2024ರ ಲೋಕಸಭಾ ಚುನಾವಣೆಗೆ ದಿನಗಣನೆ ಬಾಕಿಯಿದೆ. ದೇಶಾದ್ಯಂತ 7 ಹಂತಗಳಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ಈ 14 ಕ್ಷೇತ್ರಗಳಲ್ಲಿ ಕಣದಲ್ಲಿರುವ 28 ಅಭ್ಯರ್ಥಿಗಳ ವೈಯಕ್ತಿಕ ಆಸ್ತಿ ವಿವರನ್ನು ಇಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಯಾರು ಹೆಚ್ಚು ಶ್ರೀಮಂತರು? ಯಾರ ಆಸ್ತಿ ಎಷ್ಟಿದೆ? ಯಾರು ಹೆಚ್ಚು ಚಿನ್ನದ ಒಡೆಯರಾಗಿದ್ದಾರೆ? ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ನೋಡಿ….
ಹಾಸನ: ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಗುರುವಾರ ಅಂತ್ಯಗೊಂಡಿದ್ದು, ಹಾಸನ ಕ್ಷೇತ್ರದಲ್ಲಿ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪ್ರಜ್ವಲ್ ಆರ್. (ಜೆಡಿಎಸ್), ಜೆಕೆ ಚಿಕ್ಕಯ್ಯ (ಪಕ್ಷೇತರ), ಬಿ.ಎನ್ ಸುರೇಶ್ (ಪಕ್ಷೇತರ), ಶ್ರೇಯಸ್ ಎಂ. ಪಟೇಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಬಿ.ಎನ್ ಹೇಮಂತ್ ಕುಮಾರ್ (ಪಕ್ಷೇತರ), ಜಿ.ಎನ್ ಆನಂದ್ (ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾಪಕ್ಷ), ಎಸ್.ಕೆ ನಿಂಗರಾಜ (ಬಹುಜನ್ ಭಾರತ್ ಪಾರ್ಟಿ), ಪರಮೇಶ ಎನ್.ಎಂ. (ಪಕ್ಷೇತರ), ಸಿದ್ಧಾಭೋವಿ (ಪಕ್ಷೇತರ), ಶೇಖ್ ಅಹಮದ್ (ನವರಂಗ್ ಕಾಂಗ್ರೆಸ್) ಶಿವರಾಜ್ ಬಿ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್) ಅವರು ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಇದುವರೆಗೆ ನಾಮಪತ್ರಗಳನ್ನು ಸಲ್ಲಿಸಿರುವ ಇತರೆ ಅಭ್ಯರ್ಥಿಗಳು:
ದೇವರಾಜಾಚಾರಿ ಎಂ.ವೈ. (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಆರ್.ಜಿ. ಸತೀಶ್ (ಪಕ್ಷೇತರ), ಎಚ್.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್ ಪಕ್ಷ), ಗಂಗಾಧರ ಡಿ.ಎಸ್. (ಬಹುಜನ ಸಮಾಜ ಪಕ್ಷ), ಹೊಳೆಯಪ್ಪ ಜಿ (ಲೋಕ್ ಶಕ್ತಿ), ಎಂ. ಮಹೇಶ್ ಉರ್ಫ್ ಹರ್ಷ(ಪಕ್ಷೇತರ), ಬಸವರಾಜು ಜೆ.ಡಿ. (ಪಕ್ಷೇತರ), ಸಂತೋಷ್ ಬಿ.ಎನ್. (ಅಖಿಲ ಭಾರತ ಹಿಂದೂ ಮಹಾಸಭಾ), ಪ್ರತಾಪ ಕೆ.ಎ. (ಉತ್ತಮ ಪ್ರಜಾಕೀಯ ಪಾರ್ಟಿ), ಕೆ.ಆರ್. ಗಂಗಾಧರ (ಪಕ್ಷೇತರ). ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏ.26 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳಲು ಮೂರು ದಿನಗಳು ಬಾಕಿ ಉಳಿದಿದೆ. ಆದರೂ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲಿ ಸಾಲು ಸಾಲು ಸಭೆ ನಡೆದಿದ್ದರೂ, ಮೊದಲ ಪಟ್ಟಿ ಬಿಡುಗಡೆ ಕಗ್ಗಂಟಾಗಿಯೇ ಉಳಿದಿದೆ.
ಭಾನುವಾರ 170-180 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ, ರಿಲೀಸ್ ಆಗೋದಷ್ಟೇ ಬಾಕಿಯಿದೆ ಎನ್ನಲಾಗಿತ್ತು. ಆದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಿಸಿದೆ. ಸೋಮವಾರ ಬೆಳ್ಳಂಬೆಳಗ್ಗೆ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ ಅಮಿತ್ ಶಾ, ಸುಮಾರು 40 ಕ್ಷೇತ್ರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದರು. ರಾಜ್ಯ ನಾಯಕರು ನಡೆಸಿದ ಸರ್ವೆ ಮತ್ತು ಕೇಂದ್ರದಿಂದ ನಡೆದ ಸರ್ವೆಯಲ್ಲಿ ವ್ಯತಾಸಗಳಿದ್ದು ಈ ಬಗ್ಗೆ ಮತ್ತೊಂದು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯವಾಗಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಮತ್ತು ಹಾಲಿ ಶಾಸಕರನ್ನು ಮುಂದುವರಿಸುವ ವಿಚಾರದಲ್ಲಿ ಗೊಂದಲವಿದೆ. ಹೀಗಾಗಿಯೇ ಸಿಇಸಿಯಲ್ಲಿ ಅನುಮತಿ ಸಿಕ್ಕಿದ್ದ ಪಟ್ಟಿಯನ್ನ ಪ್ರಕಟಿಸದಂತೆ ಅಮಿತ್ ಶಾ ತಡೆ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ವೈ ಹೊರಗಿಟ್ಟು ಅಮಿತ್ ಶಾ, ಸಿಎಂ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿ.ವೈ ವಿಜಯೇಂದ್ರ ಅವರನ್ನ ಎಲ್ಲಿ ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ಅಭಿಪ್ರಾಯ ಪಡೆದಿದ್ದಾರೆ. ಮತ್ತೊಂದುಕಡೆ ಬಿ.ಎಸ್ ಯಡಿಯೂರಪ್ಪ ಜೊತೆ ಜೆಪಿ ನಡ್ಡಾ ಪ್ರತ್ಯೇಕ ಸಭೆ ನಡೆಸಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗೊಂದಲಗಳು ಹಾಗೆಯೇ ಉಳಿದಿರುವ ಕಾರಣ ನಡ್ಡಾ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಆದ್ರೆ, ಈ ಸಭೆಗೂ ಮುನ್ನವೇ ಬೆಂಗಳೂರು ವಿಮಾನ ಹತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಫಸ್ಟ್ ಲಿಸ್ಟ್ ವಿಳಂಬಕ್ಕೆ ಕಾರಣ ಏನು?
40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಸರ್ವೇ ರಿಪೋರ್ಟ್‌ಗಳಲ್ಲಿ ಗೊಂದಲ ಹಾಗೂ ವ್ಯತ್ಯಾಸ ಕಂಡುಬಂದಿದೆ. ನೈಜ ವರದಿ ನೀಡಲು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರೀ ಬಂಡಾಯ ಭೀತಿ ಎದುರಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಬಂಡಾಯ ಮುಂದೂಡಲು ಹೊಸ ತಂತ್ರ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸನ್ ಸ್ಟ್ರೋಕ್ ನೀಡುತ್ತಾ ಹೈಕಮಾಂಡ್?
ಟಿಕೆಟ್ ಹಂಚಿಕೆ ರಹಸ್ಯವಾಗಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಎಲ್ಲರಿಗೂ ಈ ನಿಯಮ ಅನ್ವಯ ಅನುಮಾನವಾಗಿದೆ. ಶಿಕಾರಿಪುರದಿಂದ ತಮ್ಮ ಬದಲಾಗಿ ಪುತ್ರ ವಿಜಯೇಂದ್ರನಿಗೆ ಬಿಎಸ್‌ವೈ ಟಿಕೆಟ್ ಕೇಳಿದ್ದಾರೆ. ಈ ನಡುವೆ ಸಚಿವ ವಿ. ಸೋಮಣ್ಣ ಪುತ್ರ ಅರುಣ್‌ಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ. ಸವಿವ ಎಂಟಿಬಿ ನಾಗರಾಜು ಪುತ್ರ ನಿತಿನ್‌ಗೆ ಹೊಸಕೋಟೆಯಿಂದ, ಶಾಸಕ ತಿಪ್ಪಾರೆಡ್ಡಿ ಪುತ್ರ ಡಾ. ಸಿದ್ದಾರ್ಥ್‌ಗೆ ಚಿತ್ರದುರ್ಗದಿಂದ, ಮಾಡಾಳ್ ವಿರೂಪಾಕ್ಷಪ್ಪ ಮಲ್ಲಿಕಾರ್ಜುನ್‌ಗೆ ಚನ್ನಗಿರಿ ಕ್ಷೇತ್ರದಿಂದ, ಸಂಸದ ಸಿದ್ದೇಶ್ವರ ಪುತ್ರ ಅನಿತ್‌ಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ, ದಿವಂಗತ ಉಮೇಶ್ ಕತ್ತಿ ಕುಟುಂಬಸ್ಥರು ಹುಕ್ಕೇರಿ ಕ್ಷೇತ್ರದಿಂದ ಹಾಗೂ ದಿವಂಗತ ಆನಂದ್ ಮಾಮನಿ ಕುಟುಂಬಸ್ಥರು ಸವದತ್ತಿ ಕ್ಷೇತ್ರದಿಂದ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ವಿಜಯೇಂದ್ರಗೆ ಶಿಕಾರಿ ಪುರದಿಂದ ಬಹುತೇಕ ಟಿಕೆಟ್ ಫಿಕ್ಸ್ ಆಗಿದ್ದು, ಉಳಿದವರಿಗೆ ಟಿಕೆಟ್ ನೀಡುವುದು ಸಂಶಯವಾಗಿದೆ.