Tag: ಚುನಾವಣಾ ಸಮೀಕ್ಷೆ

  • ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಪಾಟ್ನಾ: ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಈ ಮಧ್ಯೆ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು ಎನ್‍ಡಿಎ ಮೈತ್ರಿಕೂಟಕ್ಕೆ ಭರ್ಜರಿ ಸಾಧಿಸಿಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ

    ಕೊರೊನಾ ಬಿಕ್ಕಟ್ಟಿನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯಾಗಿದ್ದು, ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ನಿತೀಶ್ ಕುಮಾರ್ ಹರಸಾಹಸ ಪಡುತ್ತಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಬಿಜೆಪಿ ಸಾಥ್ ನೀಡಿದೆ. ಬಿಜೆಪಿ – ಜೆಡಿಯು ಪಕ್ಷಗಳು ಸಮನಾಗಿ ಸೀಟು ಹಂಚಿಕೊಂಡು ಅಖಾಡಕ್ಕಿಳಿದಿವೆ. ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಮೈತ್ರಿ ಒಟ್ಟಾಗಿ ಹೋರಾಟಕ್ಕಿಳಿದೆ. ಇದನ್ನೂ ಓದಿ: ಬಿಹಾರ ಚುನಾವಣೆ- ಮತದಾನದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

     

    ಮೊದಲ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಮೈತ್ರಿಕೂಟ ಸರಳ ಬಹುಮತ ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆ ತಿಳಿಸಿದೆ. 243 ವಿಧಾನಸಭಾ ಸ್ಥಾನಗಳ ಪೈಕಿ, ಆರ್‍ಜೆಡಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮಹಾಮೈತ್ರಿ 77-98 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದಿಂದ ದೂರ ಉಳಿಯಲಿದೆ ಎಂದು ಭವಿಷ್ಯ ನುಡಿದಿದೆ. ಎನ್ ಡಿಎ 135-159 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ಎನ್‍ಡಿಎಗೆ ಶೇ.43, ಮಹಾಮೈತ್ರಿಕೂಟಕ್ಕೆ ಶೇ.35, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಶೇ.4 ರಷ್ಟು, ಇತರರು ಶೇ.18ರಷ್ಟು ಮತಗಳನ್ನು ಗಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ 73 ರಿಂದ 81 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಜೆಡಿಯು 59 ರಿಂದ 67 ಸ್ಥಾನಗಳು ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಮೂರರಿಂದ ಏಳು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆರ್ ಜೆಡಿ 56 ರಿಂದ 64 ಸ್ಥಾನಗಳು, ಕಾಂಗ್ರೆಸ್ 12 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ. ಇದನ್ನೂ ಓದಿ: ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

  • ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ಸ್ಥಿತಿ, ಯಾರಿಗೆ ಎಷ್ಟು ಸ್ಥಾನ?

    ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ಸ್ಥಿತಿ, ಯಾರಿಗೆ ಎಷ್ಟು ಸ್ಥಾನ?

    ನವದೆಹಲಿ: 10 ದಿನಗಳ ಹಿಂದೆ ಇಂಡಿಯಾ ಟುಡೇ ನಡೆಸಿದ್ದ ಸರ್ವೆಯಲ್ಲಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಅಂತ ಹೇಳಿತ್ತು. ಅದರ ಬೆನ್ನಲ್ಲೇ ಪಬ್ಲಿಕ್ ಟಿವಿ ಮಿನಿ ಸರ್ವೆಯಲ್ಲೂ ಅತಂತ್ರ ಸ್ಥಿತಿ ಅಂತ ಬಯಲಾಗಿತ್ತು. ಈಗ ಟೈಮ್ಸ್ ನೌ ಮತ್ತು ಎಬಿಪಿ ಸಮೀಕ್ಷೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ.

    ಟೈಮ್ಸ್ ನೌ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಸಿಗುತ್ತದೆ ಎಂದು ಹೇಳಿದರೆ, ಎಬಿಪಿ ಸಮೀಕ್ಷೆ ಬಿಜೆಪಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಹೇಳಿದೆ.

    ಟೈಮ್ಸ್ ನೌ: ಒಟ್ಟು 224 ಕ್ಷೇತ್ರಗಳ ಪೈಕಿ 89 ಬಿಜೆಪಿ, 91 ಕಾಂಗ್ರೆಸ್, ಜೆಡಿಎಸ್+ ಬಿಎಸ್‍ಪಿ 40, ಇತರೆ 4

    ಎಬಿಪಿ ನ್ಯೂಸ್: ಬಿಜೆಪಿ 89-95, ಕಾಂಗ್ರೆಸ್ 85-91, ಜೆಡಿಎಸ್+ ಬಿಎಸ್‍ಪಿ 32-38, ಇತರೆ 6-12

     

    ಟೈಮ್ಸ್ ನೌ ಮತ್ತು ವಿಎಂಆರ್ ಪ್ರಕಾರ ಯಾರು ಎಲ್ಲಿ ಮೇಲುಗೈ?

    ಮುಂಬೈ ಕರ್ನಾಟಕ
    ಒಟ್ಟು ಕ್ಷೇತ್ರ – 50
    ಪಕ್ಷ
    ಬಿಜೆಪಿ           23
    ಕಾಂಗ್ರೆಸ್      21
    ಜೆಡಿಎಸ್+    05
    ಇತರೆ           01

    ಕರಾವಳಿ ಕರ್ನಾಟಕ
    ಒಟ್ಟು ಕ್ಷೇತ್ರ – 21
    ಬಿಜೆಪಿ           08 (+2)
    ಕಾಂಗ್ರೆಸ್       11 (-2)
    ಜೆಡಿಎಸ್+     02 (+2)
    ಇತರೆ 00      (-3)

    ಗ್ರೇಟರ್ ಬೆಂಗಳೂರು
    ಬಿಜೆಪಿ            13
    ಕಾಂಗ್ರೆಸ್       17
    ಜೆಡಿಎಸ್+     02
    ಇತರೆ           00

    ಮಧ್ಯ ಕರ್ನಾಟಕ
    ಬಿಜೆಪಿ          22
    ಕಾಂಗ್ರೆಸ್     10
    ಜೆಡಿಎಸ್+   02
    ಇತರೆ         01

    ಹೈದರಾಬಾದ್ ಕರ್ನಾಟಕ
    ಬಿಜೆಪಿ            15
    ಕಾಂಗ್ರೆಸ್       12
    ಜೆಡಿಎಸ್+     03
    ಇತರೆ            01

    ಮೈಸೂರು ಕರ್ನಾಟಕ
    ಬಿಜೆಪಿ           08
    ಕಾಂಗ್ರೆಸ್      20
    ಜೆಡಿಎಸ್+    25
    ಇತರೆ           02

     

  • ಮೋದಿ ತವರಲ್ಲಿ ಸುಲಭವಾಗಿ ಕಮಲಕ್ಕೆ ಸಿಗಲ್ಲ ಜಯ- ಚುನಾವಣಾ ಸಮೀಕ್ಷೆ ಏನು ಹೇಳುತ್ತೆ?

    ಮೋದಿ ತವರಲ್ಲಿ ಸುಲಭವಾಗಿ ಕಮಲಕ್ಕೆ ಸಿಗಲ್ಲ ಜಯ- ಚುನಾವಣಾ ಸಮೀಕ್ಷೆ ಏನು ಹೇಳುತ್ತೆ?

    ನವದೆಹಲಿ: ಎಬಿಪಿ ರಾಷ್ಟ್ರೀಯ ಹಿಂದಿ ವಾಹಿನಿ ಗುಜರಾತ್ ನಲ್ಲಿ ಸಮೀಕ್ಷೆ ನಡೆಸಿದ್ದು, ಬಿಜೆಪಿ ಈ ಬಾರಿ ಗುಜರಾತ್ ನಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಆದರೂ ಬಿಜೆಪಿಗೆ ಕಾಂಗ್ರೆಸ್ ಭಾರೀ ಪೈಪೋಟಿ ನೀಡುವ ಅಂಕಿ ಅಂಶಗಳು ಹೊರಬಿದ್ದಿವೆ.

    ಎಬಿಪಿ ನ್ಯೂಸ್- ಸಿಎಸ್‍ಡಿಎಸ್ ಒಪೀನಿಯನ್ ಪೋಲ್ ಸಮೀಕ್ಷೆ ಪ್ರಕಾರ ಒಟ್ಟು 182 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಗೆ 95 ಸ್ಥಾನಗಳು ಬರುವ ಸಾಧ್ಯತೆ ಇದ್ದು ಕಾಂಗ್ರೆಸ್ ಗೆ 82 ಸ್ಥಾನ ಸಿಗುವ ಸಾಧ್ಯತೆ ಇದೆ.

    ಮೀಸಲಾತಿಗಾಗಿ ಹೋರಾಟ ನಡೆಸಿ ಬಿಜೆಪಿ ಪಾಲಿಗೆ ಮಗ್ಗಲು ಮುಳ್ಳಾಗಿರುವ ಹಾರ್ದಿಕ್ ಪಟೇಲ್ ಬಿಜೆಪಿ ಪಾಲಿಗೆ ದೊಡ್ಡ ಕಂಟಕ ತಂದಿಡುವುದು ಸ್ಪಷ್ಟವಿದೆ. ಏಕೆಂದರೆ ಸಮೀಕ್ಷೆ ಪ್ರಕಾರ ಪಾಟೀದಾರ್ ಸಮುದಾಯ ಹೆಚ್ಚಾಗಿರುವ ದಕ್ಷಿಣ ಗುಜರಾತ್ ನಲ್ಲಿ ಬಿಜೆಪಿ ಶೇಕಡಾ 40ರಷ್ಟು ಮತ ಪಡೆಯಲಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇಕಡಾ 11ರಷ್ಟು ಮತ ಪ್ರಮಾಣ ಕಡಮೆಯಾಗಲಿದೆ. ಇದೇ ಪ್ರದೇಶದಲ್ಲಿ ಕಾಂಗ್ರೆಸ್ ಶೇಕಡಾ 42ರಷ್ಟು ಮತ ಪಡೆಯುವ ಮೂಲಕ ಕಳೆದ ಬಾರಿಗಿಂತ ಶೇಕಡಾ 9ರಷ್ಟು ಹೆಚ್ಚಿನ ಮತ ಪಡೆಯಲಿದೆ.

    ದಕ್ಷಿಣ ಗುಜರಾತ್ : (ಒಟ್ಟು ಸ್ಥಾನ-35)
    ಬಿಜೆಪಿ : ಶೇಕಡಾ 40  (-11).
    ಕಾಂಗ್ರೆಸ್ : ಶೇಕಡಾ 42 (+9)

    ಇನ್ನೂ ಪಾಟೀದಾರರು ಹಾಗೂ ಆದಿವಾಸಿಗಳ ಮತ ಹೆಚ್ಚಿರುವ ಸೌರಾಷ್ಟ್ರ ಭಾಗದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಶೇಕಡಾ 3ರಷ್ಟು ಹೆಚ್ಚು ಮತ ಅಂದರೆ 45ರಷ್ಟು ಮತ ಪಡೆಯಲಿದೆ. ಕಾಂಗ್ರೆಸ್ ಗೆ ಕಳೆದ ಬಾರಿಗಿಂತ ಶೇಕಡಾ 3ರಷ್ಟು ಮತ ಪ್ರಮಾಣ ಕಡಮೆ ಆಗಲಿದ್ದು ಶೇಕಡಾ 39ರಷ್ಟು ಮತ ಗಳಿಸಲಿದೆ.

    ಸೌರಾಷ್ಟ್ರ – ಕಛ್ ಭಾಗ : (ಒಟ್ಟು ಸ್ಥಾನ-54)
    ಬಿಜೆಪಿ : ಶೇಕಡಾ 45 (+3)
    ಕಾಂಗ್ರೆಸ್ : ಶೇಕಡಾ 39 (-3)

    ಮಧ್ಯ ಗುಜರಾತ್ ಭಾಗದಲ್ಲಿ ಉದ್ದಿಮೆದಾರರು ಹೆಚ್ಚಾಗಿದ್ದು, ಕಾಂಗ್ರೆಸ್ ಗೆ ಶೇಕಡಾ 40ರಷ್ಟು ಮತ ಸಿಗಲಿದ್ದು, ಬಿಜೆಪಿಗೆ ಶೇಕಡಾ 41ರಷ್ಟು ಮತ ಸಿಗಲಿದೆ. ಈ ಪ್ರದೇಶದಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಶೇಕಡಾ 13ರಷ್ಟು ಮತ ಪ್ರಮಾಣ ಕಡಮೆ ಆಗಲಿದೆ.

    ಮಧ್ಯ ಗುಜರಾತ್ : (ಒಟ್ಟು ಸ್ಥಾನ- 40)
    ಬಿಜೆಪಿ : ಶೇಕಡಾ 41 (-13)
    ಕಾಂಗ್ರೆಸ್ : ಶೇಕಡಾ 40 (+2)

    ಉತ್ತರ ಗುಜರಾತ್ ನಲ್ಲಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಭಾಗದಲ್ಲಿ ಬಿಜೆಪಿ ಶೇಕಡಾ 45ರಷ್ಟು ಮತ ಪಡೆಯಲಿದೆ. ಕಳೆದ ಬಾರಿಗಿಂತ ಶೇಕಡಾ 1ರಷ್ಟು ಹೆಚ್ಚಿನ ಮತ ಗಳಿಸಲಿದ್ದು, ಕಾಂಗ್ರೆಸ್ ಬರೋಬ್ಬರಿ ಶೇಕಡಾ 49ರಷ್ಟು ಮತ ಗಳಿಸಲಿದೆ.

    ಉತ್ತರ ಗುಜರಾತ್ : (ಒಟ್ಟು ಸ್ಥಾನ-53)
    ಬಿಜೆಪಿ : ಶೇಕಡಾ 45 (+1)
    ಕಾಂಗ್ರೆಸ್ : ಶೇಕಡಾ 49

    ಪಾಟೀದಾರರ ಹೋರಾಟದ ಬಿಸಿ, ನೋಟ್ ಬ್ಯಾನ್ ಎಫೆಕ್ಟ್, ಜಿಎಸ್‍ಟಿ ಬಿಜೆಪಿ ಗೆ ತಟ್ಟುವುದು ಸ್ಪಷ್ಟವಾಗಲಿದೆ. ಗುಜರಾತ್‍ನಲ್ಲಿ ಡಿಸೆಂಬರ್ 9 ಹಾಗೂ 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

    ಒಟ್ಟು ಸ್ಥಾನಗಳು: 182
    ಬಿಜೆಪಿ : 95
    ಕಾಂಗ್ರೆಸ್ : 82
    ಇತರೆ : 5

  • ಚುನಾವಣಾ ಸಮೀಕ್ಷೆ: ಗುಜರಾತ್‍ನಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ನಿಶ್ಚಿತ

    ಚುನಾವಣಾ ಸಮೀಕ್ಷೆ: ಗುಜರಾತ್‍ನಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ನಿಶ್ಚಿತ

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ಆದರೆ ಮತ ಪ್ರಮಾಣ ಕಡಿಮೆಯಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

    ಎಬಿಪಿ-ಸಿಎಸ್‍ಡಿಎಸ್ ಸಮೀಕ್ಷೆ ಬಿಜೆಪಿಗೆ 113-121 ಸ್ಥಾನಗಳು ಸಿಕ್ಕಿದರೆ, ಕಾಂಗ್ರೆಸ್ 58-64 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದೆ.

    ಎಬಿಪಿ-ಲೋಕನೀತಿ-ಸಿಎಸ್‍ಡಿಎಸ್ ಅಗಸ್ಟ್‍ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.59 ಮತಗಳು ಬಿಜೆಪಿಗೆ ಸಿಗಲಿದೆ ಎನ್ನುವ ಫಲಿತಾಂಶ ಬಂದಿತ್ತು. ಆದರೆ ಈಗ ಬಂದಿರುವ ಸಮೀಕ್ಷೆಯಲ್ಲಿ ಬಿಜೆಪಿಯ ಜನಪ್ರಿಯತೆ ಮತ್ತಷ್ಟು ಕುಸಿದಿದ್ದು, ಶೇ.47ರಷ್ಟು ಮತಗಳು ಸಿಕ್ಕರೆ ಕಾಂಗ್ರೆಸಿಗೆ ಶೇ.41 ಮತಗಳು ಸಿಗಲಿದೆ ಎಂದು ಹೇಳಿದೆ.

    ಕಳೆದ ಸಮೀಕ್ಷೆಗಿಂತ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತಗಳಿಗೆ ಶೇ.12ರಷ್ಟು ಹೆಚ್ಚಾಗಿದೆ. ಸೌರಾಷ್ಟ್ರ-ಕಚ್ ಮತ್ತು ಉತ್ತರ ಗುಜರಾತ್‍ನ ಎರಡು ಪ್ರದೇಶಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದೆ ಎಂದು ತಿಳಿಸಿದೆ.

    182 ವಿಧಾನ ಸಭಾ ಕ್ಷೇತ್ರಗಳಿದ್ದು, ಡಿಸೆಂಬರ್ 9 ಮತ್ತು 14 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. 2012ರಲ್ಲಿ ನಡೆದ ಚನಾವಣೆಯಲ್ಲಿ ಬಿಜೆಪಿ 115, ಕಾಂಗ್ರೆಸ್ 61, ಎನ್‍ಸಿಪಿ 2, ಗುಜರಾತ್ ಪರಿವರ್ತನಾ ಪಕ್ಷ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.