Tag: ಚೀನಾ ಪ್ರಜೆಗಳು

  • ಭಾರತ ತೊರೆಯುವಂತೆ 81 ಚೀನಾ ಪ್ರಜೆಗಳಿಗೆ ನೋಟಿಸ್‌: ಕೇಂದ್ರ ಸಚಿವ ನಿತ್ಯಾನಂದ ರಾಯ್‌

    ಭಾರತ ತೊರೆಯುವಂತೆ 81 ಚೀನಾ ಪ್ರಜೆಗಳಿಗೆ ನೋಟಿಸ್‌: ಕೇಂದ್ರ ಸಚಿವ ನಿತ್ಯಾನಂದ ರಾಯ್‌

    ನವದೆಹಲಿ: ಭಾರತ ತೊರೆಯುವಂತೆ 81 ಚೀನಾ ಪ್ರಜೆಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಸಚಿವ ರಾಯ್‌ ಈ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬ: ಸಿಜೆಐ

    2019ರಿಂದ 2021ರ ಅವಧಿಯಲ್ಲಿ 81 ಚೀನಾ ಪ್ರಜೆಗಳಿಗೆ ಭಾರತ ಬಿಟ್ಟು ಹೊರಡುವಂತೆ ನೋಟಿಸ್‌ ನೀಡಲಾಗಿದೆ. ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಮತ್ತು ಇತರ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಆರೋಪವಿರುವ 726 ಇತರರನ್ನು ಪ್ರತಿಕೂಲ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ರಾಯ್‌ ಮಾಹಿತಿ ನೀಡಿದ್ದಾರೆ.

    117 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ನಿತ್ಯಾನಂದ ರಾಯ್‌ ಹೇಳಿದ್ದಾರೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ

    ಸಂಸತ್ತಿನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನವನ್ನು ಪ್ರತಿಪಕ್ಷಗಳು ನಿರಂತರವಾಗಿ ಅಡ್ಡಿಪಡಿಸುತ್ತಿವೆ. ಇದರಿಂದಾಗಿ ಪಟ್ಟಿ ಮಾಡಲಾದ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಚೀನಾದ ಪ್ರಜೆಗಳು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

    ಮಂಗಳವಾರ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್‌ಟಿಟ್ಯೂಟ್ ಬಳಿ ನಡೆದ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಮಹಿಳಾ ಆತ್ಮಾಹುತಿ ಬಾಂಬರ್ ನಡೆಸಿರುವುದಾಗಿ ತಿಳಿದು ಬಂದಿದೆ.

    ವರದಿಗಳ ಪ್ರಕಾರ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮುಗಿಸಿ ಹಿಂದಿರುಗುತ್ತಿದ್ದ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ವ್ಯಾನ್‌ನಲ್ಲಿ ಮೂವರು ಚೀನಾದ ಹಾಗೂ ಇತರ ಉಪನ್ಯಾಸಕರು ಇದ್ದರು. ಒಟ್ಟು 8 ಜನರಿದ್ದ ವ್ಯಾನ್‌ನಲ್ಲಿ ರಿಮೋಟ್ ಕಂಟ್ರೋಲ್ ಮುಖಾಂತರ ಸ್ಫೋಟವನ್ನು ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ

     

    ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮಜೀದ್ ಬ್ರಿಗೇಡ್ ಸಂಘಟನೆ ಈ ಕೃತ್ಯವನ್ನು ತಾನು ನಡೆಸಿದೆ ಎಂದು ಹೇಳಿದೆ. ಮಹಿಳಾ ಬಾಂಬರ್ ಶಾರಿ ಬಲೋಚ್ ಈ ದಾಳಿ ನಡೆಸಿದ್ದಾಳೆ.

    ಘಟನೆ ಹೇಗಾಯ್ತು?
    ವಿಶ್ವವಿದ್ಯಾಲಯದ ಬಳಿಯಲ್ಲಿರುವ ರಸ್ತೆ ಬದಿ ನಿಂತಿದ್ದ ಮಹಿಳಾ ಬಾಂಬರ್ ಚೀನಾ ಉಪನ್ಯಾಸಕರನ್ನು ಗುರಿಯಾಗಿಸಿಕೊಂಡಿದ್ದಳು. ಉಪನ್ಯಾಸಕರಿದ್ದ ವ್ಯಾನ್ ಮಹಿಳೆ ಬಳಿ ಬರುತ್ತಿದ್ದಂತೆ ಆಕೆ ತನ್ನ ಕೈಯಲ್ಲಿದ್ದ ರಿಮೋಟ್ ಕಂಟ್ರೋಲ್ ಅನ್ನು ಒತ್ತಿ, ಸ್ಫೋಟವನ್ನು ನಡೆಸಿದ್ದಾಳೆ. ಈ ವೇಳೆ ಭಾರೀ ಸ್ಫೋಟ ಸಂಭವಿಸಿ, ಬಾಂಬರ್ ಸೇರಿದಂತೆ ಮೂವರು ಚೀನಾದ ಉಪನ್ಯಾಸಕರು ಸಾವನ್ನಪ್ಪಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಇಬ್ಬರು ಚೀನಾ ಪ್ರಜೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಚೀನಾದ ಎಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಐಇಡಿ ದಾಳಿ ನಡೆಸಿತ್ತು. ಘಟನೆಯಲ್ಲಿ 9 ಚೀನಾದ ಪ್ರಜೆಗಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ: ಅಮೆರಿಕ