Tag: ಚುನವಣಾ ಆಯೋಗ

  • ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ

    ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ

    ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ವಿವಿಧ ಹಂತಗಳಲ್ಲಿ ಆಗುತ್ತಿರುವ ಮತದಾನ (Vote) ಪ್ರಮಾಣವನ್ನು ಚುನಾವಣಾ ಆಯೋಗ (Election Commission) ಸಕಾಲಕ್ಕೆ ನೀಡದಿರುವುದಕ್ಕೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಆರಂಭಿಕ ಮತ್ತು ಅಂತಿಮ ಹಂತದಲ್ಲಿ ನೀಡಲಾದ ದತ್ತಾಂಶಗಳ ವ್ಯತ್ಯಾಸ 1.7 ಕೋಟಿ ಎಂದು ಕಾಂಗ್ರೆಸ್ (Congress) ಆರೋಪಿಸಿ ಕಳವಳ ವ್ಯಕ್ತಪಡಿಸಿದೆ.

    ಈ ವಿಚಾರವಾಗಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಸಂಸ್ಥೆ (ADR) ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದು ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಸ್ಪಂದಿಸಿದೆ. ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮತಗಟ್ಟೆವಾರು ಮತದಾನ ಪ್ರಮಾಣವನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಅದು ಗೊಂದಲ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎನ್ನುತ್ತಾ 225 ಪುಟಗಳ ಅಫಿಡವಿಟ್ ದಾಖಲಿಸಿದೆ. ಇದನ್ನೂ ಓದಿ:  ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ 7 ನಕ್ಸಲರು ಬಲಿ

    ಪ್ರತಿ ಮತಗಟ್ಟೆಯಲ್ಲಿ ಬಿದ್ದ ಮತಗಳ ಸಂಖ್ಯೆಯನ್ನು ತಿಳಿಸುವ ಫಾರಂ 17ಸಿ ಪತ್ರವನ್ನು ಬಹಿರಂಗ ಮಾಡುವಂತೆ ಎಲ್ಲಿಯೂ ನಿಯಮಗಳಿಲ್ಲ. ಸದ್ಯ ಈ 17ಸಿ ಮೂಲ ಫಾರಂಗಳನ್ನು ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಕೇವಲ ಮತಗಟ್ಟೆ ಏಜೆಂಟ್‌ಗೆ ಇದರ ಕಾಪಿಯನ್ನು ಪಡೆಯಲು ಅನುಮತಿ ಇದೆ. ಅರ್ಜಿದಾರ ಕೋರಿದಂತೆ ಮತಗಟ್ಟೆವಾರು ಪೋಲಿಂಗ್ ಪ್ರಮಾಣವನ್ನು ಬಹಿರಂಗಪಡಿಸಿದರೆ ಅದು ದುರ್ಬಳಕೆ ಆಗುವ ಸಂಭವ ಇದೆ ಎಂದು ತಿಳಿಸಿದೆ.  ಇದನ್ನೂ ಓದಿ:  ಇಬ್ಬರು ಸಿಎಂ ಅರೆಸ್ಟ್‌ ಆದ್ರು.. ಬುಡಕಟ್ಟು ಸಿಎಂ ಇನ್ನೂ ಜೈಲಲ್ಲೇ ಇದ್ದಾರೆ: ರಾಹುಲ್‌ ಗಾಂಧಿ

    ದತ್ತಾಂಶವನ್ನು ಮಾರ್ಫಿಂಗ್ ಮಾಡುವ ಸಂಭವ ಇದೆ. ಇದರಿಂದ ಗೊಂದಲ ಉಂಟಾಗಿ ಇಡೀ ಚುನಾವಣೆ ಪ್ರಕ್ರಿಯೆ ಮೇಲೆ ಜನರಲ್ಲಿ ಅಪನಂಬಿಕೆ ಮೂಡಬಹದು ಎಂಬ ಆತಂಕವನ್ನು ಆಯೋಗ ವ್ಯಕ್ತಪಡಿಸಿದೆ.

    ಮತದಾನ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಆಯೋಗ ಎಲ್ಲಿಯೂ ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಶುಕ್ರವಾರವೂ ಈ ಅರ್ಜಿಯ ವಿಚಾರಣೆ ನಡೆಯಲಿದೆ.  ಐದನೇ ಹಂತದ ಅಂತಿಮ ಮತದಾನ ಪ್ರಮಾಣ 62.2 % ರಷ್ಟು ದಾಖಲಾಗಿದೆ ಎಂದು ಆಯೋಗ ಪ್ರಕಟಿಸಿದೆ.

  • ಕೋಟಿ ಕೋಟಿ ಹಣ ಹಂಚಿಕೆ – ಮಂಡ್ಯದಲ್ಲಿ ಹದ್ದಿನ ಕಣ್ಣಿಟ್ಟ ಆಯೋಗ, ಸೆಕ್ಯೂರಿಟಿ ಫುಲ್ ಟೈಟ್!

    ಕೋಟಿ ಕೋಟಿ ಹಣ ಹಂಚಿಕೆ – ಮಂಡ್ಯದಲ್ಲಿ ಹದ್ದಿನ ಕಣ್ಣಿಟ್ಟ ಆಯೋಗ, ಸೆಕ್ಯೂರಿಟಿ ಫುಲ್ ಟೈಟ್!

    ಮಂಡ್ಯ: ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಮತದಾನದ ಕೊನೆ ದಿನದಲ್ಲಿ ಸಕ್ಕರೆ ನಾಡಲ್ಲಿ ಕೋಟಿ ಕೋಟಿ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ ಎನ್ನುವ ಸುದ್ದಿಯ ಬೆನ್ನಲ್ಲೇ ಚುನಾವಣಾ ಆಯೋಗ ಹಿಂದೆಂದಿಗಿಂತಲೂ ಹದ್ದಿನ ಕಣ್ಣಿಟ್ಟಿದ್ದು, ಸೆಕ್ಯೂರಿಟಿ ಫುಲ್ ಟೈಟ್ ಆಗಿದೆ.

    ಸಕ್ಕರೆ ನಾಡು ಮಂಡ್ಯ ಕಳೆದ ಎರಡು ತಿಂಗಳಿನಿಂದ ಇಡೀ ರಾಜ್ಯದ ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಂಡಿದೆ. ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವಿನ ಚುನಾವಣಾ ಕಾಳಗದಲ್ಲಿ ಮತದಾನಕ್ಕೆ ಉಳಿದಿರುವುದು ಇನ್ನು ಕೇವಲ ಮೂರು ದಿನಗಳು ಮಾತ್ರ. ಈ ನಿಟ್ಟಿನಲ್ಲಿ ಎರಡು ಅಭ್ಯರ್ಥಿಗಳ ಕಡೆಯಿಂದ ಕೋಟಿ ಕೋಟಿ ಹಣದ ಹೊಳೆ ಹರಿಯಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಹಣದ ಹೊಳೆಯನ್ನು ತಡೆಗಟ್ಟಲು ಚುನಾವಣಾ ಆಯೋಗದ ಜೊತೆಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಚೆಕ್ ಪೋಸ್ಟ್ ಗಳಲ್ಲೂ ವಾಹನಗಳ ತಪಾಸಣೆ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಸಂಸದ ಎಲ್.ಆರ್ ಶಿವರಾಮೇಗೌಡ ಪುತ್ರ ಚೇತನ್ ಗೌಡ ಜೆಡಿಎಸ್ ನಿಂದ 150 ಕೋಟಿ ರೂ ಹಣ ಖರ್ಚು ಮಾಡಲಾಗುವುದು ಎಂಬ ಆಡಿಯೋ ಭಾರೀ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಪ್ರತಿ ಕಡೆಯಲ್ಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಮುಂದಾಗಿದೆ.

    ಮಂಡ್ಯ ರಣಕಣದಲ್ಲಿ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಾರೆ ಎಂಬ ಚರ್ಚೆ ಆರಂಭದಿಂದಲೂ ಜೋರಾಗಿಯೇ ಇದೆ. ಈ ಎಲ್ಲ ಚರ್ಚೆಗಳನ್ನು ಚುನಾವಣಾ ಆಯೋಗ ಸುಳ್ಳು ಮಾಡಿ ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಸಕ್ಸಸ್ ಆಗಬೇಕಿದೆ.

  • ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ವಿರೋಧ ವ್ಯಕ್ತಪಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಚಿತ್ರ ಬಿಡುಗಡೆಯಾದ್ರೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಂಎನ್‍ಎಸ್ ನಾಯಕಿ ಶಾಲಿನಿ ಠಾಕ್ರೆ, ಬಿಜೆಪಿ ತನ್ನ ಸರ್ಕಾರದ ಯೋಜನೆಗಳನ್ನು ಪ್ರಚಾರಗೊಳಿಸಲು ಸಿನಿಮಾಗಳನ್ನು ಬಳಸಿಕೊಳ್ಳುತ್ತಿದೆ. ಈ ಮೊದಲು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಸಿನಿಮಾಗಳಿಗೆ ಸರ್ಕಾರವೇ ಪ್ರಾಯೋಜಕತ್ವ ಮಾಡಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಮತ್ತೊಂದು ಸಿನಿಮಾವನ್ನು ತೆರೆಯ ಮೇಲೆ ಬಿಜೆಪಿ ತರುತ್ತಿದೆ. ಆದ್ರೆ ನಮ್ಮ ಪಕ್ಷ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರು ಸಿನಿಮಾಗಳ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕರು ಕಥೆ, ಸಂಭಾಷಣೆ ಜಾವೇದ್ ಅಖ್ತರ್ ಮತ್ತು ಸಮೀರ್ ಲೇಖನಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ. ಇಬ್ಬರು ಸಾಹಿತ್ಯಗಾರರು ಮೋದಿ ಜೀವನಾಧರಿತ ಸಿನಿಮಾಗೂ ಮತ್ತು ನಮಗೂ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಈ ರೀತಿ ಪ್ರಚಾರಕ್ಕಾಗಿ ಕೆಳಮಟ್ಟದ ರಾಜಕಾರಣವನ್ನು ಬಿಡಬೇಕೆಂದು ಎಂದು ಮಹಾರಾಷ್ಟ್ರ ನವನಿರ್ಮಾಣ ಚಿತ್ರಪಥ್ ಕರ್ಮಚಾರಿ ಸೇನೆ ಅಧ್ಯಕ್ಷ ಅಮೇ ಕೋಪ್ಕರ್ ಆಗ್ರಹಿಸಿದ್ದಾರೆ.

    ಮೋದಿ ಬಯೋಪಿಕ್ ಸಿನಿಮಾದಲ್ಲಿ ಪ್ರಧಾನಿಗಳ ಪಾತ್ರದಲ್ಲಿ ನಟ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 12ರಂದು ಒಟ್ಟು 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೊಮ್ಮನ್ ಇರಾನಿ, ಮನೋಜ್ ಜೋಶಿ, ಬರ್ಖಾ ಬಿಷ್ತ, ಜರೀನಾ ವಹಾಬ್, ದರ್ಶನ್ ರಾವಲ್, ಅಕ್ಷತಾ ಆರ್.ಸಲುಜಾ, ಅಂಜನಾ ಶ್ರೀವಾತ್ಸವ, ರಾಜೇಂದ್ರ ಗುಪ್ತಾ ಮತ್ತು ಯಥೀನ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಸಿನಿಮಾ ಒಳಗೊಂಡಿದೆ.