Tag: ಚಿನ್ಮಯಿ ಶ್ರೀಪಾದ

  • ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ

    ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ

    ಸೌತ್ ಸುಂದರಿ ಸಮಂತಾ (Actress Samantha) ಮತ್ತೆ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಸಮಂತಾ ಬದುಕಿನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಯಿಂದ ಹೊರಬಂದು ಚಿತ್ರಗಳಲ್ಲಿ ಆಕ್ಟೀವ್ ಆಗಿರುವ ನಟಿ ಮತ್ತೊಂದು ಶಾಕ್ ಎದುರಾಗಿದೆ. ಆತ್ಮೀಯ ಸ್ನೇಹಿತೆ ಜೊತೆ ಬ್ರೇಕಪ್ ಆಗಿದೆ.

    ವೈಯಕ್ತಿಕ ಬದುಕಲ್ಲಿ ಏರುಪೇರಾದ ಮೇಲೆ ಸಿನಿಮಾಗಳತ್ತ ಸಮಂತಾ ಮುಖ ಮಾಡಿದ್ದರು. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರುವ ನಟಿಯ ಬಗ್ಗೆ ಹೊಸ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. `ಏ ಮಾಯ ಚೇಸಾವೆ’ (Ye Maya Chesave) ಮೂಲಕ ಸಿನಿ ಪಯಣ ಆರಂಭಿಸಿದ ಸಮಂತಾಗೆ, ಅವರ ಪಾತ್ರಕ್ಕೆ ಖ್ಯಾತ ಡಬ್ಬಿಂಗ್ ತಾರೆ ಚಿನ್ಮಯಿ ಶ್ರೀಪಾದ (Chinamayi Shreepadha)  ಧ್ವನಿ ನೀಡಿದ್ದರು. ಇದನ್ನೂ ಓದಿ:ತಂಡು ಬಟ್ಟೆ ಧರಿಸಿ, ನಡೆಯೋಕು ಕಷ್ಟಪಡ್ತಿದ್ದ ಉರ್ಫಿಗೆ ನೆಟ್ಟಿಗರಿಂದ ತರಾಟೆ

    ಸ್ಯಾಮ್ ಮೊದಲ ಚಿತ್ರ ಹಿಟ್ ಆದ್ಮೇಲೆ ಆಕೆಯ ಪ್ರತಿ ಸಿನಿಮಾಗೆ ಚಿನ್ಮಯಿ ಡಬ್ಬಿಂಗ್ ಮಾಡುತ್ತಿದ್ದರು. ವೈಯಕ್ತಿಕವಾಗಿಯೂ ಈ ಗೆಳೆತನ ಮುಂದುವರೆದಿತ್ತು. ಆದರೆ ಈಗ ಇವರಿಬ್ಬರು ದೂರವಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇನ್ನೂ ತಮ್ಮ ಮುಂದಿನ ಚಿತ್ರ ಯಶೋದಾಗೆ ಸಮಂತಾನೇ ಡಬ್ಬಿಂಗ್ ಮಾಡುವುದಾಗಿ ಹಠ ಮಾಡಿದ್ದರಂತೆ. ಆದರೆ ನಿರ್ಮಾಪರು ಚಿನ್ಮಯಿಗಾಗಿ ಹುಡುಕುತ್ತಿದ್ದಾರೆ.

    ಸಮಂತಾ ಹಠ ಅವರ ಒತ್ತಾಯಕ್ಕೆ ಕಾರಣವೇನು ಎಂಬುದನ್ನ ಎಲ್ಲರೂ ಚರ್ಚಿಸುತ್ತಿದ್ದಾರೆ. ಸ್ಯಾಮ್ ಮತ್ತು ಚಿನ್ಮಯಿ ನಡುವೆ ಗ್ಯಾಪ್ ಇರೋದು ನಿಜ ಎನ್ನಲಾಗುತ್ತಿದೆ. ಅದಕ್ಕೆ ಸಮಂತಾ ಕೇಳದೇ ಡಬ್ಬಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸೆಂಡ್ ನ್ಯೂಡ್ಸ್’ ಎಂದ ಅಭಿಮಾನಿಗೆ ನ್ಯೂಡ್ ಫೋಟೋ ಕಳುಹಿಸಿದ ಗಾಯಕಿ

    ‘ಸೆಂಡ್ ನ್ಯೂಡ್ಸ್’ ಎಂದ ಅಭಿಮಾನಿಗೆ ನ್ಯೂಡ್ ಫೋಟೋ ಕಳುಹಿಸಿದ ಗಾಯಕಿ

    ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದಗೆ ಅಭಿಮಾನಿಯೊಬ್ಬ ನ್ಯೂಡ್ ಫೋಟೋ ಕಳುಹಿಸಿ ಎಂದು ಕೇಳಿಕೊಂಡಿದ್ದಾನೆ. ಅಭಿಮಾನಿಯ ಕೋರಿಕೆಗೆ ಚಿನ್ಮಯಿ ಲಿಪ್‍ಸ್ಟಿಕ್ ಫೋಟೋ ಕಳುಹಿಸುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

    ನ್ಯೂಡ್ ಚಿತ್ರ ಕೇಳಿದ ಅಭಿಮಾನಿಯ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ಅದನ್ನು ಚಿನ್ಮಯಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ಸ್ವಲ್ಪ ತಮಾಷೆಗಾಗಿ” ಎಂದು ಬರೆದುಕೊಂಡಿದ್ದಾರೆ.

    ಅಭಿಮಾನಿ ನ್ಯೂಡ್ ಫೋಟೋ ಕೇಳಿದಕ್ಕೆ ಚಿನ್ಮಯಿ ನ್ಯೂಡ್ ಲಿಪ್‍ಸ್ಟಿಕ್ (ಮನುಷ್ಯರ ಚರ್ಮಕ್ಕೆ ಹೊಂದಿಕೊಳ್ಳುವ ಲಿಪ್‍ಸ್ಟಿಕ್ ಕಲರ್) ಫೋಟೋವನ್ನು ಕಳುಹಿಸಿದ್ದಾರೆ. ಅಲ್ಲದೆ “ಇದು ನನ್ನ ಫೆವರೇಟ್ ನ್ಯೂಡ್” ಎಂದು ಮೆಸೇಜ್ ಮಾಡುವ ಮೂಲಕ ಜಾಣತನ ಮೆರೆದಿದ್ದಾರೆ.

    ಚಿನ್ಮಯಿ ಅವರ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಚಿನ್ಮಯಿ ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ಗಾಯಕಿಯಾಗಿದ್ದು, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.