲ್ಯ ಟ್ವೀಟ್ ಮಾಡುವ ಮೂಲಕ ಚಿತ್ರದ ಸವಿನೆನಪನ್ನು ಮೆಲಕು ಹಾಕಿದ್ದಾರೆ. ಈ ವೇಳೆ ನಿರ್ದೇಶಕ ಎಸ್.ನಾರಾಯಣ್, ನಟ ಗಣೇಶ್ ಮತ್ತು ಹರಿಸಿದ ಎಲ್ಲಾ ಅಭಿಮಾನಿಗಳಿಗೆ ಅಮೂಲ್ಯ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್

    ನಟಿ ಅಮೂಲ್ಯ ಜಗದೀಶ್ ಚಂದ್ರ ಅವರನ್ನು ಮದುವೆಯಾಗಿ, ಇದೀಗ ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಐಸು ನಯಾ ಫೋಟೋಶೂಟ್ ನೋಡಿ ಫ್ಯಾನ್ಸ್ ಮತ್ತೆ ಸಿನಿಮಾರಂಗಕ್ಕೆ ಕಮ್‌ಬ್ಯಾಕ್ ಆಗಿ ಅಂತಾ ನಟಿಗೆ ಕೇಳ್ತಿದ್ದಾರೆ.

    Live Tv

  • ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿದೆ ಎಂದು ಬೆಂಗಳೂರಿನ ಅಣ್ಣಮ್ಮ ದೇಗುಲಕ್ಕೆ ಭೇಟಿ ನೀಡಿ, ದೇವಿದೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಜನಮನಗೆದ್ದ ನಟಿ ಅಮೂಲ್ಯ, ಸಾಕಷ್ಟು ಚಿತ್ರಗಳ ಮೂಲಕ ಸ್ಟಾರ್‌ಗಳ ಜತೆ ನಟಿಸಿ ಸೈ ಎನಿಸಿಕೊಂಡವರು. ಬೇಡಿಕೆ ಇರುವಾಗಲೇ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮದುವೆ ಸಂಸಾರ ಅಂತಾ ಬ್ಯುಸಿಯಾಗಿ ಬಿಟ್ಟರು. ಇದೀಗ ಪತಿ ಜಗದೀಶ್ ಚಂದ್ರ ಮತ್ತು ಅವಳಿ ಗಂಡು ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಇಂದು ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದ ಪಡೆಯಲಾಯಿತು ಎಂದು ನಟಿ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಬೆಂಗಳೂರು: ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟಿ ಆಶಾರಾಣಿ ಪುತ್ರ ರಾಕೇಶ್ ಮೃತಪಟ್ಟಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಕೇಶ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.

    ಎರಡು ತಿಂಗಳ ಹಿಂದೆ ರಾಕೇಶ್ ಅವರಿಗೆ ಆಪರೇಷನ್ ಮಾಡಲಾಗಿತ್ತು. ತದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ 7.30ರ ವೇಳೆಗೆ ಮೃತಪಟ್ಟಿದ್ದಾರೆ.

    ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಬುಲ್ಲಿ – ಪಪ್ಪುಸಿ ಎನ್ನುವ ಹೆಸರಿನಿಂದ ರಾಕೇಶ್ ಫೇಮಸ್ ಆಗಿದ್ದರು. ಸದ್ಯ ಧೂಮಪಾನ ಸಿನಿಮಾದಲ್ಲಿ ನಾಯಕ ನಟನಾಗಿ ರಾಕೇಶ್ ನಟಿಸುತ್ತಿದ್ದರು.

     ಶಿವರಾಜ್ ಕುಮಾರ್ ಅಭಿನಯದ ಬಂಧು ಬಳಗ, ದುನಿಯಾ ವಿಜಯ್ ಅಭಿನಯದ ಚಂಡ, ದರ್ಶನ್ ಜೊತೆ ಚಿತ್ರಗಳಲ್ಲಿ ರಾಕೇಶ್ ಅಭಿನಯಿಸಿದ್ದರು.