Tag: ಚಿನ್ನಮ್ಮ

  • ಇಂದು ತಮಿಳುನಾಡಿಗೆ ಚಿನ್ನಮ್ಮ – ಗ್ರ್ಯಾಂಡ್ ವೆಲ್‍ಕಮ್‍ಗೆ ಬೆಂಬಲಿಗರು ಸಜ್ಜು

    ಇಂದು ತಮಿಳುನಾಡಿಗೆ ಚಿನ್ನಮ್ಮ – ಗ್ರ್ಯಾಂಡ್ ವೆಲ್‍ಕಮ್‍ಗೆ ಬೆಂಬಲಿಗರು ಸಜ್ಜು

    ಬೆಂಗಳೂರು: 4 ವರ್ಷಗಳ ಬಳಿಕ ತಮಿಳುನಾಡಿಗೆ ಮನ್ನಾರ್ ಗುಡಿ ಚಿನ್ನಮ್ಮ ಇಂದು ವಾಪಸ್ ಆಗಲಿದ್ದಾರೆ.

    ರಾಹುಕಾಲ ನೋಡಿಕೊಂಡು ದೇವನಹಳ್ಳಿ ರೆಸಾರ್ಟ್‍ನಿಂದ ನಿರ್ಗಮಿಸಲಿದ್ದಾರೆ. ಚಿನ್ನಮ್ಮನ ಸ್ವಾಗತಕ್ಕೆ ರೆಸಾರ್ಟ್ ಬಳಿ ಬೆಂಬಲಿಗರು ಈಗಾಗಲೇ ಜಮಾಯಿಸಿದ್ದಾರೆ. ಅತ್ತಿಬೆಲೆಯಲ್ಲಿ ಶಶಿಕಲಾ ಅದ್ದೂರಿ ಸ್ವಾಗತಕ್ಕೆ ಅನುಮತಿ ನಿರಾಕರಿಸಲಾಗಿದೆ. ರೆಸಾರ್ಟ್‍ನಿಂದ ನೇರವಾಗಿ ತಮಿಳುನಾಡು ಗಡಿ ತಲುಪಲಷ್ಟೇ ಅವಕಾಶ ನೀಡಲಾಗಿದ್ದು, ರೆಸಾರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಶಶಿಕಲಾ ತಮಿಳುನಾಡು ಎಂಟ್ರಿ ಆಗ್ತಿದ್ದಂತೆ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದೆ. ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲಿಗರು ಚೆನ್ನೈಗೆ ಕರೆದೊಯ್ಯಲಿದ್ದಾರೆ. ಕರ್ನಾಟಕ ಗಡಿಯಿಂದ ಹೊಸೂರು, ಚೆನ್ನೈ ಮಾರ್ಗದಲ್ಲಿ ಮೆರವಣಿಗೆಯ ಭವ್ಯ ಸ್ವಾಗತ ಕೋರಲಾಗುತ್ತದೆ.

    ಸುಮಾರು 60 ಕಡೆ ಬೆಂಬಲಿಗರು ಶಶಿಕಲಾಗೆ ಸ್ವಾಗತ ಕೋರಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಶಶಿಕಲಾ ಬರಮಾಡಿಕೊಳ್ಳಲು ಸುಮಾರು 5 ಸಾವಿರ ಜನ ಸೇರುವ ಸಾಧ್ಯತೆ ಇದೆ.

  • ಇಂದು ಶಶಿಕಲಾ ಶರಣಾಗದಿದ್ದರೆ ಸೆಷನ್ ಕೋರ್ಟ್ ಕೊಡುತ್ತೆ ಅರೆಸ್ಟ್ ವಾರೆಂಟ್!

    ಇಂದು ಶಶಿಕಲಾ ಶರಣಾಗದಿದ್ದರೆ ಸೆಷನ್ ಕೋರ್ಟ್ ಕೊಡುತ್ತೆ ಅರೆಸ್ಟ್ ವಾರೆಂಟ್!

    ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿಯೆಂದು ಶಿಕ್ಷೆಗೆ ಗುರಿಯಾಗಿರುವ ದಿವಂಗತ ಜಯಲಲಿತಾ ಪರಮಾಪ್ತೆ, ಎಐಎಡಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಸಂಬಂಧಿಗಳಾದ ಸುಧಾಕರನ್ ಮತ್ತು ಇಳವರಸಿ ಇಂದು ಕೋರ್ಟ್ ಮುಂದೆ ಶರಣಾಗಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಮಂಗಳವಾರ ಮೇಲ್ಮನವಿ ಅರ್ಜಿ ವಿಚಾರಣೆಯ ತೀರ್ಪು ನೀಡಿದ ಸುಪ್ರೀಂಕೋರ್ಟ್, ಇಂದೇ ಶರಣಾಗಬೇಕು ಅಂತಾ ತೀರ್ಪಿನಲ್ಲಿ ಸೂಚಿಸಿತ್ತು. ಆದ್ರೂ ಮೂವರಲ್ಲಿ ಯಾರೊಬ್ಬರೂ ಶರಣಾಗಲಿಲ್ಲ. ಇಂದು ಸುಪ್ರೀಂಕೋರ್ಟ್‍ನಲ್ಲಿ ಮೇಲ್ವಿಚಾರಣ ಅರ್ಜಿ ಹಾಗೂ ಶರಣಾಗತಿಗೆ 4 ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗುತ್ತೆ ಅಂತಾ ಶಶಿಕಲಾ ಗುಂಪಿನಿಂದ ಮಾಹಿತಿಯಿದ್ದು, ಅಂತಿಮವಾಗಿ ಉಳಿದಿರುವ ಏಕೈಕ ಮಾರ್ಗ ಅಂದ್ರೆ ಶರಣಾಗತಿ. 4 ವರ್ಷ ಜೈಲು ಶಿಕ್ಷೆ ಅನುಭವಿಸೋದು ಅಂತಾ ಹೇಳಲಾಗ್ತಿದೆ.

    ಬೆಂಗಳೂರಿನ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿ ಮಾಡಿರುವ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ 4 ವರ್ಷದಲ್ಲಿ ಉಳಿದಿರುವ ಶಿಕ್ಷೆಯನ್ನು ಅನುಭವಿಸಬೇಕಿದೆ. ಒಂದು ವೇಳೆ ಶಶಿಕಲಾ ಹಾಗೂ ಇಬ್ಬರು ಸಂಬಂಧಿಗಳು ಕೋರ್ಟ್‍ಗೆ ಶರಣಾಗಲು ವಿಳಂಬ ಮಾಡಿದ್ರೆ, ಹೈಕೋರ್ಟ್ ರಿಜಿಸ್ಟಾರ್ ಅವರಿಂದ ಸುಪ್ರೀಂಕೋರ್ಟ್‍ನ ಆದೇಶದ ಪ್ರತಿ ಪಡೆದು, ಸೆಷನ್ಸ್ ಕೋರ್ಟ್, ಈ ಮೂವರ ಮೇಲೂ ಅರೆಸ್ಟ್ ವಾರೆಂಟ್ ಬಳಸಿ ಬಂಧಿಸಿ ಕರೆತರುವಂತೆ ಸೂಚನೆ ನೀಡುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ.

    ಹಿರಿಯ ಅಧಿಕಾರಿಗಳ ಸಭೆ: ಇನ್ನು ಶಶಿಕಲಾ ನಟರಾಜನ್ ಜೈಲುಶಿಕ್ಷೆ ಅನುಭವಿಸಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿರುವ ಕಾರಣ ತಡರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ರು. ಎಸಿಪಿ ಸೂರ್ಯ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕುರಿತು ಚರ್ಚಿಸಿದ್ರು. ಇನ್ನು ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಭದ್ರತೆಗಾಗಿ ಭಾರೀ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕಳೆದ ಬಾರಿ ಜೈಲಿನೊಳಗಡೆ ಜಯಲಲಿತಾ ಪಕ್ಕದಲ್ಲೇ ಶಶಿಕಲಾ ಕೂಡ ಇದ್ದರು. ಈಗಲೂ ಅದೇ ಸೆಲ್ ನೀಡಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಸ್ವಚ್ಚಗೊಳಿಸಲಾಗಿದೆ. ಶಶಿಕಲಾ ಅಗತ್ಯಗಳಿಗೆ ತಕ್ಕಂತೆ ಸೆಲ್ ಸಿದ್ದಗೊಳಿಸಲಾಗಿದ್ದು, ಇದ್ರಲ್ಲಿ ವಿಶೇಷವಾಗಿ ಫಾರಿನ್ ಕಮೋಡ್ ಟಾಯ್ಲೆಟ್, 24 ಗಂಟೆ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರು ಇರುವಂತೆ ವ್ಯವಸ್ಥೆ ಮಾಡಲಾಗಿದೆ.

  • ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ತೀರ್ಪು ಪ್ರಕಟ ಆಗಲು ಸಮಯ ನಿಗದಿಯಾಗುತ್ತಿದ್ದ ಹಾಗೆ ಸೋಮವಾರವೇ ಶಾಸಕರ ಜೊತೆ ರೆಸಾರ್ಟ್ ಸೇರಿದ್ದ ಚಿನ್ನಮ್ಮ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ಬಂದಿದ್ದಾರೆ. ನಿನ್ನೆ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ತೆರಳುವುದಕ್ಕೆ ಮುಂಚೆ ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶಶಿಕಲಾ, ಒಂದು ರೀತಿಯ ವಿದಾಯ ಭಾಷಣ ಮಾಡಿದ್ದಾರೆ.

    ನನಗೆ ಬೆಂಬಲ ಸೂಚಿಸಿದ ಎಲ್ಲಾ ಶಾಸಕರುಗಳಿಗೂ ಧನ್ಯವಾದ. ಎಐಡಿಎಂಕೆ ಪಕ್ಷ ಮಾತ್ರ ನನಗೆ ಮುಖ್ಯವಾಗಿದ್ದು, ನನ್ನನ್ನು ಪಕ್ಷದಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಚಾರವನ್ನು ಅಲ್ಲಿನ ಜಯಾ ಟಿವಿ ಪ್ರಸಾರ ಮಾಡಿದೆ. ಇದಾದ ಬಳಿಕ ಪೋಯಸ್ ಗಾರ್ಡನ್ ಮನೆ ಮುಂದೆ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಮ್ಮ, ನಾನು ಜೈಲಿಗೆ ಹೋಗುತ್ತಿದ್ದೇನೆ ಅಂತಾ ನೀವು ಅಳಬೇಡಿ ಅಂತಾ ಹೇಳಿದ್ದಾರೆ.

    ಬಳಿಕ ಜಯಲಲಿತಾ ಹಾಗೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದು ಡಿಎಂಕೆ ಅಂತಾ ದೂರಿದ್ದಾರೆ. ಇದರ ಮಧ್ಯೆ ಕೊವತ್ತೂರು ರೆಸಾರ್ಟ್ ಖಾಲಿ ಮಾಡುವಂತೆ ಎಐಡಿಎಂಕೆ ಪಕ್ಷದ ಶಶಿಕಲಾ ಗುಂಪಿನ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ರು. ಆದ್ರೆ ಶಾಸಕರು ಗೋಲ್ಡನ್ ಬೇ ರೆಸಾರ್ಟ್ ಖಾಲಿ ಮಾಡಲು ನಿರಾಕರಿಸಿದ್ರು, ಏನಾದ್ರು ಒತ್ತಾಯ ಮಾಡಿ ದಬ್ಬಾಳಿಕೆ ಮಾಡಿದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು. ಆ ಬಳಿಕ ರೆಸಾರ್ಟ್‍ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿದೆ. ಆದ್ರೂ ಕೂಡ ಶಾಸಕರು ಅಲ್ಲೇ ಬೀಡುಬಿಟ್ಟಿದ್ದಾರೆ.

    ಜಯಾ ಸಮಾಧಿಗೆ ಪನ್ನೀರ್, ದೀಪಾ ಭೇಟಿ: ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಪ್ರಕಟ ಆಗ್ತಿದ್ದ ಹಾಗೆ ಜಯಲಲಿತಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್‍ರನ್ನು ಕರೆದು ಚಿನ್ನಮ್ಮ ಶಶಿಕಲಾ ಮಾತನಾಡಿದ್ರು. ಇದಾದ ಬಳಿಕ ಸಂಜೆ ದೀಪಾ, ಪನ್ನೀರ್ ಸೆಲ್ವಂ ಬಳಗ ಸೇರಿದ್ದು, ರಾತ್ರಿ ಜಯಾ ಸಮಾಧಿಗೆ ಪನ್ನೀರ್ ಸೆಲ್ವಂ ಹಾಗೂ ಈಗಾಗಲೇ ಪಕ್ಷದಿಂದ ವಜಾಗೊಂಡಿರುವ ಶಾಸಕರು ಹಾಗೂ ಸಂಸದರ ಜೊತೆ ಭೇಟಿ ನೀಡಿದ್ರು. ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಅಂತಾ ದೀಪಾ ಸಮಾಧಿ ಬಳಿಯೇ ಘೋಷಣೆ ಮಾಡಿದ್ರು. ಈ ಮೂಲಕ ಪನ್ನೀರ್ ಸೆಲ್ವಂ ಬಣದ ಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ಎಐಎಡಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಹಲವು ಸಚಿವರು ಪಳನಿಸ್ವಾಮಿಗೆ ಸಾಥ್ ನೀಡಿದ್ರು.