Tag: ಚಿನ್ನ ಕಳ್ಳಸಾಗಣೆ

  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ (Ranya Rao) ಒಂದು ‌ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

    ಹೌದು, ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು (COFEPOSA Act) ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ಒಂದು ವೇಳೆ ಜಾಮೀನು ನೀಡಿದ್ರೆ ವಿದೇಶಕ್ಕೆ ಹಾರುವ ಸಾಧ್ಯತೆಗಳಿದೆ, ಜೊತೆಗೆ ಸಾಕ್ಷ್ಯಗಳ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರನ್ಯಾ ವಿರುದ್ಧ ಕಾಫಿಪೋಸಾ ಜಾರಿ ಮಾಡಿ ಕಾಫಿಪೋಸಾ ಅಡ್ವೈಸರಿ ಬೋರ್ಡ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಕಾಫಿಪೋಸಾ ಅನ್ವಯ ರನ್ಯಾ ರಾವ್‌ ಹಾಗೂ ಇತರ ಆರೋಪಿಗಳು ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ. ಈ ಕುರಿತು ಕಾಫಿ ಪೋಸಾ ಅಡ್ವೈಸರಿ ಬೋರ್ಡ್ DRIಗೆ ಮಾಹಿತಿ ನೀಡಿದ್ದು, DRI ನಿಂದ ಜೈಲು ಅಧೀಕ್ಷಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜೊತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

    ಏನಿದು ಕಾಫಿಪೋಸಾ ಕಾಯ್ದೆ?
    ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ. ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ. ಇದನ್ನೂ ಓದಿ: ಕೇರಳ ನರ್ಸ್‌ ತಪ್ಪಿಗೆ ಕ್ಷಮೆಯಿಲ್ಲ, ಗಲ್ಲಿಗೇರಿಸಲೇಬೇಕು: ಕೊಲೆಯಾದ ಯೆಮನ್‌ ವ್ಯಕ್ತಿ ಸಹೋದರ ಪ್ರತಿಕ್ರಿಯೆ

  • ನಟಿ ರನ್ಯಾ ರಾವ್‌ ಬಗ್ಗೆ ಅವಾಚ್ಯ ಪದ ಬಳಕೆ ಆರೋಪ – ಯತ್ನಾಳ್‌ ವಿರುದ್ಧ ಎಫ್‌ಐಆರ್‌

    ನಟಿ ರನ್ಯಾ ರಾವ್‌ ಬಗ್ಗೆ ಅವಾಚ್ಯ ಪದ ಬಳಕೆ ಆರೋಪ – ಯತ್ನಾಳ್‌ ವಿರುದ್ಧ ಎಫ್‌ಐಆರ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್ ಬಗ್ಗೆ ಅವಾಚ್ಯ ಪದ ಬಳಕೆ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ರನ್ಯಾ ರಾವ್‌ ಪರ ಅಕುಲ ಅನುರಾಧ ಎಂಬವರು ಯತ್ನಾಳ್‌ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಯತ್ನಾಳ್‌ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಬಿಎನ್‌ಎಸ್‌ ಸೆಕ್ಷನ್‌ 79 ಅಡಿ ಎಫ್‌ಐಆರ್‌ ದಾಖಲಾಗಿದೆ.

    15 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ ಬಂಧನಕ್ಕೆ ಒಳಗಾಗಿದ್ದಾರೆ.

  • ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ

    ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ

    – ಡ್ಯಾಡಿ, ಅಂಕಲ್‌ಗೆ ವಿಷಯ ತಿಳಿಸಿ: ಸಿಬ್ಬಂದಿ ಬಸವರಾಜ್‌ಗೆ ಹೇಳಿದ್ದ ರನ್ಯಾ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಕೇಸ್‌ನಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ. ಚಿನ್ನ ಕಳ್ಳಸಾಗಾಟದಲ್ಲಿ ಏರ್‌ಪೋರ್ಟ್‌ನಲ್ಲಿ ಅರೆಸ್ಟ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು.

    ಏರ್‌ಪೋರ್ಟ್‌ನಲ್ಲಿ ಡಿಆರ್‌ಐಗೆ ಲಾಕ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು. ‘ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ನನ್ನಿಂದ ತಪ್ಪಾಯ್ತು. ಡ್ಯಾಡಿ, ಅಂಕಲ್‌ಗೆ ಕಾಲ್ ಮಾಡಿ ತಿಳಿಸು’ ಎಂದು ಕಣ್ಣೀರಿಡುತ್ತ ಪ್ರೋಟೊಕಾಲ್ ಸಿಬ್ಬಂದಿ ಬಸವರಾಜ್‌ಗೆ ನಟಿ ರನ್ಯಾ ಹೇಳಿದ್ದರಂತೆ.

    ಅರೆಸ್ಟ್ ಆಗುತ್ತಿದ್ದಂತೆ ಸಿಬ್ಬಂದಿ ಬಸವರಾಜ್ ಮುಂದೆ ನಟಿ ರನ್ಯಾ ಗಳಗಳನೆ ಅತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

  • ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ

    ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ

    ಬೆಂಗಳೂರು:‌ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನವಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.

    ದುಬೈನಿಂದ ಕೋಟಿ ಕೋಟಿ ಬೆಲೆಬಾಳುವ ಚಿನ್ನ ತಂದು ಡಿಆರ್‌ಐ ಅಧಿಕಾರಿಗಳಿಗೆ ಲಾಕ್ ಆಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ, ಆರ್ಥಿಕ ಅಪರಾಧದ ವಿಶೇಷ ನ್ಯಾಯಾಲದಲ್ಲಿ ವಾದ-ಪ್ರತಿವಾದ ನಡೆಸಲಾಗಿದ್ದು, ಜಾಮೀನು ಆದೇಶ ಇಂದಿಗೆ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಇಂದು ಮಧ್ಯಾಹ್ನದ ನಂತರ ನಟಿಯ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಆರೋಪಿ ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದು, ಡಿಆರ್‌ಐ‌ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೆ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರೆಯ ಪಾತ್ರ ಇಲ್ಲ‌. ತನಿಖೆಗೆ ಸಹಕಾರ‌ ನೀಡುತ್ತಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಆದರೆ, ಡಿಆರ್‌ಐ ಪರ ವಕೀಲ ಮಧುರಾವ್ ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ಕೂಡ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಕೋಟಿ ಹಣ ಹಾಗೂ ಚಿನ್ನಭರಣಗಳು ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಕೂಡ ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿ ನಟಿ ರನ್ಯಾ ರಾವ್‌ಗೆ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ಡಿಆರ್‌ಐ ಪರ ವಕೀಲ ಪ್ರತಿವಾದ ಮಾಡಿದ್ದಾರೆ. ವಾದ-ಪ್ರತಿವಾದ ಅಲಿಸಿರುವ ನ್ಯಾಯಾದೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದರು.

  • ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    – ರನ್ಯಾ ಪತಿ ಜತಿನ್‌, ಗೆಳೆಯನ ಮನೆ ಸೇರಿ 9 ಕಡೆ ಡಿಆರ್‌ಐನಿಂದಲೂ ರೇಡ್‌

    ಬೆಂಗಳೂರು: ಚಿನ್ನ ಕಳ್ಳಸಾಗಣೆ (Gold Smuggling Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ (Ranya Rao) ಮನೆ ಮೇಲೆ ಇ.ಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ.

    ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?

    ಇದಕ್ಕೂ ಮುನ್ನ ನಟಿ ರನ್ಯಾ, ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು.

    ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

    ಆಡುಗೋಡಿ ಬಳಿ ರನ್ಯಾ ರಾವ್ ಅವರ ಪತಿ ನಿವಾಸದ ಮೇಲೆ ಡಿಆರ್‌ಐ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದರು. ಇದನ್ನೂ ಓದಿ: ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ನಾಲ್ವರಿಗೆ ಸಿಬಿಐ ನೋಟಿಸ್‌

  • ನಟಿ ರನ್ಯಾಗೆ ಸರ್ಕಾರ ಕ್ಲೀನ್‌ಚಿಟ್‌ ಕೊಟ್ಟರೂ ಆಶ್ಚರ್ಯ ಇಲ್ಲ: ಸುರೇಶ್‌ ಬಾಬು

    ನಟಿ ರನ್ಯಾಗೆ ಸರ್ಕಾರ ಕ್ಲೀನ್‌ಚಿಟ್‌ ಕೊಟ್ಟರೂ ಆಶ್ಚರ್ಯ ಇಲ್ಲ: ಸುರೇಶ್‌ ಬಾಬು

    – ಚಿನ್ನ ಕಳ್ಳಸಾಗಣೆ ಕೇಸಲ್ಲಿ ಗೃಹ ಇಲಾಖೆಯೇ ಶಾಮೀಲು: ಜೆಡಿಎಸ್‌ ಶಾಸಕ ಆರೋಪ

    ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜ್ಯ ಸರ್ಕಾರ ಬೇಕಾದ್ರೆ, ರನ್ಯಾಗೆ (Ranya Rao) ಕ್ಲೀನ್‌ಚಿಟ್ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ಅನುಮಾನ ವ್ಯಕ್ತಪಡಿಸಿದರು.

    ರನ್ಯಾ ರಾವ್ ಕೇಸ್ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಮಾಫಿಯಾಗಳು ಹೆಚ್ಚಾಗಿ ತಲೆ ಎತ್ತುತ್ತಿವೆ. ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ರನ್ಯಾ ರಾವ್ ಅನೇಕ ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ತಂದೆ IPS ಅಧಿಕಾರಿ ಅಂತ ರನ್ಯಾಗೆ ರಕ್ಷಣೆ ಕೊಡ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?

    ಪೊಲೀಸರ ರಕ್ಷಣೆಯಲ್ಲಿ ರನ್ಯಾ ಓಡಾಡಿದ್ದಾಳೆ. ಸರ್ಕಾರಕ್ಕೆ ನಾಚಿಕೆ ಆಗಬೇಕು.14 ಕೆಜಿ ಚಿನ್ನ ಸಾಗಾಣೆ ಮಾಡ್ತಾರೆ ಅಂದರೆ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿದೆ ಅನ್ನಿಸುತ್ತೆ. ಸಿಐಡಿ ತನಿಖೆ ಯಾಕೆ ವಾಪಸ್ ಪಡೆದ್ರಿ? ಇದು ನಮಗೆ ಅನುಮಾನ ಬರ್ತಿದೆ. ರನ್ಯಾ ರಾವ್ ಉಳಿಸೋಕೆ ಸರ್ಕಾರ ಮುಂದಾಗ್ತಿರುವ ಅನುಮಾನ ಬರ್ತಿದೆ ಎಂದು ತಿಳಿಸಿದರು.

    ರನ್ಯಾ ರಾವ್ ಉಳಿಸಲು ಈ ಸರ್ಕಾರದವರು ಬೇಕಾದ್ರೆ ಮುಡಾ ಕೇಸ್‌ನಲ್ಲಿ ಸೈಟ್ ವಾಪಸ್ ಕೊಟ್ಟಂತೆ ಚಿನ್ನವನ್ನ ದುಬೈಗೆ ವಾಪಸ್ ಇಟ್ಟು ಬಾ ಅಂತ ಹೇಳಿದ್ರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರ ಬೇಕಾದ್ರೆ ರನ್ಯಾಗೆ ಕ್ಲೀನ್ ಚಿಟ್ ಕೊಡ್ತಾರೆ. ಸರ್ಕಾರದ ವರ್ತನೆ ನೋಡಿದ್ರೆ ನಮಗೆ ಅನುಮಾನ ಬರುತ್ತದೆ. ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಹೆಸರು ಕೇಳಿ ಬಂದಿದೆ. ಯಾರು ಅ ಸಚಿವರು ಎಂಬುದು ತನಿಖೆ ಆಗಬೇಕು. ಯಾರೇ ಪ್ರಭಾವಿಗಳು ಇದ್ದರೂ ಕ್ರಮ ಆಗಬೇಕು. ಯಾರು ಇದರ ಹಿಂದೆ ಇದ್ದಾರೆ ಬೆಳಕಿಗೆ ಬರಬೇಕು. ಸಿಬಿಐ ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ನಾಲ್ವರಿಗೆ ಸಿಬಿಐ ನೋಟಿಸ್‌

    ಕುಮಾರಸ್ವಾಮಿ ಇವತ್ತು ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು. ಕುಮಾರಸ್ವಾಮಿ ಕೂಡಾ ಸುದ್ದಿಗೋಷ್ಠಿ ಮಾಡಲಿದ್ದಾರೆ. ಇಷ್ಟು ದಿನ ರನ್ಯಾ ಏರ್ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳನ್ನ ಕಣ್ಣು ತಪ್ಪಿಸಿ ಬಂದಿದ್ದಾಳೆ. ಇದೆಲ್ಲವನ್ನೂ ನೋಡಿದರೆ ಪೊಲೀಸರು ಶಾಮೀಲಾಗಿರುವ ಅನುಮಾನ ಇದೆ. ರಾಜ್ಯ ಸರ್ಕಾರದಿಂದ ಈ‌ ತನಿಖೆ ಆಗೊಲ್ಲ. ಸಿಬಿಐ ತನಿಖೆ ಆಗಬೇಕು ಎಂದರು.

  • ಡಿಜಿಪಿ ಅಪ್ಪನಿಗೆ ಮಗಳು ತಂದ ಸಂಕಷ್ಟ – ಸರ್ಕಾರದಿಂದ ಎರಡೆರಡು ತನಿಖೆಗೆ ಆದೇಶ

    ಡಿಜಿಪಿ ಅಪ್ಪನಿಗೆ ಮಗಳು ತಂದ ಸಂಕಷ್ಟ – ಸರ್ಕಾರದಿಂದ ಎರಡೆರಡು ತನಿಖೆಗೆ ಆದೇಶ

    ಏರ್‌ಪೋರ್ಟ್‌ನಲ್ಲಿ ಪ್ರೋಟೊಕಾಲ್‌ ಉಲ್ಲಂಘನೆ; CID ತನಿಖೆಗೆ ಸರ್ಕಾರ ಆದೇಶ
    – ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳಿಗೆ ಸಂಕಷ್ಟ 

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾಳಿಂದ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಡಿಜಿಪಿ ರಾಮಚಂದ್ರ ರಾವ್‌ಗೆ (Ramachandra Rao) ಮಗಳಿಂದ ಸಂಕಷ್ಟ ಶುರುವಾಗಿದೆ. ಮಗಳಿಂದ ಇದೀಗ ತಂದೆಗೂ ಸಹ ವಿಚಾರಣೆ ಭಾಗ್ಯ ಬಂದೊದಗಿದೆ.

    ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಮಚಂದ್ರರಾವ್‌ಗೆ ಕೊಟ್ಟಿದ್ದ ಪ್ರೋಟೋಕಾಲ್‌ಗಳನ್ನು ದುರುಪಯೋಗ ಪಡಿಸಿಕೊಂಡು ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಅಕ್ರಮ ಅಪರಾಧ ಎಸಗಿರುವ ಆರೋಪ ಇದೆ. ಇದನ್ನೂ ಓದಿ: ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

    ಸದ್ಯ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಚಂದ್ರರಾವ್ ಅವರನ್ನು ತನಿಖೆ ನಡೆಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಮತ್ತು ನೆರವನ್ನು ನೀಡಲು ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಸಿ ಒಂದು ವಾರದಲ್ಲಿ ವರದಿಯನ್ನು‌ ಸರ್ಕಾರಕ್ಕೆ ಸಲ್ಲಿಸಲು ಖಡಕ್ ಸೂಚನೆ ನೀಡಲಾಗಿದೆ.

    ಇದಲ್ಲದೇ‌, ಪೊಲೀಸ್ ಸಿಬ್ಬಂದಿ ಪ್ರೋಟೋಕಾಲ್ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸಹ ಸರ್ಕಾರ ಆದೇಶ ನೀಡಿದೆ. ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಓರ್ವ ಪ್ರೋಟೋಕಾಲ್‌ನ ಹೆಡ್ ಕಾನ್‌ಸ್ಟೇಬಲ್, ಇನ್ನೊಬ್ಬ ಗುಪ್ತಚರ ಇಲಾಖೆ ಕಾನ್‌ಸ್ಟೇಬಲ್ ಆಗಿದ್ದರು. ರನ್ಯಾ ರಾವ್ ಏರ್‌ಪೋರ್ಟ್‌ಗೆ ಬಂದಾಗ ಪಾಳಿಯಲ್ಲಿ ಈ ಇಬ್ಬರೂ ಇದ್ದರು. ಪ್ರೋಟೋಕಾಲ್‌ ಕಾನ್‌ಸ್ಟೇಬಲ್ ಕರೆದ ಅಂತ ಗುಪ್ತಚರ ಇಲಾಖೆಯ ಅಧಿಕಾರಿಯೂ ರನ್ಯಾ ರಾವ್ ಭೇಟಿಗೆ ಹೋಗಿದ್ದರು. ಹೀಗಾಗಿ, ಇಬ್ಬರಿಗೂ ಕೂಡ ವಿಚಾರಣೆಯ ಬಿಸಿ ತಟ್ಟಿದೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗ ಅರೆಸ್ಟ್

  • ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ IPS ಅಧಿಕಾರಿ ಪುತ್ರಿ, ನಟಿ ರನ್ಯಾ ಬಂಧನ

    ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ IPS ಅಧಿಕಾರಿ ಪುತ್ರಿ, ನಟಿ ರನ್ಯಾ ಬಂಧನ

    – ‘ಮಾಣಿಕ್ಯ’ ಸಿನಿಮಾದ ನಟಿಯಾಗಿದ್ದ ರನ್ಯಾ

    ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಲನಚಿತ್ರ ನಟಿ ರನ್ಯಾ ರಾವ್‌ ಬಂಧನ ಆಗಿದೆ.

    ವಿದೇಶದಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ DRI ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಐಪಿಎಸ್‌ ಅಧಿಕಾರಿ ಪುತ್ರಿಯಾಗಿರುವ ರನ್ಯಾ, ಕನ್ನಡದ ‘ಮಾಣಿಕ್ಯ’ ಚಿತ್ರದ ನಾಯಕಿಯಾಗಿ ನಟಿಸಿದ್ದರು.

  • ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

    ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

    ಬೆಂಗಳೂರು: ಪ್ಯಾಂಟ್‌ ಜಿಪ್‌ ಲೈನ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ (Bengaluru Airport) ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕನನ್ನು ಏರ್‌ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಪ್ರಯಾಣಿಕ ಶಾರ್ಜಾದಿಂದ ಬಂದಿದ್ದ. ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ. ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಇದನ್ನೂ ಓದಿ: ಮುರುಘಾಶ್ರೀಗೆ ಜೈಲಾ? ಬೇಲಾ? ಇಂದು ಹೈಕೋರ್ಟ್ ನಿರ್ಧಾರ

    ಸುಮಾರು 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಚಿನ್ನದ ಜೊತೆ ಪ್ರಯಾಣಿಕ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ. 3,300 ಸಿಗರೇಟ್ ಸ್ಟಿಕ್ ಮತ್ತು 324 ಸೌಂದರ್ಯವರ್ಧಕ ಪಾಕೇಟ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನ ಭಾರೀ ಮಳೆ

  • ಚಪ್ಪಲಿಯಲ್ಲಿ 1 ಕೆಜಿ ಚಿನ್ನ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ

    ಚಪ್ಪಲಿಯಲ್ಲಿ 1 ಕೆಜಿ ಚಿನ್ನ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ

    ಬೆಂಗಳೂರು: ಚಪ್ಪಲಿಯಲ್ಲಿ (Slipper) ಅಕ್ರಮವಾಗಿ ಬರೋಬ್ಬರಿ 1.2 ಕೆ.ಜಿ ತೂಕದ ಚಿನ್ನವನ್ನು (Gold) ತಂದಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಬಂಧಿಸಲಾಗಿದೆ.

    ಚಪ್ಪಲಿಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇಂಹ ಉಪಾಯಗಳನ್ನು ಬಳಸಿ ಮತ್ತೆ ಕಳ್ಳಸಾಗಣೆ (Gold Smuggling) ನಡೆಯದಂತೆ ಅಧಿಕಾರಿಗಳು ಇದೀಗ ವಿಮಾನದಲ್ಲಿ ಪ್ರಯಾಣಿಸುವವರ ಚಪ್ಪಲಿಗಳನ್ನು ಅತ್ಯಂತ ಜಾಗರೂಕರಾಗಿ ಪರಿಶೀಲಿಸುತ್ತಿದ್ದಾರೆ.

    ವರದಿಗಳ ಪ್ರಕಾರ ಮಾರ್ಚ್ 12 ರಂದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದಿದ್ದರು. ಆತನ ಬಳಿ ಪ್ರಯಾಣದ ಉದ್ದೇಶವನ್ನು ಕೇಳಿದಾಗ ಆತ ವೈದ್ಯಕೀಯ ಉದ್ದೇಶಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದ. ಇದನ್ನೂ ಓದಿ:  ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!

    ಈ ವ್ಯಕ್ತಿ ಯಾವುದೇ ವೈದ್ಯಕೀಯ ದಾಖಲೆಗಳನ್ನು ನೀಡಲು ವಿಫಲನಾಗಿದ್ದಾನೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಚಪ್ಪಲಿಯಲ್ಲಿ ಗುಳಿಗಳನ್ನು ರಚಿಸಿ, ಚಿನ್ನದ ಗಟ್ಟಿಗಳನ್ನು ಹುದುಗಿಸಿಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಒಂದು ಜೊತೆ ಚಪ್ಪಲಿಯಲ್ಲಿ ಒಟ್ಟು 4 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಅಧಿಕಾರಿಗಳು ವ್ಯಕ್ತಿಯ ಬಳಿಯಿಂದ ಒಟ್ಟು 69.40 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಸುಮಾರು 1.2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ