Tag: ಚಿರತೆ ಮರಿ

  • ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ್ದ ಚಿರತೆ ಮರಿ ರಕ್ಷಣೆ

    ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ್ದ ಚಿರತೆ ಮರಿ ರಕ್ಷಣೆ

    ಮೈಸೂರು: ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೇಳಾಲು ಗ್ರಾಮದ ಸಮೀಪ ಸೋಲಾರ್ ಪ್ಲಾಂಟ್‍ನಲ್ಲಿ ಎರಡು ವರ್ಷದ ಚಿರತೆ ನುಗ್ಗಿತ್ತು. ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಒಳಗೆ ಹೋದ ಚಿರತೆ ಮರಿ ಹೊರಗೆ ಹೋಗಲಾಗದೆ ತಂತಿ ಬೇಲಿಯಲ್ಲಿ ಸಿಲುಕಿ ಕಿರುಚಾಡಿದೆ. ಇದನ್ನೂ ಓದಿ: ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಇದನ್ನ ನೋಡಿದ ಸೆಕ್ಯೂರಿಟಿ ಗಾರ್ಡ್, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ, ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

  • ಕಬ್ಬಿನ ಗದ್ದೆಯಲ್ಲಿ ಸಿಕ್ಕ ಚಿರತೆ ಮರಿ- ಮುದ್ದಾಡಿದ ಗ್ರಾಮಸ್ಥರು

    ಕಬ್ಬಿನ ಗದ್ದೆಯಲ್ಲಿ ಸಿಕ್ಕ ಚಿರತೆ ಮರಿ- ಮುದ್ದಾಡಿದ ಗ್ರಾಮಸ್ಥರು

    ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷವಾಗಿದೆ. ಕಬ್ಬಿನ ಗದ್ದೆಯಲ್ಲಿ ಸಿಕ್ಕಿದ ಮುದ್ದು ಮುದ್ದಾದ ಚಿರತೆ ಮರಿಯನ್ನು ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ.

    ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದ ಜಮೀನಿನಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿ ಸಿಕ್ಕಿದೆ. ಒಂದು ತಿಂಗಳ ಗಂಡು ಮರಿ ಇದ್ದಾಗಿದ್ದು, ಸಂತೋಷ್ ಎಂಬವರು ತಮ್ಮ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವಾಗ ಈ ಮರಿಯನ್ನು ನೋಡಿದ್ದಾರೆ. ತಕ್ಷಣ ಮರಿಯನ್ನು ತೆಗೆದುಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದಲ್ಲಿ ಚಿರತೆ ಮರಿಯನ್ನು ನೋಡಲು ಬಂದವರೆಲ್ಲಾ ಅದನ್ನು ಕೈಯಲ್ಲಿ ಎತ್ತಿಕೊಂಡು ಮುದ್ದಾಡಿದ್ದಾರೆ.

    ಸಂತೋಷ್ ಅರಣ್ಯ ಇಲಾಖೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    ತಾಯಿ ಚಿರತೆ ಕಬ್ಬಿನ ಗದ್ದೆಯೊಳಗೆ ಮರಿ ಹಾಕಿ ಮರಿಗಳನ್ನು ಕಾಡಿಗೆ ತೆಗೆದುಕೊಂಡು ಭರದಲ್ಲಿ ಈ ಮರಿಯನ್ನು ಇಲ್ಲೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಅಥವಾ ಮರಿಯನ್ನು ಇಲ್ಲೆ ಬಿಟ್ಟು ಬೇರೆಡೆಗೆ ಬೇಟೆಗೆ ತೆರಳಿರೋ ಸಾಧ್ಯತೆಯೂ ಇದೆ.

  • ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಪುಣೆ: ಮಹಾರಾಷ್ಟ್ರದ ಗಾಮವೊಂದರ ಕಬ್ಬಿನ ಗದ್ದೆಯಲ್ಲಿ ಹಾವನ್ನು ಸಾಯಿಸಲು ಹಚ್ಚಿದ್ದ ಬೆಂಕಿಯಲ್ಲಿ 5 ಚಿರತೆ ಮರಿಗಳು ಸುಟ್ಟು ಸಜೀವ ದಹನವಾಗಿದೆ. ಪುಣೆಯ ಅಂಬೆಗಾಂವ್ ತಾಲೂಕಿನ ಗವಡೆವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬುಧವಾರ ಕಬ್ಬು ಕಟಾವು ಕಾರ್ಯ ನಡೆಸುತ್ತಿದ್ದ ವೇಳೆ ಗದ್ದೆಯಲ್ಲಿ ಒಟ್ಟು ಮಾಡಿಟ್ಟಿದ್ದ ಕಸದ ರಾಶಿ ಬಳಿ ವಿಷಕಾರಿ ಹಾವು ಕಂಡುಬಂದಿದ್ದು, ಭಯಗೊಂಡ ರೈತರು ಕಸಕ್ಕೆ ಬೆಂಕಿ ಹಚ್ಚಿದ್ದಾರೆ.

    ಕಸಕ್ಕೆ ಹಚ್ಚಿದ್ದ ಬೆಂಕಿ ಪಕ್ಕದಲ್ಲೇ ಇದ್ದ ಪೊದೆಗೂ ತಗುಲಿದೆ. ಪರಿಣಾಮ ಅದರಲ್ಲಿ ಮಲಗಿದ್ದ ಮೂರು ಹೆಣ್ಣು ಮತ್ತು ಎರಡು ಗಂಡು ಚಿರತೆ ಮರಿಗಳು ಬೆಂಕಿಗೆ ಸುಟ್ಟು ಸಾವನ್ನಪ್ಪಿವೆ.

    ಕಾಡಿನ ಸಮೀಪದಲ್ಲಿ ಈ ಕಬ್ಬಿನ ಗದ್ದೆ ಇರುವ ಕಾರಣಕ್ಕೆ ಕಳೆದ ಮೂರು ವಾರಗಳ ಹಿಂದೆ ಚಿರತೆ ಮರಿಗಳು ಜನಿಸಿರಬಹುದು. ಚಿರತೆ ಮರಿಗಳು ಪೊದೆಯಲ್ಲಿದ್ದ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಈ ಮರಿಗಳಿಗಾಗಿ ತಾಯಿ ಚಿರತೆ ಹುಡುಕಿ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ಜನರಿಗೆ ಜಾಗ್ರತೆಯಿಂದ ಇರುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಸೊಳ್ಳೆ ಪರದೆಯನ್ನು ನುಸುಳಿ ಎರಡು ಮಕ್ಕಳ ಜೊತೆ ಮಲಗಿದ ಚಿರತೆ ಮರಿ!

    ಸೊಳ್ಳೆ ಪರದೆಯನ್ನು ನುಸುಳಿ ಎರಡು ಮಕ್ಕಳ ಜೊತೆ ಮಲಗಿದ ಚಿರತೆ ಮರಿ!

    (ಸಾಂದರ್ಭಿಕ ಚಿತ್ರ)

    ಮುಂಬೈ: ಸೊಳ್ಳೆ ಪರದೆಯ ಅಡಿ ನಿದ್ದೆ ಮಾಡುತ್ತಿದ್ದ ಇಬ್ಬರು ಮಕ್ಕಳ ಬಳಿ ಚಿರತೆ ಮರಿಯನ್ನು ಕಂಡು ತಾಯಿ ಬೆಚ್ಚಿಬಿದ್ದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಇಬ್ಬರು ಮಕ್ಕಳು ಎಂದಿನಂತೆ ಸೊಳ್ಳೆ ಪರದೆ ಅಡಿಯಲ್ಲಿ ಹಾಸಿಗೆಯಲ್ಲಿ ನಿದ್ದೆ ಮಾಡುತ್ತಿದ್ದರು. ಬೆಳಗ್ಗಿನ ಜಾವ ತಾಯಿ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ಮಕ್ಕಳ ಬಳಿ ಮಲಗಿರುವ ಪ್ರಾಣಿಯನ್ನು ಕಂಡು ಬೆಕ್ಕು ಇರಬಹುದು ಎಂದು ಭಾವಿಸಿದ್ದಳು. ಆದರೆ ಬೆಕ್ಕು ಹೀಗೆ ಇರುವುದಿಲ್ಲ ಎಂದು ತಿಳಿದು ಮತ್ತೆ ಆ ಪ್ರಾಣಿಯನ್ನು ನೋಡಿದಾಗ ನಿದ್ದೆ ಮಾಡುತ್ತಿರುವುದು ಚಿರತೆ ಮರಿ ಎನ್ನುವುದು ಗೊತ್ತಾಗಿದೆ.

    ಈ ದೃಶ್ಯವನ್ನು ಕಂಡು ಹೌಹಾರಿದ ತಾಯಿ ಮಕ್ಕಳನ್ನು ಅಲ್ಲಿಂದ ಮೆಲ್ಲನೆ ಸರಿಸಿ ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾಳೆ. ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ 3 ತಿಂಗಳ ಚಿರತೆ ಮರಿಯನ್ನು ರಕ್ಷಿಸಿದ್ದಾರೆ.

    ಅರಣ್ಯಾಧಿಕಾರಿಗಳು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ತಾಯಿ ಬೆಳಗ್ಗೆ ಮುಖ್ಯ ಬಾಗಿಲನ್ನು ತೆರೆದಿದ್ದರಿಂದ ಚಿರತೆ ಮರಿ ಮನೆ ಪ್ರವೇಶಿಸಿ ಮಕ್ಕಳ ಜೊತೆ ನಿದ್ದೆ ಮಾಡಿದೆ. 5 ಗಂಟೆಗೆ ಈ ವಿಚಾರ ನಮಗೆ ಗೊತ್ತಾಗಿ 6 ಗಂಟೆಗೆ ಚಿರತೆ ಮರಿಯನ್ನು ರಕ್ಷಿಸಿದ್ದೇವೆ. ಮರಿ ಯಾರಿಗೂ ತೊಂದರೆ ನೀಡಿಲ್ಲ. ರಕ್ಷಣೆ ಮಾಡಿದ್ದ ಮರಿಯನ್ನು ನಾವು ಸ್ಥಳೀಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಬಿಟ್ಟಿದ್ದೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪರಿಚಿತ ವಾಹನ ಡಿಕ್ಕಿಯಾಗಿ ಮರಿಚಿರತೆ ಬಲಿ- ಕಂದನನ್ನು ಕಳೆದುಕೊಂಡು, ಗಾಯಗೊಂಡ ತಾಯಿ ಚಿರತೆಯ ರೋಧನೆ

    ಅಪರಿಚಿತ ವಾಹನ ಡಿಕ್ಕಿಯಾಗಿ ಮರಿಚಿರತೆ ಬಲಿ- ಕಂದನನ್ನು ಕಳೆದುಕೊಂಡು, ಗಾಯಗೊಂಡ ತಾಯಿ ಚಿರತೆಯ ರೋಧನೆ

    ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಚಿರತೆ ಮರಿಯೊಂದು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ನಡೆದಿದೆ.

    ಚಿರತೆ ಹಾಗೂ ಅದರ ಮರಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮರಿ ಸ್ಥಳದಲ್ಲಿಯೇ ಸಾವನಪ್ಪಿದ್ದು, ತಾಯಿ ಚಿರತೆಯೂ ಕೂಡಾ ಗಾಯಗೊಂಡು ರಸ್ತೆಯ ಪಕ್ಕದಲ್ಲೇ ಬಿದ್ದಿದೆ.

    ಈ ಚಿರತೆಯನ್ನು ಕಾಪಾಡಲೆಂದು ಹೋದಾಗ ಅದು ನೋವಿನಿಂದ ಚೀರಾಡುತ್ತಿತ್ತು. ಈ ದೃಶ್ಯ ನೋಡುಗರಲ್ಲಿ ಮರುಕ ಹುಟ್ಟಿಸಿದೆ.

    ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಹಾಗೂ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿರುವ ತಾಯಿ ಚಿರತೆಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

  • ಮೈಸೂರಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

    ಮೈಸೂರಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

    ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆಯ ಶಿಂಡೇನಹಳ್ಳಿಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ 2 ಚಿರತೆ ಮರಿಗಳು ಪತ್ತೆಯಾಗಿವೆ.

    ಗ್ರಾಮದ ಸತ್ತಿಗೇಗೌಡ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಕಟಾವು ಮಾಡುತ್ತಿದ್ದಾಗ 15 ದಿನಗಳ ಹಿಂದೆ ಜನಿಸಿರುವ 2 ಚಿರತೆ ಮರಿಗಳು ಕಂಡ ಬಂದವು. ತಕ್ಷಣ ಚಿರತೆ ಮರಿಗಳನ್ನು ಸಂರಕ್ಷಿಣೆ ಮಾಡಿ ಹೆಚ್.ಡಿ.ಕೋಟೆ ವಲಯ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ.

    ಚಿರತೆ ಮರಿಗಳು ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದು, ಕೂಡಲೇ ತಾಯಿ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

  • ಕಾರು ಡಿಕ್ಕಿಯಾಗಿ ಚಿರತೆ ಮುಖಕ್ಕೆ ಗಂಭೀರ ಗಾಯ

    ಕಾರು ಡಿಕ್ಕಿಯಾಗಿ ಚಿರತೆ ಮುಖಕ್ಕೆ ಗಂಭೀರ ಗಾಯ

    ಹಾಸನ: ಕಾರು ಡಿಕ್ಕಿ ಹೊಡೆದು ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಕೆರೆ ಏರಿ ಮೇಲೆ ನಡೆದಿದೆ.

    ಕಾರಿನ ಚಾಲಕ ಕೆರೆ ಏರಿ ಮೇಲೆ ಬಂದ ಚಿರತೆಗೆ ಏಕಾಏಕಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಚಿರತೆಯ ಮುಖ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ಪಡೆದು ಅರಸೀಕೆರೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಚಿರತೆಗೆ ಚಿಕಿತ್ಸೆ ನಡೆಯುತ್ತಿದೆ.

    ಕಳೆದ 4 ದಿನಗಳ ಹಿಂದೆ ಅಷ್ಟೇ ಯಗಚಿ ಹಿನ್ನೀರಿನಲ್ಲಿ ಚಿರತೆಯೊಂದು ಸಾವನ್ನಪ್ಪಿತ್ತು.

    https://www.youtube.com/watch?v=Yv_IHlWTQvM