Tag: ಚಿಮ್ಮನಕಟ್ಟಿ

  • ಬಿಪಿ, ಶುಗರ್ ಏನಿಲ್ಲ ಆದ್ರೆ ಆರೋಗ್ಯ ಸರಿಯಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ: ಟಿಕೆಟ್ ವಂಚಿತ ಅಭ್ಯರ್ಥಿ

    ಬಿಪಿ, ಶುಗರ್ ಏನಿಲ್ಲ ಆದ್ರೆ ಆರೋಗ್ಯ ಸರಿಯಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ: ಟಿಕೆಟ್ ವಂಚಿತ ಅಭ್ಯರ್ಥಿ

    ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ 218 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಬಾದಾಮಿಯ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಭಿನ್ನಮತ ಮುಗಿಲೆದ್ದಿದೆ.

    ಭಾನುವಾರ ರಾತ್ರಿ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಇದರಲ್ಲಿ ಈ ಬಾರಿ ಹಾಲಿ ಶಾಸಕರಾದ ಬಾಗಲಕೋಟೆಯ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ರನ್ನು ಕೈಬಿಡಲಾಗಿದೆ. ಸದ್ಯಕ್ಕೆ ಬಾದಾಮಿ ಕ್ಷೇತ್ರದಲ್ಲಿ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

    ಟಿಕೆಟ್ ಸಿಗದ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಪಕ್ಷ ಟಿಕೆಟ್ ಘೋಷಣೆ ಮಾಡಿಲ್ಲ. ಸಿಎಂ ಬಾದಾಮಿ ಅಭ್ಯರ್ಥಿಯಾಗಿದ್ದರೆ ಆದರೆ ಸ್ಥಾನ ಬಿಟ್ಟುಕೊಡುತ್ತಿದೆ. ಆದರೆ ಈಗ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಆದ್ದರಿಂದ ಈಗ ಸಾಧ್ಯವಿಲ್ಲ ಸಿಎಂ ಕೂಡಾ ನನಗೆ ಬಿಫಾರಂ ಕೊಡುತ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ನನ್ನ ಆರೋಗ್ಯ ಸರಿಯಿಲ್ಲ ಅನ್ನೋದು ಸುಳ್ಳು. ನನಗೆ ಬಿಪಿ, ಶುಗರ್ ಏನು ಇಲ್ಲ. ನಾನು ಆರೋಗ್ಯವಾಗಿದ್ದೀನಿ. ನಾನು 5 ಬಾರಿ ಶಾಸಕನಾಗಿದ್ದೀನಿ. 6 ನೇ ಬಾರಿಯೂ ನಾನೇ ಗೆದ್ದು ಶಾಸಕನಾಗುತ್ತೇನೆ. ಕಾಂಗ್ರೆಸ್ ಟಿಕೆಟ್ ಕೊಡುತ್ತದೆ. ನಾನು ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಭರವಸೆ ಕೊಟ್ಟಿದ್ದಾರೆ. ಮುಂದಿನ 2 ದಿನ ಕಾದು ನೋಡಿ, ಮತ್ತೆ ನಾನೇ ಟಿಕೆಟ್ ತಗೊಂಡು ಶಾಸಕನಾಗುವೆ. ಟಿಕೆಟ್ ನನಗೆ ಸಿಗುತ್ತದೆ ಎಂದು ಹೇಳಿದ್ದಾರೆ.

  • ನಾವು ಸಿದ್ದರಾಮಯ್ಯನವರ ಅನುಚರರು, ಅವರ ನಿರ್ಧಾರಕ್ಕೆ ಬದ್ಧ: ಹೆಚ್‍ವೈ ಮೇಟಿ

    ನಾವು ಸಿದ್ದರಾಮಯ್ಯನವರ ಅನುಚರರು, ಅವರ ನಿರ್ಧಾರಕ್ಕೆ ಬದ್ಧ: ಹೆಚ್‍ವೈ ಮೇಟಿ

    ಬೆಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಮುಖ್ಯವಾದದ್ದು. ನಾವೆಲ್ಲಾ ಅವರ ಅನುಚರರು ಎಂದು ಮಾಜಿ ಸಚಿವ ಹೆಚ್‍ವೈ ಮೇಟಿ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಯಾರಿಗೆ ಟಿಕೆಟ್ ಸಿಗುತ್ತದೊ ಬಿಡುತ್ತದೋ. ನಮಗೆ ಯಾವುದೇ ಅಸಮಾಧಾನ ಬೇಸರ ಇಲ್ಲ. ಅವರ ಆಯ್ಕೆಗೆ ಬದ್ಧರಾಗಿದ್ದೇವೆ. ಅವರು ಹೇಳಿದಂತೆ ಕೇಳುತ್ತೇವೆ ಎಂದು ತಿಳಿಸಿದ್ದಾರೆ.

    ಚಿಮ್ಮನಕಟ್ಟಿಯವರೇ ತಮ್ಮ ಸ್ವಕ್ಷೇತ್ರ ಬದಾಮಿಗೆ ಮುಖ್ಯಮಂತ್ರಿಗಳನ್ನು ಆಹ್ವಾನ ಮಾಡಿದ್ದಾರೆ. ಜಿಲ್ಲಾ ಮುಖಂಡರು ನಾಯಕರುಗಳು ಮುಖ್ಯಮಂತ್ರಿಗಳ ಪರ ಪ್ರಚಾರ ಮಾಡಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

    ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳು ಬರಬೇಕು ಬಂದಲ್ಲಿ ಒಳ್ಳೆಯದಾಗುತ್ತದೆ. ಬಹಳಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಬರಬೇಕು. ಜನಾಭಿಪ್ರಾಯ ಅವರ ಮೇಲೆ ಇದೆ. ನಮ್ಮ ಜಿಲ್ಲೆಯಿಂದಲೇ ಸ್ಪರ್ಧಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ನಮ್ಮ ಮಾತಿಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಮಾಜಿ ಸಚಿವರು ತಿಳಿಸಿದರು.

  • ಬದಾಮಿಯಿಂದ ಸಿಎಂ ಸ್ಪರ್ಧೆ ಮಾಡ್ತಾರಾ? ಈ ಕ್ಷೇತ್ರ ಸೇಫ್ ಯಾಕೆ?

    ಬದಾಮಿಯಿಂದ ಸಿಎಂ ಸ್ಪರ್ಧೆ ಮಾಡ್ತಾರಾ? ಈ ಕ್ಷೇತ್ರ ಸೇಫ್ ಯಾಕೆ?

    ಬೆಂಗಳೂರು: ಈ ಬಾರಿ ಚಾಮುಂಡೇಶ್ವರಿ ಜೊತೆಗೆ ಬಾಗಲಕೋಟೆಯ ಬದಾಮಿಯಿಂದಲೂ ಸ್ಪರ್ಧಿಸಲು ಸಿಎಂ ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರು ದಿನಗಳ ಕಾಲ ಸತತ ಪ್ರಚಾರ ನಡೆಸಿದ್ದಾರೆ. ವಿಪಕ್ಷ ನಾಯಕರ ಸವಾಲು ಕ್ಷೇತ್ರದಲ್ಲಿ ತುಸು ಹೆಚ್ಚೇ ಇದ್ದಹಾಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸೋಕೆ ತಯಾರಿ ನಡೆಸಿದ್ದಾರೆ. ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಬಯಲು ಮಾಡಿದ್ದಾರೆ. ನಮ್ಮಲ್ಲಿ ಸಿಎಂ ಹೊರತುಪಡಿಸಿ ಬೇರೆ ಯಾರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿಲ್ಲ ಎಂದು ಹೇಳುವ ಮೂಲಕ ವಿಚಾರ ಬಹಿರಂಗವಾಗಿದೆ.

    ಒಂದು ವೇಳೆ ಸಿದ್ದರಾಮಯ್ಯ ಅವರು ಬದಾಮಿಯಿಂದ ಕಣಕ್ಕಿಳಿದರೆ ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ ಕಣದಿಂದ ಹಿಂದೆ ಸರಿಯಬೇಕಾಗುತ್ತದೆ. ಇನ್ನು ಸಿಎಂ ಕಣಕ್ಕಿಳಿದರೆ ಅವರ ಎದುರಾಳಿಯಾಗಿ ಪ್ರಬಲ ಅಭ್ಯರ್ಥಿಯನ್ನೇ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಆದರೆ ಅಭ್ಯರ್ಥಿ ಯಾರು ಅನ್ನುವುದು ಇನ್ನೂ ಫೈನಲ್ ಆಗಿಲ್ಲ. ಬದಾಮಿ ಇಂದ ಸಿಎಂ ಸ್ಪರ್ಧೆಗೆ ಜಾತಿ ಲೆಕ್ಕಾಚಾರ ಕಾರಣ ಎನ್ನಲಾಗಿದೆ.

    ಮತದಾರರ ಸಂಖ್ಯೆ ಎಷ್ಟಿದೆ?
    ಕ್ಷೇತ್ರದ ಒಟ್ಟು ಮತದಾರರು – 2,12,184
    ಪುರುಷ ಮತದಾರರು – 1,07,074
    ಮಹಿಳಾ ಮತದಾರರು – 1,05,110

    ಬದಾಮಿ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
    ಕುರುಬ – 46 ಸಾವಿರ
    ಗಾಣಿಗ – 26 ಸಾವಿರ
    ಲಿಂಗಾಯತ – 32 ಸಾವಿರ (ಪಂಚಮಸಾಲಿ. ಬಣಜಿಗ)
    ನೇಕಾರ – 17 ಸಾವಿರ
    ಪ. ಜಾತಿ ಪಂಗಡ – 25 ಸಾವಿರ
    ಅಲ್ಪ ಸಂಖ್ಯಾತರು – 12 ಸಾವಿರ
    ಮರಾಠಾ ಕ್ಷತ್ರೀಯ – 9 ಸಾವಿರ
    ವಾಲ್ಮೀಕಿ – 13 ಸಾವಿರ
    ಬಂಜಾರ – 6 ಸಾವಿರ
    ರೆಡ್ಡಿ – 10 ಸಾವಿರ
    ಇತರರು – 16 ಸಾವಿರ

    2013ರ ಫಲಿತಾಂಶ ಏನಿತ್ತು?
    2013ರ ಚುನಾವಣೆಯಲ್ಲಿ ಬಿಬಿ ಚಿಮ್ಮನಕಟ್ಟಿ 15,113 ಮತಗಳ ಅಂತರದಿಂದ ಜಯಗಳಿಸಿದ್ದರು. ಚಿಮ್ಮನಕಟ್ಟಿ 57,446(41.3%) ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಅವರು 42,333(30.4%) ಮತಗಳನ್ನು ಪಡೆದಿದ್ದರು. ಕಲ್ಲಪ್ಪ ಪಟ್ಟಣಶೆಟ್ಟಿ ಅವರು 30,310(21.8%) ಮತಗಳನ್ನು ಗಳಿಸಿದ್ದರು.