Tag: ಚಿಲ್ಲರೆ

  • 5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ

    5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ

    ಕೋಲಾರ: ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾರಾರಿ ನಡೆದಿದೆ.

    ಜಿಲ್ಲೆಯ ಮುಳುಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಚಿಲ್ಲರೆ ಹಣಕ್ಕಾಗಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮತ್ತು ಪ್ರಯಾಣಿಕ ಹೊಡೆದಾಡಿಕೊಂಡಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದರು. ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ. ಈ ವೇಳೆ ನಿರ್ವಾಹಕ ಐದು ರೂಪಾಯಿ ಚಿಲ್ಲರೆ ಇಲ್ಲ ಎಂದ ಹೇಳಿದ್ದಾರೆ.

    ಐದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಮಾತ್ರವಲ್ಲದೆ, ನಡು ರಸ್ತೆಯಲ್ಲಿ ಇಬ್ಬರೂ ಹೊಡೆದಾಡಿದ್ದಾರೆ. ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    ತುಮಕೂರು: ಒಂದು ರೂಪಾಯಿ ಚಿಲ್ಲರೆಗಾಗಿ ಬಸ್ ಕಂಡಕ್ಟರ್ ಪ್ರಯಾಣಿಕನ ತಲೆ ಒಡೆದಿದ್ದಾನೆ. ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ಈ ಘಟನೆ ನಡೆದಿದೆ.

    ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಕಂಬಯ್ಯ ಎಂಬವರಿಗೆ ಬಸ್ ಕಂಡಕ್ಟರ್ ಟಿಕೆಟ್ ಕೊಡುವ ಮೆಷಿನ್‍ಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಪ್ರಯಾಣಿಕ ತಲೆ ಒಡೆದು ರಕ್ತ ಬಂದಿದೆ.

    ಪಾವಗಡದಿಂದ ಬರುತ್ತಿದ್ದ ಬಸ್‍ಗೆ ನಾಗೇನಹಳ್ಳಿ ನಿಲ್ದಾಣದಲ್ಲಿ ಹತ್ತಿದ್ದ ಕಂಬಯ್ಯ ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದಾರೆ. ಈ ವೇಳೆ ಒಂದು ರೂಪಾಯಿ ಚಿಲ್ಲರೆ ಕಡಿಮೆ ಇದೇ ಎಂಬ ವಿಚಾರಕ್ಕೆ ಕಂಡಕ್ಟರ್ ಮತ್ತು ಕಂಬ್ಬಯ್ಯನ ನಡುವೆ ಜಗಳವಾಗಿದೆ. ಈ ಕಾರಣಕ್ಕೆ ಕೋಪಗೊಂಡ ಕಂಡಕ್ಟರ್ ಟಿಕೆಟ್ ಮೆಷಿನ್ ನಿಂದ ಕಂಬಯ್ಯನ ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಕಂಬ್ಬಯ್ಯನ ತಲೆ ಒಡೆದು ಹೋಗಿ ಬಟ್ಟೆಯೆಲ್ಲಾ ರಕ್ತಸಿಕ್ತವಾಗಿದೆ.

    ಒಂದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಸ್ ಕಂಡಕ್ಟರ್ ಮೇಲೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಕಂಬ್ಬಯ್ಯನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

  • ಟೆನ್ಷನ್‍ನಲ್ಲಿದ್ದಾಗ 2 ಸಾವಿರ ರೂ.ಗೆ ಚಿಲ್ಲರೆ ಕೇಳಿದ್ದಕ್ಕೆ ಹಲ್ಲೆ – ವ್ಯಕ್ತಿಗೆ ಐಸಿಯನಲ್ಲಿ ಚಿಕಿತ್ಸೆ

    ಟೆನ್ಷನ್‍ನಲ್ಲಿದ್ದಾಗ 2 ಸಾವಿರ ರೂ.ಗೆ ಚಿಲ್ಲರೆ ಕೇಳಿದ್ದಕ್ಕೆ ಹಲ್ಲೆ – ವ್ಯಕ್ತಿಗೆ ಐಸಿಯನಲ್ಲಿ ಚಿಕಿತ್ಸೆ

    ಮೈಸೂರು: ಟೆನ್ಷನ್‍ನಲ್ಲಿರುವ ಸಮಯದಲ್ಲಿ ಬಂದು 2 ಸಾವಿರ ರೂಪಾಯಿಗೆ ಚಿಲ್ಲರೆ ಕೇಳಿದ್ದ ಎಂದು ಹಲ್ಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.

    ಸಚಿನ್ ಹಲ್ಲೆ ಮಾಡಿದ ವ್ಯಕ್ತಿ. ಚಿಲ್ಲರೆಗಾಗಿ ಉಮೇಶ್ ಎಂಬವರು ನಗರದ ಅಂಗಡಿಯೊಂದಕ್ಕೆ ಬಂದಿದ್ದನು. ಉಮೇಶ್ ಮೊದಲು ಬಾರ್ ನಲ್ಲಿ ಚಿಲ್ಲರೆ ಕೇಳಿದ್ದನು. ಅಲ್ಲಿ ಸಿಗದಕ್ಕೆ ಪಕ್ಕದ ಅಂಗಡಿಯಲ್ಲಿ ಕೇಳಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಸಚಿನ್ ಯಾವುದೋ ಆಲೋಚನೆಯಲ್ಲಿದ್ದ.

    ಈ ವೇಳೆ ಉಮೇಶ್, ಎರಡೆರಡು ಬಾರಿ ಚಿಲ್ಲರೆ ಕೇಳಿದ ಎಂದು ಕೋಪದಲ್ಲಿ ಸಚಿನ್ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಹಲ್ಲೆಗೊಳಗಾದ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

    ಈ ಬಗ್ಗೆ ಮೈಸೂರಿನ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ

    ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ

    ಬೆಂಗಳೂರು: ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ ನಡೆಸಲಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ಅಮಾಯಕ ಡ್ರೈವರ್ ಮುನಿಯಪ್ಪಗೆ ಬಂಕ್ ಮಾಲೀಕ ಶಿವಕುಮಾರ್ ಹಾಗೂ ಕ್ಯಾಷಿಯರ್ ದಿನೇಶ್ ಸೇರಿದಂತೆ ಐದು ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಮುನಿಯಪ್ಪ 500 ರೂ. ಗೆ ನೀಡಿ 100 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡು ಉಳಿದ ಚಿಲ್ಲರೆ ಹಣ ಕೇಳಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಮುನಿಯಪ್ಪ ಆರೋಪಿಸುತ್ತಾರೆ. ಮುನಿಯಪ್ಪಗೆ ತಲೆ, ಕೈ ಹಾಗೂ ಕಾಲು ಭಾಗದಲ್ಲಿ ಗಾಯಗಳಾಗಿದ್ದು, ಸೋಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ಚಂಡೀಗಢ್: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ಚಿಲ್ಲರೆ ರೂಪದಲ್ಲಿ ನೀಡಿದ್ದು, ಅವುಗಳನ್ನು ಏಣಿಕೆ ಮಾಡಲಾಗದೆ ಕೋರ್ಟ್ ಪ್ರಕರಣವನ್ನು ಮುಂದೂಡಿದೆ.

    2015 ರಲ್ಲಿ ವಿಚ್ಛೇದನ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪತ್ನಿಗೆ ಪ್ರತಿ ತಿಂಗಳು 25 ಸಾವಿರ ರೂ. ನೀಡುವಂತೆ ಪತಿಗೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಪತಿ ಪ್ರತಿ ತಿಂಗಳು ಜೀವನಾಂಶ ನೀಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ 50 ಸಾವಿರ ರೂ. ನೀಡಿರಲಿಲ್ಲ. ಇದರಿಂದಾಗಿ ಪತ್ನಿಯು ಹೈಕೋರ್ಟ್ ಮೆಟ್ಟಿಲೇರಿದ್ದಳು.

    ಹೈಕೋರ್ಟ್ ವಿಚಾರಣೆ ವೇಳೆ ಪತಿಯು ತಾನು ನೀಡಬೇಕಾಗಿದ್ದ ಹಣದಲ್ಲಿ 26,600 ರೂಪಾಯಿಯನ್ನು 1 ರೂ., 2 ರೂ. ನಾಣ್ಯ ಹಾಗೂ 100 ರೂ. ಮುಖಬೆಲೆಯ 4 ನೋಟುಗಳನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕೊಟ್ಟಿದ್ದಾನೆ.

    ಪತಿಯ ನಡೆಯಿಂದ ರೋಸಿ ಹೋದ ಪತ್ನಿ, ‘ನನಗೆ ಮತ್ತೊಂದು ರೀತಿ ಚಿತ್ರಹಿಂಸೆ ನೀಡಲು ಪತಿ ಹೀಗೆ ಮಾಡಿದ್ದಾನೆ. ನಾನು ಈ ಚಿಲ್ಲರೆ ಹಣವನ್ನು ಹೇಗೆ ಏಣಿಕೆ ಮಾಡಬೇಕು. ಯಾರು ಇಷ್ಟು ಚಿಲ್ಲರೆ ಹಣವನ್ನು ಪಡೆಯುತ್ತಾರೆ’ ಎಂದು ಆರೋಪಿಸಿದಳು.

    ತನ್ನ ನಡೆಯನ್ನು ಸಮರ್ಥಿಸಿಕೊಂಡ ಪತಿ, ‘ನಾನು 100 ರೂ., 500 ರೂ. ಅಥವಾ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡಬೇಕು ಎಂದುಕೊಂಡಿದ್ದೆ. ಆದರೆ ಈ ಹಣವನ್ನು ಏಣಿಕೆ ಮಾಡಲು ಮೂರು ಜೂನಿಯರ್ ಗಳನ್ನು (ಮಕ್ಕಳನ್ನು) ಆಕೆಗೆ ನೀಡಿದ್ದೇನೆ. ಹೀಗಾಗಿ ಚಿಲ್ಲರೆ ಹಣವನ್ನೇ ನೀಡಿರುವೆ’ ಎಂದು ಹೇಳಿದ್ದಾರೆ.

    ಹಣವನ್ನು ಏಣಿಕೆ ಮಾಡಲಾಗದೇ ಇರುವುದಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಜನೀಶ್ ಕೆ ಶರ್ಮಾ ಅವರು ವಿಚಾರಣೆಯನ್ನು ಎರಡು ದಿನಗಳ ಕಾಲ ಮುಂದೂಡಿದ್ದಾರೆ.