Tag: ಚುಂಚನಕಟ್ಟೆ ಜಲಪಾತ

  • ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಚುಂಚನಕಟ್ಟೆ ಜಲಪಾತ

    ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಚುಂಚನಕಟ್ಟೆ ಜಲಪಾತ

    ಮೈಸೂರು: ಜಿಲ್ಲೆಯ ಕೆ.ಆರ್.ನಗರದ ಚುಂಚನಕಟ್ಟೆ ಜಲಪಾತವು ಶನಿವಾರ ರಾತ್ರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸಿತು.

    ಜಲಪಾತೋತ್ಸವದ ನಿಮಿತ್ತ ಶೃಂಗಾರಗೊಂಡ ಚುಂಚನಕಟ್ಟೆ ಜಲಪಾತ ಪ್ರಿಯರಿಗೆ ಕಣ್ಣುಗಳಿಗೆ ಮುದ ನೀಡಿತು. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದ ಲೇಸರ್ ಬೆಳಕನ್ನು ಜಲಪಾತದ ಮೇಲೆ ಬಿಟ್ಟು, ಪ್ರವಾಸಿಗಳನ್ನು ರಂಜಿಸಲಾಯಿತು. ಜೊತೆಗೆ ಜಲಪಾತೋತ್ಸವ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗಾಗಿ ವಿವಿಧ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

    ಎಲ್ಲಿದೆ ಚುಂಚನಕಟ್ಟೆ ಜಲಪಾತ:
    ಕಾವೇರಿ ನದಿಯು ಕೃಷ್ಣರಾಜನಗರ ತಾಲೂಕಿನಲ್ಲಿ ಚುಂಚನಕಟ್ಟೆಯಲ್ಲಿ ಸುಮಾರು 65 ಅಡಿಗಳ ಎತ್ತರದಿಂದ ಧುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸಿದೆ. ಚುಂಚನಕಟ್ಟೆ ಜಲಪಾತವು ಕೃಷ್ಣರಾಜನಗರದಿಂದ 15 ಕಿ.ಮೀ ದೂರದಲ್ಲಿದ್ದು, ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ಧವಾಗಿದೆ. ಶ್ರೀರಾಮನು ವನವಾಸಕಾಲದಲ್ಲಿ ಪತ್ನಿ ಸೀತಾದೇವಿ ಜೊತೆಗೆ ಚುಂಚನಕಟ್ಟೆ ಜಲಪಾತಕ್ಕೆ ಬಂದಿದ್ದನೆಂದು ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿನ ದೇವಸ್ಥಾನದ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ನಾಲ್ವರಲ್ಲಿ ಮೂವರನ್ನು ರಕ್ಷಿಸಿದ ಸ್ಥಳೀಯರು

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ನಾಲ್ವರಲ್ಲಿ ಮೂವರನ್ನು ರಕ್ಷಿಸಿದ ಸ್ಥಳೀಯರು

    ಮೈಸೂರು: ಜಿಲ್ಲೆಯ ಚುಂಚನಕಟ್ಟೆ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಸಿಎಫ್‍ಟಿಆರ್‍ಐ ಸೀನಿಯರ್ ಸೈಂಟಿಸ್ಟ್ ಸೋಮಶೇಖರ್ (40) ಸಾವನ್ನಪ್ಪಿದ ದುರ್ದೈವಿ. ಸೋಮಶೇಖರ್ ಇಂದು ಮಡದಿ ಪ್ರತೀಮಾ ಮತ್ತು ಮಕ್ಕಳಾದ ರಿಷಾನಿ, ವಿನಯ್ ಜೊತೆ ವೀಕೆಂಡ್ ಕಳೆಯಲು ಚುಂಚನಕಟ್ಟೆ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದರು.

    ಚುಂಚನಕಟ್ಟೆ ಜಲಪಾತದಲ್ಲಿ ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನ ಮಟ್ಟ ಹೆಚ್ಚಾಗಿದೆ. ಕೂಡಲೇ ಸ್ಥಳೀಯರು ನೀರಿನಲ್ಲಿ ಸಿಲುಕಿದ್ದ ಪ್ರತೀಮಾ ಮತ್ತು ಮಕ್ಕಳಾದ ರಿಷಾನಿ, ವಿನಯ್ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಸೋಮಶೇಖರ್ ಅವರನ್ನು ಕಾಪಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಚುಂಚನ ಕಟ್ಟೆ ಜಲಪಾತದ ಪಕ್ಕದಲ್ಲಿದ್ದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೋಗುತ್ತಿದ್ದ ನೀರಿನ ಗೇಟ್ ಬಂದ್ ಮಾಡಿದ ಕಾರಣ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಗೇಟ್ ಕ್ಲೋಸ್ ಮಾಡುವ ಮುನ್ನ ವಿದ್ಯುತ್ ಘಟಕ ಒಂದು ಗಂಟೆ ಸೈರನ್ ಬಾರಿಸುತ್ತದೆ.