Tag: ಚೆರಿ ಸ್ಮೂದಿ

  • ಚೆರಿ ಸ್ಮೂದಿ ಮಾಡಿ ಸವಿದು ಚಿಲ್ ಆಗಿ

    ಚೆರಿ ಸ್ಮೂದಿ ಮಾಡಿ ಸವಿದು ಚಿಲ್ ಆಗಿ

    ಗಷ್ಟೇ ಚಳಿ ಮುಗಿದು, ನಿಧಾನವಾಗಿ ಬೇಸಿಗೆ ಪ್ರಾರಂಭವಾಗುತ್ತಿದೆ. ಹೋಟೆಲ್, ಮಾರುಕಟ್ಟೆಗಳಲ್ಲಿ ತಂಪಾದ ಪಾನೀಯಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಮನೆಯಲ್ಲೂ ಏನಾದರೂ ಚಿಲ್ ಆಗಿ ಸವಿಯಲು ರೆಸಿಪಿಗಳನ್ನು ನೀವು ಹುಡುಕುತ್ತಿದ್ದರೆ, ನಾವಿಂದು ಒಂದು ಸೂಪರ್ ಪಾನೀಯ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಕೇವಲ 5 ನಿಮಿಷಗಳಲ್ಲಿ ಚೆರಿ ಸ್ಮೂದಿ (Cherry Smoothie) ನೀವು ಕೂಡಾ ಮನೆಯಲ್ಲಿ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಚೆರಿ ರಸ – ಒಂದೂವರೆ ಕಪ್
    ಬಾಳೆಹಣ್ಣು – 1
    ಫ್ರೋಝನ್ ಕಪ್ಪು ಸಿಹಿ ಚೆರಿ – ಒಂದೂವರೆ ಕಪ್
    ಮೊಸರು – ಮುಕ್ಕಾಲು ಕಪ್
    ಪುದೀನಾ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಳೆ ಹಣ್ಣನ್ನು ಮಧ್ಯಮ ಭಾಗಗಳಾಗಿ ಕತ್ತರಿಸಿಕೊಳ್ಳಿ.
    * ಮಿಕ್ಸರ್ ಜಾರ್‌ಗೆ ಚೆರಿ ರಸ, ಬಾಳೆಹಣ್ಣು, ಫ್ರೋಝನ್ ಚೆರಿ ಮತ್ತು ಮೊಸರು ಹಾಕಿ, ನಯವಾಗಿ ರುಬ್ಬಿಕೊಳ್ಳಿ.
    * ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು 2 ಗಂಟೆ ಫ್ರಿಜ್‌ನಲ್ಲಿ ಇಡಿ. (ತಣ್ಣಗಾಗಿಸಿ ಕುಡಿಯಲು ಇಷ್ಟಪಡದವರು ಹಾಗೆಯೇ ಸವಿಯಬಹುದು)
    * ಈಗ ಸ್ಮೂದಿಯನ್ನು ಗ್ಲಾಸ್‌ಗಳಿಗೆ ಹಾಕಿಕೊಂಡು, ಅದರ ಮೇಲೆ ಅಲಂಕಾರಕ್ಕೆ ಪುದೀನಾ ಸೊಪ್ಪು ಹಾಗೂ ಚೆರಿ ಹಣ್ಣುಗಳನ್ನು ಇರಿಸಿ.
    * ಇದೀಗ ಚೆರಿ ಸ್ಮೂದಿ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k