Tag: ಚೆನ್ನೈ ಸೂಪರ್‌ಕಿಂಗ್ಸ್

  • ಕ್ರೀಸ್‌ಗಿಳಿಯುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದೇಕೆ? ರಹಸ್ಯ ಬಿಚ್ಚಿಟ್ಟ ಮಿಶ್ರಾ

    ಕ್ರೀಸ್‌ಗಿಳಿಯುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದೇಕೆ? ರಹಸ್ಯ ಬಿಚ್ಚಿಟ್ಟ ಮಿಶ್ರಾ

    ಮುಂಬೈ: IPL 15ನೇ ಆವೃತ್ತಿಯಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಬ್ಯಾಟ್ ಕಚ್ಚುತ್ತಿದ್ದ ದೃಶ್ಯ ಬಾರೀ ಕುತೂಹಲ ಮೂಡಿಸಿತ್ತು.

    ಚೆನ್ನೈ ಇನ್ನಿಂಗ್ಸ್ ವೇಳೆ ಕೊನೆಯ ಹಂತದಲ್ಲಿ ಕುಳಿತಿದ್ದ ಧೋನಿ, ತಮ್ಮ ಬ್ಯಾಟ್ ಅನ್ನು ಕಚ್ಚುತ್ತಿದ್ದರು. ಈ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಬ್ಯಾಟ್ ಕಚ್ಚಿದ್ದರ ಹಿಂದಿನ ರಹಸ್ಯವನ್ನು ಭಾರತೀಯ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಬಹಿರಂಗಪಡಿಸಿದ್ದಾರೆ.

    https://twitter.com/Im_Perfect45/status/1523325474805456896?ref_src=twsrc%5Etfw%7Ctwcamp%5Etweetembed%7Ctwterm%5E1523325474805456896%7Ctwgr%5E%7Ctwcon%5Es1_&ref_url=https%3A%2F%2Fwww.prajavani.net%2Fsports%2Fcricket%2Fipl-2022-amit-mishra-explains-why-does-dhoni-bite-his-bat-935353.html

    ಧೋನಿ ಬ್ಯಾಟ್ ಅನ್ನು ಕಚ್ಚಿದ್ದೇಕೆ ಎಂದು ನೀವು ಆಶ್ಚರ್ಯಪಟ್ಟಿದ್ದರೆ, ಧೋನಿ ಅವರು ಬ್ಯಾಟಲ್ಲಿ ಇದ್ದ ಟೇಪ್ ಅನ್ನು ತೆಗೆಯಲು ಪ್ರಯತ್ನಿಸುತ್ತಿದ್ದರು. ಅವರು ಯಾವಾಗಲೂ ಕ್ಲೀನ್ ಬ್ಯಾಟ್ ಇಷ್ಟಪಡುತ್ತಾರೆ. ಎಂಎಸ್‌ಡಿ ಬ್ಯಾಟಿಂಗ್ ಮಾಡುವಾಗ ಒಂದೇ ಒಂದು ತುಂಡು ಟೇಪ್ ಸಹ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ 91 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಚೆನ್ನೈ , ಪ್ಲೇ-ಆಫ್ ಕನಸನ್ನು ಜೀವಂತವಾರಿಗಿಸಿದೆ. ಬ್ಯಾಟಿಂಗ್‌ನಲ್ಲಿ ಮಿಂಚಿದ ಧೋನಿ ಕೇವಲ 8 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ 21 ರನ್ ಗಳಿಸಿ ಅಜೇಯರಾಗುಳಿದರು.

  • 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್ (CSK) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಧಿಕ ರನ್‌ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ (ಪಂದ್ಯಶ್ರೇಷ್ಠ) ಪ್ರಶಸ್ತಿ ಗಳಿಸಿದ ಶಿಖರ್ ಧವನ್ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    CRICKET-IND-T20-IPL-DELHI-PUNJAB

    ಐಪಿಎಲ್‌ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಿಖರ್ ಧವನ್, ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿಯಿಂದ ಅಬ್ಬರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ 200ನೇ ಪಂದ್ಯವಾಡಿದ ಅವರು, 6 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ

    DHAVAN

    ಶಿಖರ್ ಧವನ್ ಅವರಿಗಿಂತ ಮೊದಲು ಈ ಸಾಧನೆ ಮಾಡಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ 3ನೇ ಸ್ಥಾನ, ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನ ಹಾಗೂ ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

    2022ರಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿರುವ ಶಿಖರ್ ಧವನ್, ಈ ಹಿಂದೆ ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.

    ಅಲ್ಲದೆ, ತಮ್ಮ ಟಿ20 ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಗಡಿ ದಾಟಿದ್ದು, ಇದೀಗ ಅತಿಹೆಚ್ಚು ರನ್‌ಗಳಿಸಿದ ಭಾರತದ 3ನೇ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

    ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಳಿಸಿದವರು
    ವಿರಾಟ್ ಕೊಹ್ಲಿ – 215 ಪಂದ್ಯಗಳು- 6402 ರನ್
    ಶಿಖರ್ ಧವನ್ – 200 ಪಂದ್ಯಗಳು- 6086 ರನ್
    ರೋಹಿತ್ ಶರ್ಮಾ 221 ಪದ್ಯಗಳು- 5764
    ಡೇವಿಡ್ ವಾರ್ನರ್ 155 ಪಂದ್ಯಗಳು – 5668
    ಸುರೇಶ್ ರೈನಾ- 205 ಪಂದ್ಯಗಳು- 5528

  • ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆಗೆ ಇಂದು ಲಕ್ನೋ ಸವಾಲು!

    ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆಗೆ ಇಂದು ಲಕ್ನೋ ಸವಾಲು!

    ನವದೆಹಲಿ: ಮೊದಲ ಪಂದ್ಯದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನ್ನು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧ ಸೋಲನುಭವಿಸಿದ ಲಕ್ನೋ ಸೂಪರ್‌ ಜೈಂಟ್ಸ್ ಇಂದು ಮುಖಾಮುಖಿಯಾಗಲಿವೆ.

    ಧೋನಿ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ರವಿಂದ್ರ ಜಡೇಜಾ ಅವರ ನಾಯತ್ವದ ಮೊದಲ ಪಂದ್ಯದಲ್ಲೇ ಚೆನ್ನೈ ಕೆಕೆಆರ್‌ಗೆ ಮಂಡಿಯೂರಿತು. ಇನ್ನೂ ಹೊಸತಂಡದ ಮೂಲಕ ಸೇರ್ಪಡೆಯಾಗಿದ್ದ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಪಂದ್ಯದಲ್ಲೇ ಕೈಚೆಲ್ಲಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವೂ ಇದಕ್ಕೆ ಕಾರಣವಾಗಿತ್ತು. ಆದರಿಂದು ಲಕ್ನೋನಲ್ಲಿ ಕ್ವಿಂಟನ್ ಡಿಕಾಕ್, ಕೆ.ಎಲ್.ರಾಹುಲ್, ಮನಿಷ್‌ಪಾಂಡೆ ಸೇರಿದಂತೆ ಬಲಿಷ್ಠ ಆಟಗಾರರು ಬ್ಯಾಟಿಂಗ್ ಲಯಕ್ಕೆ ಮರಳುವ ಸಾಧ್ಯತೆಯಿದೆ. ಹಾಗೆಯೇ ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಎಂ.ಎಸ್.ಧೋನಿ, ಅಂಬಟಿ ರಾಯುಡು, ಜಡೇಜಾ, ಋತುರಾಜ್ ಗಾಯಕ್ವಾಡ್‌ ಮೊದಲಾದವರು ಬ್ಯಾಟಿಂಗ್ ಫೈಟ್ ನೀಡಲಿದ್ದಾರೆ. ಮೊದಲ ಪಂದ್ಯದಲ್ಲಿ ಗೈರಾಗಿದ್ದ ಆಲ್‌ರೌಂಡರ್ ಮೊಯಿನ್ ಅಲಿ ಸಹ ಈ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದು ತಂಡದ ಗೆಲುವಿಗೆ ಕಾರಣವಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು 

    IPL 2022

    ಚೆನ್ನೈ ಮತ್ತು ಲಕ್ನೋ ನಡುವಿನ ಮೊದಲ ಪಂದ್ಯ ಇದಾಗಿದೆ. ಸಿಎಸ್‌ಕೆ ತಂಡದ ನಾಯಕ ಜಡೇಜಾ 201 ಪಂದ್ಯದಲ್ಲಿ 2 ಅರ್ಧ ಶತಕ, 86 ಸಿಕ್ಸರ್‌, 176 ಬೌಂಡರಿ ಸೇರಿದಂತೆ 2,412 ರನ್‌ ಬಾರಿಸಿದ್ದಾರೆ. ಈ ಮೊದಲು ಕಿಂಗ್ಸ್ ಪಂಜಾಬ್ ನಾಯಕನಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ 95 ಪಂದ್ಯಗಳಲ್ಲಿ 2 ಶತಕ, 27 ಅರ್ಧ ಶತಕ, 134 ಸಿಕ್ಸರ್‌, 282 ಬೌಂಡರಿಗಳು ಸೇರಿ 3,273 ರನ್‌ಗಳ ಮಳೆಗರೆದಿದ್ದಾರೆ. ಎರಡೂ ತಂಡದಲ್ಲೂ ಬಲಿಷ್ಠ ಆಟಗಾರರಿದ್ದು ಇಂದು ತೀವ್ರ ಪೈಪೋಟಿ ಎದುರಾಗಲಿದೆ. ಇದನ್ನೂ ಓದಿ: ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು