Tag: ಚುನಾವಣೆ ಆಯೋಗ

  • ಚುನಾವಣೆ ಆಯೋಗ, ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ, ಅದಕ್ಕಾಗಿ ಬ್ಯಾಲೆಟ್ ಪೇಪರ್ ಜಾರಿ: ಹೆಚ್‌ಕೆ ಪಾಟೀಲ್

    ಚುನಾವಣೆ ಆಯೋಗ, ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ, ಅದಕ್ಕಾಗಿ ಬ್ಯಾಲೆಟ್ ಪೇಪರ್ ಜಾರಿ: ಹೆಚ್‌ಕೆ ಪಾಟೀಲ್

    ಬೆಂಗಳೂರು: ಇವಿಎಂ (EVM) ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ನಿರ್ಧಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಬ್ಯಾಲೆಟ್ ಪೇಪರ್ ನಿರ್ಧಾರ ಸಮರ್ಥನೆ ಮಾಡಿಕೊಂಡಿದ್ದಾರೆ.

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕ್ಯಾಬಿನೆಟ್ ನಿರ್ಧಾರ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವಿಎಂ ಬಗ್ಗೆ ಕರ್ನಾಟಕ ಮಾತ್ರವಲ್ಲ ದೇಶದ ಅನೇಕ ರಾಜ್ಯಗಳು ಇವಿಎಂ ಅಕ್ರಮ ಆಗುತ್ತಿದೆ ಎಂದು ಅನುಮಾನ ಇದೆ. ಹ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ಅನುಮಾನ ಇದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆಯ 1 ಗಂಟೆಯಲ್ಲಿ 5 ಗಂಟೆಯಷ್ಟು ಹಾಕಲಾಗದ ಮತ ಹಾಕುವ ವ್ಯವಸ್ಥೆ ಕೊನೆ ಘಳಿಗೆಯಲ್ಲಿ ಆಗಿದೆ. ಇವಿಎಂ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದೆ. 2018ರಲ್ಲಿ ನಮ್ಮ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಇವಿಎಂ ವಿರುದ್ಧ ಮಾಡಿತ್ತು. ಅವತ್ತು ನಾನು ಬಳಿಕ ಮಾಹಿತಿ ಪುರಾವೆ ಸಲ್ಲಿಕೆ ಮಾಡಿದ್ದೇನೆ. ಅಂದಿನ ಸಭಾಪತಿಗಳಾಗಿದ್ದವರು ಕಾಗೇರಿ ಅವರು. ಚರ್ಚೆ ಆದ ಮೇಲೆ ಚುನಾವಣೆ ಆಯೋಗಕ್ಕೆ ಸ್ಪೀಕರ್ ಕಾಗೇರಿ ಪತ್ರ ಬರೆದರು. ಆಗ ಚುನಾವಣೆ ಆಯೋಗ ನಮ್ಮ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದು ಅಂತ ವಾಪಸ್ ಬರೆದರು. ಆದರೆ ಇವಿಎಂ ಅನುಮಾನದ ಬಗ್ಗೆ ಆಯೋಗ ವಿವರಣೆ ಕೊಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಒಂದು ಸಂಸ್ಥೆಯಲ್ಲಿ ಆ ಕಾರ್ಯದಲ್ಲಿ ಅನುಮಾನ ಬಂದಾಗ ಪಾರದರ್ಶಕವಾಗಿ ಪರಿಹಾರ ಮಾಡಬೇಕು. ಆದರೆ ನಮಗೆ ರಕ್ಷಣೆ ಇದೆ ಅಂತ ಆಯೋಗ ಮಾತಾಡೋದು ಸರಿಯಲ್ಲ ಎಂದು ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ಇವಿಎಂ ಪರಿಣಾಮದ ಬಗ್ಗೆ ಹಿಂದೆಯೇ ಹೇಳಿದ್ದೆವು. ಕರ್ನಾಟಕದಲ್ಲಿ ಇವಿಎಂ ಬಗ್ಗೆ ಅನುಮಾನ ಇದೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಇರುವ ಅಧಿಕಾರದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆ ಆಗೋ ನಿರ್ಧಾರ ಮಾಡಿದ್ದೇವೆ. ಚುನಾವಣೆ ಆಯೋಗದ ಮ್ಯಾನುಯಲ್‌ನಲ್ಲಿ 15 ವರ್ಷ ಆದ ಮೇಲೆ ಇವಿಎಂ ನಿರ್ಣಾಮ ಮಾಡಬೇಕು. ಹೇಗೆ ಮಾಡಬೇಕು ಅಂತ ಪದ್ದತಿ ಇದೆ. ಆದರೆ ಆಯೋಗ ಇದನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅನೇಕ ರಾಜ್ಯದಲ್ಲಿ ಟ್ರಕ್ ಗಟ್ಟಲೆ ಇವಿಎಂ ಹೋಗೋದು ನೋಡಿದ್ದೇವೆ. ಅನೇಕ ಪ್ರದೇಶದಲ್ಲಿ ಇವಿಎಂ ಮಿಷನ್ ಬಿದ್ದಿರೋದು ನೋಡಿದ್ದೇವೆ. ಚುನಾವಣೆ ಆಯೋಗ ನಿಯಮ ಗಾಳಿಗೆ ತೂರಿ ಕೆಲಸ ಮಾಡುತ್ತಿದೆ. ಚುನಾವಣೆ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ಅನುಮಾನ ಹೋಗಲಾಡಿಸಲು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಿದೆ ಎಂದರು. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ

    ಬ್ಯಾಲೆಟ್ ಪೇಪರ್ ಜಾರಿ ಮಾಡಲು ಅಗತ್ಯ ಇರೋ ಕಾನೂನು ತಿದ್ದುಪಡಿ ಬೇಕಾದರೆ ಮಾಡುತ್ತೇವೆ. ನಿಯಮ ಬದಲಾವಣೆ ಇದ್ದರೆ ನಿಯಮ ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಕೇರಳ ಕಮ್ಯುನಿಸ್ಟ್‌ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿದ್ದ ಗ್ಯಾಂಗ್‌

    ಇವಿಎಂ ಮೇಲೆ ಅನುಮಾನ ಇದ್ದರೆ ಕರ್ನಾಟಕದಲ್ಲಿ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಎದುರಿಸಲಿ ಎಂಬ ಬಿಜೆಪಿ ಆಗ್ರಹಕ್ಕೆ ತಿರುಗೇಟು ಕೊಟ್ಟ ಅವರು, ಎಂಪಿ, ವಿಧಾನಸಭೆ ಚುನಾವಣೆ ಬ್ಯಾಲೆಟ್ ಪೇಪರ್ ಮಾಡೋಣ ಅಂತ ಬಿಜೆಪಿ ಹೇಳಲಿ. ಕೇಂದ್ರ ಸರ್ಕಾರ ಬ್ಯಾಲೆಟ್ ಪೇಪರ್ ವ್ಯವಸ್ಥೆ ಘೋಷಣೆ ಮಾಡಲಿ. ಆಮೇಲೆ ಕರ್ನಾಟಕದಲ್ಲಿ ನಾವು ಚುನಾವಣೆ ಮತ್ತೆ ಎದುರಿಸುತ್ತೇವೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

    ಬಸವರಾಜ್ ಬೊಮ್ಮಾಯಿ ಅವರ ಮೇಲೆ ವಿಶೇಷ ಅಭಿಪ್ರಾಯ ಇದೆ. ಅವರ ಜೊತೆ ಚುನಾವಣೆ ರಿಫಾರ್ಮ್ಸ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹ್ಯಾಕಥಾನ್ ಮಾಡಿ ಅಂತ ಚುನಾವಣೆ ಆಯೋಗಕ್ಕೆ ಹೇಳಿದ್ದೆವು. ಆದರೆ ಆಯೋಗ ಮಾಡಲಿಲ್ಲ. ಚುನಾವಣೆ ಆಯೋಗ ಯಾವುದೇ ಪರೀಕ್ಷೆಗೆ ಒಪ್ಪಲಿಲ್ಲ. ಬಿಜೆಪಿ ರಾಜಕೀಯವಾಗಿ ಈಗ ಹೇಳುತ್ತಿದೆ. ಅಧಿವೇಶನದಲ್ಲಿ ಸರ್ವಾನುಮತದಿಂದ ಇದರ ಬಗ್ಗೆ ನಿರ್ಣಯ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್‌ ಹೊಡೆದ ಟ್ರಂಪ್‌

    ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಅಕ್ರಮದ ವೋಟಿಂಗ್ ಆಯಿತು. ಇಂತಹ ಅಕ್ರಮ 10% ಕೂಡಾ ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇದ್ದಾಗ ಆಗಿರಲಿಲ್ಲ. ಬ್ಯಾಲೆಟ್ ಪೇಪರ್ ತರಲು ಕಾನೂನು ತಿದ್ದುಪಡಿ ಮಾಡುತ್ತೇನೆ. ರಾಜ್ಯಪಾಲರು ಕಾನೂನಿನ ಪರ ಇರಬೇಕು, ಸಂವಿಧಾನದ ಪರ ಇರಬೇಕು. ಸಂವಿಧಾನ ಪರ ಮಾಡೋ ಕೆಲಸ ಯಾರು ತಡೆಯೋಕೆ ಆಗಲ್ಲ. ರಾಜ್ಯಪಾಲ ಬಿಲ್ ಪಾಸ್ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಉತ್ತರ ಭಾರತದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ – ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಮಂದಿ ಸಾವು

  • ರಾಹುಲ್ ಗಾಂಧಿಗೆ ನೋಟಿಸ್ ಕೊಡೋಕೆ ಚುನಾವಣೆ ಆಯೋಗ ಯಾರು: ಡಿಕೆಶಿ ಪ್ರಶ್ನೆ

    ರಾಹುಲ್ ಗಾಂಧಿಗೆ ನೋಟಿಸ್ ಕೊಡೋಕೆ ಚುನಾವಣೆ ಆಯೋಗ ಯಾರು: ಡಿಕೆಶಿ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ನೋಟಿಸ್ ಕೊಡೋಕೆ ಅವರು ಯಾರು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಚುನಾವಣೆ ಆಯೋಗಕ್ಕೆ ಪ್ರಶ್ನೆ ಮಾಡಿದ್ದಾರೆ.ಇದನ್ನೂ ಓದಿ: Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ

    ರಾಹುಲ್ ಗಾಂಧಿಗೆ ಚುನಾವಣೆ ಆಯೋಗ ನೋಟಿಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಟಿಸ್ ಕೊಡಲಿ ಬಿಡಿ. ಅಷ್ಟಕ್ಕೂ ನೋಟಿಸ್ ನೀಡಲು ಅವರು ಯಾರು? ನಾವೇ ಅವರಿಗೆ ನೋಟಿಸ್ ನೀಡಿದ್ದೇವೆ. ನಮಗೆ ನೋಟಿಸ್ ನೀಡಲು ಅಧಿಕಾರವಿದೆಯೇ ಹೊರತು ಅವರಿಗಲ್ಲ ಎಂದು ಕಿಡಿಕಾರಿದ್ದಾರೆ.

    ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದೇವೆ. ನ್ಯಾಯಯುತವಾಗಿ ಚುನಾವಣೆ ನಡೆಸಲು ಅವರಿಗೆ ಅವಕಾಶವಿದೆಯೇ ಹೊರತು ನೋಟಿಸ್ ನೀಡುವ ಹಕ್ಕಿಲ್ಲ. ಏನಿದ್ದರೂ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

  • ನಿಖಿಲ್‍ಗೆ ಮತ್ತೊಂದು ಸಂಕಷ್ಟ!

    ನಿಖಿಲ್‍ಗೆ ಮತ್ತೊಂದು ಸಂಕಷ್ಟ!

    ಬೆಂಗಳೂರು: ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    ಮತದಾರ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂದು ಹೆಸರಿದೆ. ಆದರೆ ನಾಮಪತ್ರ ಪ್ರಮಾಣ ಪತ್ರದಲ್ಲಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿಲ್ಲ. ಬದಲಿಗೆ ನಿಖಿಲ್.ಕೆ ಎಂಬ ಹೆಸರಿನಲ್ಲಿ ನಾಮಪತ್ರವನ್ನು ಸಲ್ಲಿಸಲಾಗಿದೆ. ಇದು ಚುನಾವಣಾ ನೀತಿಯ ಉಲ್ಲಂಘನೆಯಾಗಿದೆ ಎಂದು ಬಿ.ಎಸ್ ಗೌಡ ಹೇಳಿದ್ದಾರೆ.

    ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಮತ್ತು ಮತದಾರರ ಪಟ್ಟಿಯಲ್ಲಿರುವ ಹೆಸರು ಒಂದೇ ಆಗಿರಬೇಕು. ಇದು ಚುನಾವಣೆಯ ನೀತಿಯಾಗಿದೆ. ಆದರೆ ಈಗ ಹೆಸರುಗಳಲ್ಲಿ ವ್ಯತ್ಯಾಸ ಇರುವುದರಿಂದ ನಾಮಪತ್ರ ತಿರಸ್ಕ್ರತವಾಗಬೇಕಿತ್ತು. ಆದರೆ ಚುನಾವಣಾಧಿಕಾರಿ ಇದನ್ನು ಅಂಗೀಕರಿಸುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಬಿ.ಎಸ್ ಗೌಡ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ನಾಮಪತ್ರ ತಿರಸ್ಕರಿಸುವಂತೆ ಹಾಗೂ ಚುನಾವಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಬಿ.ಎಸ್ ಗೌಡ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಮತ್ತು ಅವರು ನೀಡಿರುವ ಪ್ರಮಾಣ ಪತ್ರದಲ್ಲಿನ ಹೆಸರು ಹೊಂದಣಿಕೆ ಇರದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಬೇಕು. ಮತದಾರರ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂಬುದಾಗಿ ಇದೆ. ಆದರೆ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಿಖಿಲ್.ಕೆ ಎಂದು ನಮೂದಿಸಲಾಗಿದೆ. ಹೀಗಾಗಿ ಅವರು ನಿಖಿಲ್ ಕುಮಾರಸ್ವಾಮಿ ಎಂದು ಸುಳ್ಳು ಹೇಳಿರುತ್ತಾರೆ. ಮತದಾರರ ಪಟ್ಟಿಯಲ್ಲಿದ್ದ ಹೆಸರನ್ನು ಪ್ರಮಾಣ ಪತ್ರದಲ್ಲಿ ಮರೆಮಾಚಿರುತ್ತಾರೆ. ಹೀಗಾಗಿ ಇವರನ್ನು ಚುನಾವಣೆ ಉಮೇದುವಾರಿಕೆಯಿಂದ ವಜಾ ಮಾಡಬೇಕೆಂದು ಆಗ್ರಹಿಸುತ್ತೇನೆ.

    ಜೊತೆಗೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳ ಮೇಲೆ ಅನೇಕ ದೂರುಗಳು ಬಂದರೂ ಅವರನ್ನು ವರ್ಗಾವಣೆ ಮಾಡದೇ ಉಳಿಸಿಕೊಂಡಿರುವುದು ಬಹಳ ಅನುಮಾನ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಅಧಿಕಾರಿ ಮೇಲೆ ದೂರು ಬಂದರೆ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವುದು ವಾಡಿಕೆ. ಆದರೆ ಅವರ ಮೇಲೆ ಸಾಕಷ್ಟು ದೂರುಗಳು ಬಂದರೂ ವರ್ಗಾವಣೆ ಮಾಡದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಹೀಗಾಗಿ ಅವರನ್ನು ವರ್ಗಾವಣೆ ಮಾಡುವ ಮೂಲಕ ಚುನಾವಣೆ ಸಂಸ್ಥೆಯ ಮೇಲೆ ಸಾರ್ವಜನಿಕರ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ಚುನಾವಣೆ ಹೊತ್ತಲ್ಲಿ ಬಾರ್ ಮಾಲೀಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ

    ಚುನಾವಣೆ ಹೊತ್ತಲ್ಲಿ ಬಾರ್ ಮಾಲೀಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ

    ಬೆಂಗಳೂರು: ಚುನಾವಣೆಯಲ್ಲಿ ಕಿಕ್ ಏರಿಸಿಕೊಳ್ಳೋಣ ಅನ್ನೋರ ನಶೆಯಿಳಿಸುವ ರೂಲ್ಸ್ ಅನ್ನು ಚುನಾವಣಾ ಆಯೋಗ ಮಾಡಿದೆ.

    ಬಾರ್ ಗಳು ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಗೆ ಬೆಂಡಾಗಿದೆ. ಬಾರ್ ನವರು ಪ್ರತಿ ದಿನದ ಮದ್ಯಮಾರಾಟದ ಸಂಪೂರ್ಣ ವಿವರವನ್ನು ಅಬಕಾರಿ ಇಲಾಖೆ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ.

    ಅಷ್ಟೇ ಅಲ್ಲದೇ ಕಳೆದ ವರ್ಷ ಇದೇ ದಿನ ಎಷ್ಟು ಎಣ್ಣೆ ಸೇಲ್ ಆಗಿತ್ತು ಅನ್ನೋ ಮಾಹಿತಿನೂ ನೀಡಬೇಕು. ಕಳೆದ ವರ್ಷಕ್ಕೆ ತಾಳೆ ಹಾಕಿ ಶೇ 10ಕ್ಕಿಂತ ಮದ್ಯವ್ಯಾಪಾರ ಹೆಚ್ಚಾದರೇ ಅಂತಹ ಬಾರ್ ಗಳಿಗೆ ನೋಟಿಸ್ ಕೊಟ್ಟು ಬೀಗ ಜಡಿಯುವ ಹೊಸ ನಿಯಮವನ್ನು ಮಾಡಿದೆ.

    ಈಗಾಗಲೇ ಬೆಂಗಳೂರಿನ ಎಂಟು ಬಾರ್ ಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಇದರಿಂದ ಚುನಾವಣೆ ಸಮಯದಲ್ಲಿ ಭರ್ಜರಿ ಜೇಬು ತುಂಬಿಸಬಹುದು ಅನ್ನೋ ನಿರೀಕ್ಷೆಯಿಟ್ಟುಕೊಂಡಿದ್ದ ಬಾರ್ ಮಾಲೀಕರ ಲೆಕ್ಕಚಾರ ತಲೆಕೆಳಗಾಗಿದೆ.