Tag: ಚಿಲಿ

  • ಚಿಲಿಯಲ್ಲಿ ಕಾಡ್ಗಿಚ್ಚಿಗೆ 51 ಮಂದಿ ಬಲಿ

    ಚಿಲಿಯಲ್ಲಿ ಕಾಡ್ಗಿಚ್ಚಿಗೆ 51 ಮಂದಿ ಬಲಿ

    ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕದ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿಗೆ  ಕನಿಷ್ಠ 51ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಮಧ್ಯ ಚಿಲಿಯ ಸುಮಾರು 10 ಲಕ್ಷ ನಿವಾಸಿಗಳು ವಾಸಿಸುವ ವಾಲ್ಪಾರೈಸೊ ಪ್ರದೇಶದ ಅನೇಕ ಭಾಗಗಳಲ್ಲಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿ ನಂದಿಸಲು ಹೆಣಗಾಡುತ್ತಿದ್ದಾರೆ.  ಇದನ್ನೂ ಓದಿ: ಮೊನ್ನೆ ಸತ್ತಿದ್ದ ಪೂನಂ ಪಾಂಡೆ ನಿನ್ನೆ ಜೀವಂತ – ನಟಿ ವಿರುದ್ಧ ಕೇಸ್‌ ದಾಖಲಿಸಲು ಸೂಚನೆ

    ಕರಾವಳಿಯ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ ಮತ್ತು ರಕ್ಷಣಾ ತಂಡಗಳು ಎಲ್ಲಾ ಪೀಡಿತ ಪ್ರದೇಶಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ ಎಂದು ಚಿಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

    ಕಳೆದ ದಶಕದಿಂದ ಚಿಲಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ಏರಿಕೆಯಾಗುತ್ತಿದೆ. ದೇಶದ್ಯಾಂತ 92 ಕಡೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ 43,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಿಗೆ ಹಾನಿಯಾಗಿದೆ.

    ಬೇಸಿಗೆ ತಿಂಗಳಿನಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚು ಸಾಮಾನ್ಯ. ಕಳೆದ ವರ್ಷ ಸುಮಾರು 27 ಜನರು ಸಾವನ್ನಪ್ಪಿದ್ದರೆ  4,00,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶಕ್ಕೆ ಹಾನಿಯಾಗಿತ್ತು.

    ಅರಣ್ಯ ಪ್ರದೇಶದ ಬಳಿ ಜನ ವಸತಿ ಬಹಳ ಬೇಗ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವು ನೋವುಗಳ ಸಂಖ್ಯೆ ಏರಿಕೆಯಾಗುತ್ತಿದೆ.

  • ಚಿಲಿಯಲ್ಲಿ ಕಾಡ್ಗಿಚ್ಚು: ಹೊತ್ತಿ ಉರಿದ ನೂರಾರು ಎಕರೆ ಅರಣ್ಯ – 13 ಮಂದಿ ಸಾವು

    ಚಿಲಿಯಲ್ಲಿ ಕಾಡ್ಗಿಚ್ಚು: ಹೊತ್ತಿ ಉರಿದ ನೂರಾರು ಎಕರೆ ಅರಣ್ಯ – 13 ಮಂದಿ ಸಾವು

    ಸ್ಯಾಂಟಿಯಾಗೊ: ಚಿಲಿ (Chile) ರಾಜಧಾನಿ ಸ್ಯಾಂಟಿಯಾಗೊದಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ಬಯೋಬಿಯೊದಲ್ಲಿನ (Biobio) ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು (Wildfires) ಕಾಣಿಸಿಕೊಂಡು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ.

    ಲಾ ಅರೌಕಾನಿಯಾದ ದಕ್ಷಿಣ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಮೆಕ್ಯಾನಿಕ್ ಸಾವನ್ನಪ್ಪಿದ್ದಾರೆ. ಇದು ಹೆಚ್ಚಿನ ಕಾಡ್ಗಿಚ್ಚು ಅರಣ್ಯ ಪ್ರದೇಶವನ್ನು ಆವರಿಸಲು ಕಾರಣವಾಗಿದೆ. ಒಟ್ಟು 35,000 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದ ಅಂಚಿನಲ್ಲಿರುವ ಸಾಂತಾ ಜುವಾನಾ (Santa Juana) ನಗರಕ್ಕೂ ಬೆಂಕಿ ವ್ಯಾಪಿಸಿದ್ದು ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ ಎಂದು ಚಿಲಿ ಕೃಷಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೋಶಿಮಠದ ಬಳಿಕ ಜಮ್ಮು-ಕಾಶ್ಮೀರದಲ್ಲೂ ಮನೆ, ರಸ್ತೆಗಳು ಬಿರುಕು

    ಬಯೋಬಿಯೊ ಮತ್ತು ನೆರೆಯ ನುಬಲ್‍ನ ಕೃಷಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಕಂಡುಬರುತ್ತದೆ. ಸದ್ಯ ದುರಂತ ನಡೆದಿರುವ ಸ್ಥಳದಲ್ಲಿ ಸೈನಿಕರನ್ನು ನಿಯೋಜಿಸಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ. ಈಗಾಗಲೇ ನೂರಾರು ಮನೆಗಳಿಗೆ ಹಾನಿಯಾಗಿದೆ ಅಲ್ಲಿನ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಸಚಿವ ಕೆರೊಲಿನಾ ತೋಹಾ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕನ್ಯೆ

    ದುರಂತ ನಡೆದ ಸ್ಥಳದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸ್ಥಳೀಯ ದೇಶಗಳಾದ ಬ್ರೆಜಿಲ್ ಮತ್ತು ಅರ್ಜೆಂಟಿನಾದೊಂದಿಗೆ ನೆರವಿನ ಹಸ್ತವನ್ನು ಚಿಲಿ ಕೇಳಿದೆ. 63 ವಿಮಾನಗಳ ಫ್ಲೀಟ್ ಅಗ್ನಿಶಾಮಕವನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    ಸ್ಯಾಂಟಿಯಾಗೊ: ಚಿಲಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಕಳೆದ ತಿಂಗಳು 43 ಸಾವಿರ ರೂಪಾಯಿ ಸಂಬಳದ ಬದಲಿಗೆ ಆಕಸ್ಮಿಕವಾಗಿ 286 ಬಾರಿ 1.42 ಕೋಟಿ ರೂ.ಯನ್ನು ಕಂಪನಿ ಪಾವತಿಸಿದೆ. ಇದೇ ಖುಷಿಯಲ್ಲಿ ವ್ಯಕ್ತಿ ಕಂಪನಿಗೆ ರಾಜೀನಾಮೆ ನೀಡಿ ಹಣದ ಜೊತೆಗೆ ಎಸ್ಕೇಪ್ ಆಗಿದ್ದಾನೆ.

    ಚಿಲಿಯಲ್ಲಿ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ 45,000 ಸಾವಿರ ರೂಪಾಯಿ (500,000 ಪೆಸೊ) ಸಂಬಳದ ಬದಲಿಗೆ 1.42 ಕೋಟಿ ರೂ. (165,398,851 ಚಿಲಿಯ ಪೆಸೊ)ಯನ್ನು ಕಂಪನಿ ಪಾವತಿಸಿದೆ. ನಂತರ ಕಂಪನಿಯ ಆಡಳಿತವು ಅವರ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ದೋಷ ಕಂಡಿದೆ. ಹೀಗಾಗಿ ಕಂಪನಿಯು ಉದ್ಯೋಗಿಗೆ ಹಣ ಹಿಂದಿರುಗಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ

    ಬಳಿಕ ಬ್ಯಾಂಕ್‌ಗೆ ಭೇಟಿ ನೀಡಿ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ ವ್ಯಕ್ತಿ, ಕರೆ ಮಾಡಿದರೆ ನಾನು ನಿದ್ದೆ ಮಾಡುತ್ತಿದ್ದೆ. ಶೀಘ್ರದಲ್ಲಿಯೇ ಬಂದು ಹಣ ಪಾವತಿಸುತ್ತೇನೆ ಎಂದು ಹೇಳಿದ್ದನು. ಆದರೆ ನಂತರ ಕಂಪನಿ ನೀಡಿದ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲದೇ ಜೂನ್ 2ರಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಇದೀಗ ಹಣವನ್ನು ವಸೂಲಿ ಮಾಡಲು ಕಂಪನಿಯು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್‌ – ಯಾವುದೇ ಫೀಸ್‌ ಕಟ್ಟುವ ಅಗತ್ಯವಿಲ್ಲ

    Live Tv

  • ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಸ್ಯಾಂಟಿಯಾಗೊ: 7.5 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿತ್ತು ಎನ್ನಲಾಗುತ್ತಿರುವ ಡೈನೋಸಾರ್ ಒಂದರ 80% ದಷ್ಟು ಅಸ್ತಿಪಂಜರ ಪತ್ತೆಯಾಗಿದೆ.

    ಚಿಲಿಯ ಪ್ಯಾಟಗೋನಿಯಾದಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಂಶೋಧನೆಯ ಮಾಹಿತಿಯನ್ನು ಇತ್ತೀಚೆಗೆ ಪ್ಯಾಲಿಯಂಟಾಲಜಿಸ್ಟ್ ಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಈ ಡೈನೋಸಾರ್‌ನ ಬಾಲ ವಿಭಿನ್ನವಾಗಿದ್ದು, ಹೊಸದೊಂದು ಪ್ರಭೇಧದ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದು ಡೈನೋಸಾರ್‌ನ ಹೊಸ ಪ್ರಭೇದ ಎಂಬುದಾಗಿ ಗುರುತಿಸಲಾಗಿದೆ. ಇದರ ಬಾಲ ಇಲ್ಲಿಯ ವರೆಗೆ ಗುರುತಿಸಲಾಗಿರುವ ಪ್ರಭೇದಗಳಿಗಿಂತಲೂ ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 7 ಜನರಿಗೆ ಓಮಿಕ್ರಾನ್ ಪತ್ತೆ – 12ಕ್ಕೆ ಏರಿದ ಕೇಸ್

    ಈ ಹೊಸ ಜಾತಿಯ ಡೈನೋಸಾರ್ ಅನ್ನು ಸ್ಟೆಗೌರೋಸ್ ಎಲೆಂಗಸ್ಸೆನ್ ಎಂದು ಕರೆಯಲಾಗಿದ್ದು, ಇದರ ಪಳೆಯುಳಿಕೆಯನ್ನು 2018ರಲ್ಲಿ ಕಂಡುಹಿಡಿಯಲಾಗಿತ್ತು. ಹೊಸ ರೀತಿಯ ದೇಹ ರಚನೆಯುಳ್ಳ ಡೈನೋಸಾರ್‌ನ ಪತ್ತೆಯಾಗಿರವುದು ನಿಜವಾಗಿಯೂ ಅದ್ಭುತ ಎಂದು ಸಂಶೊಧಕ ಅಲೆಗ್ಸಾಂಡರ್ ವರ್ಗಾಸ್ ತಿಳಿಸಿದ್ದಾರೆ.

    ಈ ಪ್ರಭೇದದ ಬಾಲದಲ್ಲಿ ಏಳು ಜತೆ ಆಸ್ಟಿಯೋಡರ್ಮ್‍ಗಳು ಇದ್ದು, ಇದು ಡೈನೋಸಾರ್‍ಗೆ ಆಯುಧವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಡೈನೋಸಾರ್‌ಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಇದು ಜರಿ ಗಿಡವನ್ನು ಹೋಲುವ ಬಾಲದ ರಚನೆ ಹೊಂದಿದ್ದು, ಅಸ್ಥಿಪಂಜರದ 80% ದಷ್ಟು ಭಾಗಗಳನ್ನು ಕಂಡುಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದ ಹಾಗೂ 150 ಕೆಜಿ ತೂಗಬಹುದಾದ ಪ್ರಭೇದ ಸಸ್ಯಾಹಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.