Tag: ಚಿರತೆ ಬೋನ್

  • ಚಿರತೆ ಸೆರೆಗೆ ಇರಿಸಿದ್ದ ಕೋಳಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆದ ಭೂಪ!

    ಚಿರತೆ ಸೆರೆಗೆ ಇರಿಸಿದ್ದ ಕೋಳಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆದ ಭೂಪ!

    ಲಕ್ನೋ: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿಗೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‍ಶಹರ್‌ನಲ್ಲಿ (Bulandshahr) ನಡೆದಿದೆ. ಚಿರತೆಯನ್ನು (Leopard) ಹಿಡಿಯಲು ಇರಿಸಿದ್ದ ಕೋಳಿಯನ್ನು ಹಿಡಿಯಲು ಹೋಗಿ ಬೋನಿನಲ್ಲಿ ಸಿಲುಕಿದ್ದಾನೆ. ಆತನನ್ನ ತಕ್ಷಣ ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಇರಿಸಿದ್ದ ಜಾಗಕ್ಕೆ ತೆರಳಿದಾಗ ಒಳಗೆ ಸಿಲುಕಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಬೋನಿನಲ್ಲಿ ಸೆರೆಯಾದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಬೋನಿನ ಸರಳುಗಳನ್ನು ಹಿಡಿದುಕೊಂಡು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಪಕ್ಷ ಧೂಳಿಪಟವಾಗಲಿದೆ: ಎಸ್. ಆರ್ ಹಿರೇಮಠ್ ಭವಿಷ್ಯ

    ಬೋನು ಇರಿಸಿದ್ದ ಭಾಗದಲ್ಲಿ ಚಿರತೆ ಓಡಾಡುವುದರ ಬಗ್ಗೆ ಮಾಹಿತಿ ಬಂದಿತ್ತು. ಬೋನು ಇರಿಸುವ ಮೊದಲು ಚಿರತೆಗಾಗಿ ಸ್ವಲ್ಪ ಹುಡುಕಾಟ ನಡೆಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗ ಚಿರತೆಗಳು ಹಳ್ಳಿ ಹಾಗೂ ನಗರಗಳಿಗೆ ಬರುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಉತ್ತರಪ್ರದೇಶದ ಗಾಜಿಯಾಬಾದ್ (Ghaziabad) ನ್ಯಾಯಾಲಯದ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಕೊಲೆ ಆರೋಪಿ ಪತ್ತೆಗೆ ನೆರವಾಯ್ತು ಆ ಒಂದು ಮಿಸ್ಡ್‌ಕಾಲ್!

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿರತೆ ಬೋನ್ ನೋಡಲು ತೆರಳಿದ್ದ ಅರಣ್ಯ ವೀಕ್ಷಕ ನಿಗೂಢ ನಾಪತ್ತೆ

    ಚಿರತೆ ಬೋನ್ ನೋಡಲು ತೆರಳಿದ್ದ ಅರಣ್ಯ ವೀಕ್ಷಕ ನಿಗೂಢ ನಾಪತ್ತೆ

    ಚಿತ್ರದುರ್ಗ: ಚಿರತೆ ಸೆರೆಗೆ ಇಟ್ಟಿದ್ದ ಬೋನ್ ನೋಡಲು ತೆರಳಿದ್ದ ಅರಣ್ಯ ಇಲಾಖೆ ವೀಕ್ಷಕರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಮೈಲಾರಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ಬೆಳಗ್ಗೆ 10 ಗಂಟೆ ವೇಳೆಗೆ ಮುತ್ತಿನದೇವರ ಗುಡ್ಡದ ಬಳಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಇಟ್ಟಿದ್ದ ಬೋನ್ ನೋಡಲು ಅರಣ್ಯ ವೀಕ್ಷಕ ಹೆಗ್ಗೆರೆ ಗ್ರಾಮದ ಎಚ್.ಆರ್ ಬಸವರಾಜ್ ತೆರಳಿದ್ದರು. ಈ ವೇಳೆ ಮೈಲಾರಪುರದ ಕಾವಲು ಪ್ರದೇಶದಲ್ಲಿ ತಮ್ಮ ಬೈಕ್ ನಿಲ್ಲಿಸಿ ಅರಣ್ಯದೊಳಗೆ ಹೋಗಿದ್ದರು. ನಂತರ ಅವರ ಸಹೋದ್ಯೋಗಿಗೆ ಕರೆ ಮಾಡಿದ್ದ ಬಸವರಾಜ್, ‘ಎರಡು ಚಿರತೆಗಳು ನನ್ನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಬೇಗ ಬನ್ನಿ’ ಎಂದು ಹೇಳಿ ದೂರವಾಣಿ ಕರೆಯನ್ನು ಕಡಿತಗೊಳಿಸಿದ್ದರು.

    ಈ ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ವಿಶ್ವನಾಥ್ ನೇತೃತ್ವದ ತಂಡ ಸ್ಥಳಕ್ಕೆ ಬಂದು ನೋಡಿದಾಗ ಬಸವರಾಜ್ ಬೈಕ್ ಮಾತ್ರ ಸ್ಥಳದಲ್ಲಿತ್ತು. ಆದರೆ ಬಸವರಾಜ್ ನಾಪತ್ತೆಯಾಗಿದ್ದರು. ಬಳಿಕ ಈ ಬಗ್ಗೆ ಬಸವರಾಜ್ ಕುಟುಂಬಸ್ಥರಿಗೆ ತಿಳಿಸಿ ಅವರ ಬಗ್ಗೆ ವಿಚಾರಿಸುವಂತೆ ಸೂಚಿಸಲಾಯಿತು. ಆದರೆ ಈವರೆಗೂ ಬಸವರಾಜ್ ಪತ್ತೆಯಾಗಿಲ್ಲ. ಹೀಗಾಗಿ ಬಸವರಾಜ್ ಪತ್ತೆಗಾಗಿ ಅರಣ್ಯಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಅವರ ಕುಟುಂಬದಲ್ಲಿ ಆತಂಕ ಮನೆಮಾಡಿದೆ.