Tag: ಚಿನ್ನ ವಂಚನೆ

  • ಮಂಡ್ಯದಲ್ಲಿ ಐಶ್ವರ್ಯ ಗೌಡಳಿಂದ ವಂಚನೆಗೆ ಒಳಗಾಗಿದ್ರೆ ದೂರು ನೀಡಿ: ಎಸ್ಪಿ

    ಮಂಡ್ಯದಲ್ಲಿ ಐಶ್ವರ್ಯ ಗೌಡಳಿಂದ ವಂಚನೆಗೆ ಒಳಗಾಗಿದ್ರೆ ದೂರು ನೀಡಿ: ಎಸ್ಪಿ

    ಮಂಡ್ಯ: 9 ಕೋಟಿ ರೂ. ಚಿನ್ನ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿರುವ ಐಶ್ವರ್ಯ ಗೌಡ (Aishwarya Gowda) ವಿರುದ್ಧ ಮತ್ತೆ ಸಾಲುಸಾಲು ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಸ್ವತಃ ಮಂಡ್ಯ ಎಸ್ಪಿ (Mandya SP) ಮಲ್ಲಿಕಾರ್ಜುನ ಬಾಲದಂಡಿ, ಐಶ್ವರ್ಯ ಗೌಡರಿಂದ ಏನಾದರೂ ಜನರು ವಂಚನೆಗೆ ಒಳಗಾಗಿದ್ದರೆ ಧೈರ್ಯದಿಂದ ದೂರು ನೀಡವಂತೆ ಮನವಿ ಮಾಡಿದ್ದಾರೆ.

    ನಾನು ಡಿ.ಕೆ.ಸುರೇಶ್‌ಗೆ ತಂಗಿ, ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ನನಗೆ ತುಂಬಾ ಪರಿಚಯ. ನಿಮಗೆ ಏನಾದರೂ ಕೆಲಸ ಆಗಬೇಕಿದ್ದರೆ ಹೇಳಿ, ನಾನು ಅವರಿಂದ ಮಾಡಿಸಿಕೊಡುತ್ತೇನೆ. ಹೀಗೆ ಬಣ್ಣಬಣ್ಣದ ಮಾತಿನಿಂದ ಜನರನ್ನು ಯಾಮಾರಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಚಾಲಾಕಿ ಐಶ್ವರ್ಯ ಗೌಡಳ ಮೇಲೆ ಬಂದಿದೆ. ಕೇವಲ ಬೆಂಗಳೂರು ಮಾತ್ರವಲ್ಲ, ಮಂಡ್ಯದಲ್ಲೂ ಸಹ ಖತರ್ನಾಕ್ ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ವಿರುದ್ಧ ಪ್ರಕರಣ ದಾಖಲಾಗುತ್ತಿವೆ. ಇದನ್ನೂ ಓದಿ: ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

    ಐಶ್ವರ್ಯಗೌಡ ವಿರುದ್ಧ ಕೆಲವರು ಈಗಾಗಲೇ ದೂರು ನೀಡಿದ್ದರೆ, ಇನ್ನೂ ಹಲವರು ಎಸ್ಪಿ ಕಚೇರಿ ಹಾಗೂ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ತೆರಳಿ ಐಶ್ವರ್ಯ ಗೌಡ ವಿರುದ್ಧ ದೂರು ನೀಡಲು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಸೂಕ್ತ ದಾಖಲೆಗಳನ್ನು ತಂದು ದೂರು ದಾಖಲಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

  • ನನಗೇ ಗೊತ್ತಿಲ್ಲದೇ ಇನ್ನೊಬಳು ತಂಗಿ ಯಾರು ಅಂತ ನಮ್ಮಣ್ಣ ಬೇಜಾರು ಮಾಡಿಕೊಂಡಿದ್ದಾನಂತೆ: ಡಿಕೆಸು

    ನನಗೇ ಗೊತ್ತಿಲ್ಲದೇ ಇನ್ನೊಬಳು ತಂಗಿ ಯಾರು ಅಂತ ನಮ್ಮಣ್ಣ ಬೇಜಾರು ಮಾಡಿಕೊಂಡಿದ್ದಾನಂತೆ: ಡಿಕೆಸು

    – ಐಶ್ವರ್ಯ ಗೌಡ ವಂಚನೆ ಪ್ರಕರಣ ಸಂಬಂಧ ದೂರು ಕೊಡಲು ನಿರ್ಧಾರ

    ಬೆಂಗಳೂರು: ಡಿಕೆ ಸುರೇಶ್ (DK Suresh)  ತಂಗಿ ಎಂದು ಹೇಳಿ ಐಶರ್ಯಾ ಗೌಡ ವಂಚನೆ ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಮಾಜಿ ಸಂಸದ ಡಿಕೆ ಸುರೇಶ್ ನಿರ್ಧರಿಸಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನನ್ನ ಹೆಸರು ದುರ್ಬಳಕೆ ಆಗಿದೆ. ನಮಗೆ ಇರೋದು ಒಬ್ಬಳೇ ತಂಗಿ. ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ. ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿಕೆ ಸುರೇಶ್‌ ಮುಗುಳುನಕ್ಕರು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ನನ್ನ ಹೆಸರು ಬಳಕೆ ಮಾಡಿದ್ರೆ ಕ್ರಮ ತಗೊಳ್ಳಿ ಅಂತ ಪೊಲೀಸರಿಗೆ ಹೇಳ್ತೀನಿ, ಪೊಲೀಸರಿಗೆ ದೂರು ಕೊಡ್ತೀನಿ ಅಂತಾ ತಿಳಿಸಿದ್ರು. ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಹೋಗಿದ್ದೆ, ಇನ್ನೊಂದು ಕಾರ್ಯಕ್ರಮಕ್ಕೆ ಕರೆದಿದ್ದರು ಆದ್ರೆ ನಾನು ಹೋಗಿಲ್ಲ ಅಂದ್ರು. ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

    ಪೊಲೀಸ್ ಕಮಿಷನರ್‌ಗೆ ಎರಡು ಮೂರು ದಿನದಲ್ಲಿ ಪತ್ರ ಬರೆಯಲಿದ್ದೇನೆ. ಬೆಳ್ಳಿ ಗದೆ ನಾವು ಮನೆಗೆ ತರಲ್ಲ, ಅಲ್ಲೆ ಬೆಳ್ಳಿ ಗದೆಯನ್ನ ಕೊಟ್ಟು ಬಂದಿದ್ದೇನೆ. ನಾನು ನಮ್ಮ ಅಣ್ಣಾ ಯಾವುದನ್ನೂ ಮನೆಗೆ ತರಲ್ಲ. ಪೊಲೀಸ್ ಕಮೀಷನರ್‌ಗೆ ದೂರು ಕೊಡೋಕೆ ಡ್ರಾಫ್ಟ್ ಸಿದ್ದಪಡಿಸಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ 3-4 ದಿನದಲ್ಲಿ ದೂರು ನೀಡುತ್ತೇನೆ. ನಮಗೆ ಇರೋದು ಒಬ್ಬಳೇ ತಂಗಿ ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿಕೆಸು ಮುಗುಳುನಕ್ಕರು.

  • 3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

    3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

    -ರಾಜಕಾರಣಿ, ನಟ-ನಟಿಯರ ಜೊತೆ ಪೋಟೋ ತೆಗೆಸಿಕೊಂಡು ದುರ್ಬಳಕೆ ಆರೋಪ

    ಬೆಂಗಳೂರು: ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

    ಆರೋಪಿಯನ್ನು ಬಾಗಲಗುಂಟೆ (Bagalagunte) ನಿವಾಸಿ ಶ್ವೇತಾಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್‌ ಪ್ರವಾಸ

    ಕೆಲ ದಿನಗಳ ಹಿಂದೆ ಕಮರ್ಷಿಯಲ್ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್ ಮಾಲೀಕ ಸಂಜಯ್ ಭಾಷ್ನಾ ಅವರನ್ನು ಶ್ವೇತಾಗೌಡ ಭೇಟಿಯಾಗಿದ್ದಳು. ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ ಎಂದಿದ್ದಳು. ಇದಕ್ಕೆ ಸಂಜಯ್ ಸಹ ಸಮ್ಮಿತಿಸಿದ್ದರು. ಆಕೆಯ ಮಾತು ನಂಬಿ ಆರಂಭದಲ್ಲಿ ಎರಡು ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು.

    ಹೀಗೆ ವಿಶ್ವಾಸಗಳಿಸಿದ ಶ್ವೇತಾ, ಕೊನೆಗೆ ನವರತ್ನ ಜ್ಯುವೆಲರ್ಸ್ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು.

    ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಲಾಯಿತು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಆರೋಪಿ ಮಾಜಿ ಸಚಿವರ ಮನೆ ವಿಳಾಸ ನೀಡಿರುವ ಆರೋಪದ ಆಧಾರದ ಮೇಲೆ ವರ್ತೂರು ಪ್ರಕಾಶ್ ವಿಚಾರಣೆಗೆ ಪೊಲೀಸರು ನಿರ್ಧರಿಸಿದ್ದಾರೆ. ಈ ಬಗ್ಗೆ ವರ್ತೂರು ಪ್ರಕಾಶ್ ಮಾತನಾಡಿ, ಫೋನ್‌ನಲ್ಲಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಿಟಿ ರವಿ ಕೇಸ್‌ – ಪ್ರತಿಷ್ಠಿಗೆ ಬಿದ್ದು ಏನೋ ಮಾಡಲು ಹೋಗಿ ಯಡವಟ್ಟು ಮಾಡಿತಾ ಸರ್ಕಾರ?