Tag: ಚೀನಾ ಸೇನೆ

  • 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    – 15,000 ಅಡಿ ಎತ್ತರದಲ್ಲಿ ಹಾರುವ ಕ್ಷಮತೆ

    ನವದೆಹಲಿ: ಯುದ್ಧಭೂಮಿಯಲ್ಲಿ ಡ್ರೋನ್‌ಗಳು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದು ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಸ್ಪಷ್ಟವಾಗಿದೆ. ಈ ಬೆನ್ನಲ್ಲೇ ಚೀನಾ (China) ದೇಶವು 16 ಸಾವಿರ ಟನ್ ತೂಕ ಹೊರಬಲ್ಲ ಬೃಹತ್ ಡ್ರೋನ್ ಸಿದ್ಧಪಡಿಸಿದ್ದು, ಅದನ್ನು ಸೇನೆ ಸೇರ್ಪಡೆಗೊಳಿಸುವ ತಯಾರಿ ನಡೆಸುತ್ತಿದೆ.

    ಪಾಕಿಸ್ತಾನಕ್ಕೆ (Pakistan) ಚೀನಾ ಶಸ್ತ್ರಾಸ್ತ್ರ ನೆರವಿನ ಮಧ್ಯೆ ಭಾರತವು 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಯೋಜನೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ಡೆಡ್ಲಿ ಡ್ರೋನ್‌ಅನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಈ ಬಾಹುಬಲಿ ಡ್ರೋನ್ 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್‌ಗಳನ್ನು ಒಂದೇ ಬಾರಿಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಇದನ್ನೂ ಜೂನ್ ಅಂತ್ಯದ ವೇಳೆಗೆ ಸೇನೆಗೆ ಸೇರ್ಪಡೆಗೊಳಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಾನವ ರಹಿತ ವಿಮಾನವು ಕಣ್ಗಾವಲು, ತುರ್ತು ಹಾಗೂ ರಕ್ಷಣಾ ಕಾರ್ಯಾಚರಣೆ ಸೇರಿ ಇತರೆ ಉದ್ದೇಶಗಳಿಗಾಗಿ ಮತ್ತು ಡ್ರೋನ್‌ಗಳ ಸಮೂಹವನ್ನೇ ನಿಯೋಜಿಸಲು ನೆರವು ನೀಡಲಿದೆ. ಇದನ್ನೂ ಓದಿ: ಭಾರೀ ಮಳೆಗೆ ಅಸ್ಸಾಂ-ಮೇಘಾಲಯ ರಸ್ತೆ ಸಂಪರ್ಕ ಕಡಿತ – 2 ದಿನದಲ್ಲಿ 30 ಮಂದಿ ಸಾವು!

    ಏನಿದರ ವಿಶೇಷತೆ?
    ಇದು ಜಿಯು ಟಿಯಾನ್ (Jiu Tian) ಹೆಸರಿನ ಡ್ರೋನ್ ಆಗಿದೆ. ಅಲ್ಲದೇ 10 ಸಾವಿರ ತೂಕವಿರುವ ಈ ಡ್ರೋನ್ ಮಾನವ ರಹಿತ ಯುದ್ಧ ವಿಮಾನವಾಗಿದೆ. ಈ ಜಿಯು ಟಿಯಾನ್ ಡ್ರೋನ್ (Tian Drone) 6 ಸಾವಿರ ಕೆಜಿ ತೂಕದ 100ಕ್ಕೂ ಹೆಚ್ಚು ಸಣ್ಣ ಡ್ರೋನ್‌ಗಳನ್ನು 7,000 ಕಿ.ಮೀ.ವರೆಗೆ ಹೊತ್ತು ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಮತ್ತೊಂದು ವಿಶೇಷವೆಂದರೆ 10 ಸಾವಿರ ತೂಕವಿದ್ದರೂ ಈ ಡ್ರೋನ್ 15 ಸಾವಿರ ಅಡಿ ಎತ್ತರದಲ್ಲಿ ಹಾರುತ್ತದೆ. ಈ ಮೂಲಕ ಮಾಧ್ಯಮ ದೂರ ವ್ಯಾಪ್ತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಗುರಿಗೆ ಸಿಲುಕದೆ ಸಾಗಲಿದೆ.

    2024ರ ನವೆಂಬರ್‌ನಲ್ಲಿ ಚೀನಾದ ಜುಹಾಯಿಯಲ್ಲಿ ನಡೆದ ಅತಿದೊಡ್ಡ ಅಂತಾರಾಷ್ಟ್ರೀಯ ಏರ್‌ಶೋದಲ್ಲಿ ಈ ಮಾನವ ರಹಿತ ವಿಮಾನವನ್ನು ಪ್ರದರ್ಶಿಸಲಾಗಿತ್ತು. ಇದು ಡ್ರೋನ್‌ಗಳನ್ನು ಸಾಗಿಸುವ ಜೊತೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ಬಳಸಬಹುದು. ಅಲ್ಲದೇ ಶತ್ರು ದೇಶದ ಮೇಲೆ ಆತ್ಮಾಹುತಿ ಡ್ರೋನ್‌ಗಳನ್ನು ಹಾಕುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: PUBLiC TV Impact – ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ BMTC ಬಸ್ ಡ್ರೈವರ್ ಅಮಾನತು

    ಯುದ್ಧ ಸಂದರ್ಭದಲ್ಲಿ ಒಂದೊಂದೇ ಡ್ರೋನ್‌ಗಳ ಮೂಲಕ ದಾಳಿ ಮಾಡುವ ಬದಲು ಡ್ರೋನ್ ಸಮೂಹಗಳನ್ನೇ ಬಿಟ್ಟು ಎಐ ಮೂಲಕ ನಿಯಂತ್ರಣ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ, ಡ್ರೋನ್‌ಗಳ ಸಮೂಹಗಳ ನಿರ್ಮಾಣ ಹಾಗೂ ನಿರ್ವಹಣೆ ವೆಚ್ಚವು ಇವುಗಳನ್ನು ಹೊಡೆದುರುಳಿಸುವ ರಕ್ಷಣಾ ವ್ಯವಸ್ಥೆಯ ನಿರ್ವಹಣೆಗಿಂತ ಅಗ್ಗವಾಗಿದೆ.

  • ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ಲಡಾಕ್: ಭಾರತವನ್ನು ಚೀನಾ ಸೈನಿಕರು ಮತ್ತೆ ಕೆಣಕಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ 100 ಸೈನಿಕರು ಕುದುರೆ ಮೂಲಕ ಭಾರತದ ಉತ್ತರಾಖಂಡದ ಬಾರಹೋಟಿಗೆ ಪ್ರವೇಶಿಸಿ ಸುಮಾರು 3 ಗಂಟೆ ಕಾಲ ತಂಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲೂ ಮತಾಂತರ- ಸೈಟ್ ಆಸೆ ತೋರಿಸಿ ಕೃತ್ಯ, ಸ್ಥಳೀಯರಿಂದ ಆಕ್ರೋಶ

     Ladakh

    ಭಾರತೀಯ ರಕ್ಷಣಾ ಪಡೆಯ ಸೈನಿಕರು ಇಲ್ಲದೇ ಇರುವ ಹೊತ್ತಿನಲ್ಲಿ ಗಡಿಗೆ ಪ್ರವೇಶಿಸಿದ ಚೀನಾ ಸೇನೆಯು ಕಾಲು ಸೇತುವೆಯನ್ನು ನಾಶಪಡಿಸಿದೆ. ಬಳಿಕ ಅದೇ ವೇಳೆ ಐಟಿಬಿಪಿ ಪಡೆ ಬಂದಾಗ, ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಈ ವಿಚಾರವಾಗಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಈ ರೀತಿ ಘಟನೆ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಪೂರ್ವ ಲಡಾಕ್‍ನಲ್ಲಿ ಕಿರಿಕ್ ಮಾಡಿದ್ದ ಚೀನಿ ಸೈನಿಕರಿಗೆ ಭಾರತ ಸರಿಯಾಗಿ ತಿರುಗೇಟು ನೀಡಿತ್ತು. ಈ ಘಟನೆಯ ಬಳಿಕ ಎರಡು ದೇಶಗಳು ಗಡಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ದೇಶಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಈ ವಿಚಾರ ತಣ್ಣಗಾಗುವ ಸಮಯದಲ್ಲೇ ಮತ್ತೆ ಚೀನಾ ಕಿರಿಕ್ ತೆಗೆದಿದೆ.