Tag: ಚೆಂಡು ವಿರೂಪ

  • ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

    ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

    ವಿರೇಂದ್ರ ಸೆಹ್ವಾಗ್ ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೊರೊನಾ ಮುನ್ನಚ್ಚೆರಿಕಾ ಕ್ರಮವೇ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದರೆ. ಸ್ಟುವರ್ಟ್ ಬ್ರಾಡ್, ಈ ಘಟನೆಯ ಪೂರ್ಣ ವೀಡಿಯೋ ನೋಡದೆ ವಿಶ್ಲೇಷಿಸುವುದು ಸರಿಯಲ್ಲ. ಇದು ಆಕಸ್ಮಿಕವಾಗಿರಬಹುದು ಎಂದಿದ್ದಾರೆ.

    ಈ ನಡುವೆ ಈ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಈ ಕುರಿತು ಮ್ಯಾಚ್ ರೆಫ್ರಿ ಸೂಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.

  • ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್‍ಗಳ ಪಂದ್ಯದಲ್ಲಿ ಇಬ್ಬರೂ ಮತ್ತೆ ವೃತ್ತಿಪರ ಕ್ರಿಕೆಟ್‍ಗೆ ಮರಳಲಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾರ್ನರ್ ಒಂದು ವರ್ಷ ಮತ್ತು ಬ್ಯಾನ್ ಕ್ರಾಫ್ಟ್ 9 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿಷೇಧಕ್ಕೊಳಗಾಗಿದ್ದರು. ಇಬ್ಬರ ನಿಷೇಧದ ಅವಧಿ ಇನ್ನೂ ಮುಗಿದಿಲ್ಲವಾದರೂ, ಕ್ರಿಕೆಟ್ ಆಸ್ಟ್ರೇಲಿಯಾ, ಇಬ್ಬರು ಆಟಗಾರರಿಗೂ ಕ್ಲಬ್ ಮಟ್ಟದ ಮತ್ತು ವಿದೇಶಗಳಲ್ಲಿ ದೇಶೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.

    ವೃತ್ತಿಪರ ಕ್ರಿಕೆಟ್‍ಗೆ ಮರಳಲು ಕಾಯುತ್ತಿರುವ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್‍ಗೆ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಮರುಜೀವ ನೀಡಿದಂತಾಗಿದೆ. ಉತ್ತರ ಆಸ್ಟ್ರೇಲಿಯಾದ ಡಾರ್ವಿನ್‍ನಲ್ಲಿ ಟಿ20 ಮತ್ತು ಏಕದಿನ ಟೂರ್ನಿ ನಡೆಯಲಿದ್ದು, ಇದರಲ್ಲಿ ಡೆಸರ್ಟ್ ಬ್ಲೇಜ್, ಸಿಟಿ ಸೈಕ್ಲೋನ್ಸ್, ನಾರ್ತರ್ನ್ ಟೈಡ್ ಮತ್ತು ಸೌತರ್ನ್ ಸ್ಟೋರ್ಮ್ ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಬ್ಯಾನ್ ಕ್ರಾಫ್ಟ್ ಪೂರ್ಣಾವಾಧಿಗೆ ಟೂರ್ನಿಯಲ್ಲಿ ಆಡಲಿದ್ದು, ಡೇವಿಡ್ ವಾರ್ನರ್ ಜುಲೈ 21 ಮತ್ತು 22ರಂದು ನಡೆಯಲಿರುವ ಎರಡು ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನು ಓದಿ:  ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಡಾರ್ವಿನ್ ನಲ್ಲಿ ನಡೆಯಲಿರುವ ಸ್ಟ್ರೈಕ್ ಲೀಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕ್ಯಾಮರೂನ್ ಮತ್ತು ವಾರ್ನರ್ ನಮ್ಮನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲು ನಮಗೆ ಅತೀವ ಸಂತೋಷವಾಗುತ್ತಿದೆ. ಇಬ್ಬರು ಅನುಭವಿ ಆಟಗಾರರ ಲಭ್ಯತೆ ಸ್ಥಳೀಯ ಆಟಗಾರರಿಗೆ ನೆರವಾಗಲಿದೆ ಎಂದು ಎಂದು ನಾರ್ತರ್ನ್ ಟೆರಿಟರಿ ಕ್ರಿಕೆಟ್ ನ ಮುಖ್ಯಸ್ಥ ಜೋಯಲ್ ಮೋರಿಸನ್ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟಂಬರ್ ಬಳಿಕ ಡೇವಿಡ್ ವಾರ್ನರ್, ಸಿಡ್ನಿ ಕ್ಲಬ್ ರ್ಯಾಂಡ್ವಿಕ್ ಪೀಟರ್‍ಶಾಮ್ ಕ್ಲಬ್ ಪರ ಆಡಲಿದ್ದು, ಈಗಾಗಲೇ ಕ್ಲಬ್‍ನ ತರಬೇತಿ ಶಿಬಿರಗಳಲ್ಲಿ ವಾರ್ನರ್ ಬೆವರು ಹರಿಸುತ್ತಿದ್ದಾರೆ.