Tag: ಚೀನಾ ಮಿಲಿಟರಿ

  • ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು

    ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು

    ತೈಪೆ: ಕೆಲ ದಿನಗಳಿಂದ ಶಾಂತವಾಗಿದ್ದ ಅಮೆರಿಕ-ಚೀನಾ ನಡುವಿನ ತೈವಾನ್ ಸಂಘರ್ಷ (Taiwan Clash) ಮತ್ತೆ ಸದ್ದು ಮಾಡ್ತಿದೆ. ಅಮೆರಿಕ (US) ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ತೈವಾನ್ ಭೇಟಿಯ ನಂತರ ಚೀನಾ ಮತ್ತೊಮ್ಮೆ ತೈವಾನ್ ಗಡಿಯಲ್ಲಿ 71 ಯುದ್ಧ ವಿಮಾನಗಳಿಂದ (Fighter Jet) ತಾಲೀಮು ನಡೆಸಿದೆ.

    ಇಂದು ಮುಂಜಾನೆ 6 ಗಂಟೆ ವೇಳೆ ಚೀನಾದ 71 ಯುದ್ಧ ವಿಮಾನಗಳು ಹಾಗೂ 7 ನೌಕಾ ಹಡಗುಗಳು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಲೀಮು ನಡೆಸಿವೆ. ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಅತೀ ದೊಡ್ಡದಾದ ಮಿಲಿಟರಿ (Chinese Military Aircraft) ಶಕ್ತಿ ಪ್ರದರ್ಶನವಾಗಿದೆ. ಇದನ್ನೂ ಓದಿ: ತೈವಾನ್‌ನಲ್ಲಿ ಅಮೆರಿಕ ಸ್ಪೀಕರ್ – ಚೀನಾ ಕೆಂಡಾಮಂಡಲ

    ಈ ಕುರಿತು ಪ್ರತಿಕ್ರಿಯಿಸಿರುವ ತೈವಾನ್ ರಕ್ಷಣಾ ಸಚಿವಾಲಯವು (Taiwan’s Ministry Of Defense), ಇದು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಮಿಲಿಟರಿ ಬೆದರಿಕೆ ಎಂದು ಹೇಳಿದೆ. ಚೀನಾದ ಅತ್ಯಾಧುನಿಕ 6 ಎಸ್‌ಯು-30 ಯುದ್ಧ ವಿಮಾನಗಳು ಸೇರಿ ಒಟ್ಟು 60 ಫೈಟರ್ ಜೆಟ್‌ಗಳು ತಾಲೀಮಿನಲ್ಲಿದ್ದವು. ಈ ಪೈಕಿ 47 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದ್ದು, ನೈಋತ್ಯ ವಾಯು ರಕ್ಷಣಾ ಗುರುತಿನ ವಲಯ ಪ್ರವೇಶಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಅಮೆರಿಕ ಸ್ಪೀಕರ್‌ ಭೇಟಿ ಬೆನ್ನಲ್ಲೇ ತೈವಾನ್‌ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ

    ಅಷ್ಟೇ ಅಲ್ಲದೇ ಚೀನಾ ತನ್ನ 7 ನೌಕಾ ಹಡಗುಗಳನ್ನು ದ್ವೀಪದ ಬಳಿ ಕಳುಹಿಸಿದೆ. ಇದಕ್ಕೆಲ್ಲ ತೈವಾನ್ ಹೆದರಲ್ಲ. ಚೀನಾದ ಮಿಲಿಟರಿ ಬೆದರಿಕೆಯನ್ನು ತಡೆಯುವ ಗುರಿ ಸಾಮರ್ಥ್ಯ ಹೊಂದಿದೆ. ಸಶಸ್ತ್ರ ಪಡೆಗಳು ಈಗಾಗಲೇ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿವೆ. ಚೀನಾಕ್ಕೆ ತಿರುಗೇಟು ನೀಡಲು ನಾಗರಿಕ ವಾಯುಗಸ್ತು ವಿಮಾನ (CAP Plane), ನೌಕಾಪಡೆಯ ಹಡಗುಗಳು ಹಾಗೂ ಭೂ ಆಧಾರಿತ ಕ್ಷಪಣಿ ವ್ಯವಸ್ಥೆ ಮಾಡಿಕೊಂಡಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

    ತೈವಾನ್ (Taiwan) ಹಾಗೂ ಅಮೆರಿಕ ನಡುವಿನ ಅನೇಕ ಒಪ್ಪಂದಗಳಿಂದಾಗಿ ಚೀನಾ ಕೆಂಡಾಮಂಡಲವಾಗಿದ್ದು, ತೈವಾನ್ ಸುತ್ತಲೂ ತಾಲೀಮು ನಡೆಸಿದೆ. ಕಳೆದ ವಾರ 200 ಕೋಟಿ ಡಾಲರ್ ಶಸ್ತ್ರಾಸ್ತ್ರ ನಿಧಿ ಒಳಗೊಂಡಂತೆ, 1.7 ಲಕ್ಷಕೋಟಿ ಡಾಲರ್ ಸಹಾಯ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. 10 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರವನ್ನು ತೈವಾನ್‌ಗೆ ಮಾರಾಟ ಮಾಡಲು ಮುಂದಾದ ಅಮೆರಿಕ ನಿರ್ಧಾರಕ್ಕೆ ಚೀನಾ ರಕ್ಷಣಾ ಸಚಿವಾಲಯ ಸಿಟ್ಟು ಹೊರಹಾಕಿ ನಮ್ಮ ತೈವಾನ್ ಆಂತರಿಕ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.

    ಈ ಹಿಂದೆ ಚೀನಾ ರಷ್ಯಾ ನಿರ್ಮಿತ ಸುಖೋಯ್ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿಯಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ತೈವಾನ್ ಹೊಡೆದುರುಳಿಸಿತ್ತು. ಇದಾದ ನಂತರ ಆಗಸ್ಟ್ನಲ್ಲಿ ಅಮೆರಿಕದ ಸ್ಪೀಕರ್‌ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದರು. ಇದರಿಂದ ಕೆಂಡಾಮಂಡಲವಾದ ಚೀನಾ ಪೆಲೋಸಿ ತೈವಾನ್ ನೆಲಕ್ಕೆ ಕಾಲಿಟ್ಟರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ. ತಮ್ಮ ಸೇನೆ ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ಸಹ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಚೀನಾ 4 ಯುದ್ಧ ನೌಕೆಗಳನ್ನು ತೈಪೆ ಬಳಿಯ ಸಮುದ್ರದಲ್ಲಿ ಸಜ್ಜಾಗಿ ಇರಿಸಿತ್ತು. ಇದರಲ್ಲಿ ಯುದ್ಧ ವಿಮಾನಗಳನ್ನು ಕೊಂಡೊಯ್ಯುವ ನೌಕೆಯೂ ಇತ್ತು. ಆದರೆ ಅಮೆರಿಕ ಇದಕ್ಕೆ ಹೆದರದೇ ಬದಲಾಗಿ ಏನಾಗುತ್ತದೋ ಆಗಲಿ ಎಂದು ನ್ಯಾನ್ಸಿ ಪೆಲೋಸಿಯನ್ನು ಮಲೇಶಿಯಾದಿಂದ ತೈವಾನಿಗೆ ಕಳುಹಿಸಿಕೊಟ್ಟಿತ್ತು.

    Live Tv
    [brid partner=56869869 player=32851 video=960834 autoplay=true]

  • ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ಟೊಕಿಯೊ: ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ.

    ಈ ಬಗ್ಗೆ ಜಪಾನಿನ ರಕ್ಷಣಾ ಸಚಿವ ನೊಬುವೊ ಕಿಶಿ ಮಾಹಿತಿ ನೀಡಿದ್ದು, ಚೀನಾ ಉಡಾವಣೆ ಮಾಡಿದ್ದ 9 ಕ್ಷಿಪಣಿಗಳಲ್ಲಿ 5 ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಬಂದಿದೆ. ಇದರಿಂದಾಗಿ ನಮ್ಮ ದೇಶದ ಭದ್ರತೆ ಹಾಗೂ ಜನರ ಜನರ ಸುರಕ್ಷತೆಗೆ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಜಪಾನ್‍ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾವು ತೈವಾನ್‍ಗೆ ಹತ್ತಿರದಲ್ಲಿವೆ. ಈ ಹಿನ್ನೆಲೆಯಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‍ನ ವಿಶೇಷ ಆರ್ಥಿಕ ವಲಯದ ಮೇಲೆ ಬಿದ್ದಿರುವುದು ಇದೇ ಮೊದಲು ಎಂದು ಹೇಳಿದರು.

    ಚೀನಾ ಪ್ರಜಾಸತ್ತಾತ್ಮಕ ತೈವಾನ್ ಅನ್ನು ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಅಗತ್ಯವಿದ್ದಲ್ಲಿ ಬಲವಂತವಾಗಿ ಅದನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ಅಷ್ಟೇ ಅಲ್ಲದೇ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾವು ಇಂದು ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    Live Tv
    [brid partner=56869869 player=32851 video=960834 autoplay=true]

  • ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾ ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.

    ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ತೈವಾನ್‍ನ ಸುತ್ತಮುತ್ತಲಿನ 6 ಪ್ರದೇಶಗಳಲ್ಲಿ ಸೇನಾ ಡ್ರಿಲ್ ಮಾಡಿದ್ದು, ಭಾನುವಾರದವರೆಗೂ ಮುಂದುವರಿಯುತ್ತದೆ ಎಂದು ಚೀನಾದದ ಗ್ಲೋಬಲ್ ಟೈಮ್ಸ್ ಹೇಳಿದೆ.

    ಚೀನಾದ ಈಸ್ಟನ್ ಥಿಯೇಟರ್ ಕಮಾಂಡ್‍ನ ವಕ್ತಾರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಕೆಟ್ ಪಡೆಗಳು ಅನೇಕ ಸ್ಥಳಗಳಿಂದ ಹಲವಾರು ಕ್ಷಿಪಣಿಗಳನ್ನು ತೈವಾನ್‍ನ ಪೂರ್ವ ಕರಾವಳಿಯ ನೀರಿನಲ್ಲಿ ಉಡಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

    ತೈವಾನ್‍ನ ರಕ್ಷಣಾ ಸಚಿವಾಲಯವು ಕ್ಷಿಪಣಿಗಳು ಉಡಾವಣೆಗೊಂಡಿರುವುದನ್ನು ದೃಢಪಡಿಸಿದೆ. ಅವುಗಳನ್ನು ಡಾಂಗ್‍ಫೆಂಗ್-ಕ್ಲಾಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಎಂದು ಗುರುತಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:56 ಗಂಟೆಗೆ ಆ ಕ್ಷಿಪಣಿಯನ್ನು ತೈವಾನ್‍ನ ನೀರಿನಲ್ಲಿ ಹಾರಿಸಲಾಗಿದೆ ಎಂದು ಹೇಳಿದೆ.

    ಈಗಾಗಲೇ ಚೀನಾದ 27 ಯುದ್ಧ ವಿಮಾನಗಳು ತೈವಾನ್‍ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿರುವ ಬಗ್ಗೆ ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿತ್ತು.  ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ಅಷ್ಟೇ ಅಲ್ಲದೇ ಚೀನಾ ಬೆದರಿಕೆಗೆ ತೈವಾನ್ ಅಧ್ಯಕ್ಷೆ ಸಾಯ್ ಯಿಂಗ್ ವೆನ್ ತಿರುಗೇಟು ಕೊಟ್ಟಿದ್ದರು. ದೇಶದ 2.3 ಕೋಟಿ ಜನರು ಹೇಡಿಗಳಲ್ಲ. ಚೀನಾದ ಮಿಲಿಟರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದಿದ್ದರು.  ಇದನ್ನೂ ಓದಿ: ಅಮೆರಿಕ ಸ್ಪೀಕರ್‌ ಭೇಟಿ ಬೆನ್ನಲ್ಲೇ ತೈವಾನ್‌ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ

    Live Tv
    [brid partner=56869869 player=32851 video=960834 autoplay=true]

  • ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಹಿನ್ನೆಲೆ ಕೆರಳಿರುವ ಚೀನಾ ತನ್ನ ಸೇನೆಗೆ ಯುದ್ಧಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

    ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತೈವಾನ್ ಸುತ್ತ ಸಮುದ್ರದಲ್ಲಿ ಸುತ್ತುವರಿದಿದ್ದು, ಮಿಲಿಟರಿ ತರಬೇತಿ ನಡೆಸುತ್ತಿದೆ. ತೈವಾನ್‌ನ ಮಿಲಿಟರಿ ದ್ವೀಪದ ಸುತ್ತಮುತ್ತಲಿನ ಸಮುದ್ರದಲ್ಲಿ ನಡೆಯುತ್ತಿರುವ ಚೀನೀ ತರಬೇತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ.

    ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ಚೀನಾದ 27 ಯುದ್ಧ ವಿಮಾನಗಳು ತೈವಾನ್‌ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿವೆ ಎಂದು ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಚೀನಾ ಬೆದರಿಕೆಗೆ ತೈವಾನ್ ಅಧ್ಯಕ್ಷೆ ಸಾಯ್ ಯಿಂಗ್ ವೆನ್ ತಿರುಗೇಟು ಕೊಟ್ಟಿದ್ದಾರೆ. ದೇಶದ 2.3 ಕೋಟಿ ಜನರು ಹೇಡಿಗಳಲ್ಲ. ಚೀನಾದ ಮಿಲಿಟರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ತಿರುಗಿಬಿದ್ದಿದ್ದಾರೆ.

    ಪೆಲೋಸಿ 24 ಗಂಟೆಗಳಿಗೂ ಕಡಿಮೆ ಅವಧಿಯ ತೈವಾನ್ ಭೇಟಿಯ ಬಳಿಕ ಬುಧವಾರವೇ ದಕ್ಷಿಣ ಕೊರಿಯಾಗೆ ವಿಶೇಷ ವಿಮಾನದಲ್ಲಿ ನಿರ್ಗಮಿಸಿದ್ದಾರೆ. ಈ ನಡುವೆ ಚೀನಾ ತರಬೇತಿಯನ್ನು ಮುಂದುವರೆಸಿದ್ದರೂ ಅದು ಯುದ್ಧ ಮಾಡಲು ಮುಂದಾಗುವುದಿಲ್ಲ ಎಂದು ತೈಪೆಯ ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

    Live Tv
    [brid partner=56869869 player=32851 video=960834 autoplay=true]