Tag: ಚುನಾವಣೆ

  • ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ಬಿಜೆಪಿಯಿಂದ ಆಪ್‌ ಅಭ್ಯರ್ಥಿಗಳಿಗೆ 15 ಕೋಟಿ ಆಫರ್‌ – ಕೇಜ್ರಿವಾಲ್‌ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್‌

    ನವದೆಹಲಿ: ಬಿಜೆಪಿ (BJP) ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ (Arvind Kejriwal) ಆರೋಪ ಮಾಡಿದ ಬೆನ್ನಲ್ಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ACB) ತನಿಖೆಗೆ ಆದೇಶಿಸಿದ್ದಾರೆ.

    ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಎಸಿಬಿ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ನೋಟಿಸ್‌ ನೀಡಿದ್ದಾರೆ.

    ಬಿಜೆಪಿ ಖರೀದಿಗೆ ಪ್ರಯತ್ನಿಸಿದ 16 ಆಪ್‌ ಶಾಸಕರು ಯಾರು? ಆ ಶಾಸಕರ ಫೋನ್‌ ನಂಬರ್‌ ಯಾವುದು? ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಎಸಿಬಿ ನೋಟಿಸ್‌ನಲ್ಲಿ ತಿಳಿಸಿದೆ.

    ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಸಿಬಿ ತನಿಖೆಗೆ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: USAID| 294 ಮಂದಿ ಬಿಟ್ಟು 13,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಿದ ಟ್ರಂಪ್‌!


    ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್‌, ವಿಧಾನಸಭಾ ಚುನಾವಣಾ ಫಲಿತಾಂಶ (Delhi Election Results) ಪ್ರಕಟವಾಗುವ ಮುನ್ನ ಬಿಜೆಪಿ 16 ಆಪ್‌ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಎಎಪಿ ಅಭ್ಯರ್ಥಿಗಳು ಬಿಜೆಪಿ ಸೇರಿದರೆ ಸಚಿವ ಸ್ಥಾನದ ಜೊತೆ 15 ಕೋಟಿ ರೂ.ಗಳ ನೀಡುವ ಆಫರ್‌ ನೀಡಲಾಗಿದೆ ಅವರು ಆರೋಪಿಸಿದ್ದರು.

     

  • Delhi Exit Poll| ಬಿಜೆಪಿಗೆ ದೆಹಲಿ ಗದ್ದುಗೆ – Axis My India

    Delhi Exit Poll| ಬಿಜೆಪಿಗೆ ದೆಹಲಿ ಗದ್ದುಗೆ – Axis My India

    ನವದೆಹಲಿ: 27 ವರ್ಷಗಳ ಬಳಿಕ ದೆಹಲಿಯ (Delhi) ಅಧಿಕಾರದ ಚುಕ್ಕಾಣಿ ಬಿಜೆಪಿ (BJP) ಹಿಡಿಯಲಿದೆ ಎಂದು ಮತ್ತೊಂದು ಸಮೀಕ್ಷೆ ತಿಳಿಸಿದೆ.

    Axis My India ಇಂದು ತನ್ನ ಚುನಾಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ + 45-55, ಆಪ್‌ 15-25, ಕಾಂಗ್ರೆಸ್‌ 0-1 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.

     

    ಬಿಜೆಪಿ+(ಬಿಜೆಪಿ, ಜೆಡಿಯು, ಎಲ್‌ಜೆಪಿ) 48% ಮತ ಪಡೆದರೆ ಆಪ್‌ 42%, ಕಾಂಗ್ರೆಸ್‌ 3% ಮತ ಪಡೆಯಲಿದೆ ಎಂದು ತಿಳಿಸಿದೆ.

    ಇಲ್ಲಿಯವರೆಗೆ ಪ್ರಕಟವಾದ 11 ಸಮೀಕ್ಷೆಗಳಲ್ಲಿ 9 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ತಿಳಿಸಿದೆ.

     

    ಫೆ.8 ರಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 70 ಸ್ಥಾನಗಳಿದ್ದು ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.

     

  • Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    Delhi Election | ಇಂದು 70 ಕ್ಷೇತ್ರಗಳಿಗೆ ಚುನಾವಣೆ

    ನವದೆಹಲಿ: ಅಸೆಂಬ್ಲಿ ಚುನಾವಣೆಯಿಂದಾಗಿ ಚಳಿಗಾಲದಲ್ಲೂ ದೆಹಲಿ ರಾಜಕೀಯ (Delhi Election) ಬಿಸಿಯೇರಿದ್ದು ಇಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಆರಂಭಗೊಂಡಿದೆ.

    ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ಗಂಟೆವರೆಗೂ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ (Vote) ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷಿಸಿಕೊಳ್ತಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

     

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

    ಆಯೋಗದ ಪಾವಿತ್ರ್ಯತೆಗೆ ಮಸಿ ಬಳಿಯಲು ಕೇಜ್ರಿವಾಲ್ ಸುಳ್ಳು ಆರೋಪ ಮಾಡ್ತಿದ್ದಾರೆ. ಆಯೋಗವನ್ನು ಒಬ್ಬರು ನಡೆಸುತ್ತಿಲ್ಲ. ಇದು ಮೂವರು ಸದಸ್ಯರು ಇರುವ ಆಯೋಗ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

  • 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

    2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

    ಅಮರಾವತಿ: ಇನ್ನುಮುಂದೆ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಘೋಷಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಮೊನ್ನೆಯಷ್ಟೇ ಮಧ್ಯಪ್ರದೇಶದ ನಿಗಮವೊಂದು ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ನಗದು ಬಹುಮಾನ ಘೋಷಿಸಿತ್ತು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿಲ್ಲದವರು ಸರಪಂಚ್ ಆಗಲು ಸಾಧ್ಯವಿಲ್ಲ. ಪುರಸಭೆ ಕೌನ್ಸಿಲರ್, ಪಾಲಿಕೆ ಮೇಯರ್ ಆಗಲು ಸಾಧ್ಯವಿಲ್ಲ ಎಂದು ನಾಯ್ಡು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ

    ಹಳೆ ತಲೆಮಾರಿನವರು ಹೆಚ್ಚೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಒಂದು ಮಗುವನ್ನು ಮಾತ್ರ ಪಡೆಯುತ್ತಿದ್ದೀರಿ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ ಈ ಜಗತ್ತಿಗೆ ನೀವು ಬರುತ್ತಿರಲಿಲ್ಲ. ಹೀಗೆ ಮಾಡದೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

    ರಾಜ್ಯದಲ್ಲಿ ನವದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವಂತೆ ಮಾಡಲು ಹೊಸ ಪ್ರೋತ್ಸಾಹಕ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

  • ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ಸಹಾಯಧನ: ಕೇಜ್ರಿವಾಲ್‌ ಘೋಷಣೆ

    ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ಸಹಾಯಧನ: ಕೇಜ್ರಿವಾಲ್‌ ಘೋಷಣೆ

    ನವದೆಹಲಿ: ದೆಹಲಿಯ ದೇವಸ್ಥಾನಗಳಲ್ಲಿನ ಅರ್ಚಕರಿಗೆ ತಿಂಗಳಿಗೆ 18,000 ರೂ. ಸಹಾಯಧನ ನೀಡುವುದಾಗಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಘೋಷಣೆ ಮಾಡಿದ್ದಾರೆ.

    ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ (Delhi Election) ಗೆಲ್ಲಲು ಈಗಾಗಲೇ ಹಲವು ಭರಪೂರ ಘೋಷಣೆ ಮಾಡಿರುವ ಕೇಜ್ರಿವಾಲ್‌ ಈಗ ಹಿಂದೂ ದೇವಸ್ಥಾನ ಮತ್ತು ಗುರುದ್ವಾರಗಳಲ್ಲಿ (Gurudwara, Temple) ಪೂಜೆ ಮಾಡುವವರಿಗೆ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ (Pujari Granthi Samman Yojana)  ಹೆಸರಿನಲ್ಲಿ ಸಹಾಯಧನದ ಭರವಸೆ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರೋಹಿತರು ಮತ್ತು ಗ್ರಂಥಿಗಳು ನಮ್ಮ ಧಾರ್ಮಿಕ ಪದ್ಧತಿಗಳ ಪಾಲಕರಾಗಿದ್ದಾರೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ದುರದೃಷ್ಟವಶಾತ್ ಅವರ ಆರ್ಥಿಕ ಯೋಗಕ್ಷೇಮದ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ, ಇದಕ್ಕಾಗಿ ನಾವು ಈ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ ಎಂದರು.

    ಮಂಗಳವಾರ ಕನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು‌. ನೋಂದಣಿ ಪ್ರಕ್ರಿಯೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸಬೇಡಿ ಎಂದು ನಾನು ಬಿಜೆಪಿಯನ್ನು ವಿನಂತಿಸುತ್ತೇನೆ, ಇದನ್ನು ತಡೆಯುವುದು ಪಾಪ ಮಾಡಿದಂತೆ ಆಗುತ್ತದೆ ಕಾರಣ ಅವರು ದೇವರಿಗೆ ನಮ್ಮ ನಡುವೆ ಸೇತುವೆಯಾಗಿದ್ದಾರೆಎಂದು ಅವರು ಹೇಳಿದರು.

    ಈಗಾಗಲೇ ಮಹಿಳೆಯರಿಗೆ ಪ್ರತಿ ತಿಂಗಳು 2,100 ರೂ., ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆಟೋ ಚಾಲಕರಿಗೆ ಐದು ವಿಶೇಷ ಯೋಜನೆ ಘೋಷಣೆ, ವೃದ್ಧರಿಗಾಗಿ ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಿದ್ದಾರೆ.

    ಮರಳಿ ಅಧಿಕಾರಕ್ಕೆ ಬಂದಲ್ಲಿ ಘೋಷಣೆ ಮಾಡಲಾಗಿರುವ ಎಲ್ಲಾ ಯೋಜನೆಗಳು ಆರಂಭಿಸುವುದಾಗಿ ಕೇಜ್ರಿವಾಲ್‌ ಪ್ರಕಟಿಸಿದ್ದಾರೆ.

     

  • ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

    ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

    – ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ ದೇಣಿಗೆ
    – ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆ
    – ಪ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ನಿಂದ ಬಿಜೆಪಿಗೆ 723.6 ಕೋಟಿ ರೂ.

    ನವದೆಹಲಿ: 2023-24 ಹಣಕಾಸು ವರ್ಷದಲ್ಲಿ ಬಿಜೆಪಿ (BJP) ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ (Congress) 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.

    ಭಾರತೀಯ ಚುನಾವಣಾ ಆಯೋಗ (ECI) ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್‌ ಮಾಡಿದೆ. 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ 79.92 ಕೋಟಿ ರೂ. ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ.

    ಯಾವ ಪಕ್ಷಕ್ಕೆ ಎಷ್ಟು ಕೋಟಿ ರೂ.?
    ಬಿಜೆಪಿ – 2244
    * ಬಿಆರ್‌ಎಸ್‌ – 580
    ಕಾಂಗ್ರೆಸ್‌ -289
    *ವೈಎಸ್‌ಆರ್‌ಸಿಪಿ – 184
    ಟಿಡಿಪಿ – 100
    ಡಿಎಂಕೆ – 60
    ಎಎಪಿ – 11
    ಟಿಎಂಸಿ – 6
    * ಎಲೆಕ್ಟೋರಲ್‌ ಬಾಂಡ್‌ ಸೇರಿ

    ಬಿಜೆಪಿ ಪ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ನಿಂದ (Prudent Electoral Trust) 723.6 ಕೋಟಿ ರೂ. ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಒಂದೇ ಟ್ರಸ್ಟ್‌ನಿಂದ ಬಂದಿರುವುದು ವಿಶೇಷ. ಪ್ರುಡೆಂಟ್ ಬಿಆರ್‌ಎಸ್‌ ಮತ್ತು ವೈಎಸ್‌ಆರ್‌ಪಿಸಿಗೆ ಕ್ರಮವಾಗಿ 85 ಕೋಟಿ ರೂ. ಮತ್ತು 62.5 ಕೋಟಿ ರೂ. ನೀಡಿದೆ. ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾ ಲಿಮಿಟೆಡ್, ಸೀರಂ ಇನ್‌ಸ್ಟಿಟ್ಯೂಟ್‌, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ. ‌ ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್‌ 127 ಕೋಟಿ ರೂ., ಐಂಜಿಗಾರ್ಟಿಂಗ್ ಎಲೆಕ್ಟೋರಲ್ ಟ್ರಸ್ಟ್‌ 17.2 ಲಕ್ಷ ರೂ. ಹಣವನ್ನು ಬಿಜೆಪಿಗೆ ನೀಡಿದೆ. ಇದನ್ನೂ ಓದಿ: 6 ಜನರನ್ನು ಮದುವೆಯಾಗಿ ಹಣ, ಚಿನ್ನ ಕಳ್ಳತನ – 7ನೇ ಮ್ಯಾರೇಜ್‌ಗೆ ರೆಡಿಯಾಗಿದ್ದ ಲೇಡಿ ಅರೆಸ್ಟ್‌!

    ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್

    ಭಾರತದ ‘ಲಾಟರಿ ಕಿಂಗ್’ ಎಂದೇ ಹೆಸರುವಾಸಿಯಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಕಂಪನಿಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ 2023-24ರಲ್ಲಿ ಬಿಜೆಪಿಗೆ 3 ಕೋಟಿ ರೂ. ದೇಣಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಚುನಾವಣಾ ಬಾಂಡ್‌ಗಳ ಮಾರ್ಗದ ಟಿಎಂಸಿಗೆ 1,610 ಕೋಟಿ ರೂ. ದೇಣಿಗೆ ನೀಡಿತ್ತು. ಸದ್ಯ ಸ್ಯಾಂಟಿಯಾಗೋ ಮಾರ್ಟಿನ್‌ ಒಡೆತನದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ನಡೆಯುತ್ತಿದೆ.

    2019 ಲೋಕಸಭಾ ಚುನಾವಣೆಯ ಸಮಯದಲ್ಲೂ ಬಿಜೆಪಿಗೆ ಹೆಚ್ಚಿನ ದೇಣಿಗೆ ಸಿಕ್ಕಿತ್ತು. 2018-19ರ ಅವಧಿಯಲ್ಲಿ ಬಿಜೆಪಿ 742 ಕೋಟಿ ರೂ. ಮತ್ತು ಕಾಂಗ್ರೆಸ್‌ 146.8 ಕೋಟಿ ರೂ. ದೇಣಿಗೆ ಸಿಕ್ಕಿದೆ ಎಂದು ಘೋಷಿಸಿಕೊಂಡಿತ್ತು.

    ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

    ರದ್ದಾಗಿತ್ತು ಚುನಾವಣಾ ಬಾಂಡ್‌:
    2017–18ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ (Electoral Bonds)ಪರಿಚಯಿಸಿತ್ತು. ಚುನಾವಣಾ ಬಾಂಡ್‌ ಅಕ್ರಮ ಎಂದು ಹೇಳಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 2024ರ ಫೆಬ್ರವರಿಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾಗಿದೆ. ಗಂಭೀರ ನ್ಯೂನತೆಗಳನ್ನು ಹೊಂದಿದ್ದು ಪಾರದರ್ಶಕತೆಯಿಂದಲೂ ಕೂಡಿಲ್ಲ ಎಂದು ಹೇಳಿ ರದ್ದುಗೊಳಿಸಿತ್ತು.

    ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ರಾಜಕೀಯ ಪಕ್ಷಗಳಿಗೆ ಇರಲಿಲ್ಲ.

    2018 ಹಾಗೂ ಮಾರ್ಚ್‌ 2023ರ ನಡುವೆ ಈ ಬಾಂಡ್‌ಗಳ ಮೂಲಕ ಬಿಜೆಪಿಗೆ 5,271 ಕೋಟಿ ರೂ. ಬಂದಿದ್ದರೆ ಕಾಂಗ್ರೆಸ್‌ಗೆ 952 ಕೋಟಿ ರೂ. ದೇಣಿಗೆ ಬಂದಿತ್ತು.

     

  • ಇಂಡಿಯಾ ಒಕ್ಕೂಟದಲ್ಲಿ ಬಿರುಕು – ನಾಯಕತ್ವ ಬದಲಾವಣೆಗೆ ಆಂತರಿಕ ಕಲಹ

    ಇಂಡಿಯಾ ಒಕ್ಕೂಟದಲ್ಲಿ ಬಿರುಕು – ನಾಯಕತ್ವ ಬದಲಾವಣೆಗೆ ಆಂತರಿಕ ಕಲಹ

    ನವದೆಹಲಿ: ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಸೋಲಿನ ಬಳಿಕ ಇಂಡಿಯಾ (INDIA) ಒಕ್ಕೂಟದಲ್ಲಿ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟದ ನಾಯಕತ್ವ ಬದಲಾಗಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದರೆ, ಕಾಂಗ್ರೆಸ್ (Congress) ಇದನ್ನು ವಿರೋಧಿಸಿದೆ. ಇತ್ತ ಒಕ್ಕೂಟದ ಶಿಲ್ಪಿ ನಾವು ಎಂದು ಆರ್‌ಜೆಡಿ (RJD) ಪ್ರತಿಪಾದಿಸಿದೆ.

    ಸಮಾಜವಾದಿ ಪಕ್ಷ ಮತ್ತು ಸಿಪಿಐ ಮೈತ್ರಿಕೂಟದಲ್ಲಿ ತಮ್ಮ ಪಾತ್ರ ಹೆಚ್ಚಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಉದಯವೀರ್ ಸಿಂಗ್, ಇಂಡಿಯಾ ಬಣವು ಬ್ಯಾನರ್ಜಿಯವರ ಸಲಹೆಯನ್ನು ಚರ್ಚಿಸಬೇಕು ಮತ್ತು ಟಿಎಂಸಿ ವರಿಷ್ಠರಿಗೆ 100% ಬೆಂಬಲ ಮತ್ತು ಸಹಕಾರ ವಿಸ್ತರಿಸಬೇಕು ಎಂದು ಹೇಳಿದ್ದರು.ಇದನ್ನೂ ಓದಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಮಿತ್ ಶಾ ವಿಫಲವಾಗಿದ್ದಾರೆ: ಕೇಜ್ರಿವಾಲ್ ಆರೋಪ

    ಮಮತಾ ಬ್ಯಾನರ್ಜಿ ಅವರಿಗೆ ಒಕ್ಕೂಟ ಮುನ್ನಡೆಸುವ ಆಸೆ ವ್ಯಕ್ತಪಡಿಸಿದ್ದರೆ, ಮೈತ್ರಿಕೂಟದ ನಾಯಕರು ಅದನ್ನು ಪರಿಗಣಿಸಿ ಅವರಿಗೆ ಬೆಂಬಲ ನೀಡಬೇಕು. ಇದು ಮೈತ್ರಿಯನ್ನು ಬಲಪಡಿಸುತ್ತದೆ. ಬಂಗಾಳದಲ್ಲಿ ಬಿಜೆಪಿಯನ್ನು ನಿಲ್ಲಿಸುವಲ್ಲಿ ಮಮತಾ ಬ್ಯಾನರ್ಜಿ ಮುಂದಾಳತ್ವ ವಹಿಸಿದರು. ಅವರ ಬಗ್ಗೆ ನಮಗೆ ಗೌರವ ಇದೆ ಎಂದು ಉದಯವೀರ್ ಸಿಂಗ್ ಹೇಳಿದ್ದಾರೆ.

    ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ತನ್ನ ಮಿತ್ರಪಕ್ಷಗಳಿಗೆ ಅವಕಾಶ ನೀಡದ ಕಾಂಗ್ರೆಸ್‌ನ ವಿರುದ್ಧ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅಸಮಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮೈತ್ರಿಕೂಟದ ಪಾಲುದಾರರಿಗೆ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಇಂಡಿಯಾ ಬ್ಲಾಕ್ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಗಳು ವಿಭಿನ್ನವಾಗಿರುತ್ತಿದ್ದವು ಎಂದು ಹೇಳಿದರು.

    ಲಾಲು ಪ್ರಸಾದ್ ಯಾದವ್ ಅವರ ಉಪಕ್ರಮದ ಮೇರೆಗೆ ಪ್ರತಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ನಡೆಯಿತು ಎಂದು ಆರ್‌ಜೆಡಿಯ ಮೃತ್ಯುಂಜಯ ತಿವಾರಿ ಪ್ರತಿಪಾದಿಸಿದರು. ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿಯ ನಿಜವಾದ ಶಿಲ್ಪಿ ಲಾಲು ಪ್ರಸಾದ್ ಯಾದವ್. ಎಲ್ಲರೂ ತಮ್ಮ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಪ್ರಬಲವಾಗಿ ಹೋರಾಡುತ್ತಿದ್ದಾರೆ. 2025ರಲ್ಲಿ ಬಿಹಾರದ ಸರದಿ ಎಂದರು.

    ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಇಂಡಿಯಾ ಒಕ್ಕೂಟದಲ್ಲಿನ ಬಿರುಕು ಗೋಚರಿಸಿತು. ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಿಂದ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೂರವಿದ್ದವು. ಹೀಗಾಗೀ ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಹೋರಾಟ ಶುರುವಾಗಿದೆ.ಇದನ್ನೂ ಓದಿ: Namma Metro | ಒಂದೇ ದಿನ ದಾಖಲೆಯ 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ

  • 2028ರ ಚುನಾವಣೆಯಲ್ಲಿ 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್

    2028ರ ಚುನಾವಣೆಯಲ್ಲಿ 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್

    ತುಮಕೂರು: 2028ರ ಸಾರ್ವತ್ರಿಕ ಚುನಾವಣೆ (General Election) ವಿಜಯೇಂದ್ರರ ನೇತೃತ್ವದಲ್ಲಿ ನಡೆಯಲಿದ್ದು, 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಯಡಿಯೂರಪ್ಪರ ಕುಟುಂಬದ ಮೇಲೆ ದುಷ್ಟ ಶಕ್ತಿಯ ದೃಷ್ಟಿ ಬೀಳಬಾರದು ಎಂದು ತುಮಕೂರು (Tumakuru) ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇತ್ತಿಚಿಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರರ ಮೇಲೆ ದುಷ್ಟ ಶಕ್ತಿಗಳ ಕಣ್ಣು ಬೀಳುತ್ತಿದೆ. ಹಾಗಾಗಿ ಸಿದ್ಧಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ದೇವರು ಕೊಟ್ಟಿರುವ ಪರೀಕ್ಷೆ ಗೆದ್ದು, ಸಾಧನೆ ಮಾಡಿ: ವಿಕಲಚೇತನರಿಗೆ ಡಿಸಿಎಂ ಡಿಕೆಶಿ ಆತ್ಮಸ್ಥೈರ್ಯದ ಸಲಹೆ

    ಯಡಿಯೂರಪ್ಪನವರು 45 ವರ್ಷ ಇರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಆದರೆ ವಿಜಯೇಂದ್ರರ 49ನೇ ವರ್ಷದಲ್ಲಿ ಅಧ್ಯಕ್ಷರಾಗಿದ್ದಾರೆ. ಯಾವ ಅರ್ಥದಲ್ಲಿ ಅವರು ಕಿರಿಯರಾಗುತ್ತಾರೆ? ಸೋಮವಾರ ನಡೆದ ಸಭೆಯಲ್ಲಿ 21 ಜಿಲ್ಲಾಧ್ಯಕ್ಷರು ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದಾರೆ. ಆದರೆ ಸ್ವಯಂ ಘೋಷಿತ ನಾಯಕರಿಂದ ಉಪಚುನಾವಣೆ ಸೋತಿದೆ ಎಂದು ಯತ್ನಾಳ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: PUBLiC TV Impact; ರಾಮನಗರದಲ್ಲಿ ನಿರಂತರ ಮಳೆಗೆ ಕುಸಿದಿದ್ದ ತಾತ್ಕಾಲಿಕ ಸೇತುವೆ ದುರಸ್ತಿ

    ಕೇಂದ್ರದಿಂದ ಬಂದಿರೋದು ಫೇಕ್ ನೋಟೀಸ್ ಎನ್ನುವ ಯತ್ನಾಳ್, ಯಡಿಯೂರಪ್ಪನವರು ಕಣ್ಣೀರು ಹಾಕಿದ್ದನ್ನು ಮಿಮಿಕ್ರಿ ಮಾಡಿ ಅವಹೇಳನ ಮಾಡೋದು ಸರಿನಾ? ಕುಮಾರ ಬಂಗಾರಪ್ಪನವರಿಗೆ ರಾಜಕೀಯ ಪುನರ್‌ಜನ್ಮ ಕೊಟ್ಟಿದ್ದು ಯಡಿಯೂರಪ್ಪನವರು. ಆದರೂ ಮೊನ್ನೆ ಮೊನ್ನೆ ಬಂದವರು ವಿಜಯೇಂದ್ರಗೆ ನೀತಿ ಪಾಠ ಹೇಳೋದು ತಪ್ಪು ಎಂದರು. ಇದನ್ನೂ ಓದಿ: ಹಾಸನದಲ್ಲಿ ನಡಿತಿರೋದು ಅಹಿಂದ ಸಮಾವೇಶ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ರಮೇಶ್ ಜಾರಕಿಹೊಳಿ ಬಲಿಪಶು ಆಗಬೇಡಿ ಎಂದು ಮನವಿ ಮಾಡಿದ್ದಾರೆ. ಡಿಸೆಂಬರ್ 10ರಂದು ದಾವಣಗೆರೆ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಮಾಜಿ ಶಾಸಕರುಗಳು, ಮಾಜಿ ಸಚಿವರು, ಕೇಂದ್ರ ಸಚಿವರು, ವಿಪಕ್ಷ ನಾಯಕ ಆರ್ ಅಶೋಕ್ ಇರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡು| ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವರ ಮೇಲೆ ಕೆಸರೆರಚಿ, ಕಲ್ಲು ತೂರಿ ಜನಾಕ್ರೋಶ

  • ʻಇವಿಎಂ ಹ್ಯಾಕ್‌ ಮಾಡಬಹುದುʼ – ವಿಡಿಯೋ ಹರಿಬಿಟ್ಟವನ ವಿರುದ್ಧ ಎಫ್‌ಐಆರ್

    ʻಇವಿಎಂ ಹ್ಯಾಕ್‌ ಮಾಡಬಹುದುʼ – ವಿಡಿಯೋ ಹರಿಬಿಟ್ಟವನ ವಿರುದ್ಧ ಎಫ್‌ಐಆರ್

    ಮುಂಬೈ: ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ (Maharashtra, Election Results) ವಿಚಾರವಾಗಿ ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆ ಪ್ರತಿಪಕ್ಷಗಳ ಆರೋಪದ ನಡುವೆ, ಇವಿಎಂಗಳ ಬಗ್ಗೆ ಆಧಾರರಹಿತ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.

    ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ, ಮುಂಬೈ ಸೈಬರ್ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇವಿಎಂಗಳ ಬಗ್ಗೆ ಸುಳ್ಳು ಮಾಹಿತಿ ಹರಡುವ ಯಾರೇ ಆದರೂ ಕಠಿಣ ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ ಎಂದು ವರದಿಯಾಗಿದೆ.

    ವಿಡಿಯೋದಲ್ಲಿ ವ್ಯಕ್ತಿ, ಇವಿಎಂಗಳನ್ನು ಹ್ಯಾಕ್‌ ಮಾಡಬಹುದು. ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆಧಾರರಹಿತ ಆರೋಪ ಮಾಡಿದ್ದಾನೆ. ಇದನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಸಂಬಂಧ, ಮಹಾರಾಷ್ಟ್ರದ ಸಿಇಒ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 318/4, IT ಕಾಯಿದೆಯ ಸೆಕ್ಷನ್‌ 43 (g) ಮತ್ತು 66 (d) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಇವಿಎಂ ವೈ-ಫೈ, ಬ್ಲೂಟೂತ್ ಹಾಗೂ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗದ ಯಂತ್ರವಾಗಿದೆ. ಆದ್ದರಿಂದ, ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇವಿಎಂಗಳು ಸಂಪೂರ್ಣವಾಗಿ ಟ್ಯಾಂಪರ್-ಪ್ರೂಫ್ ಆಗಿವೆ. ಸುಪ್ರೀಂ ಕೋರ್ಟ್ ಹಲವಾರು ಸಂದರ್ಭಗಳಲ್ಲಿ ಇವಿಎಂಗಳ ಮೇಲಿನ ನಂಬಿಕೆ ಬಗ್ಗೆ ಹೇಳಿದೆ. ಅಲ್ಲದೇ ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಅನುಮಾನಗಳನ್ನು ನಿವಾರಿಸಲು ತನ್ನ ವೆಬ್‌ಸೈಟ್‌ನಲ್ಲಿ ವಿವರವಾದ ವರದಿಗಳನ್ನು ಪ್ರಕಟಿಸಿದೆ ಎಂದು ಸಿಇಒ ಕಚೇರಿ ತಿಳಿಸಿದೆ.

    2019ರಲ್ಲೂ ಇದೇ ರೀತಿಯ ಪ್ರಕರಣದಲ್ಲಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಬೇರೆ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತಪಾಸಣೆ

    ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತಪಾಸಣೆ

    ನವದೆಹಲಿ: ಮಹಾರಾಷ್ಟ್ರದ (Maharashtra) ಹಿಂಗೋಲಿ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸಿದ್ದಾರೆ.

    ಚುನಾವಣೆಯ ನಡುವೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ರಾಜಕೀಯ ನಾಯಕರ ಬ್ಯಾಗ್‌ಗಳ ಸರಣಿ ಪರೀಕ್ಷೆಯಲ್ಲಿ ಶಾ ಅವರ ಬ್ಯಾಗ್ ಕೂಡ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‌ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತು ವಶ – 8 ಮಂದಿ ಇರಾನ್ ಪ್ರಜೆಗಳು ಅರೆಸ್ಟ್‌

    ಈ ಬಗ್ಗೆ ಶಾ ಅವರು ಎಕ್ಸ್ ಪೋಸ್ಟ್‌ನಲ್ಲಿ, ತಮ್ಮ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಂದು, ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಚುನಾವಣಾ ಆಯೋಗದ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದಾರೆ. ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಹಾಗೂ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ. ನಾವೆಲ್ಲರೂ ಆರೋಗ್ಯಕರ ಚುನಾವಣಾ ವ್ಯವಸ್ಥೆಗೆ ಕೊಡುಗೆ ನೀಡಬೇಕು ಮತ್ತು ಭಾರತವನ್ನು ವಿಶ್ವದ ಪ್ರಬಲ ಪ್ರಜಾಪ್ರಭುತ್ವವಾಗಿ ಇರಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ – 1,600ಕ್ಕೆ ತಲುಪಿದ AQI

    ಕಳೆದ ಐದು ದಿನಗಳಲ್ಲಿ ಚುನಾವಣಾ ಆಧಿಕಾರಿಗಳು, ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವಾರು ರಾಜಕಾರಣಿಗಳ ಬ್ಯಾಗ್‌ಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಬಾಡೂಟ – ಕ್ಷಮೆಯಾಚಿಸಿದ ಇಂಗ್ಲೆಂಡ್‌

    ನ.20ರಂದು ಚುನಾವಣೆಗೆ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದ ಠಾಕ್ರೆ ಅವರ ಬ್ಯಾಗ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದ ನಂತರ ರಾಜಕೀಯ ಗದ್ದಲ ಭುಗಿಲೆದ್ದಿತು. ಬಿಜೆಪಿ, ಇತರ ನಾಯಕರ ಚೀಲಗಳನ್ನು ಚುನಾವಣಾ ಆಯೋಗವು ಪರಿಶಿಲಿಸುವುದಿಲ್ಲ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಮಧ್ಯೆ ಶಿವಸೇನಾ ನಾಯಕ ಸಂಜಯ್ ರಾವುತ್ ಶಿಂಧೆ, ಫಡ್ನವಿಸ್, ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಶಾ ಅವರ ಲಗೇಜ್‌ಗಳನ್ನು ಇದೇ ರೀತಿಯಲ್ಲಿ ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್