Tag: ಚೆಲುವರಾಯಸ್ವಾಮಿ

  • 2 ಬಾರಿ ಸಿಎಂ ಆದರೂ ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲಿಲ್ಲ: ಚೆಲುವರಾಯಸ್ವಾಮಿ

    2 ಬಾರಿ ಸಿಎಂ ಆದರೂ ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲಿಲ್ಲ: ಚೆಲುವರಾಯಸ್ವಾಮಿ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) 2 ಬಾರಿ ಸಿಎಂ ಆಗಿಯೇ ಪಕ್ಷವನ್ನು ಉಳಿಸಿಕೊಳ್ಳಲು ಆಗಿಲ್ಲ. ಈಗ ಮೈತ್ರಿ ಅಂತ ಮಾತಾಡಿ ಪಕ್ಷ ಉಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ (Chaluvaraya Swamy) ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಲೇವಡಿ ಮಾಡಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅರನ್ನು ನಮ್ಮ ಬ್ರದರ್ ಅಂತ ಲೇವಡಿ ಮಾಡಿದ್ರು. ಮೈತ್ರಿ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಕಡೆ ಅಸಮಾಧಾನ ಸ್ಫೋಟ ಆಗಿದೆ. ಎರಡೂ ಕಡೆ ಶಾಸಕರು ದೋಸ್ತಿಗೆ ರಾಗ ತೆಗೆದಿದ್ದಾರೆ. ಇನ್ನೂ ಕೆಲ ಕಾಲ ನೋಡೋಣ ಎಂದು ಕುಟುಕಿದರು.

    ಮೈತ್ರಿ ಬಗ್ಗೆ ಬಹಳ ಸ್ಪೀಡ್ ಆಗಿರೋದು ನಮ್ಮ ಬ್ರದರ್ ಮಾತ್ರ. 2 ಬಾರಿ ಸಿಎಂ ಮಾಡಿದಾಗಲೇ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಪಕ್ಷ ಉಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ ಅಂತ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    ಕುಮಾರಸ್ವಾಮಿ ಬ್ರದರ್ ಮತ್ತು ಬೊಮ್ಮಾಯಿ ಇಬ್ಬರೇ ಮೈತ್ರಿಯಾಗಲಿ ಅಂತ ಮಾತಾಡ್ತಿರೋದು. ಯಡಿಯೂರಪ್ಪ ಮಾತ್ರ ನೋಡೋಣ ಏನಾಗಲಿದೆ ಅಂತಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ ಎಂದರು. ಇನ್ನು ಮಾಜಿ ಸಚಿವ ಯೋಗೇಶ್ವರ್ ಕೂಡ ಮೈತ್ರಿಯಾಗಲಿ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್‌ಗೂ ಈಗ ಮೈತ್ರಿ ಅನಿವಾರ್ಯ ಇದೆ. ಅವರು ನನ್ನ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ: ಹಿಂದೂಪರ ಕಾರ್ಯಕರ್ತರ ವಿರುದ್ಧ ಕೇಸ್‌ ಎಂಬ ಆರೋಪಕ್ಕೂ, ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ: ಜಿ.ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ವೃದ್ಧೆಗೆ ಸಚಿವ ಚೆಲುವರಾಯಸ್ವಾಮಿ ನೆರವು

    ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ವೃದ್ಧೆಗೆ ಸಚಿವ ಚೆಲುವರಾಯಸ್ವಾಮಿ ನೆರವು

    ಚಿತ್ರದುರ್ಗ: ಬರದ ಹಿನ್ನೆಲೆಯಲ್ಲಿ ಬೆಳೆ ಹಾನಿಯಿಂದಾಗಿ ನಷ್ಟ ಅನುಭವಿಸಿರುವ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಿಮ್ಮನಹಳ್ಳಿ ವಯೋ ವೃದ್ಧೆಯೊಬ್ಬರಿಗೆ (Old Woman) ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (Chaluvaraya Swamy) ವೈಯಕ್ತಿಕವಾಗಿ 25,000 ರೂ. ನಗದು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಪತಿ ಇಲ್ಲದೆ ಒಂಟಿಯಾಗಿ ಬದುಕುತ್ತಿರುವ ವೃದ್ಧೆ ಜಯಮ್ಮ ಶೇಂಗಾ ಬೆಳೆಗಾಗಿ 1 ಲಕ್ಷ ರೂ. ವೆಚ್ಚ ಮಾಡಿದ್ದರು. ಆದರೆ ಮಳೆ ಇಲ್ಲದೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಬೆಳೆ ವಿಮೆಗೂ ನೋಂದಣಿ ಮಾಡಿಲ್ಲ. ಪತಿ ನಿಧನರಾಗಿದ್ದು ವೃದ್ಧೆಗೆ ಪುತ್ರರಿಲ್ಲ. ಮಗಳು ತಮ್ಮ ಪತಿಯೊಂದಿಗೆ ವಾಸವಾಗಿರುವ ಹಿನ್ನೆಲೆಯಲ್ಲಿ ಜಯಮ್ಮ ತಮ್ಮ ಸಂಕಷ್ಟ ತೋಡಿಕೊಂಡರು. ಸಚಿವರ ಕಾಲಿಗೆ ನಮಸ್ಕರಿಸಿ ಸಂಕಷ್ಟ ವಿವರಿಸಿದ ವೃದ್ಧೆಯ ಸ್ಥಿತಿ ಕಂಡು ಮರುಗಿದ ಸಚಿವರು ಸ್ಥಳದಲ್ಲೇ ವೈಯಕ್ತಿಕ ನೆರವು ನೀಡಿ ಸಂತೈಸಿದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲ: ಕಟೀಲ್ ವಾಗ್ದಾಳಿ

    ಇನ್ನು ಮಳೆ ಇಲ್ಲದೆ ಈ ಭಾಗದಲ್ಲಿ ಶೇಂಗಾ, ಮೆಕ್ಕೆಜೋಳ ಬೆಳೆ ಸಂಪೂರ್ಣ ವಿಫಲ ಹಿನ್ನೆಲೆಯಲ್ಲಿ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರು ರೈತರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಸಾಥ್ ನೀಡಿದರು. ಇದನ್ನೂ ಓದಿ: CWRC ಶಿಫಾರಸ್ಸು ಎತ್ತಿ ಹಿಡಿದ CWMA – ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

    ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

    ಮಂಡ್ಯ: ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ (Governor) ದೂರು ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ (Chaluvarayaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕೃಷಿ ಅಧಿಕಾರಿಗಳ ಹೆಸರಿನಲ್ಲಿ ದೂರು ಕೊಟ್ಟಿರುವವರು ನಮ್ಮ ಇಲಾಖೆಯಲ್ಲಿಯೇ ಇಲ್ಲ. ಅದರಲ್ಲಿರುವ ಯಾರ ವಿಳಾಸವೂ ಅಸಲಿ ಅಲ್ಲ. ಅವರ ನಂಬರ್ ಗಳು ಕೂಡಾ ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥಿಸಿಕೊಳ್ಳೋ ಲಜ್ಜೆಗೇಡಿ ಸಿಎಂ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಹೆಚ್‍ಡಿಕೆ

    ಗವರ್ನರ್ ಕಚೇರಿಗೆ ಪತ್ರ ತಲುಪಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. 7 ಸಹಿಗಳು ಒಂದೇ ರೀತಿಯಲ್ಲಿ ಇದೆ. ಕುಮಾರಸ್ವಾಮಿ ಅವರು ನಾನೇ ಪತ್ರ ಮಾಡಿದ್ದು, ಪತ್ರಕ್ಕೆ ನಾನೇ ಸಹಿ ಮಾಡಿದ್ದು ಅಂತ ಹೇಳಲಿ. ಆಗ ಅದು ಅಸಲಿ ಅಂತ ಒಪ್ಪಬಹುದು. ಇದು ಫೇಕ್ ಅಲ್ಲದೇ ಮತ್ತೇನೂ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

    ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿಗೆ ಜ್ಞಾನ ಇರಬೇಕು, ತಿಳುವಳಿಕೆ ಇರಬೇಕು. ಅವರು ಒಕ್ಕಲಿಗರನ್ನ ಸಹಿಸಲ್ವೋ, ಇನ್ನೊಬ್ಬರನ್ನ ಸಹಿಸಲ್ವೋ ಅದು ಅವರಿಗೆ ಬಿಟ್ಟಿದ್ದು. ಅವರು ಮಂಡ್ಯ ಜಿಲ್ಲೆಯನ್ನ ಏನಾದ್ರೂ ದತ್ತು ತೆಗೆದುಕೊಂಡಿದ್ದಾರಾ ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರು.

    ಕುಮಾರಸ್ವಾಮಿಗೆ ಮಂಡ್ಯದಲ್ಲಿ ಬೇರೆ ಯಾರೂ ರಾಜಕಾರಣ ಮಾಡಬಾರದು. ಮಂಡ್ಯ ಅಭಿವೃದ್ಧಿ ಆಗಬಾರದು ಅಂತ ಅವರ ಅಭಿಲಾಷೆ. ಅವರ ಬೆದರಿಕೆಗಳಿಗೆ ಯಾರೂ ಹೆದರೋದಿಲ್ಲ. ಈ ಸರ್ಕಾರವನ್ನಾ ನಾನು ಏನೋ ಮಾಡ್ತೀನಿ ಅನ್ಕೊಂಡಿದ್ದಾರೆ. ಅವರು ಸಿಎಂ ಆಗಿದ್ದಾಗ ಏನೇನು ಮಾಡಿದ್ರು ಅಂತ ಎಲ್ಲಾ ನೋಡಿದ್ದಾರೆ ಎಂದು ತಿಳಿಸಿದರು.

    ಹೆಚ್‍ಡಿಕೆಗಿಂತ 100ಪಟ್ಟು ಬಹಳ ಗೌರವಯುತವಾಗಿ ಸರ್ಕಾರ ಮಾಡ್ತೀವಿ. ಕುಮಾರಸ್ವಾಮಿಗೆ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಕುಂದುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಗರಂ ಆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು- ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಬಾಂಬ್

    ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು- ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಬಾಂಬ್

    ಬೆಂಗಳೂರು: ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು ಎಂದು ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಹೊಸ ಬಾಂಬ್ ಸಿಡಿಸಿದ್ದಾರೆ.

    ಸದ್ಯ ಸಚಿವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಸಚಿವರು ಹೇಳಿರೋದು ಏನು?: ಫಲಿತಾಂಶಕ್ಕಾಗಿ ಎಲ್ಲವನ್ನೂ ಮಾಡಬೇಕು. ಚೀಪ್ ಪಾಪ್ಯುಲಾರಿಟಿ ಇಲ್ಲದ್ದು ಪಲ್ಲದ್ದು ಮಾಡಬೇಕು. ಸಿಎಂ ಸಿದ್ದರಾಮಯ್ಯಗೆ ಇಷ್ಟ ಆಗುತ್ತೋ ಇಲ್ಲವೋ ಮಾಡಬೇಕು. ನಮ್ಮ ಮನಸ್ಸಿಗೆ ಒಪ್ಪುತ್ತೋ ಇಲ್ಲವೋ ಆದರೂ ಮಾಡಬೇಕು. ಫಲಿತಾಂಶವೇ ಅನಿವಾರ್ಯ ರಿಸಲ್ಟ್ ಗಾಗಿ ಎಲ್ಲವನ್ನೂ ಮಾಡಬೇಕು ಅಂತ ಸಚಿವರು ಹೇಳಿದ್ದಾರೆ.

    ಒಟ್ಟಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಗೊಂದಲಗಳ ಮಧ್ಯೆ ಸಚಿವರ ಮಾತು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಕೃಷಿ ಚಟುವಟಿಕೆ ಮಾದರಿಯ ಕೇಕ್ ಮಾಡಿ ಚೆಲುವರಾಯಸ್ವಾಮಿ ಹುಟ್ಟುಹಬ್ಬ ಆಚರಣೆ

    ಕೃಷಿ ಚಟುವಟಿಕೆ ಮಾದರಿಯ ಕೇಕ್ ಮಾಡಿ ಚೆಲುವರಾಯಸ್ವಾಮಿ ಹುಟ್ಟುಹಬ್ಬ ಆಚರಣೆ

    ಬೆಂಗಳೂರು: ಇಂದು ಕೃಷಿ ಸಚಿವ ಚೆಲುವರಾಯಸ್ವಾಮಿ (N. Chaluvaraya Swamy) ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೃಷಿ ಚಟುವಟಿಕೆ ಮಾದರಿಯಲ್ಲಿ ಕೇಕ್ ರಚನೆ ಮಾಡಿ ಸಚಿವರ ಹುಟ್ಟುಹಬ್ಬ ಆಚರಿಸಲಾಯಿತು.

    ಈ ವೇಳೆ ಮಾತನಾಡಿದ ಸಚಿವರು, ನನಗೆ ನನ್ನ ಬರ್ತ್ ಡೇ (Chaluvaraya Swamy Birthday) ಮುಖ್ಯ ಅಲ್ಲ ರಾಜ್ಯದ ಹಿತ ಮುಖ್ಯ. ನನ್ನ ಮುಂದೆ ಸಾಕಷ್ಟು ಸವಾಲುಗಳು ಇವೆ ಅವುಗಳನ್ನ ನಿಭಾಯಿಸಬೇಕಿದೆ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿ ಅನ್ನೋದೇ ನನ್ನ ಆಶಯ. ಕಾಂಗ್ರೆಸ್ ಭರವಸೆ ನೀಡಿರೋ ಗ್ಯಾರಂಟಿಗಳನ್ನ ಜಾರಿ ಮಾಡಿಯೇ ಮಾಡ್ತೀವಿ. ಈ ಹಿಂದಿನ ಸರ್ಕಾರ ಕೊಟ್ಟ ಭರವಸೆಯನ್ನ ಈಡೇರಿಸಿದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ; ಆಪರೇಷನ್ ಥಿಯೇಟರ್‌ನಲ್ಲಿ ಟೈಟಾಗಿ ಮಲಗಿದ್ದ ವೈದ್ಯ – ವಿಷ್ಣುಸೇನಾ ಚಿತ್ರದ ಪಾರ್ಟ್ 2 ಕಥೆ ಹೆಣೆದ ಸಿಬ್ಬಂದಿ

    ಮೇ 15ರಂದು ಸರ್ಕಾರ ರಚನೆ ಆಗಿದೆ. ಇನ್ನೂ ಒಂದೇ ಕ್ಯಾಬಿನೆಟ್ ಆಗಿರೋದು. ಸಮಯ ತೆಗೆದುಕೊಳ್ಳುತ್ತೆ ಗ್ಯಾರಂಟಿಗಳನ್ನ ಜಾರಿ ಮಾಡಿಯೇ ಮಾಡ್ತೀವಿ. ಶುಕ್ರವಾರ ಸಭೆ ಇದೆ ಸಭೆಯಲ್ಲಿ ತೀರ್ಮಾನ ಆಗುತ್ತೆ. ಅಧಿಕಾರಗಳು ಎಲ್ಲಾವನ್ನು ವ್ಯವಸ್ಥಿತವಾಗಿ ಜಾರಿ ಆಗಬೇಕು ತಯಾರಿ ಬೇಕು. ಹಾಗಾಗಿ ಕೊಟ್ಟ ಮಾತಿನಿಂದ ನಡೆದುಕೊಳ್ತೆವೆ ಎಂದು ಹೇಳಿದರು.

    ಗೃಹಲಕ್ಷ್ಮಿ ಯೋಜನೆ ದೊಡ್ಡ ಸಮಾವೇಶ ಮಾಡಿ ಹಬ್ಬದ ದಿನ ಘೋಷಣೆ ಮತ್ತೆ ವಾದ್ರಾ ಬರ್ತ್ ಡೇ ದಿನ ಘೋಷಣೆ ಮಾಡ್ತಾರಂತೆ ನಿಜಾನಾ ಎಂಬ ಪ್ರಶ್ನೆಗೆ ಉತ್ತರಿಸಿದ ಚೆಲುವರಾಯಸ್ವಾಮಿ, ನನಗೆ ಅದು ಮಾಹಿತಿ ಇಲ್ಲ ಎಂದರು.

  • ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ: ಚೆಲುವರಾಯಸ್ವಾಮಿ

    ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ: ಚೆಲುವರಾಯಸ್ವಾಮಿ

    ಮಂಡ್ಯ: ಬಿಜೆಪಿಯಲ್ಲಿ ನೂರು ಬಾಗಿಲು, ನಮ್ಮಲ್ಲಿ ಒಂದೇ ಬಾಗಿಲು. ಯಡಿಯೂರಪ್ಪ (B.S Yediyurappa) ಇಲ್ಲ ಅಂದ್ರೆ ಬಿಜೆಪಿ (BJP) ಇಲ್ಲ. ಅಧಿಕಾರದ ದರ್ಪದಲ್ಲಿ ಬಿಜೆಪಿಯವ್ರು ಮಾತಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಸಂಸದ ಚೆಲುವರಾಯಸ್ವಾಮಿ (Chaluvarayaswamy) ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ (Bharat Jodo Yatre) ಉತ್ಸಾಹದಿಂದ ಸಾಗುತ್ತಿದೆ. ಸೋನಿಯಾ ಗಾಂಧಿ (Sonia Gandhi) ಯವರು ಭಾಗವಹಿಸ್ತಿರೋದು ನಮಗೆಲ್ಲ ಹೆಮ್ಮೆ. ಅಧಿಕಾರಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಗಟ್ಟಿ ಮಾಡಲು ರಾಹುಲ್ ಗಾಂಧಿ (Rahul Gandhi) ಈ ಯಾತ್ರೆ ಮಾಡುತ್ತಿದ್ದಾರೆ ಎಂದರು.

    ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಸಿಕ್ತಿದೆ. ಈ ಭಾಗ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ನಂತರ ಜೆಡಿಎಸ್ ಕೋಟೆಯಾಗಿತ್ತು. ಮುಂದೆ ಜನ ಯಾರ ಕಡೆ ತೀರ್ಪು ಕೊಡ್ತಾರೆ ಅಂತ ನೋಡಿ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಕಾಂಗ್ರೆಸ್ (Congress) ನವರು ಮೊದಲು ಜೋಡೋ ಆಗಲಿ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಬೊಮ್ಮಾಯಿ-ಶೆಟ್ಟರ್ ಜೋಡಣೆ ಆಗಿದ್ದಾರಾ..?, ಅಶೋಕ್ – ಸೋಮಣ್ಣ ಜೋಡಣೆ ಆಗಿದ್ದಾರಾ..?. ಈ ರೀತಿ ನಮ್ಮಲ್ಲಿ ಯಾವುದೇ ಸಂಘರ್ಷ ಇಲ್ಲ ಎಂದು ಮಾಜಿ ಸಂಸದರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ಬೆಂಗಳೂರು: ದಿನೇ ದಿನೇ ಕಾಂಗ್ರೆಸ್‍ನಲ್ಲಿ ಕುರ್ಚಿ ಕದನ ಜೋರಾಗಿದೆ. ಜೊತೆಗೆ ಜಮೀರ್ ವರ್ಸಸ್ ಡಿಕೆಶಿ ಟಾಕ್‍ವಾರ್ ಸಹ ಮಿತಿ ಮೀರುತ್ತಿದೆ. ಡಿಕೆಶಿ ವಾರ್ನಿಂಗ್ ಬಳಿಕವೂ ಶಾಸಕ ಜಮೀರ್ ಅವರು ಸಿದ್ದರಾಮಯ್ಯ ಜಪ ಮಾಡಿದ್ದು ಕಾಂಗ್ರೆಸ್‍ನಲ್ಲಿ ಟಾಕ್‍ವಾರ್ ಹೆಚ್ಚಿಸಿದೆ.

    ಈ ಮಧ್ಯೆ ಮಾಜಿ ಸಚಿವ ಚಲುವರಾಯಸ್ವಾಮಿ, ಡಿ.ಕೆ ಸುರೇಶ್ ಮನೆಗೆ ಭೇಟಿ ನೀಡಿದ್ದು, ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ. ಒಕ್ಕಲಿಗರ ಬಗ್ಗೆ ಮಾತಾಡದಂತೆ ಚಲುವರಾಯಸ್ವಾಮಿ ತಾಕೀತು ಮಾಡಿದ್ದಾರೆ. ಜಮೀರ್ ನಡೆಯಿಂದ ಜೆಡಿಎಸ್‍ಗೆ ಲಾಭವಾಗಬಹುದು. ಹೀಗಾಗಿ ಆರಂಭದಲ್ಲೇ ವಿವಾದವನ್ನು ತಣ್ಣಗಾಗಿಸಲು ಚಲುವರಾಯಸ್ವಾಮಿ ಮುಂದಾಗಿದ್ದಾರೆ. ಇದನ್ನೂ ಓದಿ; ಭೀಕರ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ದುರ್ಮರಣ- ಗೃಹ ಸಚಿವರು ಕಂಬನಿ

    ತಕ್ಷಣವೇ ಜಮೀರ್ ಜೊತೆ ಮಾತುಕತೆ ನಡೆಸುವುದಾಗಿ ಚಲುವರಾಯಸ್ವಾಮಿ ಹೇಳಿದ್ದಾರೆ. ಅಲ್ಲದೇ ವಿವಾದಕ್ಕೆ ಅಂತ್ಯ ಹಾಡಲು ಸಿದ್ದರಾಮಯ್ಯ ಸಹ ಸೂಚಿಸಿದ್ರು ಎನ್ನಲಾಗಿದೆ. ಹೀಗಾಗಿ ಜಮೀರ್, ಸಿದ್ದರಾಮಯ್ಯ ಆಪ್ತರಾದ ಚಲುವರಾಯಸ್ವಾಮಿ ಖುದ್ದು ಫೀಲ್ಡ್‍ಗಿಳಿದಿದ್ದಾರೆ. ಕಟುನುಡಿಗಳ ಮೂಲಕ ಆಪ್ತನಿಗೆ ಸುಮ್ಮನಿರುವಂತೆ ಪರೋಕ್ಷವಾಗಿ ಸೂಚಿಸಿದ್ದಾರೆ.

    ಜಮೀರ್‍ಗೆ ಶೋಕಾಸ್ ನೋಟಿಸ್ ಮಾಡಿ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಸ್ತುಪಾಲನ ಸಮಿತಿ ರೆಹಮಾನ್ ಖಾನ್‍ಗೆ ಖುದ್ದು ಡಿಕೆಶಿ ಸೂಚಿಸಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತುಟಿ ಬಿಚ್ಚಿಲ್ಲ. ಸಿದ್ದರಾಮೋತ್ಸವದವರೆಗೆ ಸಿದ್ದು ಮೌನವಾಗಿರ್ತಾರಾ ಎಂದ ಗುಸುಗುಸು ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 5 ವರ್ಷದ ನಂತರ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕಮ್ ಬ್ಯಾಕ್

    5 ವರ್ಷದ ನಂತರ ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕಮ್ ಬ್ಯಾಕ್

    ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ  ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ  ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಸಚಿನ್ ಭತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಸದ್ಯದಲ್ಲಿಯೇ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅವರೇ‌ ಮಾಹಿತಿ ನೀಡಲಿದ್ದಾರೆ.

  • ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ರಾಮನಗರ: ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.

    ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಮಾಡುವ ಬದ್ಧತೆಯನ್ನು ರಾಜ್ಯ ಸರ್ಕಾರ ಕೊಡುತ್ತಿಲ್ಲ. ಕೋರ್ಟ್ ಸೂಚನೆ ಮಾಡಿರುವುದು ಅವರು ಇಲ್ಲಿಯವರೆಗೆ ಮಾಡಿರುವ ವರದಿಯನ್ನು ಕೇಳಿದೆ. ಆದರೆ ಇವರು ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆಯುತ್ತಿದ್ದಾರೆ. ನಾವು ಕೋರ್ಟ್‍ಗೆ ಈ ಬಗ್ಗೆ ಅಭಿಪ್ರಾಯ ತಿಳಿಸುತ್ತೇವೆ ಅಂತಾ ಹೇಳಿದ್ದೇವೆ. ಆದರು ಇವರು ಪ್ರಜಾಪ್ರಭುತ್ವ ಸರ್ಕಾರದಲ್ಲಿ ಎಲ್ಲರನ್ನು ತಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ನಾವು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಎರಡೂವರೆ ವರ್ಷದಲ್ಲಿ ಅರ್ಧದಷ್ಟು ನಿರ್ಮಾಣ ಮಾಡಬಹುದಿತ್ತು. ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ನಾವು 5 ಜನವಾದರೂ ಪಾದಯಾತ್ರೆ ಮಾಡಿ ಮುಗಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಗಣಿಗ ರವಿಕುಮಾರ್, ಇಕ್ಬಾಲ್ ಹುಸೇನ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ, ಸೇರಿದಂತೆ ಇನ್ನೂ ಹಲವಾರು ರೈತ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

  • ನಿಮ್ಮ ವೈಯಕ್ತಿಕ ಅಸಮಾಧಾನವೇನೇ ಇರಲಿ, ಜಿಲ್ಲೆಯನ್ನ ಕಡೆಗಣಿಸಬೇಡಿ- ಸಿಎಂಗೆ ಚಲುವರಾಯಸ್ವಾಮಿ ಮನವಿ

    ನಿಮ್ಮ ವೈಯಕ್ತಿಕ ಅಸಮಾಧಾನವೇನೇ ಇರಲಿ, ಜಿಲ್ಲೆಯನ್ನ ಕಡೆಗಣಿಸಬೇಡಿ- ಸಿಎಂಗೆ ಚಲುವರಾಯಸ್ವಾಮಿ ಮನವಿ

    ಮಂಡ್ಯ: ನಿಮ್ಮ ವೈಯಕ್ತಿಕ ಅಸಮಾಧಾನ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿಯವರಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಮೂಲಕ ಸಿಎಂ ಅವರು ತಮ್ಮ ಮಗನ ಸೋಲಿನ ನಂತರ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ರೈತರ ಬೆಳೆಗೆ ಕಾವೇರಿ ನೀರು ಬಿಡುವ ಬಗ್ಗೆ ಮಾತನಾಡಿದ ಅವರು, ರೈತರಿಗೆ 10-15 ದಿನ ನೀರು ಬಿಡುವ ಅವಕಾಶ ಇತ್ತು. ಇಂದು ದುರಾದೃಷ್ಟ ಜಿಲ್ಲೆಯ ಒಬ್ಬ ಜನಪ್ರತಿನಿಧಿಯೂ ಕಾವೇರಿ ಸಭೆ ಕರೆಯಲಿಲ್ಲ. ಮುಖ್ಯಮಂತ್ರಿ ಬಳಿಯೂ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಲಿಲ್ಲ. ಅದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದರು ಎಂದು ಸಿಟ್ಟು ಬಂದಿದೆಯೋ, ಜನಕ್ಕೆ ಸಹಾಯ ಮಾಡೋದು ಬೇಡ ಎಂಬ ಅಸಮಾಧಾನ ಆಗಿದೆಯೋ ಗೊತ್ತಾಗುತ್ತಿಲ್ಲ ಎಂದರು.

    ಈಗ ನೀರನ್ನು ಬಿಡಲು ಪ್ರಾಧಿಕಾರದ ಒಪ್ಪಿಗೆ ಬೇಕು ಎಂಬ ಸಬೂಬು ಹೇಳುತ್ತಿದ್ದಾರೆ. ಪ್ರಾಧಿಕಾರ ರಚನೆ ಆದ ಮೇಲೂ ಚುನಾವಣೆಗೆ ಮುಂಚೆ ಪ್ರಾಧಿಕಾರದ ಅನುಮತಿ ಪಡೆಯದೆ ಮೂರು ಬಾರಿ ನೀರು ಕೊಟ್ಟಿದ್ದಾರೆ. ನಂತರ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ ನಿದರ್ಶನ ಇದೇ ಸರ್ಕಾರದಲ್ಲಿ ಇದೆ. ಈ ಬಾರಿಯೂ ನೀರು ಬಿಡಲು ಅವಕಾಶ ಇದ್ದರೂ ನೀರು ಬಿಟ್ಟಿಲ್ಲ. ಇರುವ ನೀರನ್ನು ಬಳಸಬೇಡಿ ಎಂದು ಪ್ರಾಧಿಕಾರ ಹೇಳಿಲ್ಲ. ಬೆಳೆಗೂ ನೀರು ಕೊಟ್ಟು ಕುಡಿಯುವುದಕ್ಕೂ ನೀರು ಉಳಿಸಿಕೊಳ್ಳಬಹುದಿತ್ತು. ಆದರೆ ಖಡಾಖಂಡಿತವಾಗಿ ನೀರು ಬಿಡೋದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಜನ ತುಂಬಾ ಒಳ್ಳೆಯವರು. ಮೋಸ ಮಾಡಿದರೂ ಸಹಿಸಿಕೊಳ್ಳುತ್ತೀರಿ. ಇದನ್ನು ನೀವು ಎಂದಾದರೂ ಒಂದು ದಿನ ಅರ್ಥ ಮಾಡಿಕೊಳ್ಳುತ್ತೀರಿ. ಆದರೆ ಈ ಸರ್ಕಾರ, ಇವತ್ತಿನ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯನ್ನು ಕಡೆಗಣಿಸುವುದು ಸೂಕ್ತ ಅಲ್ಲ. ಅನೇಕ ಬಾರಿ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ಆಶೀರ್ವಾದವನ್ನು ನಿಮಗೆ ಮಾಡಿದೆ. ಹೀಗಾಗಿ ನಿಮ್ಮ ವೈಯಕ್ತಿಯ ಕಾರಣ ಏನೇ ಇರಲಿ, ಯಾವುದೇ ದೃಷ್ಟಿಯಿಂದ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.