Tag: ಚಿಲುಮೆ ಸಂಸ್ಥೆ

  • ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು: ಬೆಂಗಳೂರಿನ ಚಿಲುಮೆ ಸಂಸ್ಥೆ (Chilume) ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿ (Raichur) ಮತದಾರರ ಪಟ್ಟಿಯಲ್ಲಿ (Voters List) ಹೆಸರು ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    ರಾಯಚೂರಿನಲ್ಲಿ (Raichur) 40 ಸಾವಿರಕ್ಕೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ (BJP) ಶಾಸಕರಿಂದ ಗೋಲ್‌ಮಾಲ್ ನಡೆದಿದೆ ಅಂತ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಗಳು ದಾಖಲೆ ಹಿಡಿದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    2020 ರಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ 2,36,710 ಮತದಾರರಿದ್ದರೆ, 2022 ರಲ್ಲಿ 2,38,000 ಮತದಾರರು ಇದ್ದಾರೆ. ಆದರೆ 2023ರ ಚುನಾವಣೆಗಾಗಿ (Elections) ಬಿಡುಗಡೆಯಾಗಿರುವ ಪರಿಷ್ಕೃತ ಮತದಾರರ ಕರಡು ಪ್ರತಿಯಲ್ಲಿ 2,13,000 ಮತದಾರರಿದ್ದಾರೆ. 16 ಸಾವಿರ ಹೊಸ ಮತದಾರನ್ನ ಸೇರ್ಪಡೆ ಮಾಡಲಾಗಿದೆ. ಆದ್ರೆ ಮೊದಲಿನಿಂದ ಇದ್ದ 40 ಸಾವಿರ ಮತದಾರರ ಹೆಸರನ್ನ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕರಡು ಮತದಾರರ ಪಟ್ಟಿಯಲ್ಲಿ ಗುರುತಿನ ಚೀಟಿ ಸಂಖ್ಯೆ ಇದ್ದರೂ ಹೆಸರು, ತಂದೆ ಹೆಸರು, ವಿಳಾಸ ಅಳಿಸಿ ಹಾಕಲಾಗಿದೆ, ವಿಳಾಸ ಬದಲಿಸಲಾಗಿದೆ. ಬಹಳಷ್ಟು ಮುಸ್ಲಿಂ ಮತದಾರರನ್ನ (Muslim Voters) ಪಟ್ಟಿಯಿಂದಲೇ ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತದಾರರ ಪಟ್ಟಿ (Voters List) ಪರಿಷ್ಕರಣೆಗೆ ಡಿಸೆಂಬರ್ 24ರ ವರೆಗೆ ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಡಾ.ರಜಾಕ್ ಉಸ್ತಾದ್ ಹಾಗೂ ಜಾವೀದ್ ಉಲ್ ಹಕ್ ಮನವಿ ಮಾಡಿದ್ದಾರೆ.

    ರಾಯಚೂರು ನಗರ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿ ಸರ್ಕಾರ ಹಾಗೂ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಕೈವಾಡವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ- ಗ್ರಾಮಸ್ಥರಿಂದ ದೂರು

    ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಮತದಾರರನ್ನ ಕೈಬಿಟ್ಟಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರುತ್ತೆ. ಬಿಎಲ್‌ಓ ಗಳು ಮನೆ ಮನೆಗೆ ತೆರಳಿ ಮೃತಪಟ್ಟವರ ಮಾಹಿತಿ ಪಡೆದು ಡಿಲಿಟ್ ಮಾಡಿರುತ್ತಾರೆ. ಜೊತೆಗೆ 18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ವೋಟರ್ಸ್ ಡ್ರಾಫ್ಟ್ ರೋಲನ್ನ ಪಕ್ಷಗಳಿಗೆ ನೀಡುತ್ತೇವೆ. ಡಿಲಿಟ್ ಆಗಿರೋ ಮತದಾರರ ಮಾಹಿತಿ ನೀಡಿದರೆ ಸೇರ್ಪಡೆ ಮಾಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಯಾವುದೇ ಒತ್ತಡದಿಂದ ಮತದಾರರ ಪಟ್ಟಿ ಡಿಲಿಟ್ ಮಾಡಿಲ್ಲ ಅಂತಾ ಹೇಳಿದ್ದಾರೆ.

    ಬಿಜೆಪಿಗೆ ಮತ ಹಾಕದಿರುವ ಸಮುದಾಯ ಮತ್ತು ವ್ಯಕ್ತಿಗಳನ್ನ ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಅನ್ನೋ ಆರೋಪವೇ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇಂತಹ ಕೃತ್ಯದಲ್ಲಿ ಭಾಗಿಯಾಗಿರದಿದ್ದರೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬೆಳಕಿಗೆ ತರಲಿ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕ ಹಿಂಸೆ- ಜೀವ ರಕ್ಷಣೆಗೆ ಮನವಿ

    ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕ ಹಿಂಸೆ- ಜೀವ ರಕ್ಷಣೆಗೆ ಮನವಿ

    ಬೆಂಗಳೂರು: ವಿನಾಕಾರಣ ಬಿಬಿಎಂಪಿ ಕಂದಾಯಾಧಿಕಾರಿಗಳಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ಹೀಗಾಗಿ ಜೀವ ರಕ್ಷಣೆ ಮಾಡಿ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮನವಿ ಮಾಡಿಕೊಂಡರು.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ನೌಕರರ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಿಬಿಎಂಪಿ ನೀಡಿರುವ ದೂರಿನನ್ವಯ ಕಂದಾಯಾಧಿಕಾರಿಗಳನ್ನು ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಏಕಾಏಕಿ ಬಂಧಿಸಿರುವುದು ಸೂಕ್ತವಲ್ಲ. ಬದಲಿಗೆ ಅಕ್ರಮ ಎಸಗಿದೆ ಎನ್ನಲಾದ ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು CEO ನಡೆಸುವ ತನಿಖೆಗೆ ಸಿದ್ಧವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದರು.

    ಯಾವುದಾದರೂ ಒಂದು ಸಂಸ್ಥೆ ತನಿಖೆಯನ್ನು ಮಾಡಲಿ ಎರಡು-ಮೂರು ಪೊಲೀಸ್ ಠಾಣೆಗಳು ಅಥವಾ ವಿವಿಧ ಸಂಸ್ಥೆಗಳು ಭಾಗಿಯಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು. ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಬಿಬಿಎಂಪಿ ದೂರು ದಾಖಲಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ದೂರು ದಾಖಲಿಸಬೇಕು. ಇಲ್ಲಿ ಪ್ರೊಸಿಜರ್ ಎರರ್ ಆಗಿದೆ ಎಂದರು.

    ಚಿಲುಮೆ ಸಂಸ್ಥೆ BLO ಗುರುತಿನ ಚೀಟಿಯನ್ನು ನಕಲಿ ಮಾಡಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಸಮಂಜಸ ಎಂದು ಹೇಳಿದರು.

    ದತ್ತಾಂಶ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆ (Chilume) ಭಾಗಿಯಾಗಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿಯಲ್ಲಿ ದತ್ತಾಂಶ ಕಳವು ಮತ್ತು ಮತದಾರರನ್ನು ತೆಗೆದು ಹಾಕಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಅಧಿಕಾರಿಗಳನ್ನು ಬಂಧಿಸುತ್ತಿರುವುದು ಸೂಕ್ತವಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಮತ್ತು ಪುನರಾವರ್ತನೆಯಾಗಿರುವ ಹೆಸರುಗಳನ್ನು ಮಾತ್ರ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

    ಈ ವೇಳೆ ಸಂಘದ ಉಪ ಆಯುಕ್ತರಾದ ಲಕ್ಷ್ಮೀದೇವಿ, ವಕೀಲರಾದ ಶ್ರೀನಿವಾಸ್, ಅಧಿಕಾರಿಗಳಾದ ಕೆ.ಜಿ.ರವಿ,ಶಾಂತೇಶ್, ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ,ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ, ಬಾಬಣ್ಣ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ (VoterID Scam) ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು (Police) ನಾಲ್ವರು ಆರ್‌ಓಗಳನ್ನ ಬಂಧಿಸಿದ್ದಾರೆ.

    ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ ವಿಭಾಗ), ಸೊಹೆಲ್ ಅಹಮದ್ (ಶಿವಾಜಿನಗರ), ಚಂದ್ರಶೇಖರ್ (ಮಹಾದೇವಪುರ) ಹಾಗೂ ಆರ್‌ಆರ್ ನಗರದ ಎಆರ್‌ಓ ಮಹೇಶ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಆರ್‌ಒಗಳು ಖಾಸಗಿ ವ್ಯಕ್ತಿಗಳಿಗೆ ಬಿಎಲ್‌ಓ ಕಾರ್ಡ್ಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ಚುನಾವಣಾ ಆಯೋಗ (Election Commission) ಈಗಾಗಲೇ ಅಧಿಕಾರಿಗಳ ಫೋನ್ ಕರೆ ತನಿಖೆಗೆ ಮುಂದಾಗಿದೆ. ಬಿಬಿಎಂಪಿ (BBMP) ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ರಂಗಪ್ಪ ಅವರು ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರೆ, ಶ್ರೀನಿವಾಸ್ ಅವರು, ಮಹದೇವಪುರ ಕ್ಷೇತ್ರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮೂರು ಕ್ಷೇತ್ರದಲ್ಲಿ ಬಿಎಲ್‌ಓ ಐಡಿ ಕಾರ್ಡ್ ಇಟ್ಟುಕೊಂಡು ಸರ್ವೆ ನಡೆಸಲಾಗಿತ್ತು. ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿತು. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಅಮಾನತುಗೊಂಡ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದು, ಬಿಎಲ್‌ಓ ಎಂಬ ಐಡಿ ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು ಯಾರು? ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆ ಮಾಹಿತಿ ಕದ್ದಿದೆಯಾ? ಹೀಗೆ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ- ರಾಜಕಾರಣಿಗಳಿಗೆ ಚಿಲುಮೆಯಿಂದ ನಿರಂತರ ಇ-ಮೇಲ್

    ಬೆಂಗಳೂರು: ಮತದಾರರ ಪಟ್ಟಿ ಕಳವು ಪ್ರಕರಣ ಸಂಬಂಧ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಯಲಾಗಿದೆ. ಈ ಬೆನ್ನಲ್ಲೇ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ (E-Mail) ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ. ಸದ್ಯ ಕಂಪ್ಯೂಟರ್ ನಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

    ಈ ನಡುವೆ ಚಿಲುಮೆ ಸಂಸ್ಥೆ (Chilume Enterprises Private Limited) ಯ ಮೇಲೆ ಪೊಲೀಸರ ದಾಳಿ ಮಾಡಿದ್ದು, ಈ ವೇಳೆ 80 ಬಿಎಲ್ ಓ ಕಾರ್ಡ್, ಲ್ಯಾಪ್ ಟಾಪ್ ಗಳು, ಒಂದು ಟ್ಯಾಬ್, ಕಂಪ್ಯೂಟರ್ ಗಳು, ಕೆಲವೊಂದು ಲೆಟರ್ ಹೆಡ್ ಗಳು, ಹಣ ಎಣಿಸೋ ಮೆಷಿನ್ ಹಾಗೂ ಬ್ಯಾಂಕ್ ಅಕೌಂಟ್‍ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಅಲ್ಲದೆ ಎಸ್‍ಬಿಐ, ಆಕ್ಸಿಸ್ ಬ್ಯಾಂಕ್‍ನಲ್ಲಿ ಕೋಟ್ಯಂತರ ರೂ. ವ್ಯವಹಾರ ಮಾಡಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ನಾಲ್ವರು ಚಿಲುಮೆ ಸಿಬ್ಬಂದಿಗೆ ನೋಟಿಸ್: ವೋಟರ್ ಐಡಿಗಳ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸರು ವಿಚಾರಗೆ ಹಾಜರಾಗುವಂತೆ ಚಿಲುಮೆ ಸಂಸ್ಥೆಯ ನಾಲ್ವರು ಸಿಬ್ಬಂದಿಗೆ ನೋಟೀಸ್ ನೀಡಿದ್ದಾರೆ. ಪ್ರಕರಣದ ಕುರಿತು ಎಫ್‍ಐಆರ್ ದಾಖಲಾಗುತ್ತಿದ್ದಂತೆ ಮೂವರು ಎಸ್ಕೇಪ್ ಆಗಿದ್ದಾರೆ. ಚಿಲುಮೆ ಸಂಸ್ಥೆಯ ಮಾಲೀಕ ರವಿಕುಮಾರ್, ಸಿಬ್ಬಂದಿ ಕೆಂಪೇಗೌಡ ಹಾಗೂ ರಕ್ಷಿತ್ ಎಸ್ಕೇಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತಪಟ್ಟಿ ಅಕ್ರಮ; ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸುಮೋಟೊ ಕೇಸ್ ಹಾಕಿ ತನಿಖೆ ಮಾಡಬೇಕು – ಡಿಕೆಶಿ

    ಮತಪಟ್ಟಿ ಅಕ್ರಮ; ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸುಮೋಟೊ ಕೇಸ್ ಹಾಕಿ ತನಿಖೆ ಮಾಡಬೇಕು – ಡಿಕೆಶಿ

    ಬೆಂಗಳೂರು: ಮತಪಟ್ಟಿ ಅಕ್ರಮ ಪ್ರಕರಣವನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದ್ದಾರೆ.

    ಮತದಾನ ಪಟ್ಟಿ ಅಕ್ರಮ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವೇನಾದ್ರು ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟು ದುರ್ಬಳಕೆ ಮಾಡಿದ್ರೆ ಕೂಡಲೇ ಎಲ್ಲರನ್ನು ಬಂಧನ ಮಾಡಲಿ. ನಮ್ಮ ಅವಧಿಯಲ್ಲಿ ಯಾವ್ ಅಧಿಕಾರಿ, ಯಾವ ಮಂತ್ರಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ. ಇದೊಂದು ಗಂಭೀರ ಅಪರಾಧ. ನಾಳೆ ಮಧ್ಯಾಹ್ನ ಚುನಾವಣೆ ಆಯೋಗ ಭೇಟಿಗೆ ನಾವು ಸಮಯ ಕೇಳಿದ್ದೇವೆ. ನಾಳೆ ನಾನು, ಸಿದ್ದರಾಮಯ್ಯ ಎಲ್ಲರೂ ಆಯೋಗದ ಆಯುಕ್ತರನ್ನ ಭೇಟಿ ಆಗ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?- ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

    VOTE
    ಸಾಂದರ್ಭಿಕ ಚಿತ್ರ

    ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೊದಲು ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿದ್ದಾರೆ. 7-8 ಸಾವಿರ ಜನರ ಸರ್ವೆ ಮಾಡ್ತಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದಿದ್ದಾರೆ ಅಂತ ಒಬ್ಬ ಹುಡುಗ ಹೇಳಿದ್ದಾನೆ. ನನ್ನ ಬಳಿ ಅ ಸಂಸ್ಥೆಯ ಪೂರ್ತಿ ಮಾಹಿತಿ ಇದೆ. ನಿನ್ನ ಕ್ಷೇತ್ರದಲ್ಲಿ ಗೆಲ್ಲಿಸಿ ಕೊಡ್ತೀವಿ ಅಂತ ಒಬ್ಬೊಬ್ಬ ಕಾರ್ಪೋರೇಟರ್‌ಗಳಿಗೆ ಕೋಟಿ ಹಣ ಆಫರ್ ಮಾಡಿದ್ದಾರೆ. ನಾವು ಅ ಸಂಸ್ಥೆಯ ಬಗ್ಗೆ ತನಿಖೆ ಮಾಡಿಯೇ ಮಾತಾಡ್ತಿದ್ದೇವೆ. ಸಿಎಂ ಉಡಾಫೆಯಾಗಿ ಮಾತಾಡೋದು ಸರಿಯಲ್ಲ. ಸಿಎಂ ಬೆಂಗಳೂರು ಉಸ್ತುವಾರಿ. ಇದಕ್ಕೆ ಅವರೇ ಜವಾಬ್ದಾರಿ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ವೋಟರ್ ಐಡಿ ಹೀಗೆ ಆಗಿದೆ ಗೊತ್ತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಮ್ಯಾಪಿಂಗ್ ಮಾಡಿದ್ದಾರೆ. ಮನೆ ಮನೆಗೆ ಹೋಗಿ ಬರೆದುಕೊಂಡು ಹೋಗಿದ್ದಾರೆ.‌ ಖಾಲಿ ಸೈಟ್ ಕೂಡಾ ಗುರುತಿಸಿದ್ದಾರೆ ಎಂದು ವಿವರಿಸಿದ್ದಾರೆ.

    ಚುನಾವಣಾ ಆಯೋಗ ಕೂಡಾ ಇದರಲ್ಲಿ ಆರೋಪಿ. ಯಾಕೆ ಇದುವರೆಗೂ ಚುನಾವಣೆ ಆಯೋಗ ಕ್ರಮ ತೆಗೆದುಗೊಂಡಿಲ್ಲ? ನಾಳೆ ಮಧ್ಯಾಹ್ನ ಅವರನ್ನ ಭೇಟಿಯಾಗಿ ಮಾತಾಡ್ತೀವಿ. ಈ ಸಂಸ್ಥೆ ಮೇಲೆ ಕ್ರಮ ಆಗಬೇಕು. ಚಿಲುಮೆ‌ ಸಂಸ್ಥೆಯವರನ್ನ ಸಿಎಂ ಮತ್ತು ಮಂತ್ರಿಗಳು ರಕ್ಷಣೆ ಮಾಡ್ತಿದ್ದಾರೆ. ರಿಟರ್ನಿಂಗ್ ಆಫೀಸ್ ಮೇಲೆ FIR ಆಗಬೇಕು.‌ ಪ್ರತಿ ಕ್ಷೇತ್ರದಲ್ಲಿ ಆಗಬೇಕು. ಸರ್ಕಾರದ ಹುದ್ದೆಗೆ ಹೀಗೆ ಮಾಡೋಕೆ ಆಗೊಲ್ಲ. ಸಿಎಂ ಉಡಾಫೆ ಆಗಿ ಮಾಡ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಆರ್ಡರ್ ಮಾಡಿದ್ರೆ ಕ್ರಮ ಆಗಲಿ. ಇಡೀ ದೇಶದಲ್ಲಿ ‌ಇದು ಸುದ್ದಿ ಆಗುತ್ತಿದೆ. ಇದರ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲೋಕೆ ಹೀಗೆ ಈ ಸರ್ಕಾರ ಮಾಡ್ತಿದೆ. ಜೆಡಿಎಸ್, ರೈತ ಸಂಘ ಎಲ್ಲಾ ಪಾರ್ಟಿಗಳು ಎಚ್ಚರಿಕೆಯಿಂದ ಇರಬೇಕು. ನಿಮ್ಮ ನಿಮ್ಮ ‌ಕ್ಷೇತ್ರದ ಮತಪಟ್ಟಿ ಪರಿಶೀಲನೆ ಮಾಡಿ. ಮತಪಟ್ಟಿ ಸ್ಥಳವೇ ಬದಲಾವಣೆ ಮಾಡ್ತಿದ್ದಾರೆ. ಆಫೀಸರ್‌ಗಳನ್ನು ಇಟ್ಟುಕೊಂಡು ಈ ಕೆಲಸ ಮಾಡ್ತಿದ್ದಾರೆ. ಪ್ರತಿಯೊಂದು ಬೂತ್‌ನಲ್ಲಿ ನಮ್ಮ ಕಾರ್ಯಕರ್ತರು BLOಗೆ ಮಾಹಿತಿ ಕೊಟ್ಟು ಸಹಕಾರ ನೀಡಿ. ಒಂದು ವೋಟ್ ಇಟ್ಟುಕೊಂಡು ಮತ ಹಾಕಿ. 26 ಲಕ್ಷ ವೋಟ್ ವಜಾ‌ ಮಾಡಿದ್ದೇವೆ ಅಂತ ಹೇಳಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 30-40 ಸಾವಿರ ಸೇರಿಸಿದ್ದಾರೆ ಅಂತ ಹೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್‌

    ಚಿಲುಮೆ ಸಂಸ್ಥೆಯ ರೂಟ್ ಮ್ಯಾಪ್ ಪ್ರದರ್ಶನ ಮಾಡಿದ ಡಿ.ಕೆ.ಶಿವಕುಮಾರ್,‌ ಬಿಬಿಎಂಪಿ ಅನುಮತಿ ನೀಡಿದೆ ಅಂತ ಮ್ಯಾಪ್‌ನಲ್ಲಿ ಇದೆ. ಅವರ ಸಿಬ್ಬಂದಿಯನ್ನೇ ಕರೆದು ಮಾಹಿತಿ ಪಡೆದಿದ್ದೇನೆ. ಬಿಜೆಪಿ ವಿರುದ್ದ ಇರೋ ವೋಟ್ ಡಿಲೀಟ್ ಮಾಡೋಕೆ ಕೆಲಸ ಮಾಡ್ತಿದ್ದಾರೆ. ಯಾರ ಸರ್ಕಾರದಲ್ಲೇ ಆಗಲಿ, ಹೀಗೆ ಮಾಡಿದ್ರೆ ಕ್ರಮ ಆಗಲಿ. ಡಿ.ಕೆ.ಶಿವಕುಮಾರ್ ಆದರೇನು ಯಾರು ಮಾಡಿದರೇನು ಕ್ರಮ ಆಗಲಿ ಅಂತ ಒತ್ತಾಯ ಮಾಡಿದ್ದಾರೆ.

    ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಮಿಸ್ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇನಾದ್ರು ಇದ್ದರೆ ನೀವು ಆಕ್ಷನ್ ತಗೊಳ್ಳಿ. ಮತಪಟ್ಟಿ ‌ನನ್ನ ಹಕ್ಕು. ಅದನ್ನ ‌ದುರುಪಯೋಗ ಮಾಡಿದ್ರೆ ಹೇಗೆ? ನಮ್ಮ ಭ್ರಷ್ಟಾಚಾರವನ್ನೆ ತನಿಖೆ ಮಾಡಿ ಅಂತಿದ್ದೇವೆ. ಇನ್ನು ಜಾತಿಗಣತಿ ತನಿಖೆ ಮಾಡಬೇಡಿ ಅಂತೀವಾ? ಮಾಧ್ಯಮದಲ್ಲಿ ಸುದ್ದಿ ಬಂದ ಕೂಡಲೇ ಬಿಬಿಎಂಪಿ ಕಮಿಷನರ್ ಸಂಸ್ಥೆಗೆ ನೀಡಿದ್ದ ಆದೇಶ ರದ್ದು ಮಾಡಿದರು. ಯಾಕೆ ಕ್ರಿಮಿನಲ್ ಕೇಸ್ ಹಾಕಲಿಲ್ಲ? ಯಾಕೆ FIR ಹಾಕಿ ಬಂಧನ ಮಾಡಿಲ್ಲ? ಯಾರು ಅನುಮತಿ ಕೊಟ್ರೋ ಅವರನ್ನ ಬಂಧನ ಮಾಡಬೇಕು. EVM ಬಗ್ಗೆ ಮಾತಾಡಿದ್ದಾರೆ. ಇಡೀ ದೇಶ ಆ ಬಗ್ಗೆ ಚರ್ಚೆ ಮಾಡುತ್ತಿದೆ. ಯಾರು ಅಕ್ರಮ ಮಾಡಿದ್ದಾರೋ, ಅವರ ಬಂಧನ ಆಗಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

    ಸಚಿವ ಅಶ್ವಥ್ ನಾರಾಯಣ ಮಾನನಷ್ಟ ಮೊಕದ್ದಮೆ ಕೇಸ್ ಹಾಕ್ತೀವಿ ಅನ್ನೋ ಹೇಳಿಕೆ ಕುರಿತು ಮಾತನಾಡಿ, ‌ಮಾನನಷ್ಟ ಮೊಕದ್ದಮೆ ಹಾಕಲಿ. ಅವರು ಕಾಯೋದುಬೇಡ. ಮೊದಲು ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಿ. ಇದರ ಬಗ್ಗೆ ಎಲ್ಲವೂ ಚರ್ಚೆ ಆಗಲಿ. ಯಾರಿಗೆ ಕಾಲ್ ಮಾಡಿದ್ದಾರೆ, ಎಷ್ಟು ಕಾಲ್ ಮಾಡಿದ್ದಾರೆ. ಯಾರ ಜೊತೆ ಮಾತಾಡಿದ್ದಾರೆ ಎಲ್ಲವೂ ತನಿಖೆ ಆಗಲಿ. ಅವಮಾನ ಆಗಿದ್ರೆ ಅಶ್ವಥ್ ನಾರಾಯಣ ಅವರು ಮಾನನಷ್ಟ ಕೇಸ್ ಹಾಕಲಿ. ಮಾಜಿ ಸಿಎಂ ಕುಮಾರಸ್ವಾಮಿ ಏನಾದ್ರು ಹೇಳಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷ ಹಾಗೂ ಮತದಾರನಾಗಿ ಹೇಳ್ತಿದ್ದೇನೆ. 24 ಗಂಟೆ ಒಳಗೆ ತಪ್ಪಿತಸ್ಥರನ್ನ ಅರೆಸ್ಟ್ ಮಾಡಬೇಕು. ಇಲ್ಲದೆ ಹೋದರೆ ಆಯೋಗ ಇದರಲ್ಲಿ ಶಾಮೀಲು‌ ಅಂತ ಆಗುತ್ತೆ. ಮುಂದೆ ನಾವು ಇದನ್ನ ದೆಹಲಿ ಆಯೋಗಕ್ಕೂ ತೆಗೆದುಕೊಂಡು ಹೋಗ್ತೀವಿ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ತೆಗೆದುಕೊಂಡು ಇದರ ಬಗ್ಗೆ ತನಿಖೆ ನಡೆಸಬೇಕು. ಆಕ್ಸಿಜನ್ ದುರಂತದಲ್ಲಿ ಹೈಕೋರ್ಟ್‌ ಸುಮೋಟೊ ಕೇಸ್ ದಾಖಲು ಮಾಡಿಕೊಂಡಿತ್ತು. ಈ ಭ್ರಷ್ಟ, ನೀಚ ಸರ್ಕಾರದ ಅಧಿಕಾರಿಗಳನ್ನ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]