Tag: ಚೀನಾ ವಿಮಾನ

  • ಮಹಾ ಕುಂಭಮೇಳಕ್ಕೆ ವೈರಸ್‌ ಆತಂಕ – 100 ಬೆಡ್‌ಗಳ ಆಸ್ಪತ್ರೆ, ವೈದ್ಯರ ತಂಡ ನಿಯೋಜನೆ

    ಮಹಾ ಕುಂಭಮೇಳಕ್ಕೆ ವೈರಸ್‌ ಆತಂಕ – 100 ಬೆಡ್‌ಗಳ ಆಸ್ಪತ್ರೆ, ವೈದ್ಯರ ತಂಡ ನಿಯೋಜನೆ

    – ಚೀನಾದಿಂದ ಬರುವ ವಿಮಾನಗಳನ್ನು ನಿಷೇಧಿಸಿ; ಕೇಂದ್ರಕ್ಕೆ ಮನವಿ

    ನವದೆಹಲಿ: ಚೀನಾ ಬಳಿಕ ಭಾರತದಲ್ಲೂ ಹೆಚ್‌ಎಂಪಿವಿ (HMPV) ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

    ಅದರಲ್ಲೂ, ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela) ಆರಂಭವಾಗ್ತಿರುವ ಹೊತ್ತಲ್ಲೇ ದೇಶದಲ್ಲಿ ಹೆಚ್‌ಎಂಪಿವಿ ಸೋಂಕು ಪ್ರಕರಣ ಬೆಳಕಿಗೆ ಬಂದಿರೋದು ಉತ್ತರಪ್ರದೇಶ ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಇದನ್ನೂ ಓದಿ: HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    ಚೀನಾದಲ್ಲಿ (China) ಹೆಚ್‌ಎಂಪಿವಿ ಪ್ರಕರಣ ಕಳೆದ 10 ದಿನಗಳಲ್ಲಿ 600 ಪಟ್ಟು ಹೆಚ್ಚಾಗಿದೆ. ಹೀಗಾಗಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಸೋಂಕು ಹಬ್ಬಬಹುದು ಎಂಬ ಆತಂಕವನ್ನು ಸಾಧುಗಳು ವ್ಯಕ್ತಪಡಿಸಿದ್ದಾರೆ. ಚೀನಾದಿಂದ ಬರುವ ವಿಮಾನಗಳನ್ನ ತಕ್ಷಣದಿಂದಲೇ ನಿಷೇಧಿಸಿ ಎಂದು ಕೇಂದ್ರವನ್ನು ಅಖಿಲ ಭಾರತ ಅಖಾರ ಪರಿಷತ್ ಆಗ್ರಹಿಸಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

    ಇನ್ನು, ಮಹಾಕುಂಭಮೇಳದಲ್ಲಿ ಈಗಾಗಲೇ 100 ಬೆಡ್‌ಗಳ ಆಸ್ಪತ್ರೆಯನ್ನು ರೆಡಿ ಮಾಡಲಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರ ಹೆಚ್‌ಎಂಪಿವಿ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ರಾಜ್ಯದ ಜನತೆಗೆ ತಿಳಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಈಗಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಬಿಜೆಪಿ ಸತ್ಯಶೋಧನಾ ತಂಡದಿಂದ ಪರಿಶೀಲನೆ

  • ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ

    ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ

    ಬೀಜಿಂಗ್: 133 ಜನರಿದ್ದ ಚೀನಾದ ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಸೋಮವಾರ ಪತನಗೊಂಡಿದೆ. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.

    ಚೈನಾ ಈಸ್ಟರ್ನ್ ಏರ್‌ಲೈನ್ಸ್ ಬೋಯಿಂಗ್-737 ವಿಮಾನವು ಟೆಂಗ್ ಕೌಂಟಿಯ ವುಝೌ ನಗರದ ಅಪಘಾತಕ್ಕೀಡಾಗಿದೆ. ಇದ್ದಕ್ಕಿದ್ದಂತೆ ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಪರ್ವತದ ಪ್ರದೇಶವೆಲ್ಲಾ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಸಂಖ್ಯೆ ಮಾಹಿತಿ ನಿಖರವಾಗಿ ಲಭಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

    ಶಾಂಘೈ ಮೂಲದ ಚೈನಾ ಈಸ್ಟರ್ನ್, ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನ ಟ್ರ‍್ಯಾಕಿಂಗ್ ವೆಬ್‌ಸೈಟ್ ‘ಫ್ಲೈಟ್ ರೇಡರ್24’ ಮಾಹಿತಿ ಪ್ರಕಾರ, ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ MU5735 ವಿಮಾನ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ಆಗಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ವೇಗವನ್ನು ಕಳೆದುಕೊಂಡು ಪತನಗೊಂಡಿದೆ ಎಂದು ತಿಳಿಸಿದೆ.

    ನಿಯಂತ್ರಣ ಕಳೆದುಕೊಂಡ ವಿಮಾನವು ಸುಮಾರು 3,225 ಅಡಿ ಆಳದ ಪರ್ವತಾರಣ್ಯ ಪ್ರಪಾತಕ್ಕೆ ಕೇವಲ 3 ನಿಮಿಷದಲ್ಲಿ ಅಪ್ಪಳಿಸಿದೆ. ಅಪಘಾತದ ನಿಖರವಾದ ಸ್ಥಳವು ಟೆಂಗ್ ಕೌಂಟಿಯ ಲ್ಯಾಂಗ್ನಾನ್ ಟೌನ್‌ಶಿಪ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಈ ವಿಮಾನವನ್ನು ಜೂನ್, 2015 ರಲ್ಲಿ ಬೋಯಿಂಗ್‌ನಿಂದ ಚೀನಾ ಈಸ್ಟರ್ನ್ಗೆ ಹಸ್ತಾಂತರಿಸಲಾಯಿತು. ಆರು ವರ್ಷಗಳಿಂದ ಈ ವಿಮಾನ ಹಾರಾಟ ನಡೆಸುತ್ತಿತ್ತು.

    ಈ ಹಿಂದೆಯೂ ಚೀನಾದ ವಿಮಾನ ಅಪಘಾತಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೃತಪಟ್ಟಿದ್ದರು. 2010ರಲ್ಲಿ ಹೆನಾನ್ ಏರ್‌ಲೈನ್ಸ್ ವಿಮಾನವು ಈಶಾನ್ಯ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ 92 ಜನರಲ್ಲಿ ಕನಿಷ್ಠ 42 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಉಬರ್ ಚಾಲಕರಾದ ಅಫ್ಘಾನ್ ಮಾಜಿ ಹಣಕಾಸು ಸಚಿವ

    1994 ರಲ್ಲಿ ಚೀನಾ ನಾರ್ತ್ವೆಸ್ಟ್ ಏರ್‌ಲೈನ್ಸ್ ಅಪಘಾತಕ್ಕೀಡಾದ ಅದರಲ್ಲಿ ಪ್ರಯಾಣಿಸುತ್ತಿದ್ದ 160 ಜನರನ್ನು ಮೃತಪಟ್ಟಿದ್ದರು.