Tag: ಚುನಾವಣಾ ಅಧಿಕಾರಿ

  • ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ರೂ. ಹಣ ಜಪ್ತಿ

    ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ರೂ. ಹಣ ಜಪ್ತಿ

    ಬಾಗಲಕೋಟೆ: ದಾಖಲೆಯಿಲ್ಲದೆ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ 5 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು, ಫ್ಲೈಯಿಂಗ್‌ ಸ್ಕ್ವಾಡ್‌ (Flying Squad) ಹಾಗೂ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ.

    ಹಣ ಸಾಗಿಸುವ ಬೊಲೆರೋ (Bolero) ವಾಹನದಲ್ಲಿ ಶುಕ್ರವಾರ ರಾತ್ರಿ ಹುಬ್ಬಳ್ಳಿ ಯೂನಿಯನ್ ಬ್ಯಾಂಕಿನಿಂದ (Union Bank) ಮುಧೋಳ ಯೂನಿಯನ್ ಬ್ಯಾಂಕ್‌ಗೆ 5 ಕೋಟಿ ರೂ. ಹಣವನ್ನು ಸಾಗಿಸಲಾಗುತ್ತಿತ್ತು. ಲೋಕಾಪುರ ಬಳಿಯಿರುವ ಲಕ್ಷಾನಟ್ಟಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ಹಣ ಸಾಗಾಟ ಕಂಡುಬಂದಿದೆ. ಇದನ್ನೂ ಓದಿ: ಸಿಎಂ ಮನೆ ಮುಂದಿನ ರಸ್ತೆಯಲ್ಲೇ 10 ಲಕ್ಷ ನಗದು ಹಣ ಪತ್ತೆ..!

    ಈ ಹಣ ಯೂನಿಯನ್ ಬ್ಯಾಂಕ್‌ಗೆ ಸೇರಿದ್ದು ಎಂಬ ಮಾಹಿತಿ ನೀಡಿದರೂ ಸಹ ಸಮರ್ಪಕ ದಾಖಲೆಯಿಲ್ಲದ ಹಿನ್ನೆಲೆ ಹಣವನ್ನು ಜಪ್ತಿಪಡಿಸಿಕೊಂಡು ಕಾರಿನಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಕಲಿ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಹಾರಲು ಸಂಚು ರೂಪಿಸಿದ್ದ ಆರೋಪಿ ಅಂದರ್‌

  • ಡಿಕೆಶಿ ಕುಟುಂಬಕ್ಕೂ ತಟ್ಟಿದ ಚುನಾವಣೆ ಬಿಸಿ – ಹೆಲಿಕಾಪ್ಟರ್ ತಪಾಸಣೆ ವೇಳೆ ಮಾತಿನ ಚಕಮಕಿ

    ಡಿಕೆಶಿ ಕುಟುಂಬಕ್ಕೂ ತಟ್ಟಿದ ಚುನಾವಣೆ ಬಿಸಿ – ಹೆಲಿಕಾಪ್ಟರ್ ತಪಾಸಣೆ ವೇಳೆ ಮಾತಿನ ಚಕಮಕಿ

    ಮಂಗಳೂರು: ಚುನಾವಣೆ (Election) ಕಾವೇರಿರುವ ಹೊತ್ತಲ್ಲೇ ಡಿಕೆ ಶಿವಕುಮಾರ್ (D.K.Shivakumar) ಅವರ ಕುಟುಂಬಕ್ಕೂ ಚುನಾವಣಾ ಬಿಸಿ ತಟ್ಟಿದೆ. ಡಿಕೆಶಿ ಕುಟುಂಬ ಖಾಸಗಿ ಹೆಲಿಕಾಪ್ಟರ್‌ನಲ್ಲಿ (Helicopter) ಧರ್ಮಸ್ಥಳಕ್ಕೆ (Dharmasthala) ಬಂದಿಳಿದ ವೇಳೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದಾರೆ.

    ಶನಿವಾರ ಮತ್ತು ಭಾನುವಾರ ಡಿಕೆಶಿ ಕುಟುಂಬ ಟೆಂಪಲ್ ರನ್ ನಡೆಸುತ್ತಿದ್ದು, ಶನಿವಾರ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆಂದು ಡಿಕೆಶಿ ಪತ್ನಿ ಉಷಾ, ಮಗಳು ಮತ್ತು ಅಳಿಯ ಹಾಗೂ ಮಗ ಒಂದು ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಹೆಲಿಪ್ಯಾಡಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಗ್ (Landing) ಆಗುತ್ತಿದ್ದಂತೆ ಚುನಾವಣೆ ಅಧಿಕಾರಿಗಳು ತಪಾಸಣೆಗೆ (Inspection) ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಮೇಲೆ ಕಣ್ಣು – ಏ.30ಕ್ಕೆ ಕುಮಾರಸ್ವಾಮಿ ಅಡ್ಡದಲ್ಲಿ ಮೋದಿ ಸಮಾವೇಶ 

    ಇದು ಖಾಸಗಿ ಹೆಲಿಕಾಪ್ಟರ್ ಆಗಿದ್ದು, ಇದನ್ನು ತಪಾಸಣೆ ಮಾಡಲು ಅವಕಾಶವಿಲ್ಲ ಎಂದು ಪೈಲೆಟ್ (Pilot) ರಾಮ್‌ದಾಸ್ ಹೇಳಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿ (Election Officer) ಹಾಗೂ ಪೈಲೆಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಮತ್ತು ಅವರ ಕಾರನ್ನೂ ಕೂಡಾ ತಪಾಸಣೆ ಮಾಡಿದ್ದಾರೆ. ಇದನ್ನೂ ಓದಿ: ಭಯ, ಆ ಭಯ ಇರಬೇಕು ಸಿದ್ದರಾಮಯ್ಯನವರೇ: ಪ್ರತಾಪ್‌ ಸಿಂಹ

  • ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ

    ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ

    ಬೆಂಗಳೂರು: ಕಳೆದ ಹನ್ನೆರಡು ದಿನಗಳಲ್ಲಿ ಚುನಾವಣೆ ಅಧಿಕಾರಿಗಳು (Election Officer) ಹಾಗೂ ಪೊಲೀಸರು ಚುನಾವಣಾ (Election) ಅಕ್ರಮಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ ನೂರು ಕೋಟಿಯಷ್ಟು ಹಣ, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಇದರಲ್ಲಿ ಹಣಕ್ಕಿಂತ ಕುಕ್ಕರ್, ತವಾ ಮತ್ತು ಸೀರೆಗಳೇ ಮೇಲುಗೈ ಸಾಧಿಸಿದೆ.

    ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS) ಪಕ್ಷಗಳು ಇನ್ನಿಲ್ಲದಂತೆ ಕಸರತ್ತು ನಡೆಸಿದ್ದಾರೆ. ಒಂದು ಕಡೆ ಟಿಕೆಟ್ ಗೊಂದಲ, ಮತ್ತೊಂದು ಕಡೆ ಮತದಾರರನ್ನು ಓಲೈಸಿಕೊಳ್ಳಲು ಆಮಿಷಗಳು. ಇದನ್ನು ಮನಗಂಡ ಚುನಾವಣಾ ಆಯೋಗ ಮಾರ್ಚ್ 29 ರಂದು ನೀತಿ ಸಂಹಿತೆ (Code Of Conduct) ಜಾರಿ ಮಾಡಿ ಆದೇಶ ಹೊರಡಿಸಿತ್ತು. ಅಂದಿನಿಂದಲೇ ಅಲರ್ಟ್ ಆದ ಚುನಾವಣಾಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಆಯಾ ವಿಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು (Check Post) ಹಾಕಿ ವಾಹನಗಳ ಪರಿಶೀಲನೆ ಶುರುಮಾಡಿದರು. ಇದನ್ನೂ ಓದಿ: ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ 

    ಮತ್ತೊಂದು ಕಡೆ ರಾಜಕೀಯ ನಾಯಕರು ಮತ್ತು ಬೆಂಬಲಿಗರ ಮನೆಗಳಲ್ಲಿ ಅಕ್ರಮವಾಗಿ ಮತದಾರರಿಗೆ ಹಂಚಲು ಹಣ, ದಿನಸಿ ವಸ್ತುಗಳು, ಗಿಫ್ಟ್‌ಗಳ ಶೇಖರಣೆ ಬಗ್ಗೆ ಕಣ್ಣಿಟ್ಟು ದಾಳಿ ನಡೆಸಿ ವಶಕ್ಕೆ ಪಡೆದು ಕೇಸ್ ದಾಖಲಿಸುತ್ತಿದ್ದಾರೆ. ಬಹುತೇಕ ಪತ್ತೆಯಾದ ಕಡೆಗಳಲ್ಲೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಕುಕ್ಕರ್‌ಗಳು ಮತ್ತು ತವಾಗಳು ಪತ್ತೆಯಾಗುತ್ತಿವೆ. ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ 

    ನಾಮಿನೇಷನ್ ಹಾಕಿದ ನಂತರವಷ್ಟೇ ಹಣ, ಮದ್ಯ, ಗೃಹಬಳಕೆ ವಸ್ತುಗಳು ಹೆಚ್ಚಾಗಿ ಸಿಗುತ್ತವೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಸೂಕ್ತ ತಯಾರಿ ನಡೆಸಿದ್ದಾರೆ. ಆದರೆ ನಾಮೀನೇಷನ್ ಹಾಕುವ ಮುನ್ನವೇ ರಾಜ್ಯಾದ್ಯಂತ ಮೂರು ಪಕ್ಷಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸೇರಿದ ಬರೋಬ್ಬರಿ ನೂರು ಕೋಟಿ ಅಕ್ರಮ ಹಣ, ವಸ್ತುಗಳು ಪತ್ತೆಯಾಗಿದ್ದು, ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್‌ – ಲಿಸ್ಟ್‌ನಲ್ಲಿ ಯಾರಿದ್ದಾರೆ?

  • ಚುನಾವಣೆಗಾಗಿ ಹಾಸನಕ್ಕೆ ಪೊಲೀಸ್ ಕಾರಿನಲ್ಲೇ ಹಣ ಸಾಗಾಟ!

    ಚುನಾವಣೆಗಾಗಿ ಹಾಸನಕ್ಕೆ ಪೊಲೀಸ್ ಕಾರಿನಲ್ಲೇ ಹಣ ಸಾಗಾಟ!

    – ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮೌದ್ಗಿಲ್ ಪತ್ರ

    ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹಾಸನಕ್ಕೆ ಪೊಲೀಸ್ ಕಾರಿನಲ್ಲಿಯೇ ಪ್ರಭಾವಿ ಸಚಿವರೊಬ್ಬರು ಅಕ್ರಮವಾಗಿ ಹಣ ಸಾಗಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ.

    ಕೆಎ 04 ಎಂಎಚ್ 4477 ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 1.20 ಲಕ್ಷ ರೂ. ನಗದು ಹಣ ಸಾಗಿಸಲಾಗಿತ್ತು. ಇದು ಬೆಂಗಳೂರಿನ ಡೆಪ್ಯೂಟಿ ಕಮಿಷನರ್ ಪೊಲೀಸ್ ಅವರಿಗೆ ಸೇರಿದ ಕಾರಾಗಿದೆ ಎಂದು ಚುನಾವಣಾ ವಿಶೇಷ ಅಧಿಕಾರಿ ಮುನೀಷ್ ಮೌದ್ಗಿಲ್ ಅವರು ದೂರಿದ್ದಾರೆ.

    ಈ ಸಂಬಂಧ ಮುನೀಷ್ ಮೌದ್ಗಿಲ್ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪತ್ರದಲ್ಲಿ ಏನಿದೆ?:
    ಚುನಾವಣಾ ಅಧಿಕಾರಿಗಳು ಮೈಸೂರು ರಸ್ತೆಯಲ್ಲಿರುವ ಎಸ್.ಅಂಕನಹಳ್ಳಿಯಲ್ಲಿ ಏಪ್ರಿಲ್ 16ರಂದು ಗಸ್ತು ತಿರುಗುತ್ತಿದ್ದರು. ಆಗ ಜಿಲ್ಲಾಧಿಕಾರಿ ಪ್ರಿಯಾಂಕ ಅವರು ಜಿಲ್ಲಾ ನೋಡಲ್ ಅಧಿಕಾರಿ ವಿಕಾಸ್ ಅವರಿಗೆ ಕರೆ ಮಾಡಿ ಹೊಳೆನರಸೀಪುರದ ಚೆನ್ನಾಂಬಿಕಾ ಚಿತ್ರಮಂದಿರಕ್ಕೆ ತಕ್ಷಣವೇ ಬರುವಂತೆ ತಿಳಿಸಿದ್ದರು. ಅಲ್ಲಿಗೆ ಬಂದು ಇನ್ನೋವಾ ಕಾರನ್ನು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿತ್ತು.

    ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿದಾಗ ನೋಡಲ್ ಅಧಿಕಾರಿಗಳು ಹಣವನ್ನು ನಮ್ಮ ಕೈಗೆ ಒಪ್ಪಿಸಿದ್ದರು. ಬಳಿಕ ಹಣವನ್ನು ಏಣಿಸಿದಾಗ 500 ರೂ. ಮುಖ ಬೆಲೆಯ 200 ನೋಟು ಹಾಗೂ 100 ರೂ. ಮುಖ ಬೆಲೆಯ 200 ನೋಟು ಸೇರಿದಂತೆ 1.20 ಲಕ್ಷ ರೂ. ಕಾರಿನಲ್ಲಿ ಇತ್ತು. ಈ ಹಣವನ್ನು ಮುಖ್ಯ ಅಧೀಕ್ಷಕ ಉಪನಿರ್ದೇಶಕರಿಗೆ ಒಪ್ಪಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ.

  • ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಶ್ರೀನಗರ: ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಯನ್ನು ಸಿಆರ್‌ಪಿಎಫ್ ಯೋಧರೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಯೋಧ ಸುರೇಂದ್ರ ಕುಮಾರ್ ಅವರ ಸಮಯ ಪ್ರಜ್ಞೆ ಹಾಗೂ ಮುಂಜಾಗ್ರತೆಯಿಂದಾಗಿ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಂದ್ರ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಆಗಿದ್ದೇನು?:
    ಜಮ್ಮು-ಕಾಶ್ಮೀರದಲ್ಲಿ ಗುರುವಾರ ಲೋಕಸಭಾ ಚುನಾವಣೆ ನಡೆದಿತ್ತು. ಈ ವೇಳೆ ಕಾಶ್ಮೀರದ 13ನೇ ಮತಗಟ್ಟೆಯ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಅದೇ ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಸುರೇಂದ್ರ ಕುಮಾರ್ ಅವರು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಮುಂದಾದರು. ವೈದ್ಯ ಸುನೀಮ್ ಅವರು ಫೋನ್ ಮಾಡಿ, ಸುರೇಂದ್ರ ಕುಮಾರ್ ಅವರಿಗೆ ಏನು ಮಾಡಬೇಕು ಎಂದು ಸಲಹೆ ನೀಡಿದರು.

    ಸುರೇಂದ್ರ ಕುಮಾರ್ ಅವರು ವೈದ್ಯರು ಸಲಹೆಯಂತೆ 30 ಬಾರಿ ಅಸನ್ ಉಲ್ ಹಕ್ ಅವರ ಬಾಯಲ್ಲಿ ಬಾಯಿ ಇಟ್ಟು ಗಾಳಿ ಬಿಡುತ್ತಿದ್ದರು. ಈ ಮೂಲಕ ಸುಮಾರು 50 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿದರು. ಆಂಬುಲೆನ್ಸ್ ಮೂಲಕ ಮತಗಟ್ಟೆ ತಲುಪಿದ ವೈದ್ಯರು ಚಿಕಿತ್ಸೆ ಮುಂದುವರಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯ ಸುನೀಮ್ ಅವರು, ಸುರೇಂದ್ರ ಕುಮಾರ್ ಸಮಯ ಪ್ರಜ್ಞೆ ತೋರಿ, ನಾವು ಮತಗಟ್ಟೆ ತಲುಪುವವರೆಗೂ ಪ್ರಥಮ ಚಿಕಿತ್ಸೆ ನೀಡಿದರು. ಹೀಗಾಗಿ ಅಸನ್ ಉಲ್ ಹಕ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಅಕ್ರಮವಾಗಿ ಗುರುತಿನ ಚೀಟಿ ಮುದ್ರಣ ಆರೋಪ – ಕಾಂಪ್ಲೆಕ್ಸ್ ಮೇಲೆ ದಾಳಿ, 16 ಮಂದಿ ವಶಕ್ಕೆ

    ಅಕ್ರಮವಾಗಿ ಗುರುತಿನ ಚೀಟಿ ಮುದ್ರಣ ಆರೋಪ – ಕಾಂಪ್ಲೆಕ್ಸ್ ಮೇಲೆ ದಾಳಿ, 16 ಮಂದಿ ವಶಕ್ಕೆ

    ಬೆಂಗಳೂರು: ಕೆಜೆ ರಸ್ತೆಯಲ್ಲಿರುವ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮವಾಗಿ ಗುರುತಿನ ಚೀಟಿ ತಯಾರಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸೋಮವಾರ ರಾತ್ರಿ ಜಂಟಿಯಾಗಿ ದಾಳಿ ಮಾಡಿದ್ದಾರೆ.

    ಈ ವೇಳೆ ವಕೀಲ ಇಬ್ರಾಹಿಂ  ಸೇರಿ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ ವೋಟರ್ ಲಿಸ್ಟ್ ಹಾಗೂ ಪ್ರಿಂಟರ್ಸ್ ಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆಯ ಆರೋಪಿಗಳು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಸರ್ವೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಸರ್ವೆಯಲ್ಲಿ ಒಂದಷ್ಟು ಮತದಾರರು ಕೇಂದ್ರ ಲೋಕಸಭಾ ಕ್ಷೇತ್ರ ಬಿಟ್ಟು ಹೋಗಿದ್ದಾರೆ. ಕ್ಷೇತ್ರ ಬಿಟ್ಟು ಹೋಗಿರುವವರ ಪಟ್ಟಿ ಮಾಡಿ ಅವರನ್ನು ಕರೆ ತಂದು ವೋಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

    ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿಸಿ ಮೋಹನ್ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಕಲಿ ವೋಟರ್ ಐಡಿ ಮುದ್ರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್, ಪಿಸಿ ಮೋಹನ್ ಅವರು ಸೋಲಿನ ಭಯದಿಂದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಕೂಡ ಅಭ್ಯರ್ಥಿಯ ಕಲರ್ ಪೋಟೋ ಅಂಟಿಸಿ ಮತದಾರರಿಗೆ ಹಂಚುತ್ತಿದ್ದಾರೆಂದು ಆರೋಪಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

  • ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದ 1.75 ಕೋಟಿ ರೂ. ಜಪ್ತಿ

    ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದ 1.75 ಕೋಟಿ ರೂ. ಜಪ್ತಿ

    ಚಿಕ್ಕಬಳ್ಳಾಪುರ: ಕರ್ನಾಟಕ-ಆಂಧ್ರ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 7ರ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕ ಕಚೇರಿಯಲ್ಲಿ ಇದ್ದ 1.75 ಕೋಟಿ ರೂ. ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಆಂಧ್ರದ ಅನಂತಪುರ ಎಸ್ಪಿ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಎಸ್ಪಿ ಸ್ಥಳೀಯ ಬಾಗೇಪಲ್ಲಿ ಪೊಲೀಸರು ಸುಂಕ ವಸೂಲಾತಿ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಭಾರೀ ಮೊತ್ತದ ಹಣ ಪತ್ತೆಯಾದ ಹಿನ್ನೆಲೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಚುನಾವಣಾಧಿಕಾರಿಗಳು ಐಟಿ ಇಲಾಖಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ಐಟಿ ಅಧಿಕಾರಿಗಳು ಹಣ ಪರಿಶೀಲನೆ ನಡೆಸಿದ್ದು ಸಬಂಧಪಟ್ಟ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕ ಸೂಕ್ತ ದಾಖಲಾತಿಗಳನ್ನು ಓದಗಿಸುವಲ್ಲಿ ವಿಫಲರಾಗಿದ್ದಾರೆ.

    ಕಳೆದ 20 ದಿನಗಳಿಂದ ಸುಂಕ ವಸೂಲಾತಿ ಕೇಂದ್ರದಲ್ಲಿ ವಸೂಲಿ ಆದ ಹಣ ಎಂದು ಹೇಳಿದ್ದು, ಆದರೆ ಇದರ ಬಗ್ಗೆ ಸೂಕ್ತ ದಾಖಲಾತಿಗಳಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಎಲ್ಲಾ ಹಣವನ್ನ ಜಪ್ತಿ ಮಾಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

  • ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

    ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

    ಚಿಕ್ಕೋಡಿ(ಬೆಳಗಾವಿ): ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ.ವನ್ನು ಸಂಕೇಶ್ವರ ಕ್ರಾಸ್ ಚೆಕ್‍ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರೊಂದರಲ್ಲಿ ಟ್ರಂಕ್ ಪತ್ತೆಯಾಗಿದೆ. ಅದನ್ನು ತೆರೆದು ನೋಡಿದಾಗ 30 ಲಕ್ಷ ರೂ. ಪತ್ತೆಯಾಗಿದೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ ಹಣವು ಬ್ಯಾಂಕ್‍ವೊಂದಕ್ಕೆ ಸೇರಿದ್ದು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಸೂಕ್ತ ದಾಖಲಾತಿಗಳಿಲ್ಲದೆ ಇರುವುದರಿಂದ ಕಾರು ಮತ್ತು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಇತ್ತ ಕರ್ನಾಟಕ-ಆಂಧ್ರ ಗಡಿಭಾಗದ ಬಾಗೇಪಲ್ಲಿಯಲ್ಲಿ ಇಂದು ಸೂಕ್ತ ದಾಖಲೆಗಳಿಲ್ಲದ 1 ಕೋಟಿ 75 ಲಕ್ಷ ರೂ. ಮೌಲ್ಯದ ಹಣ ಪತ್ತೆಯಾಗಿದೆ. ಬಾಗೇಪಲ್ಲಿಯ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕ ಸುಬ್ಬಾರೆಡ್ಡಿ ಅವರ ಕಚೇರಿಯಲ್ಲಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಮಾಹಿತಿ ತಿಳಿದ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಹಣ ವಶಕ್ಕೆ ಪಡೆದಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಅಕ್ರಮಗಳಿಗೆ ಬಳಸಲು ದೊಡ್ಡ ಮೊತ್ತದ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.

  • ಸೂಕ್ತ ದಾಖಲೆಗಳಿಲ್ಲದ 1.75 ಕೋಟಿ ರೂ. ವಶ

    ಸೂಕ್ತ ದಾಖಲೆಗಳಿಲ್ಲದ 1.75 ಕೋಟಿ ರೂ. ವಶ

    ಚಿಕ್ಕಬಳ್ಳಾಪುರ: ಕರ್ನಾಟಕ – ಆಂಧ್ರ ಗಡಿಭಾಗದ ಬಾಗೇಪಲ್ಲಿಯ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕರ ಕಚೇರಿಯಲ್ಲಿ ಸೂಕ್ತ ದಾಖಲೆಗಳಿಲ್ಲದ 1 ಕೋಟಿ 75 ಲಕ್ಷ ರೂ. ಮೌಲ್ಯದ ಹಣ ಪತ್ತೆಯಾಗಿದೆ.

    ಕೇಂದ್ರದ ವ್ಯವಸ್ಥಾಪಕ ಸುಬ್ಬಾರೆಡ್ಡಿ ಅವರ ಕಚೇರಿಯಲ್ಲಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಮಾಹಿತಿ ತಿಳಿದ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಹಣ ವಶಕ್ಕೆ ಪಡೆದಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಅಕ್ರಮಗಳಿಗೆ ಬಳಸಲು ದೊಡ್ಡ ಮೊತ್ತದ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.

    ಸ್ವತಃ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನಟರಾಜ್ ಅವರು ಕೂಡ ಸ್ಥಳಕ್ಕೆ ನೀಡಿದ್ದು, ಐಟಿ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಹಣ ಜಪ್ತಿ ಮಾಡಲು ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ.

    ಇದು ಸುಂಕ ವಸೂಲಾತಿ ಕೇಂದ್ರಕ್ಕೆ ಸೇರಿದ ಹಣ ಎಂದು ವ್ಯವಸ್ಥಾಪಕರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ದಾಖಲೆಗಳನ್ನ ನೀಡಿಲ್ಲ. ಹೀಗಾಗಿ ಅನುಮಾನಗೊಂಡಿರುವ ಚುನಾವಣಾಧಿಕಾರಿಗಳು ಹಣ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

  • ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: 15 ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಜಪ್ತಿ!

    ಚಿಕ್ಕಮಗಳೂರು: ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಸುಮಾರು 16 ಸಾವಿರ ಕ್ಕೂ ಹೆಚ್ಚು ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಮುಂದಿನ ತಿಂಗಳ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಿಜೆಪಿಯವರು ಭಾರೀ ಪ್ರಮಾಣದ ಸೀರೆಗಳನ್ನ ತರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.

    ದೂರು ಆಧರಿಸಿ ಚುನಾವಣೆ ಕರ್ತವ್ಯ ಅಧಿಕಾರಿ ಪ್ರಕಾಶ್ ಆಗಮಿಸಿ ಪರಿಶೀಲಿಸಿದ ಬಳಿಕ ತನಿಖಾ ತಂಡದ ತುಷಾರಾ ಮಣಿ, ಆದಾಯ ತೆರಿಗೆ ಸಹಾಯಕ ಅಧಿಕಾರಿ ಪೂರ್ಣಿಮ, ಠಾಣಾಧಿಕಾರಿ ರಕ್ಷಿತ್ ಗೋದಾಮು ಪರಿಶೀಲಿಸಿ ತಪಾಸಣೆ ನಡೆಸಿದ್ದಾರೆ. ಸುಮಾರು 15 ಲಕ್ಷ ರೂ. ಬೆಲೆಯ 16 ಸಾವಿರ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಸುಮಾರು 15 ಲಕ್ಷ ಬೆಲೆ ಬಾಳುವ 16 ಸಾವಿರ ಸೀರೆಗಳನ್ನು ಸರಕು ಸಾಗಣೆ ಸಂಸ್ಥೆ ಲಾರಿಯಲ್ಲಿ ತರಿಸಿದ್ದಾರೆ. ಪ್ರತಿ ಸೀರೆ ಬೆಲೆ 80 ರೂ. ಇದ್ದು, ಈ ಕುರಿತು ಮಾಲೀಕರು ದಾಖಲೆಯನ್ನು ಸಲ್ಲಿಸಿದ್ದಾರೆ. ಆದರೆ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಕ್ರಮಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಜಪ್ತಿ ಮಾಡಲಾಗಿರುವ ಸೀರೆಗಳನ್ನು ಅಧಿಕಾರಿಗಳ ವಶದಲ್ಲೇ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.