Tag: ಚಿನ್ನದ ವ್ಯಾಪಾರಿ

  • ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಪೊಲೀಸರಿಂದಲೇ ಧಮ್ಕಿ!

    ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಪೊಲೀಸರಿಂದಲೇ ಧಮ್ಕಿ!

    ಚಿಕ್ಕಮಗಳೂರು: ಕಳ್ಳತನ ಆಗಿದೆ ಅಂತ ಪೊಲೀಸ್ ಸ್ಟೇಷನ್‍ಗೆ ಬರುವ ನೊಂದವರಿಗೆ ಧೈರ್ಯ ತುಂಬಬೇಕಾದ ಪೊಲೀಸರೇ ಒಬ್ಬ ವ್ಯಕ್ತಿಯನ್ನ ಹೆದರಿಸಿ, ಬೆದರಿಸಿ ಲಕ್ಷಾನುಗಟ್ಟಲೇ ದೋಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

    ಇನ್ಸ್ ಪೆಕ್ಟರ್ ಲಿಂಗರಾಜ್ ದರೋಡೆಯ ಮೈನ್ ಲೀಡರ್ ಆಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆನ್ ಡ್ಯೂಟಿಯಲ್ಲಿದ್ದಾಗ ಬಂಗಾರದ ವ್ಯಾಪಾರಿ (Gold Businessman) ಯನ್ನ ದರೋಡೆ ಮಾಡಿದ ಆರೋಪ ಇವರ ಮೇಲಿದೆ. ಕಳೆದ ಮೇ 11ರಂದು ದಾವಣಗೆರೆ ಮೂಲದ ಭಗವಾನ್ ಸಾಂಕ್ಲಾ, ಅಂಗಡಿಗಳಿಗೆ ಬಂಗಾರ ಕೊಡಲು 2 ಕೆ.ಜಿ. 450 ಗ್ರಾಂ ಬಂಗಾರದ ತರುತ್ತಿದ್ದರು. ಇದನ್ನೂ ಓದಿ: ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!

    ಇದೇ ಸಮಯಕ್ಕೆ ಕರ್ತವ್ಯದಲ್ಲಿದ್ದ ಲಿಂಗರಾಜ್ ಹಾಗೂ ಮತ್ತೆ ಮೂವರು ಪೇದೆಗಳು ಗಾಡಿಯನ್ನ ವಿಚಾರಿಸಿದ್ದಾರೆ. ಬಳಿಕ ಗಾಡಿ ಸ್ಟೇಷನ್‍ಗೆ ಹೊಡೆಯಲು ಹೇಳಿದ್ದಾರೆ. ಅವರು ಏಕೆ ಎಂದು ಪ್ರಶ್ನಿಸಿದ್ದಕ್ಕೆ ಚಿನ್ನವನ್ನ ಕೊಟ್ಟು ಹೋಗು ಇಲ್ಲ 10 ಲಕ್ಷ ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ. ಆಗ ಮಾತುಕತೆ ಮಾಡಿ ಐದು ಲಕ್ಷಕ್ಕೆ ಸೆಟ್ಲ್ ಮೆಂಟ್ ಮಾಡಿ ಹಣ ಪಡೆದು ವಾಪಸ್ ಹೋಗಿದ್ದಾರೆ ಎಂದು ಭಗವಾನ್ ದೂರಿನಲ್ಲಿ ದಾಖಲಿಸಿದ್ದಾರೆ.

    ಚಿಕ್ಕಮಗಳೂರು ಎಸ್‌ಪಿ ಸುದೀರ್ಘ ವಿಚಾರಣೆ ಬಳಿಕ ಇದೀಗ ಲಿಂಗರಾಜು, ಧನಪಾಲ್ ನಾಯ್ಕ್, ಓಂಕಾರಮೂರ್ತಿ, ಶರತ್ ರಾಜ್ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಿನ್ನದ ವ್ಯಾಪಾರಿ ಪುತ್ರನ ಬರ್ಬರ ಕೊಲೆ, ಕೆಲಸಗಾರನ ಅಪಹರಣ

    ಚಿನ್ನದ ವ್ಯಾಪಾರಿ ಪುತ್ರನ ಬರ್ಬರ ಕೊಲೆ, ಕೆಲಸಗಾರನ ಅಪಹರಣ

    – ಹಾಡಹಗಲೇ ರೂಂಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಹತ್ಯೆ

    ಯಾದಗಿರಿ: ಚಿನ್ನದ ವ್ಯಾಪಾರಿ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿ, ಕೆಲಸಗಾರನನ್ನು ಅಪಹರಿಸಿರುವ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ನಡೆದಿದೆ.

    ಧನಲಕ್ಷ್ಮೀ ಚಿನ್ನದ ಅಂಗಡಿಯ ಮಾಲೀಕ ಜಗದೀಶ್ ಅವರ ಪುತ್ರ ನರೇಂದ್ರ(25) ಕೊಲೆಯಾದ ಯುವಕ. ಕಿಶೋರ್ ಅಪಹರಣಕ್ಕೊಳಗಾದ ಕೆಲಸಗಾರ. ಕೊಲೆಯಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮ್ ನಲ್ಲಿ ಇದ್ದರು. ಈ ವೇಳೆ ಏಕಾಏಕಿ ರೂಮ್ ಗೆ ನುಗ್ಗಿದ ದುಷ್ಕರ್ಮಿಗಳು ನರೇಂದ್ರನ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಕಿಶೋರ್ ರನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.

    ಹಾಡಹಗಲೇ ಕೃತ್ಯ ನಡೆದಿದ್ದು, ಇದರಿಂದಾಗಿ ಹುಣಸಗಿ ಜನ ಬೆಚ್ಚಿಬಿದ್ದಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

  • ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ: ಭಾರೀ ಕುತೂಹಲ ಕೆರಳಿಸಿದ್ದ ಇಲ್ಲಿನ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಮತ್ತು ದರೋಡೆ ಕೇಸನ್ನು ಪೊಲೀಸರು ಬೇಧಿಸಿದ್ದಾರೆ. ಒಂದೂವರೆ ಕೆಜಿ ಚಿನ್ನದ ಜೊತೆ ಎರಡೂವರೆ ಲಕ್ಷ ರೂಪಾಯಿ ದೋಚಿ ತಲೆಮರೆಸಿಕೊಂಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಿನ್ನದ ವ್ಯಾಪಾರಿ ಅಂತ ಪೊಲೀಸರ ಎದುರು ಪೋಸು ನೀಡಿದ್ದ ವ್ಯಕ್ತಿ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದೊಂದಿಗೆ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ಕೇರಳದ ತ್ರಿಶೂರ್ ನ ಚಿನ್ನದ ವ್ಯಾಪಾರಿ ದಿಲೀಪ್ ದರೋಡೆ ಮಾಡಿದ ಕೇಸಲ್ಲಿ ಏಳು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

    ಏನಿದು ಪ್ರಕರಣ?: ಮಾರ್ಚ್ 17ರಂದು ಉಡುಪಿಯ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್‍ಗೆ ಚಿನ್ನದ ಆಭರಣಗಳನ್ನು ಕೊಟ್ಟು ಚಿನ್ನದ ವ್ಯಾಪಾರಿ ಉಡುಪಿ ನಗರಕ್ಕೆ ಬರ್ತಾಯಿದ್ರು. ದಿಲೀಪ್ ಪ್ರಯಾಣ ಮಾಡುತ್ತಿದ್ದ ಬಸ್ಸನ್ನು ಹತ್ತಿದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಸುಮಾರು 40 ಕಿಲೋಮೀಟರ್ ದೂರದ ಪಡುಬಿದ್ರೆ ಎಂಬಲ್ಲಿಗೆ ದಿಲೀಪ್‍ರನ್ನು ಕರೆದುಕೊಂಡು ಹೋಗಿ ಚಿನ್ನದ ಜೊತೆ ಸುಮಾರು ಎರಡೂವರೆ ಲಕ್ಷ ರೂಪಾಯಿಯನ್ನು ಕಸಿದುಕೊಂಡು ವ್ಯಾಪಾರಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಚಿನ್ನದ ಜೊತೆ ಹಣವನ್ನು ಕಳೆದುಕೊಂಡ ದಿಲೀಪ್ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಚಿನ್ನ ದೋಚಿ ಬಿಟ್ಟು ಪರಾರಿಯಾದ ಸ್ಥಳವನ್ನು ಪಡುಬಿದ್ರೆ ಮತ್ತು ಕಾಪು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರಿನ ಹರಿಕೃಷ್ಣ ಭಟ್ ದರೋಡೆಯ ಪ್ರಮುಖ ಆರೋಪಿ ಆರೋಪಿಯಾಗಿದ್ದು, ಕಿಡ್ನ್ಯಾಪ್‍ಗೆ ಸಹಕರಿಸಿದ ಕುಂದಾಪುರದ ಜಾವೆದ್, ಅಶ್ರಫ್, ಇಲಾಹಿತ್, ರವಿಚಂದ್ರ, ಸುಮಂತ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಹರಿಕೃಷ್ಣ ಎಂಬುವವನ ಜ್ಯುವೆಲ್ಲರಿ ಶಾಪ್‍ಗೆ ದಿಲೀಪ್ ಹಲವಾರು ವರ್ಷಗಳಿಂದ ಚಿನ್ನದಾಭರಣಗಳನ್ನು ಸಪ್ಲೈ ಮಾಡ್ತಾಯಿದ್ದ. ಈ ಬಾರಿ ಆತನನ್ನೇ ದರೋಡೆ ಮಾಡಲು ಯತ್ನಿಸಲಾಯ್ತು. ಆದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಹೊರಗೆ ಬಂತು. ಇದರ ಜೊತೆ ಕಾನೂನು ಬಾಹಿರವಾಗಿ ಯಾವುದೇ ಬಿಲ್ ಇಲ್ಲದ, ಟ್ಯಾಕ್ಸ್ ಕಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ಅಪರಾಧ. ಹೀಗಾಗಿ ಕೇರಳ ಮೂಲದ ವ್ಯಕ್ತಿಯ ಮೇಲೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕೂತಲ್ಲೇ ಸುಲಭದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು ಎಂಬ ಉದ್ದೇಶದಿಂದ ಆರೋಪಿಗಳೆಲ್ಲಾ ಸ್ಕೆಚ್ ಹೆಣೆದಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೈವಾಡವಿದ್ದು ಐಡಿಯಾ ಕೊಟ್ಟು ಪ್ಲ್ಯಾನ್ ರೂಪಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತಂಡ ಆ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.