ಚಾಮರಾಜನಗರ: ಚಿರತೆ ದಾಳಿಗೆ (Cheetah Attack) ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ನಡೆದಿದೆ.
ಜೂನ್ 26ರಂದು ಚಾಮರಾಜನಗರ ಜಿಲ್ಲೆಯ ಹನೂರು (Hanur) ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಸುಶೀಲ (ಆರೂವರೆ ವರ್ಷ) ಎಂಬ ಬಾಲಕಿಯ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ಮಾಡಿತ್ತು. ರಾತ್ರಿ ವೇಳೆ ಬಾಲಕಿ ಮನೆಯಿಂದ ಹೊರಗೆ ಬಂದಿದ್ದ ಸಂದರ್ಭ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ಬಾಲಕಿಯ ಕತ್ತಿನ ಬಳಿ ಗಂಭೀರ ಗಾಯಗಳಾಗಿತ್ತು. ಈ ಹಿನ್ನೆಲೆ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ (KR Hospital) ದಾಖಲಿಸಲಾಗಿತ್ತು. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ – ಎಸ್ಪಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಬಾಲಕಿಗೆ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಮಲಗಿದ್ದಲ್ಲಿಯೇ ಇಬ್ಬರು ಯುವಕರ ಅನುಮಾನಾಸ್ಪದ ಸಾವು
ಕಾರವಾರ: ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ (Dog) ಚಿರತೆ ಹೊತ್ತೊಯ್ದ ಘಟನೆ ಸಿದ್ದಾಪುರದ (Siddapur) ಅರಸಿನಗೂಡು ಎಂಬಲ್ಲಿ ನಡೆದಿದೆ. ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪ್ರಕಾಶ ಹೆಗಡೆ ಎಂಬವರು ಸಾಕಿದ್ದ ನಾಯಿಯನ್ನು ಚಿರತೆ (Leopard) ಹೊತ್ತೊಯ್ದಿದೆ. ಒಂದು ವಾರದಿಂದ ಚಿರತೆ ಅರಸಿನಗೂಡ ಗ್ರಾಮದ ಸುತ್ತಮುತ್ತ ಓಡಾಡುತ್ತಿದೆ. ಇದನ್ನೂ ಓದಿ: ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು
ಉತ್ತರ ಕನ್ನಡದ (Uttara Kannada) ಹೊನ್ನಾವರದ (Honnavar) ಗ್ರಾಮಗಳಲ್ಲಿ ವಾರದ ಹಿಂದೆ ಚಿರತೆ ದಾಳಿ ನಡೆಸಿ ಆರು ದನಕರುಗಳನ್ನು ತಿಂದು ಹಾಕಿತ್ತು. ಈ ಹಿಂದೆ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ (Forest Department) ಬೋನ್ ಇರಿಸಿ ಒಂದು ತಿಂಗಳು ಕಾರ್ಯಾಚರಣೆ ನಡೆಸಿತ್ತು. ಆದರೆ ಚಿರತೆ ಬೋನ್‍ಗೆ ಸಿಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಚಿರತೆಯ ಉಪಟಳ ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದ್ದು ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ
ರಾಮನಗರ: ಜಿಲ್ಲೆಯಲ್ಲಿ ಮತ್ತಷ್ಟು ಚಿರತೆ (Leopard) ದಾಳಿ ಭೀತಿ ಹೆಚ್ಚಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ಮಾಗಡಿ ತಾಲೂಕಿನ ಮರಳುದೇವನ ಪುರ ಗ್ರಾಮದಲ್ಲಿ ನಡೆದಿದೆ.
ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಯುವತಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿದ್ದಾಳೆ. ಬಳಿಕ ಮರದಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ.
ಗಾಯಾಳು ವಿಜಯಲಕ್ಷ್ಮಿಯನ್ನು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆ (Magadi Police Station) ಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಚಿರತೆ ದಾಳಿಗೆ ಒಳಗಾದ ಕುಟುಂಬಗಳ ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ.
ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಮೃತಪಟ್ಟ 11 ವರ್ಷದ ಬಾಲಕ ಜಯಂತ್ ನಿವಾಸ ಹಾಗೂ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಮೃತಪಟ್ಟ ಸಿದ್ದಮ್ಮ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಗ್ರಾಮಸ್ಥರ ಅಹವಾಲು ಆಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತದೊಂದಿಗೆ ಸಭೆ ಕರೆಯಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ. ಕಬ್ಬು ಕಟಾವು, ರಸ್ತೆ ಬದಿಯ ಮರದ ರೆಂಬೆ ಕಟಾವು, ಗ್ರಾಮಕ್ಕೆ ಬಸ್ ಸೌಕರ್ಯ, ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವುದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಕುರಿತು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ ಎಂದರು. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ
ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ. ಮತ್ತೆ ಈ ರೀತಿಯ ಅನಾಹುತ ಮರುಕಳಿಸದಂತೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ಕಲ್ಪಿಸಲಾಗಿದೆ. ಚಿರತೆ ದಾಳಿ ತಡೆಗೆ ಜಿಲ್ಲಾಡಳಿತದ ಜೊತೆ ವಿಶೇಷ ಸಭೆ ನಡೆಸಿ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ, ಶಾಲೆಗೆ ತೆರಳಲು ಮಕ್ಕಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಗ್ರಾಮಸ್ಥರು ಬಿಚ್ಚಿಟ್ಟರು. ಇದೇ ವೇಳೆ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಸಚಿವರು, ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗುವುದು.
ಶಾಸಕರಾದ ಎಂ.ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಮಂಡ್ಯ: ಹಾಡುಹಗಲೇ ರೈತರೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚಂದಹಳ್ಳಿಯಲ್ಲಿ ನಡೆದಿದೆ.
ರೈತ ದೊಡ್ಡಯ್ಯ (65) ಚಿರತೆ ದಾಳಿಗೆ ಒಳಗಾದವರು. ಅವರು ಕುರಿ ಮೇಸುತ್ತಿದ್ದ ವೇಳೆ ಚಿರತೆಯೊಂದು ದಾಳಿ ಮಾಡಿದ್ದು, ಭಯದಿಂದ ಕಿರುಚಿಕೊಂಡಿದ್ದಾರೆ. ಶಬ್ಧ ಕೇಳುತ್ತಿದ್ದಂತೆ ನೆರೆಹೊರೆಯ ಹೊಲದ ರೈತರು ತಕ್ಷಣವೇ ಬಂದು ಚಿರತೆಯನ್ನು ಓಡಿಸಿದ್ದಾರೆ.
ದಾಳಿಗೆ ಒಳಗಾದ ರೈತ ದೊಡ್ಡಯ್ಯ ಅವರಿಗೆ ಕೈ, ಕಾಲು ಸೇರಿದಂತೆ ಹಲವೆಡೆ ಗಾಯಗಳಾಗಿದ್ದು, ಮಳವಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ದಾಳಿಯು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ರಾಮನಗರ: ದನ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕಸೂಲಿಕೆರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಸೂಲಿಕೆರೆ ಗ್ರಾಮದ ಪುಟ್ಟಹಲಗಮ್ಮ ಚಿರತೆ ದಾಳಿಗೆ ಸಿಕ್ಕಿ ಸಾವನ್ನಪ್ಪಿದ ಮಹಿಳೆ. ಇಂದು ದನ ಮೇಯಿಸಲು ಗ್ರಾಮದ ಹೊರಭಾಗದ ಕಾಡಿಗೆ ಹೋಗಿದ್ದರು. ಸಾಯಂಕಾಲದ ವೇಳೆಗೆ ಮರಳಿ ಮನೆಗೆ ದನ ಹೊಡೆದುಕೊಂಡು ಬರಲು ಮುಂದಾಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ.
ಪುಟ್ಟ ಹಲಗಮ್ಮ ಕುತ್ತಿಗೆ ಭಾಗದಲ್ಲಿ ಚಿರತೆ ಕಚ್ಚಿದ್ದು ತೀವ್ರರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಸಾವನದುರ್ಗ ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದಿರುವ ಚಿರತೆ ಮಹಿಳೆಯನ್ನ ಕೊಂದು ಹಾಕಿದೆ. ಪದೇ ಪದೇ ಕಾಡುಪ್ರಾಣಿಗಳ ದಾಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದ ಗ್ರಾಮಸ್ಥರು ಇದೀಗ ಮಹಿಳೆಯನ್ನು ಕಳೆದುಕೊಂಡಿದ್ದಾರೆ.
ರಾಮನಗರ: ಚಿರತೆ ದಾಳಿಗೆ ಮೂರು ಕುರಿ ಮತ್ತು ಎರಡು ಮೇಕೆ ಬಲಿಯಾದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಧು ಎಂಬವರಿಗೆ ಸೇರಿದ ಮೂರು ಕುರಿ ಹಾಗೂ ಎರಡು ಮೇಕೆಗಳನ್ನು ಭಾನುವಾರ ತಡರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಮಧು ಅವರು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಕುರಿ, ಮೇಕೆ ಸಾಕಾಣೆ ಮಾಡಿಕೊಂಡಿದ್ದರು. ಆದರೆ ಈಗ ಚಿರತೆ ದಾಳಿಯಿಂದ ಕುರಿ, ಮೇಕೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಗ್ರಾಮದಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿದ್ದರೂ ಅರಣ್ಯ ಅಧಿಕಾರಿಗಳು ತಲೆ ಕೆಡಸಿಕೊಂಡಿಲ್ಲ. ಈಗ ಮತ್ತೆ ಕುರಿ ಮೇಕೆಗಳ ಸಾವಾಗಿದ್ದರಿಂದ ಗ್ರಾಮಸ್ಥರು ಆಕ್ರೋಶದಿಂದ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.