Tag: ಚೂರಿ

  • ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳದಲ್ಲಿ ಪತಿಯೊರ್ವ ಬರ್ಬರವಾಗಿ ಕೊಲೆಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಎಂಜಿ ರಸ್ತೆಯ 8 ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯ ಪಕ್ಕದಲ್ಲಿ ಛಾಯಾಕುಮಾರ್ (30) ಎಂಬಾತನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಬಟ್ಟೆ ಹರಿದಿದ್ದು, ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ. ಅಲ್ಲದೇ ದೇಹವೆಲ್ಲಾ ರಕ್ತದಿಂದ ಕೂಡಿದೆ. ಹೀಗಾಗಿ ಗಲಾಟೆ ನಡೆದು ಕೊಲೆಯಾಗಿರೋದು ದೃಢವಾಗಿದೆ.

    ಮೃತ ವ್ಯಕ್ತಿ ವೃತ್ತಿಯಲ್ಲಿ ಚಾಲಕನಾಗಿದ್ದು, ಪತ್ನಿ ಜಾನಕಿ ಹಾಗೂ ಇತರರು ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಹೊರ ಭಾಗದಲ್ಲಿ ಮೃತದೇಹ ಪತ್ತೆಯಾದ್ರೂ, ಮನೆಯ ಅಕ್ಕಪಕ್ಕ ಸೇರಿದಂತೆ ಮನೆಯ ಒಳಭಾಗದಲ್ಲೂ ರಕ್ತದ ಕಲೆಗಳಿವೆ. ಹೀಗಾಗಿ ಪತ್ನಿ ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಜಗಳ ನಡೆದು ಗಲಾಟೆಯಲ್ಲಿ ಕೊಲೆ ನಡೆದಿರಬಹುದು ಅಂತ ಮೇಲ್ನೋಟಕ್ಕೆ ತಿಳಿದುಬರ್ತಿದೆ.

    ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಛಾಯಾಕುಮಾರ್ ಮನೆಗೆ ಬರ್ತಿರಲಿಲ್ಲವಂತೆ. ಹೀಗಾಗಿ ಜಾನಕಿ ಅಕ್ರಮ ಸಂಬಂಧ ಹೊಂದಿರಬಹುದು ಅಂತ ಅಂದಾಜಿಸಲಾಗಿದೆ. ಆದ್ರೆ ಆಕಸ್ಮಿಕವಾಗಿ ಕಳೆದ ರಾತ್ರಿ ಗಂಡ ಮನೆಗೆ ಬಂದಾಗ ಅನೈತಿಕ ಸಂಬಂಧವನ್ನ ಕಣ್ಣಾರೆ ಕಂಡಿರಬಹುದು ಅಥವಾ ಅನೈತಿಕ ಸಂಬಂಧದ ವಿಚಾರವಾಗಿ ಜಗಳ ನಡೆದು ಕೊಲೆಯಾಗಿರಬಹುದು ಅಂತ ಊಹಿಸಲಾಗಿದೆ.

    ಈ ಸಂಬಂಧ ಪತ್ನಿ ಜಾನಕಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಮೇಲೆಯೇ ಅನುಮಾನ ಬಲವಾಗಿದ್ದು, ಸತ್ಯ ಬಾಯ್ಬಿಡಿಸಲು ಪೊಲೀಸರು ಮುಂದಾಗಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ, ಹಾಡಹಗಲೇ ಚೂರಿಯಿಂದ ಇರಿದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗಣಪತಿ ಗಲ್ಲಿಯಲ್ಲಿ ನಡೆದಿದೆ.

    ಇಂತಿಯಾಜ್ ಪಠಾಣ್, ಅಯಾಜ್ ಪಠಾಣ್, ಸಮೀರ್ ಪಠಾಣ್ ಸೇರಿ 10 ಜನರಿಂದ ಹಲ್ಲೆ ನಡೆದಿದೆ. ಸಲೀಂ, ಶಾಬಾಜ್ ಹಾಗೂ ತೈಬಾಜ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.

    ಹಣ್ಣಿನ ದರ ನಿಗದಿ ಮತ್ತು ಸ್ಥಳದ ವಿಚಾರವಾಗಿ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ. ಪರಿಣಾಮ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಪರಸ್ಪರ ಚೂರಿಯಿಂದ ಹೊಡೆದಾಡಿಕೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ದುಷ್ಕರ್ಮಿಗಳು ಬೆನ್ನಿಗೆ ಚುಚ್ಚಿದ ಚಾಕುವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ- ಬೆಚ್ಚಿಬಿದ್ದ ಜನ

    ದುಷ್ಕರ್ಮಿಗಳು ಬೆನ್ನಿಗೆ ಚುಚ್ಚಿದ ಚಾಕುವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ- ಬೆಚ್ಚಿಬಿದ್ದ ಜನ

    ರಾಮನಗರ: ಬೆನ್ನಿಗೆ ಚುಚ್ಚಿದ ಚಾಕುವಿನ ಜೊತೆ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದ ಭಯಾನಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

    ಚನ್ನಪಟ್ಟಣದ ಬಿ ಎಲ್ ಸ್ಟ್ರೀಟ್ ನ ಅಬ್ದುಲ್ ವಾಹಿದ್‍ಗೆ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಬೈಕ್‍ನಲ್ಲಿ ಬಂದ 6 ಜನ ದುಷ್ಕರ್ಮಿಗಳಿಂದ ತಂಡ ಚಾಕು ಹಿರಿದು ಪರಾರಿಯಾಗಿದ್ದಾರೆ. ಬಳಿಕ ಚಾಕುವಿನೊಂದಿಗೆ ವಾಹಿದ್ ಆಸ್ಪತ್ರೆಗೆ ಬಂದಿದ್ದಾರೆ.

    ಇವರನ್ನು ಕಂಡ ಸರ್ಕಾರಿ ಆಸ್ಪತ್ರೆಯಲ್ಲದ್ದ ಜನ ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಯ ವೈದ್ಯರು ಹರಸಾಹಸ ಪಟ್ಟು ಎರಡು ಅಡಿ ಉದ್ದದ ಚಾಕುವನ್ನು ಹೊರತೆಗೆದಿದ್ದಾರೆ. ಟಾಟಾ ಏಸ್‍ನ ಚಾಲಕನಾಗಿರುವ ಅಬ್ದುಲ್ ವಾಹಿದ್ ಈ ಹಿಂದೆ ಕೆಲವು ವ್ಯಕ್ತಿಗಳ ಜೊತೆ ಜಗಳವಾಡಿದ್ದ ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.

    ಘಟನೆ ಸಂಬಂಧ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    https://www.youtube.com/watch?v=vbaX8_Nm89U

  • ಬೆಳ್ತಂಗಡಿ: ಮರಳು ವಿಚಾರದಲ್ಲಿ ಯುವಕರಿಬ್ಬರಿಗೆ ಚಾಕುವಿನಿಂದ ಇರಿತ

    ಬೆಳ್ತಂಗಡಿ: ಮರಳು ವಿಚಾರದಲ್ಲಿ ಯುವಕರಿಬ್ಬರಿಗೆ ಚಾಕುವಿನಿಂದ ಇರಿತ

    ಮಂಗಳೂರು: ಮರಳು ಹಾಕುವ ನೆಪದಲ್ಲಿ ಯುವಕರಿಬ್ಬರನ್ನು ಕರೆಸಿಕೊಂಡು ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾಗಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ನಡೆದಿದೆ.

    ಯುವಕರಾದ ನಿಸಾರ್ ಮತ್ತು ಇರ್ಷಾದ್ ಎಂಬುವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇವರಿಬ್ಬರೂ ಮಂಗಳೂರಿನ ಅಡ್ಡೂರು ನಿವಾಸಿಗಳು. ಗಾಯಾಳು ಯುವಕರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • ಲೈವ್ ಸೂಸೈಡ್ ವಿಡಿಯೋ: ತನಗೆ ಸಿಗದವಳು ಬೇರೆಯವನಿಗೂ ಸಿಗಬಾರದೆಂದು ಚೂರಿ ಇರಿದು, 120 ಅಡಿ ಎತ್ತರ ಟವರ್‍ನಿಂದ ಹಾರಿದ

    ಲೈವ್ ಸೂಸೈಡ್ ವಿಡಿಯೋ: ತನಗೆ ಸಿಗದವಳು ಬೇರೆಯವನಿಗೂ ಸಿಗಬಾರದೆಂದು ಚೂರಿ ಇರಿದು, 120 ಅಡಿ ಎತ್ತರ ಟವರ್‍ನಿಂದ ಹಾರಿದ

    ರಾಯ್‍ಪುರ್: ತಾನು ಪ್ರೀತಿಸಿದ ಹುಡಗಿ ಮದುವೆ ಮಾಡಿಕೊಳ್ಳಲು ಒಪ್ಪಿಲ್ಲವೆಂದು ಮನನೊಂದ ಯುವಕನೊಬ್ಬ ಆಕೆಗೆ ಚೂರು ಹಾಕಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆಯೊಂದು ಛತ್ತೀಸ್‍ಗಢದ ಕಂಕೇರಾ ಜಿಲ್ಲೆಯ ಬೈರನ್‍ಪೂರಿ ಗ್ರಾಮದಲ್ಲಿ ನಡೆದಿದೆ.

    20 ವರ್ಷದ ಕಮಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಯುವಕ.

    ಏನಿದು ಪ್ರಕರಣ?: ಕಮಲ್ ಸಿಂಗ್ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಈ ವಿಚಾರವನ್ನು ಆತ ತನ್ನ ಅಕ್ಕ-ಬಾವನ ಜೊತೆ ಹೇಳಿಕೊಂಡಿದ್ದಾನೆ. ಅಂತೆಯೇ ಅಕ್ಕ-ಭಾವ ಯುವತಿಯ ಅಕ್ಕ-ಭಾವನ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಈ ಮದುವೆಯನ್ನು ಯುವತಿ ತಿರಸ್ಕರಿಸಿದ್ದಾಳೆ. ಹೀಗಾಗಿ ಒನ್ ವೇ ಲವ್ ಮಾಡುತ್ತಿದ್ದ ಕಮಲ್ ಸಿಂಗ್ ಆಕೆ ತನ್ನನ್ನು ತಿರಸ್ಕರಿಸಿದಳೆಂದು ಸಿಟ್ಟಾಗಿ ಹರಿತವಾದ ಚೂರಿಯಿಂದ ಆಕೆಗೆ ಇರಿದಿದ್ದಾನೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.

    ಬಳಿಕ ಸ್ಥಳೀಯ ಮೊಬೈಲ್ ಟವರ್ ಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಏರಿದ್ದಾನೆ. ಇತ್ತ ಸ್ಥಳೀಯರು ತಮ್ಮ ಗಂಟಲು ಒಣಗುವಷ್ಟು ಪರಿಪರಿಯಾಗಿ ಬೇಡಿಕೊಂಡರೂ ಕಮಲ್ ಮಾತ್ರ ಟವರಿಂದ ಇಳಿಯಲೇ ಇಲ್ಲ. ಬದಲಾಗಿ 120 ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ಪ್ರಾಣ ಬಿಟ್ಟಿದ್ದಾನೆ.

    ಸದ್ಯ ಚಾಕು ಇರಿತದಿಂದ ಗಂಭೀರ ಗಾಯಗೊಂಡ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಅಂತಾ ವರದಿಯಾಗಿದೆ.

    https://www.youtube.com/watch?v=hU4ndV0V2p8&feature=youtu.be