Tag: ಚುಣಾವಣೆ

  • ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಭೋಪಾಲ್: ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕರೊಬ್ಬರಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಧಾನಿ ಭೋಪಾಲ್‍ನಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಭಾನುವಾರ ಪ್ರಚಾರ ನಡೆಯುತ್ತಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.

    ವಿಡಿಯೋದಲ್ಲಿ ದಿನೇಶ್ ಶರ್ಮಾ ಸಾಲಾಗಿ ನಿಂತಿದ್ದ ವ್ಯಕ್ತಿಗಳ ಬಳಿ ಮತ ಹಾಕುವಂತೆ ಕೇಳುತ್ತಿದ್ದು, ಈ ಮಧ್ಯ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಮೊದಲು ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದ್ರೆ ನಂತರ ಅವರೇ ಹಾರ ಹಾಕಿಸಿಕೊಂಡಿರೋದನ್ನ ಕಾಣಬಹುದು.

    ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದ್ದಾರೆ.

    ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದ್ದರಿಂದ ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಆದ್ರೆ ಬದಲಿಗೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ.

     

     

  • ಪರಮೇಶ್ವರ್ ಈಸ್ ಬ್ಲಡಿ ನಾನ್ಸೆನ್ಸ್: ಶಾಸಕ ಸುಧಾಕರ್ ಲಾಲ್ ಪುತ್ರ ಕಮೆಂಟ್ ವಿವಾದ

    ಪರಮೇಶ್ವರ್ ಈಸ್ ಬ್ಲಡಿ ನಾನ್ಸೆನ್ಸ್: ಶಾಸಕ ಸುಧಾಕರ್ ಲಾಲ್ ಪುತ್ರ ಕಮೆಂಟ್ ವಿವಾದ

    ತುಮಕೂರು: ಫೇಸ್ ಬುಕ್‍ ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಗ್ಗೆ ಕೊರಟಗೆರೆಯ ಜೆಡಿಎಸ್ ಶಾಸಕ ಸುಧಾಕರ್ ಪುತ್ರ ಸುಚಾರಿತ್ ಲಾಲ್ ಹಾಕಿರುವ ಕಮೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ.

    ತನ್ನ ಫೇಸ್ ಬುಕ್ ನಲ್ಲಿ ಡಾ. ಜಿ.ಪರಮೇಶ್ವರ್ ಅವರನ್ನು “ಬ್ಲಡಿ ನಾನ್ ಸೆನ್ಸ್” ಎಂದು ಸಂಭೋದಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

    ಕೊರಟಗೆರೆ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಪರಮೇಶ್ವರ್ ಗೆಲ್ಲುತ್ತಾರೆ ಎಂಬ ಸಿ-04 ಸಮೀಕ್ಷೆಯೊಂದನ್ನು ಪೋಸ್ಟ್ ಮಾಡಿದ್ದವರ ಕಾಮೆಂಟ್ ಬಾಕ್ಸ್ ನಲ್ಲಿ ಸುಚಾರಿತ್ ಲಾಲ್, ಪರಮೇಶ್ವರ್ ‘ಈಸ್ ಎ ಬ್ಲಡಿ ನಾನ್ ಸೆನ್ಸ್’ ಎಂದು ಕಾಮೆಂಟ್ ಮಾಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಈ ಚರ್ಚೆಯ ವೇಳೆ ಸಿಎಚ್‍ಎಸ್ ಸಮೀಕ್ಷೆ ಪ್ರಕಾರ ತನ್ನ ತಂದೆ ಸುಧಾಕರ್ ಲಾಲ್ ಗೆಲ್ಲುತ್ತಾರೆ ಎಂದು ಪೋಸ್ಟ್ ಮಾಡಿದ್ದಕ್ಕೆ, ಕಾಂಗ್ರೆಸ್ ಕಾರ್ಯಕರ್ತರು ಸುಚಾರಿತ್ ಕಾಮೆಂಟ್ ನ ವೈರಲ್ ಮಾಡಿ ಶಾಸಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಇಂದು ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ: ಕಚೇರಿ ಸುತ್ತ ಪೊಲೀಸ್ ಭದ್ರತೆ

    ಇಂದು ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ: ಕಚೇರಿ ಸುತ್ತ ಪೊಲೀಸ್ ಭದ್ರತೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಯಾರು ಎಂಬ ಪ್ರಶ್ನೆಗೆ ಇವತ್ತು ಉತ್ತರ ಸಿಗಲಿದೆ.

    ಇಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿ ಸಂಪತ್ ರಾಜು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮೇಯರ್ ಅಭ್ಯರ್ಥಿ ಮುನಿಸ್ವಾಮಿ, ಉಪ ಮೇಯರ್ ಅಭ್ಯರ್ಥಿಯಾಗಿ ಮಮತ ವಾಸುದೇವ್ ನಾಮ ಪತ್ರ ಸಲ್ಲಿಸಿದ್ದಾರೆ.

    ಪದ್ಮಾವತಿ ಅವ್ರನ್ನ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಅಂತ ಬಿಬಿಎಂಪಿ ಕಚೇರಿಯಲ್ಲಿ ಜೆಡಿಎಸ್ ಶಾಸಕ ಶರವಣ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆದೇಶದಂತೆ ಆಯ್ಕೆ ನಡೆದಿದೆ. ಹಿಂದುಳಿದ ವರ್ಗಕ್ಕೆ ಉಪ ಮೇಯರ್ ಸ್ಥಾನ ನೀಡಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ಮನಸ್ಸಿನಲ್ಲಿ ಇಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಎಲ್ಲಾ ಸದಸ್ಯರು, ಶಾಸಕರು ಒಮ್ಮತದಿಂದ ಅಭ್ಯರ್ಥಿ ಆಯ್ಕೆಗೆ ಒಪ್ಪಿಗೆ ನೀಡಿದ್ದಾರೆ ಅಂತ ಶರವಣ ಹೇಳಿದ್ರು.

     

    11.30ಕ್ಕೆ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ. 11.30ರೊಳಗಾಗಿ ಮತದಾರ ಸದಸ್ಯರು ಕೌನ್ಸಿಲ್ ಒಳಗೆ ಉಪಸ್ಥಿತರಿರಬೇಕು. ಅವರ ಹಾಜರಾತಿ ಪಡೆಯಲಾಗುತ್ತದೆ. ಆನಂತರ ಬಂದವರಿಗೆ ಮತದಾನದ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪರ, ವಿರೋಧ ಹಾಗೂ ತಟಸ್ಥರಾದವರು ಕೈ ಎತ್ತುವ ಮೂಲಕ ಮತದಾನ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗುತ್ತದೆ. ಪ್ರಾದೇಶಿಕ ಆಯುಕ್ತೆ ಜಯಂತಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇಂದೇ ಫಲಿತಾಂಶ ಹೊರಬೀಳಲಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿ ಸುತ್ತ ಪೊಲೀಸ್ ಭದ್ರತೆ ನೀಡಲಾಗಿದೆ. ಮತದಾರರು, ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಬಿಟ್ಟು ಬೇರೆಯವರಿಗೆ ನೋ ಎಂಟ್ರಿ ಹಾಗೂ ಪಾಸ್ ಇದ್ದವರಿಗೆ ಮಾತ್ರ ಬಿಬಿಎಂಪಿ ಆವರಣದಲ್ಲಿ ಪ್ರವೇಶವಿರುತ್ತದೆ.

     

     

     

  • ಚುನಾವಣಾಧಿಕಾರಿಗಳ ಈ ಒಂದು ಎಡವಟ್ಟಿನಿಂದ ಜಿ.ಪಂ ಸದಸ್ಯೆಯ ಆಯ್ಕೆ ಅಸಿಂಧು

    ಚುನಾವಣಾಧಿಕಾರಿಗಳ ಈ ಒಂದು ಎಡವಟ್ಟಿನಿಂದ ಜಿ.ಪಂ ಸದಸ್ಯೆಯ ಆಯ್ಕೆ ಅಸಿಂಧು

    – ಮರುಚುನಾವಣೆಗೆ ಕೋರ್ಟ್ ಆದೇಶ

    ಚಿಕ್ಕಬಳ್ಳಾಪುರ: ಚುನಾವಣಾಧಿಕಾರಿಗಳ ಎಡವಟ್ಟಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ನಗರಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಈಗ ಮರುಚುನಾವಣೆ ಎದುರಾಗಿದೆ.

    ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಿಲ್ಲಾ ಪಂಚಾಯ್ತಿ ಸದಸ್ಯೆ ಭವ್ಯಾ ರಂಗನಾಥ ಅವರು ಜಯಶೀಲರಾಗಿದ್ದು ಇಷ್ಟು ದಿನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಆದ್ರೆ ಇದೀಗ ಭವ್ಯ ರಂಗನಾಥ್‍ರ ಸದಸ್ಯತ್ವವನ್ನ ಅಸಿಂಧುಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ ಆದೇಶ ನೀಡಿದೆ.

    ಭವ್ಯ ರಂಗನಾಥ್‍ & ಸರಸ್ವತಮ್ಮ

    ಮರುಚುನಾವಣೆಗೆ ಕಾರಣವೇನು?: ಕಳೆದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ 128 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸರಸ್ವತಮ್ಮ ಪರಾಭವಗೊಂಡಿದ್ದರು. ನಂತರ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನಗರಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯ ಹುಣಸೇನಹಳ್ಳಿ ಮತಗಟ್ಟೆಯಲ್ಲಿ, ತಾಲೂಕು ಪಂಚಾಯ್ತಿ ಮತ ಯಂತ್ರವನ್ನು ಜಿಲ್ಲಾ ಪಂಚಾಯ್ತಿಗೆ, ಜಿಲ್ಲಾ ಪಂಚಾಯ್ತಿ ಮತ ಯಂತ್ರವನ್ನು ತಾಲೂಕು ಪಂಚಾಯ್ತಿಗೆ ಸಂಪರ್ಕ ಕಲ್ಪಿಸಿ ಅದಲು ಬದಲು ಮಾಡಿದ್ದು ಬೆಳಕಿಗೆ ಬಂದಿತ್ತು. ಇದರಿಂದಾಗಿ ತನಗೆ ನ್ಯಾಯ ಕೊಡಿಸುವಂತೆ ಪರಾಜಿತ ಅಭ್ಯರ್ಥಿ ಸರಸ್ವತಮ್ಮ ನ್ಯಾಯಾಲಯದ ಮೊರೆ ಹೋಗಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ, ನಗರಗೆರೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಭವ್ಯಾ ರಂಗನಾಥರ ಆಯ್ಕೆಯನ್ನು ಅಸಿಂಧುಗೊಳಿಸಿ ಮರುಚುನಾವಣೆ ನಡೆಸಲು ಇಂದು ಆದೇಶ ನೀಡಿದೆ.