Tag: ಚುನಾವಣಾ ಅಧಿಕಾರಿಗಳು

  • ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ

    ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ

    ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊಸ್ತಿಲಿನಲ್ಲಿ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳಿಗೆ ಶಾಕ್ ನೀಡಿದ್ದಾರೆ. ಮಂಡ್ಯದ (Mandya) ಮದ್ದೂರು (Maddur) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಕೆಎಂ ಉದಯ್ (KM Uday) ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಹಣವನ್ನು ಪತ್ತೆ ಹಚ್ಚಿದ್ದಾರೆ.

    ಕೆಎಂ ಉದಯ್ ಬೆಂಬಲಿಗ ಮದ್ದೂರು ಪಟ್ಟಣದ ದೊಡ್ಡಿ ಬೀದಿಯ ಸುರೇಶ್ ಹಾಗೂ ರಮೇಶ್ ಮನೆ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದೆ. ಬೆಳ್ಳಂಬೆಳಗ್ಗೆ 5:30ರ ವೇಳೆಗೆ ಅಧಿಕಾರಿಗಳು ದಾಳಿ ಮಾಡಿದ್ದು, 2 ಕೋಟಿ ರೂ.ಗೂ ಅಧಿಕ ಹಣವನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 2 ದಿನವೂ ಬೆಂಗಳೂರಿನಲ್ಲಿ ಮೋದಿ ಹವಾ

    ಸುರೇಶ್ ಮನೆಯಲ್ಲಿ 2 ಕೋಟಿ ರೂ. ಪತ್ತೆಯಾಗಿದ್ದು, ರಮೇಶ್ ಮನೆಯಲ್ಲಿ 3.50 ಲಕ್ಷ ರೂ. ಪತ್ತೆಯಾಗಿದೆ. ಚುನಾವಣಾ ಅಧಿಕಾರಿಗಳು ಹಣವನ್ನು ಮದ್ದೂರು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಾತ್ರವಲ್ಲದೇ ಪೊಲೀಸರು ಸುರೇಶ್ ಬಾಬು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸ್ಕೃತ ಪರೀಕ್ಷೆಯಲ್ಲಿ ಇರ್ಫಾನ್‌ಗೆ ಮೊದಲ ಸ್ಥಾನ – 13,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆ

  • ಮಂಡ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.60 ಲಕ್ಷ ರೂ. ವಶ

    ಮಂಡ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.60 ಲಕ್ಷ ರೂ. ವಶ

    ಮಂಡ್ಯ: ಅಕ್ರಮವಾಗಿ ಸಾಗಿಸುತ್ತಿದ್ದ 2,60,500 ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯ ಕದಬಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಗುರುವಾರ ಮತದಾನ ಇರುವುದರಿಂದ ಚುನಾವಣಾ ಅಧಿಕಾರಿಗಳು ಮಂಡ್ಯ ಜಿಲ್ಲೆಯಲ್ಲಿ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಮಂಡ್ಯದಲ್ಲಿ ಅಕ್ರಮ ಕಡಿವಾಣಕ್ಕೆ ಐಟಿ ಹಾಗೂ ಚುನಾವಣಾಧಿಕಾರಿಗಳು ಚಕ್ರವ್ಯೂಹ ರಚಿಸಿದ್ದಾರೆ. ಸುಮಾರು 50 ಕಡೆಗಳಲ್ಲಿ ಐಟಿ ತಂಡ ಸಿಸಿಟಿವಿ ಅಳವಡಿಸಿದ್ದು, ಮಂಗಳವಾರ ರಾತ್ರಿಯೇ ಐಟಿ ಅಧಿಕಾರಿಗಳ ತಂಡ ಮಂಡ್ಯಕ್ಕೆ ಶಿಫ್ಟ್ ಆಗಿದೆ.

    ಒಟ್ಟು 15ಕ್ಕೂ ಹೆಚ್ಚು ಕೇಂದ್ರಗಳ ಮೇಲೆ ಐಟಿ ತಂಡ ಹದ್ದಿನ ಕಣ್ಣನ್ನು ಇಟ್ಟಿದೆ. ತೋಟದ ಮನೆ, ಸಿನಿಮಾ ಥಿಯೇಟರ್, ರೈಸ್ ಮಿಲ್, ಸಾ ಮಿಲ್, ಕಲ್ಯಾಣ ಮಂಟಪಗಳು, ಗೋಡೌನ್‍ಗಳು, ನಿರ್ಮಾಣ ಹಂತದ ಕಟ್ಟಡಗಳು, ಅಕ್ರಮ ಹಣ ಸಾಗಾಣಿಗೆ, ಹಂಚಿಕೆ ನಡೆಯುವ ಜಾಗಗಗಳ ಗುರುತಿಗೆ ಐಟಿ ಮಾಸ್ಟರ್ ಪ್ಲಾನ್ ಮಾಡಿದೆ. ಚುನಾವಣಾ ವೀಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಶಿಫ್ಟ್ ಆಗಿದ್ದಾರೆ.

  • ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ಬೆಂಗಳೂರು: ನಕಲಿ ಚುನಾವಣಾ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಆರೋಪದಲ್ಲಿ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದಾರೆ.

    ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದೇರಾಜು ಎಂಬವರಿಂದ ದೂರು ಪಡೆದು ಐಪಿಸಿ ಸೆಕ್ಷನ್ 171 ಬಿ ಮತ್ತು ಪ್ರಜಾ ಪ್ರತನಿಧಿ ಕಾಯ್ದೆ 127 ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಸೋಮವಾರ ಪೊಲೀಸರು ಎನ್‍ಸಿಆರ್ ದಾಖಲಿಸಿದ್ರು. ಬಳಿಕ ಇಂದು 5ನೇ ಎಸಿಎಂಎಂ ಕೋರ್ಟ್ ನ ಅನುಮತಿ ಪಡೆದು ಎಫ್‍ಐಆರ್ ದಾಖಲು ಮಾಡಲಾಗಿದೆ.

    ಏನಿದು ಪ್ರಕರಣ: ಸೋಮವಾರ ರಾತ್ರಿ ನಗರದ ಉಪ್ಪಾರಪೇಟೆಯ ಪ್ರಭಾತ್ ಕಾಂಪ್ಲೆಕ್ಸ್ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದರು. ನಕಲಿ ಮತದಾರರ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಪರಿಣಾಮ ದಾಳಿ ನಡೆಸಲಾಗಿತ್ತು. ನಕಲಿ ಕೇಂದ್ರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ, ಸೀಲ್‍ಗಳು, ಇನ್ನಿತರ ವಸ್ತುಗಳು ಪತ್ತೆಯಾಗಿತ್ತು. ನಗರದ ಕೆಜಿ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಗಿದ್ದ ಈ ಕಚೇರಿ ಖಲೀಲುಲ್ಲಾ ಎಂಬವರಿಗೆ ಸೇರಿದೆ.

  • ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ: ಅಧಿಕಾರಿಗಳ ರೇಡ್‍ಗೆ ದರ್ಶನ್ ಉತ್ತರ

    ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ: ಅಧಿಕಾರಿಗಳ ರೇಡ್‍ಗೆ ದರ್ಶನ್ ಉತ್ತರ

    ಮಂಡ್ಯ: ಇಂದು ಬೆಳಗ್ಗೆ ಚುನಾವಣಾ ಅಧಿಕಾರಿಗಳು ನಟ ದರ್ಶನ್ ಅವರ ಟಿ.ನರಸಿಪುರದಲ್ಲಿರುವ ಫಾರ್ಮ್ ಹೌಸ್‍ಗೆ ಬಂದು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳು ಇವತ್ತು ನಮ್ಮ ಫಾರ್ಮ್ ಹೌಸ್‍ಗೆ ಬಂದಿದ್ದರಂತೆ. ಫಾರ್ಮ್ ಹೌಸ್‍ನಲ್ಲಿ ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

    ಯಾರೋ ಹಣ ಹಂಚುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂದಿದ್ದರು. ಅವರ ಕೆಲಸವನ್ನು ಅವರು ಮಾಡಿದ್ದಾರೆ. ಇವತ್ತು ಸಂಜೆ ಮೈಸೂರಿನ ಸಂದೇಶ್ ಹೋಟೆಲ್ ಮೇಲೂ ದಾಳಿ ಮಾಡಬಹುದು. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಸಂದೇಶ್ ಹೊಟೇಲ್‍ನಲ್ಲಿ ಇದ್ದೇನೆ. ಹಾಗಾಗಿ ಅದರ ಮೇಲೂ ದಾಳಿ ಆಗಬಹುದು ಎಂದು ದರ್ಶನ್ ಸುಳಿವು ಕೊಟ್ಟಿದ್ದಾರೆ.

    ನಾನು ಪ್ರತೀ ವರ್ಷ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತೇನೆ. ತಪ್ಪಿಸದೇ ವರ್ಷ ವರ್ಷ ಟ್ಯಾಕ್ಸ್ ಕಟ್ಟಿದ್ದೇನೆ. ಸರ್ಕಾರಕ್ಕೆ ಕೊಡುವುದನ್ನು ನಾವು ಕೊಟ್ಟು ಬಿಡಬೇಕು. ಒಂದು ವೇಳೆ ಐಟಿ ಅವರು ಬಂದರೆ ಅವರ ಮುಂದೆ ನನ್ನ ಬಳಿ ಇರುವ ಎಲ್ಲ ದಾಖಲಾತಿಯನ್ನು ತೆಗೆದಿಡುತ್ತೇನೆ ಎಂದು ದರ್ಶನ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಪ್ರತಿದಿನದಂತೆ ಪ್ರಚಾರ ನಡೆಯುತ್ತಿದೆ. ಜನರು ಕೂಡ ನಮಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಾಭಿಮಾನವನ್ನು ಎತ್ತಿ ಹಿಡಿದು ಜನ ಮಾತಾಡುತ್ತಿದ್ದಾರೆ ನಮಗೆ ಅಷ್ಟೇ ಸಾಕು. ಮತ ಮಾರಿಕೊಳ್ಳಬೇಡಿ ಅಂತ ಜನರಿಗೆ ಹೇಳುತ್ತಿದ್ದೇನೆ ಎಂದು ದರ್ಶನ್ ಹೇಳಿದರು.

  • ಚುನಾವಣಾ ಅಧಿಕಾರಿಗಳಿಂದ ನಟ ದರ್ಶನ್ ಫಾರ್ಮ್ ಹೌಸ್ ಪರಿಶೀಲನೆ

    ಚುನಾವಣಾ ಅಧಿಕಾರಿಗಳಿಂದ ನಟ ದರ್ಶನ್ ಫಾರ್ಮ್ ಹೌಸ್ ಪರಿಶೀಲನೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಚುನಾವಣಾ ಅಧಿಕಾರಿಗಳು ಅವರ ಫಾರ್ಮ್ ಹೌಸ್ ಪರಿಶೀಲನೆ ನಡೆಸಿದ್ದಾರೆ.

    ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಚುನಾವಣಾ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸುಮಾರು ಅರ್ಧ ಗಂಟೆಯ ಕಾಲ ಫಾರ್ಮ್ ಹೌಸ್‍ನಲ್ಲಿರುವ ಇಡೀ ಮನೆ ತಪಾಸಣೆ ಮಾಡಿ ವಾಪಸ್ ಹೋಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

    ಇಂದು ಬೆಳಗ್ಗೆ ಸುಮಾರು 10.30ಕ್ಕೆ ಅಧಿಕಾರಿಗಳು ಬಂದಿದ್ದರು. ಸದ್ಯಕ್ಕೆ ಅಧಿಕಾರಿಗಳಿಗೆ ಯಾವ ದಾಖಲಾತಿ ಸಿಕ್ಕಿದೆ ಎಂಬುದು ತಿಳಿದು ಬಂದಿಲ್ಲ. ಚುನಾವಣಾ ಅಧಿಕಾರಿಗಳ ಬಗ್ಗೆ ಆಪ್ತ ಸಹಾಯಕ ಮಾಹಿತಿ ಕೊಟ್ಟಿದ್ದಾರೆ. ಆದರೆ ಅದಕ್ಕೆ ದರ್ಶನ್ ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

    ನಟ ದರ್ಶನ್ ಆಪ್ತ ಶ್ರೀನಿವಾಸ್ ಸಹಾಯಕ ಸ್ಪಷ್ಟನೆ:
    ಫಾರ್ಮ್ ಹೌಸಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿಲ್ಲ. ಚುನಾವಣಾ ಅಧಿಕಾರಿಗಳು ಮಾತ್ರ ಹೋಗಿ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ತೋಟದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ಅವರು ಬಂದು ಪರಿಶೀಲನೆ ಮಾಡಿದ್ದಾರೆ. ಅವರು ಬಂದಿರುವ ವಿಚಾರವನ್ನು ನಮ್ಮ ಕೆಲಸಗಾರರು ಫೋನ್ ಮಾಡಿ ನಮಗೆ ಹೇಳಿದರು. ನಾವು ಅವರು ಪರಿಶೀಲನೆ ಮಾಡಿಕೊಂಡು ಹೋಗಲಿ ಎಂದು ಹೇಳಿದ್ವಿ ಎಂದರು.

    ಈ ಬಗ್ಗೆ ದರ್ಶನ್ ಅವರಿಗೆ ತಿಳಿಸಿದೆವು. ಅದಕ್ಕೆ ಅವರು ಪರಿಶೀಲನೆ ಮಾಡಿಕೊಂಡು ಹೋಗಲಿ ಎಂದು ಹೇಳಿದರು. ನಾವು ಪ್ರಚಾರ ಮಾಡಿಕೊಂಡು ಮಧ್ಯರಾತ್ರಿ ಹೋಗಿ ರೆಸ್ಟ್ ಮಾಡಿಕೊಂಡು ಬರುತ್ತೇವೆ. ಅಲ್ಲಿ ಪ್ರಾಣಿ-ಪಕ್ಷಿ ಬಿಟ್ಟು ಬೇರೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಮಂಡ್ಯ: ಜ್ಯೋತಿಷ್ಯ ಮಂದಿರದ ಬೋರ್ಡ್ ನಲ್ಲಿ ಹಸ್ತದ ಚಿಹ್ನೆ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಬೋರ್ಡ್ ಗೆ ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಅಶೋಕ ನಗರದಲ್ಲಿರುವ ಜ್ಯೋತಿಷ್ಯ ಮಂದಿರದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಸಾಮಾನ್ಯವಾಗಿ ಹಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ನಿಮ್ಮ ಹಸ್ತವನ್ನು ನೋಡಿ ಜ್ಯೋತಿಷ್ಯ ಹೇಳುತ್ತೇವೆ ಅಂತ ಜ್ಯೋತಿಷಿಗಳು ಹಸ್ತದ ಚಿಹ್ನೆ ಇರುವ ಬೋರ್ಡ್ ಗಳನ್ನು ಹಾಕಿರುತ್ತಾರೆ. ಆದ್ರೆ ಈ ಹಸ್ತ ಕಾಂಗ್ರೆಸ್ ಪಕ್ಷದ ಚಿಹ್ನೆ ಕೂಡ ಆಗಿರುವುದರಿಂದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.

    ಸದ್ಯ ಜಾರಿಯಲ್ಲಿರುವ ನೀತಿ ಸಂಹಿತೆ ಅವಧಿ ಮುಗಿಯುವವರೆಗೂ ಜ್ಯೋತಿಷಿ ಕೇಂದ್ರದ ಮುಂದೆ ಹಸ್ತ ಚಿಹ್ನೆ ಇರುವ ಬೋರ್ಡ್ ಹಾಕಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ರಾಯಚೂರು: ಜಿಲ್ಲೆಯಲ್ಲಿ ಕೃಷ್ಣ ನದಿ ನೀರಿನಿಂದ ನಡುಗಡ್ಡೆಗಳಾಗಿರುವ ಗ್ರಾಮಗಳಲ್ಲಿ ಮತದಾನ ಕಾರ್ಯಕ್ಕೆ ತೆರಳಿದ್ದ ಚುನಾವಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರದಾಡಿದರು.

    ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುರ್ವಕುಲ ಹಾಗು ಕುರ್ವಕುರ್ದಾಕ್ಕೆ ತೆರಳಿದ್ದ ಸಿಬ್ಬಂದಿ ವಾಪಸ್ ಬರಲು ತೆಪ್ಪ ಇಲ್ಲದೆ ಸುಮಾರು ಹೊತ್ತು ನದಿದಂಡೆಯಲ್ಲೇ ಪರದಾಡಬೇಕಾಯಿತು. ತೆಪ್ಪ ನಡೆಸುವ ಅಂಬಿಗರಿಲ್ಲದೆ ಚುನಾವಣಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

    ಕೃಷ್ಣಾ ನದಿಗೆ ಜುರಾಲಾ ಆಣೆಕಟ್ಟೆ ಕಟ್ಟಿದ ನಂತರ ಈ ಗ್ರಾಮಗಳು ನಡುಗಡ್ಡೆಯಾಗಿದ್ದು ಸೇತುವೆ ಕಾರ್ಯ ಅಪೂರ್ಣವಾಗಿರುವುದರಿಂದ ನದಿ ದಾಟಲು ಪರದಾಡುವಂತಾಗಿದೆ.

  • ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 80 ಕೆಜಿ ಚಿಕನ್, 10 ಲಕ್ಷ ಹಣ ಜಪ್ತಿ

    ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 80 ಕೆಜಿ ಚಿಕನ್, 10 ಲಕ್ಷ ಹಣ ಜಪ್ತಿ

    ಬೀದರ್/ಚಿಕ್ಕಬಳ್ಳಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ ಮತ್ತು ಚಿಕನ್ ನನ್ನು ವಶಪಡಿಸಿಕೊಂಡಿದ್ದಾರೆ.

    ಬೀದರ್ ನ ಗಾಂಧಿಗಂಜನ್ ನಲ್ಲಿ ಮತದಾರರಿಗೆ ಹಂಚುತ್ತಿದ್ದ ಬರೋಬ್ಬರಿ 10 ಲಕ್ಷ 50 ಸಾವಿರ ಹಣವನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಗಾಂಧಿಗಂಜ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದ್ದು, ಒಬ್ಬ ಆರೋಪಿಯಾದ ಅಬ್ದುಲ್ ಸಮ್ಮದ್ ನನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ಪರಾರಿಯಾಗಿದ್ದಾರೆ.

    ಜಪ್ತಿಯಾದ ಹಣ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್‍ ಗೆ ಸೇರಿದ್ದು ಎನ್ನಲಾಗಿದೆ. ಈ ಘಟನೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಇನ್ನು ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಚಿಕನ್ ನನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಜೀಡರಹಳ್ಳಿ ಗ್ರಾಮದ ಬಳಿ ಮಾರುತಿ ಓಮ್ನಿ ಕೆಎ-40 ಎಂ-4588 ಕಾರಿನಲ್ಲಿ ಚಿಕನ್ ಸಾಗಾಟ ಮಾಡುತ್ತಿದ್ದರು.

    ಈ ವೇಳೆ ಚುನಾವಣಾಧಿಕಾರಿಗಳು ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಆಗ ತಲಾ ಒಂದು ಕೆಜಿಯ 80 ಕೆಜಿ ಚಿಕನ್ ಪಾಕೆಟ್ ಪತ್ತೆಯಾಗಿದ್ದು, ಅಧಿಕಾರಿಗಳು ಕಾರು ಸಮೇತ ಚಿಕನ್ ಜಪ್ತಿ ಮಾಡಿದ್ದಾರೆ. ದಾಳಿಯ ವೇಳೆ ಚಾಲಕ ಹಾಗೂ ಮತ್ತೋರ್ವ ಕಾರು ಬಿಟ್ಟು ಪರಾರಿಯಾಗಿದ್ದಾರೆ.

  • ಪರಿಶೀಲನೆಯ ನೆಪದಲ್ಲಿ ವ್ಯಾಪಾರಸ್ಥರಿಂದ 8 ಸಾವಿರ ರೂ. ಲಪಟಾಯಿಸಿದ್ರಾ ಚುನಾವಣಾಧಿಕಾರಿ?

    ಪರಿಶೀಲನೆಯ ನೆಪದಲ್ಲಿ ವ್ಯಾಪಾರಸ್ಥರಿಂದ 8 ಸಾವಿರ ರೂ. ಲಪಟಾಯಿಸಿದ್ರಾ ಚುನಾವಣಾಧಿಕಾರಿ?

    ದಾವಣಗೆರೆ: ವ್ಯಾಪಾರಿಗಳಿಂದ ಹಣವನ್ನು ಚುನಾವಣಾ ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ಆರೋಪವೊಂದು ಜಿಲ್ಲೆಯಲ್ಲಿ ಕೇಳಿಬಂದಿದೆ.

    ಶಾಬೂ ಹಾಗೂ ತಾಜ್ ಎಂಬಿಬ್ಬರು ವ್ಯಾಪಾರಿಗಳು ಹಾವೇರಿ ಜಿಲ್ಲೆಯ ಮಾರುಕಟ್ಟೆಗೆ ಮೆಕ್ಕೆಜೋಳ ವ್ಯಾಪಾರ ಮಾಡಿ ದಾವಣಗೆರೆಗೆ ವಾಪಸ್ ಆಗುತ್ತಿರುವಾಗ ಕುಂದವಾಡದ ಬಳಿ ಇರುವ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿ ಶಿವಕುಮಾರ್ ಎಂಬವರು ಮೆಕ್ಕೆಜೋಳ ವ್ಯಾಪಾರ ಮಾಡಿ ಬಂದಿದ್ದ 48 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

    ವ್ಯಾಪಾರಸ್ಥರ ಬಳಿ ದಾಖಲೆಗಳು ಸರಿ ಇದ್ದ ಕಾರಣ ಹಣ ವಾಪಸ್ ಕೊಡುವಾಗ ಕೇವಲ 40 ಸಾವಿರ ಮಾತ್ರ ಕೊಟ್ಟು, ಉಳಿದ 8 ಸಾವಿರವನ್ನು ಅಧಿಕಾರಿ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ.

    ಚುನಾವಣಾ ಅಧಿಕಾರಿಗಳು ಮಾತ್ರ ನಾವು ಹಣ ಲಪಟಾಯಿಸಿಲ್ಲ ಸುಮ್ಮನೆ ನಮ್ಮ ಮೇಲೆ ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ. ನಾವು ಪರಿಶೀಲನೆ ಮಾಡಿ ಹಾಗೇ ವಾಪಸ್ ಕಳಿಸಿದ್ದೇವೆ. ಬೇಕಾದರೆ ಸಿಸಿ ಕ್ಯಾಮೆರಾಗಳು ಇವೆ ಪರಿಶೀಲನೆ ನಡೆಸಲಿ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಮಾತ್ರ ತಮ್ಮ ಹಣವನ್ನು ಚುನಾವಣಾ ಅಧಿಕಾರಿಗಳೇ ಲಪಟಾಯಿಸಿದ್ದಾರೆ ಎಂದು ಅರೋಪ ಮಾಡುತ್ತಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಚುನಾವಣಾ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಅರ್ಧ ಕೋಟಿಗಿಂತಲೂ ಅಧಿಕ ನಗದು ಹಣ, 200 ಗ್ರಾಂ ಬಂಗಾರ ವಶ

    ಅರ್ಧ ಕೋಟಿಗಿಂತಲೂ ಅಧಿಕ ನಗದು ಹಣ, 200 ಗ್ರಾಂ ಬಂಗಾರ ವಶ

    ಬೆಂಗಳೂರು/ಬಳ್ಳಾರಿ: ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯದ ಹಲವು ಕಡೆ ದಾಖಲೆ ಇಲ್ಲದ ಹಣ ಪತ್ತೆಯಾಗುತ್ತಲೇ ಇದೆ. ಈಗ ಬರೋಬ್ಬರಿ 53.58 ಲಕ್ಷ ರೂ. ನಗದು ಹಣ ಮತ್ತು ಸುಮಾರು 200ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.

    ಬಸ್ಸಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 52 ಲಕ್ಷ ರೂಪಾಯಿ ನಗದನ್ನು ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಜಪ್ತಿ ಮಾಡಿದ್ದಾರೆ. ತಮಿಳುನಾಡು ಮೂಲದ ಕೆಪಿಎನ್ ಟ್ರಾವೆಲ್ಸ್ ಬಸ್ಸಿನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹಣ ಸಾಗಿಸಲಾಗುತಿತ್ತು.

    ದೇವನಹಳ್ಳಿ ಬಳಿಯ ರಾಣಿ ಸರ್ಕಲ್‍ನಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿ ತಂಡ ಹಣವನ್ನು ವಶಕ್ಕೆ ಪಡೆದು ಚಾಲಕನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮಹಾಜನದನ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಬಂಗಾರದ ಆಭರಣ ಮತ್ತು ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಬಸ್ ನಲ್ಲಿ ಮಂಜುನಾಥ್ ದಾಖಲೆ ಇಲ್ಲದ ಬಂಗಾರದ ಆಭರಣ ಮತ್ತು ನಗದನ್ನು ಸಾಗಿಸುತ್ತಿದ್ದನು.

    ತಪಾಸಣೆ ವೇಳೆ 1 ಲಕ್ಷ 50 ಸಾವಿರ ನಗದು, ಅಂದಾಜು 250 ರಿಂದ 300 ಗ್ರಾಂ ಬಂಗಾರದ ಆಭರಣಗಳನ್ನು ಗಂಗಾವತಿಯಿಂದ ಶಿಕಾರಿಪುರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ತಪಾಸಣೆ ವೇಳೆ ಕಿವಿ ಒಲೆ, ಮುತ್ತು, 42 ತಾಳಿ ಪೀಸು, 34 ಮಾಟಿಲ್, 49 ಮೂಗತಿ, 42 ಬಟನ್ ಸೇರಿದಂತೆ ಅಂದಾಜು 15 ಲಕ್ಷ ಮೌಲ್ಯದ ಆಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.