Tag: ಚೆನ್ನಮ್ಮ ದೇವೇಗೌಡ

  • ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ

    ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ನಡೆಸಿದ 90 ದಿನಗಳ ಪಂಚರತ್ನ ಯಾತ್ರೆಗೆ ಇಂದು (ಮಾ.26) ಮೈಸೂರಿನಲ್ಲಿ ತೆರೆ ಬೀಳಲಿದೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿಲು ಮನೆಯಿಂದ ಹೊರಟಿದ್ದ ಹೆಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿಸಿ ಪತ್ನಿ ಚೆನ್ನಮ್ಮ ದೇವೇಗೌಡರು ಒಳ್ಳೆಯದಾಗಲಿ ಎಂದು ಶುಭಕೋರಿದರು.

    ಮೈಸೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಲು ಹೆಚ್.ಡಿ.ದೇವೇಗೌಡರು ಕಾರಿ ಹತ್ತಿದರು. ಈ ವೇಳೆ ಪತಿಯನ್ನು ಎದುರುಗೊಂಡ ಚೆನ್ನಮ್ಮ ದೇವೇಗೌಡ ಅವರು ಪತಿ ಕಾಲಿಗೆ ನಮಸ್ಕರಿಸಿದರು. ಸಮಾರಂಭ ಯಶಸ್ವಿಯಾಗಲಿ ಎಂದು ಇದೇ ವೇಳೆ ಹರಸಿದರು. ಎದುರು ನೆರೆದಿದ್ದವರು ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆ – ಡಿ.ಕೆ.ಸುರೇಶ್

    ಚುನಾವಣೆ ಹೊತ್ತಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯವ್ಯಾಪಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯದ 88 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ. ನವೆಂಬರ್ 16ರಂದು ಕೋಲಾರದಲ್ಲಿ ಯಾತ್ರೆ ಪ್ರಾರಂಭಗೊಂಡಿತ್ತು. ಯಾತ್ರೆ ಮುಕ್ತಾಯ ಹಂತ ತಲುಪಿದ್ದು, ಇಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಬೃಹತ್ ಸಮಾರೂಪ ಸಮಾರಂಭ ಆಯೋಜನೆಗೊಂಡಿದೆ. ಆರೋಗ್ಯ ಚೇತರಿಕೆ ಬಳಿಕ ಇಂದು ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಾಲ್ಗೊಂಡಿದ್ದಾರೆ.

    ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದ ಮೂಲಕ ಮೈಸೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಮೈಸೂರು ತಾಲ್ಲೂಕು ಉತ್ತನಹಳ್ಳಿ ಗ್ರಾಮದ ಬಳಿ ಸುಮಾರು 100 ಎಕರೆ ಪ್ರದೇಶದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಮೈಸೂರು, ಮಂಡ್ಯ, ಹಾಸನ, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

    ಸಮಾರಂಭಕ್ಕೂ ಮುನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹೆಚ್‌ಡಿಕೆಗೆ ಶಾಸಕ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪುರ ಸಾಥ್ ನೀಡದರು.