ಭಾರತೀಯ ಸಿನಿಮಾ ರಂಗದಲ್ಲೇ ದಾಖಲೆ ಸೃಷ್ಟಿ ಮಾಡಿರುವ ಕನ್ನಡದ ಕೆಜಿಎಫ್ ಸಿನಿಮಾ, ಮುಂದುವರೆದ ಭಾಗ ಬರತ್ತಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಸದ್ಯಕ್ಕಂತೂ ಕೆಜಿಎಫ್ 3 ಸಿನಿಮಾ ಇಲ್ಲವೆಂದು, ಮುಂದೆ ತಾವು ಮಾಡಬೇಕಾದ ಸಿನಿಮಾಗಳ ಕಾರಣದಿಂದಾಗಿ ಕೆಜಿಎಫ್ 3 ಚಿತ್ರವನ್ನು ಮಾಡುತ್ತಿಲ್ಲವೆಂದು ಘೋಷಿಸಿಯಾಗಿದೆ. ಆದರೂ, ತಮಿಳಿನಲ್ಲೊಂದು ಕೆಜಿಎಫ್ ಸಿನಿಮಾ ಮೂಡಿ ಬರಲಿದೆ.

ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವ ಕೆಜಿಎಫ್ ಸಿನಿಮಾದಲ್ಲಿ ಕಾಲ್ಪನಿಕ ಕಥೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೆಜಿಎಫ್ ಕಥೆಯನ್ನು ಅದು ಒಳಗೊಂಡಿರಲಿಲ್ಲ. ಹಾಗಾಗಿ ಕೆಜಿಎಫ್ ನಲ್ಲಿ ನಡೆದ ರಿಯಲ್ ಘಟನೆಯನ್ನು ಕೆಜಿಎಫ್ ಹೆಸರಿನ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರಂತೆ ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್. ಅಲ್ಲಿ ರಿಯಲ್ ಆಗಿ ನಡೆದ ಸಂಘರ್ಷಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ಹಾಗಾಗಿ ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಆಗಿ ಬರುತ್ತಿರುವ ಸಿನಿಮಾ ಇದಾಗಲಿದೆಯಂತೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

ಕೆಜಿಎಫ್ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂದಿದ್ದಾರೆ ವಿಕ್ರಮ್. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಇದಾಗಲಿದೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಪಾ.ರಂಜಿತ್ ದೇಸಿಯ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕ. ಶೋಷಿತರ ನೋವುಗಳನ್ನು ದೃಶ್ಯಕ್ಕೆ ತಂದ ಹೆಗ್ಗಳಿಕೆ ಇವರದ್ದು. ಹಾಗಾಗಿ ಕೆಜಿಎಫ್ ಸಿನಿಮಾ ಹೊಸ ರೀತಿಯೊಂದಿಗೆ ಬರುವುದು ಗ್ಯಾರಂಟಿ.






ಕಾಲಿವುಡ್ ನಟ ಚಿಯಾನ್ ವಿಕ್ರಮ್ ಮುಂದಿನ 61ನೇ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ. ಕಬಾಲಿ, ಕಾಲಾ ಖ್ಯಾತಿಯ ನಿರ್ದೇಶಕ ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಮತ್ತು ರಶ್ಮಿಕಾ ಜೋಡಿಯಾಗಿ ಮಿಂಚಲಿದ್ದಾರೆ. ಲಕ್ಕಿ ಹೀರೋಯಿನ್ ರಶ್ಮಿಕಾ, ವಿಕ್ರಮ್‌ಗೆ ನಾಯಕಿಯಾಗಿ ನಟಿಸೋದು ಸೂಕ್ತ ಎನಿಸಿ ಚಿತ್ರತಂಡ ಈ ಬಿಗ್ ಆಫರ್ ಅನ್ನು `ಪುಷ್ಪ’ ಬ್ಯೂಟಿಗೆ ಕೊಡಲಾಗಿದೆಯಂತೆ.ಇದನ್ನೂ ಓದಿ:


`ಕೆಜಿಎಫ್ 2′ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ, ಈಗ ತಮಿಳಿನ ಚೊಚ್ಚಲ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟಿಸಿರುವ ಎರಡು ಚಿತ್ರದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ನಾಯಕಿ, ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೊದಲ ಬಾರಿಗೆ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೆಜಿಎಫ್ ನಟಿ ಶ್ರೀನಿಧಿ ನಟನೆಯ ಚಿತ್ರ ʻಕೋಬ್ರಾʼ ಆಗಸ್ಟ್ 11ರಂದು ತೆರೆಗೆ ಅಬ್ಬರಿಸುತ್ತಿದೆ. ಇನ್ನು ಕಾಲಿವುಡ್‌ನಲ್ಲಿ ಶ್ರೀನಿಧಿ ಶೆಟ್ಟಿ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡುತ್ತಾರೆ ಅಂತಾ ಕಾದುನೋಡಬೇಕಿದೆ.