Tag: ಚೆನೈ

  • ತಾಂತ್ರಿಕ ದೋಷ – ವಾಯುಪಡೆಯ ಹೆಲಿಕಾಪ್ಟರ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ

    ತಾಂತ್ರಿಕ ದೋಷ – ವಾಯುಪಡೆಯ ಹೆಲಿಕಾಪ್ಟರ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ

    ಚೆನ್ನೈ: ತಾಂತ್ರಿಕ ದೋಷದಿಂದಾಗಿ ಐಎಎಫ್‍ನ (Indian Air Force) ತರಬೇತಿ ಹೆಲಿಕಾಪ್ಟರ್ (Helicopter) ಚೆನ್ನೈ ಬಳಿಯ ಪೊಪರ್ಂದಲ್‍ನ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಬ್ಬರು ಸಿಬ್ಬಂದಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಸಲವಕ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೊಪರ್ಂದಲ್ ಪ್ರದೇಶಕ್ಕೆ ಸಮೀಪಿಸಿದಾಗ ಹಠಾತ್ತನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ಪೈಲಟ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ಮತ್ತೊಂದು ಸೇನಾ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿ ಬಂದು ತಾಂತ್ರಿಕ ದೋಷ ಸರಿಪಡಿಸಿ ಸೇನಾ ನೆಲೆಗೆ ಕೊಂಡೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ತುರ್ತು ಭೂಸ್ಪರ್ಶದ ವೇಳೆ ಯಾವುದೇ ಅನಾಹುತ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ಗುಜರಾತ್‍ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರ ಪರಿಣಾಮ ಅದರಲ್ಲಿದ್ದ ಇಬ್ಬರು ಪೈಲಟ್‍ಗಳು ಸೇರಿ ಮೂವರು ನಾಪತ್ತೆಯಾಗಿದ್ದರು.

  • ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    ಚೆನ್ನೈ: ತಮಿಳುನಾಡಿನ (Tamil Nadu) ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಕಲಾಕ್ಷೇತ್ರದ (Kalakshetra) ಪ್ರೊಫೆಸರ್ (Professor) ಒಬ್ಬರ ಮೇಲೆ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ.

    ಸಂಸ್ಥೆಯ ಮಾಜಿ ವಿದ್ಯಾರ್ಥಿನಿಯೊಬ್ಬರು ತಮ್ಮ ಮೇಲೆ ಪ್ರೊಫೆಸರ್ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರಿನಡಿ ಚೆನ್ನೈ (Chennai) ಪೊಲೀಸರು ಪ್ರೊಫೆಸರ್ ಹರಿ ಪದ್ಮನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ ಮೂವರ ರೆಪರ್ಟರಿ ಕಲಾವಿದರಿಂದ ನಿಂದನೆ ಹಾಗೂ ಬಾಡಿ ಶೇಮಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. 200ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

    ಕಲಾಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ, ಬಣ್ಣದ ಆಧಾರದ ಮೇಲೆ ತಾರತಮ್ಯ ಹಾಗೂ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಸಂಸ್ಥೆಯ ನಿರ್ದೇಶಕಿ ರೇವತಿ ರಾಮಚಂದ್ರನ್ ಅವರನ್ನು ವಜಾಗೊಳಿಸಬೇಕು. ಸಂಸ್ಥೆಯ ಆಂತರಿಕ ದೂರು ಸಮಿತಿಯನ್ನು ಪುನರ್ ರಚಿಸಬೇಕು ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ (G.Kishan Reddy) ಹಾಗೂ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪ್ರತಿಭಟನಾಕಾರರು ಪತ್ರ ಬರೆದು ಒತ್ತಾಯಿಸಿದ್ದಾರೆ.

    90 ವಿದ್ಯಾರ್ಥಿಗಳು ಶುಕ್ರವಾರ ಮಹಿಳಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದರು. ತಪ್ಪಿತಸ್ಥರು ಯಾರೇ ಆಗಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ (M.K Stalin) ಭರವಸೆ ನೀಡಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ಈ ಆರೋಪಗಳನ್ನು ಸುಳ್ಳು ಮಾಹಿತಿ ಎಂದು ನಿರಾಕರಿಸಿತ್ತು. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು

  • 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಕೊಚ್ಚಿ: ಚಿನ್ನ (Gold) ಕಳ್ಳ ಸಾಗಾಣಿಕೆ (Smuggling) ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು (Cabin crew) ಕೊಚ್ಚಿ (Kochi) ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ (Customs Preventive Commissionerate) ತಿಳಿಸಿದೆ.

    ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 1487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

    ಬಹ್ರೇನ್ (Bahrain), ಕೋಯಿಕ್ಕೋಡ್ (Kozhikode) ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ (Air India) ವಿಮಾನದ ಕ್ಯಾಬಿನ್ ಸಿಬ್ಬಂದಿ ಚಿನ್ನ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು, ಅಂಗಿಯ ತೋಳುಗಳಿಂದ ಮುಚ್ಚಿ ಗ್ರೀನ್ ಚಾನೆಲ್ ಮೂಲಕ ಆರೋಪಿ ಹಾದುಹೋಗುವ ಪ್ಲಾನ್ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಿಂಗಾಪುರದಿಂದ (Singapore) ಚೆನೈಗೆ (Chennai) ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 3.32 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

    ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

    ಚೆನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗೆ ಆಡಳಿತ ಪಕ್ಷ ಡಿಎಂಕೆ ಮತ್ತು ಸಿಎಂ ಸ್ಟಾಲಿನ್ (Stalin) ಕಾರಣ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ವಿರುದ್ಧ ಸೈಬರ್ ಪೊಲೀಸರು (Cyber Crime Division) ಪ್ರಕರಣ ದಾಖಲಿಸಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ಕೊಟ್ಟಿದ್ದಾರೆಂದು ಪೊಲೀಸರು ಕೇಸ್ ಹಾಕಿದ್ದಾರೆ.

    ಇತ್ತೀಚೆಗೆ ಟ್ವಿಟರ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಅವರ ಮೇಲೆ ದ್ವೇಷ ಹೆಚ್ಚಾಗಲು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷದ ನಾಯಕರು ಕಾರಣ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ

    ತಮಿಳುನಾಡಿನಲ್ಲಿ (Tamilnadu) ಬಿಹಾರದಿಂದ ವಲಸೆ ಬಂದ ಜನರ ಮೇಲೆ ಹಲ್ಲೆ, ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಅಣ್ಣಾಮಲೈ ವಿರೋಧಿಸಿದ್ದರು. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು. ಉತ್ತರ ಬಾರತೀಯರನ್ನು ಪ್ರತ್ಯೇಕಿಸುವುದು ಮತ್ತು ದ್ವೇಷಿಸುವ ಕೆಲಸವನ್ನು ತಮಿಳರು ಮಾಡುವುದಿಲ್ಲ. ಅಂತಹ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದ ಅಣ್ಣಾಮಲೈ, ಡಿಎಂಕೆ (DMK) ಸಂಸದರು ಮತ್ತು ಸಚಿವರು “ಉತ್ತರ ಭಾರತೀಯರನ್ನು ಪಾನಿಪುರಿ ವಾಲಾ”ಗಳು ಎಂದು ಹೀಯಾಳಿಸಿದ್ದಾರೆ. ಅವರನ್ನು ಕೆಟ್ಟ ಪದಗಳಿಂದ ನಿಂದಿಸಿ, ತಮ್ಮ ನಾಡಿಗೆ ವಾಪಸ್ ಹೋಗುವಂತೆ ವಲಸಿಗರನ್ನು ಒತ್ತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

    ಬಿಹಾರದ (Bihar) ವಲಸೆ ಕಾರ್ಮಿಕರ ನಡುವೆ ತಿರುಪ್ಪೂರ್‍ನಲ್ಲಿ ನಡೆದ ಗಲಾಟೆ ಹಾಗೂ ಕೊಯಮತ್ತೂರಿನಲ್ಲಿ (Coimbatore) ಸ್ಥಳೀಯರ ನಡುವೆ ನಡೆದ ಘರ್ಷಣೆಯ ವೀಡಿಯೋ ತುಣುಕನ್ನು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಡಿಜಿಪಿ ಶೈಲೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ

  • ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ 1 ಲಕ್ಷ ರೂ. ದೋಚಿ ಸಿಕ್ಕಿಬಿದ್ದ- ವಿಡಿಯೋ ನೋಡಿ ನಕ್ಕುಬಿಡಿ

    ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ 1 ಲಕ್ಷ ರೂ. ದೋಚಿ ಸಿಕ್ಕಿಬಿದ್ದ- ವಿಡಿಯೋ ನೋಡಿ ನಕ್ಕುಬಿಡಿ

    ಚೆನ್ನೈ: ಪ್ಲಾಸ್ಟಿಕ್ ಕವರಿನಲ್ಲಿ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಬಂದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳ್ಳ ಮೊಬೈಲ್ ಅಂಗಡಿಯೊಂದರ ಬಾಗಿಲು ಮುರಿದು ಒಳಗೆ ಪ್ರವೇಸಿದ್ದು, ಆತನ ಚಲನವಲನವನ್ನು ಅಂಗಡಿಯ ಹೊರಗಿದ್ದ ಎರಡು ಸಿಸಿಟಿವಿ ಹಾಗೂ ಅಂಗಡಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕನ್ಯಾಕುಮಾರಿಯ ಕೊಲಾಛೆಲ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯಿಂದ 1 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

    ಪ್ಲಾಸ್ಟಿಕ್ ಕವರಿನಲ್ಲಿ ಮುಖ ಮುಚ್ಚಿಕೊಂಡು ಬಂದ ಕದೀಮ, ಮೊದಲು ಅಕ್ಕ-ಪಕ್ಕದಲ್ಲಿ ಯಾರಾದರೂ ಇದ್ದಾರ ಎಂದು ನೋಡುತ್ತಾನೆ. ನಂತರ ಅಂಗಡಿ ಮುಂದೆ ಒಂದು ಬೈಕ್ ಬರುತ್ತಿರುವುದ್ದನ್ನು ಕಂಡು ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ನಂತರ ಅಂಗಡಿಯ ಬಾಗಿಲನ್ನು ಮುರಿದು, ಅಲ್ಲಿದ್ದ ಸಿಸಿಟಿವಿಯನ್ನು ಕಡಿತಗೊಳಿಸುತ್ತಾನೆ. ನಂತರ 1 ಲಕ್ಷ ರೂ. ಹಣವನ್ನು ದೋಚುತ್ತಾನೆ.

    ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಆರೋಪಿಯ ಕೈ ಮೇಲೆ ಇದ್ದ ಟ್ಯಾಟೂ ಸೆರೆಯಾಗಿದ್ದು, ಈತನನ್ನು ಪತ್ತೆ ಮಾಡಲು ಪಾರದರ್ಶಕ ಪ್ಲಾಸ್ಟಿಕ್ ಕವರ್ ಸಹಕಾರಿಯಾಗಿದೆ. ನಂತರ ಅಂಗಡಿಯಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿದ ಮಾಲೀಕ ಸಚಿನ್ ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ದೃಶ್ಯವನ್ನ ನೋಡಿ ಹೊಟ್ಟೆಹುಣ್ಣಾಗುವರೆಗೂ ನಕ್ಕಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.

    ಕಳ್ಳ ತನ್ನ ಮುರ್ಖತನದಿಂದ ಮಾಡಿಕೊಂಡ ಎಡವಟ್ಟಿನಿಂದ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ  ಸಾವು

    ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ ಸಾವು

    ಚೆನೈ: ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹೆಲ್ಮಟ್ ಧರಿಸಿಲ್ಲವೆಂದು ಅವರನ್ನು ಟ್ರಾಫಿಕ್ ಪೊಲೀಸ್ ಚೇಸ್ ಮಾಡಿಕೊಂಡು ಹೋದ ನಂತರ ಹಿಂಬದಿ ಕುಳಿತಿದ್ದ ಗರ್ಭಿಣಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬುಧವಾರದಂದು ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಕಾಮರಾಜ್ ಅವರನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಪೊಲೀಸರ ವರ್ತನೆಯನ್ನು ಖಂಡಿಸಿ ಸಾವರ್ಜನಿಕರು ಪ್ರತಿಭಟನೆ ನಡೆಸಿದ್ದಾರೆ.

    ಏನಿದು ಘಟನೆ?: ಮೃತ ಮಹಿಳೆ ಮತ್ತು ಪತಿ ರಾಜಾ ಹೆಲ್ಮೆಟ್ ಧರಿಸದೆ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದರು. ತಿರುವೆರಂಬೂರು ಸಮೀಪ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ಚೆಕ್ ಪಾಯಿಂಟ್ ನಲ್ಲಿ ರಾಜಾ ಬೈಕ್ ನಿಲ್ಲಿಸದೇ ಮುಂದೆ ಹೋದರು. ಆಗ ಟ್ರಾಫಿಕ್ ಪೊಲೀಸ್ ಕಾಮರಾಜ್ ತನ್ನ ಬೈಕ್ ನಲ್ಲಿ ಆ ದಂಪತಿಯನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ರಾಜಾ ಬೈಕ್‍ನ ಸಮತೋಲನ ಕಳೆದುಕೊಂಡಿದ್ದು, ಹಿಂಬದಿ ಕುಳಿತಿದ್ದ ರಾಜಾ ಅವರ ಪತ್ನಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ರಾಜಾ ಅವರಿಗೂ ಗಂಭೀರ ಗಾಯಗಳಾಗಿವೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು, ಟ್ರಾಫಿಕ್ ಪೊಲೀಸ್ ಆ ಮಹಿಳೆಯನ್ನು ಒದ್ದದ್ದೇ ಅವರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಮಹಿಳೆ ಬಿದ್ದ ನಂತರ ಮತ್ತೊಂದು ವಾಹನ ಅವರ ಮೇಲೆ ಹರಿದು ಸಾವನ್ನಪ್ಪಿದ್ದಾರೆಂದು ಹೇಳುತ್ತಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಕಾಮರಾಜ್ ಕುಡಿದಿದ್ದರೆಂದು ಕೆಲವು ಸ್ಥಳೀಯರು ಆರೋಪಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ತಿರುಚಿಯ ಹಿರಿಯ ಅಧಿಕಾರಿ ಈ ಕುರಿತು ಮಾತನಾಡಿದ್ದು, ಆ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಟ್ರಾಫಿಕ್ ಪೊಲೀಸ್ ಈ ರೀತಿಯಾಗಿ ಅವರನ್ನು ಚೇಸ್ ಮಾಡಬಾರದಿತ್ತು. ಇದರ ಬಗ್ಗೆ ತನಿಖೆ ಮಾಡುತ್ತೇವೆಂದು ತಿಳಿಸಿದ್ದಾರೆ.

    ಈ ಘಟನೆ ಸಾರ್ವಜನಿಕರನ್ನು ಕೆರಳಿಸಿದ್ದು, ಟ್ರಾಫಿಕ್ ಪೊಲೀಸ್ ರನ್ನು ಬಂಧಿಸಬೇಕೆಂದು ಒತ್ತಾಯಿಸಿ ನೂರಾರು ಜನರು ತಿರುವೆರಂಬೂರ್ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ