Tag: ಚೀನಾ ವೆಬ್ ಸಿರೀಸ್

  • ಕೊರೊನಾ ಚೀನಾ ವೈರಸ್? – 2018ರ ಸ್ಫೋಟಕ ವಿಡಿಯೋ ರಿವೀಲ್ ಮಾಡಿದ ಬಜ್ಜಿ

    ಕೊರೊನಾ ಚೀನಾ ವೈರಸ್? – 2018ರ ಸ್ಫೋಟಕ ವಿಡಿಯೋ ರಿವೀಲ್ ಮಾಡಿದ ಬಜ್ಜಿ

    ನವದೆಹಲಿ: ಈಗ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದೇ ಕರೆಯಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು 2018ರ ಸ್ಫೋಟಕ ವಿಡಿಯೋವೊಂದನ್ನು ರಿವೀಲ್ ಮಾಡಿದ್ದಾರೆ.

    ಕೊರೊನಾ ವೈರಸ್ ಈಗ ಇಡೀ ವಿಶ್ವವನ್ನೇ ಅಲುಗಾಡಿಸುತ್ತದೆ. ಮೊದಲಿಗೆ ಈ ವೈರಸ್ 2019ರ ಡಿಸೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಈಗ ಜಗತ್ತಿನ ತುಂಬಾ ಹರಡಿ ಎಷ್ಟೋ ದೇಶಗಳು ಲಾಕ್‍ಡೌನ್ ಆಗಿದೆ. ಈ ಸಮಯದಲ್ಲಿ ಈ ವೈರಸ್ ಸೃಷ್ಟಿ ಆಗಿದ್ದು ಹೇಗೆ? ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರವೇ? ಎಂಬ ಪ್ರಶ್ನೆಗಳು ಮೂಡಿವೆ.

    ಇದಕ್ಕೆ ಸಂಬಂಧಪಟ್ಟಂತೆ 2013ರಲ್ಲೇ ಮಾರ್ಕೋ ಎಂಬಾತ ಕೊರೊನಾ ವೈರಸ್ ಬರುತ್ತಿದೆ ಎಂದು ಟ್ವೀಟ್ ಮಾಡಿದ್ದು, ಬಹಳ ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಚೀನಾ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಬೇಡಿ ಎಂದು ಅಭಿಯಾನವನ್ನು ಮಾಡುತ್ತಿದೆ. ಆದರೆ ಹರ್ಭಜನ್ ಸಿಂಗ್ ಅವರು, ಈಗ ಒಂದು ವೆಬ್ ಸೀರಿಸ್ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದು, ಇದಕ್ಕೆ ಪುಷ್ಟಿಕೊಡುವಂತಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಹರ್ಭಜನ್ ಅವರು, ಇದು ಹುಚ್ಚುತನ ಎನಿಸುತ್ತದೆ. ನೀವು ಮನೆಯಲ್ಲೇ ಇದ್ದರೆ ಈಗ ನೆಟ್‍ಫ್ಲಿಕ್ಸ್‍ಗೆ ಹೋಗಿ. ಅಲ್ಲಿ ‘ಮೈ ಸೀಕ್ರೆಟ್ ಟೆರಿಯಸ್’ ಎಂದು ಟೈಪ್ ಮಾಡಿ. ಅದರಲ್ಲಿ ಸೀಸನ್ ಒಂದರ 10ನೇ ಎಪಿಸೋಡಿನ 53 ನೇ ನಿಮಿಷಕ್ಕೆ ಹೋಗಿ. ಆ ವಿಡಿಯೋವನ್ನು ನೋಡಿ. ಈ ಸಿರೀಸ್ 2018 ರಲ್ಲಿ ಶೂಟಿಂಗ್ ಮಾಡಿರುವುದು. ಈಗ 2020. ಇದನ್ನು ನೋಡಿದರೆ ಪ್ಲಾನ್ ಮಾಡಿಯೇ ಎಲ್ಲವನ್ನು ಮಾಡಲಾಗಿದೆ ಎಂದು ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.

    ಹರ್ಭಜನ್ ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ 45 ಸೆಕೆಂಡಿನ ಒಂದು ವೈಬ್ ಸಿರೀಸ್ ದೃಶ್ಯವಿದ್ದು, ಇದರಲ್ಲಿ 2018ರಲ್ಲೇ ಕೊರೊನಾ ವೈರಸ್ ಬಗ್ಗೆ ಮಾತನಾಡಲಾಗಿದೆ. ಇದರಲ್ಲಿ ಕೊರೊನಾ ವೈರಸ್ ಭೀಕರತೆಯ ಬಗ್ಗೆ, ಮತ್ತು ಅದು ಒಬ್ಬ ಮನುಷ್ಯನಿಗೆ ಬಂದರೆ ಹೇಗೆ ತೊಂದರೆ ಕೊಡುತ್ತದೆ ಎಂಬುದರ ಬಗ್ಗೆ ಹೇಳಲಾಗಿದೆ. ಜೊತೆಗೆ ಕೊರೊನಾ ವೈರಸ್ ಗೆ ಯಾವುದೇ ರೀತಿಯ ಮದ್ದು ಇಲ್ಲ ಎಂದು ತಿಳಿಸಲಾಗಿದೆ.

    ಹರ್ಭಜನನ್ ಸಿಂಗ್ ಅವರು ಈ ವಿಡಿಯೋ ನೋಡಿದ ನಂತರ ಕೊರೊನಾ ವೈರಸ್ ಬಗ್ಗೆ ಚೀನಾಗೆ ಮುಂಚೆಯೇ ಗೊತ್ತಿತ್ತು ಎಂಬುದು ಸ್ಪಷ್ಟವಾಗಿದೆ. ಆದರೆ ಇದನ್ನು ಒಪ್ಪಲು ತಯಾರಿಲ್ಲದ ಚೀನಾ ಕೊರೊನಾವನ್ನು ಚೀನಾ ವೈರಸ್ ಎಂದು ಕರೆಯಬೇಡಿ. ಹೀಗೇ ಒಂದು ವೈರಸ್ ಅನ್ನು ಒಂದು ದೇಶಕ್ಕೆ ಲೇಬಲ್ ಮಾಡಿದರೆ ಆ ದೇಶದ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ವಿಶ್ವಮಟ್ಟದಲ್ಲಿ ವಾದ ಮಾಡುತ್ತಿದೆ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.

    ಈ ವಿಚಾರವಾಗಿಯೇ ಭಾರತ ವಿದೇಶಾಂಗ ಸಚಿವರ ಜೈಶಂಕರ್ ಜೊತೆ ಮಂಗಳವಾರ ಸಂಜೆ ಮಾತನಾಡಿದ್ದ ಚೀನಾ ವಿದೇಶಾಂಗ ಸಚಿವ, ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ಕೆಲ ಅಮೆರಿಕದವರು ಉದ್ದೇಶ ಪೂರ್ವಕವಾಗಿಯೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದರು.