Tag: ಚಿನ್ನದ ನಾಣ್ಯ

  • ದಾವಣಗೆರೆ | ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ 5 ಲಕ್ಷ ವಂಚಿಸಿ ಪರಾರಿ

    ದಾವಣಗೆರೆ | ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ 5 ಲಕ್ಷ ವಂಚಿಸಿ ಪರಾರಿ

    ದಾವಣಗೆರೆ: ಕಡಿಮೆ ಬೆಲೆಗೆ ಕಾಲು ಕೆಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ತಿಳಿಸಿ 5 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಘಟನೆ ದಾವಣಗೆರೆ (Davanagere) ತಾಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ.

    ಹುಬ್ಬಳ್ಳಿ ಮೂಲದ ಸುರೇಶ್ ಎಂಬಾತನಿಂದ ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ನಿವಾಸಿ ರಂಗನಾಥ್ 5 ಲಕ್ಷ ರೂ. ಕಳೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಅಲ್-ಖೈದಾ ಜೊತೆ ನಂಟು – ಜಾರ್ಖಂಡ್ ಮೂಲದ ಮಹಿಳೆ ಬಂಧನ

    ಒಂದು ವರ್ಷದ ಹಿಂದೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮಿ ದೇಗುಲದಲ್ಲಿ ರಂಗನಾಥ್ ಅವರಿಗೆ ಸುರೇಶ್ ಪರಿಚಯವಾಗಿತ್ತು. ಆಗ ತಮ್ಮ ದೂರವಾಣಿ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಅದಾದ ಕೆಲವು ದಿನಗಳ ಬಳಿಕ ರಂಗನಾಥ್ ಅವರಿಗೆ ಸುರೇಶ್ ಕರೆ ಮಾಡಿ, ನಮ್ಮ ಹಳೆ ಮನೆಯನ್ನು ತೆರವು ಗೊಳಿಸಿದಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅದನ್ನು ಕಡಿಮೆ ಬೆಲೆಗೆ ಕೊಡುವೆ, ನಿಮಗೆ ಬೇಕಿದ್ದರೆ ಸಂಪರ್ಕಿಸಿ ಎಂದು ಸುಳ್ಳು ಮಾಹಿತಿ ನೀಡಿದ್ದ.

    ಸುರೇಶ್ ಆರಂಭದಲ್ಲಿ ರಂಗನಾಥ್ ಅವರಿಗೆ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಕೆ ಗಳಿಸಿಕೊಂಡಿದ್ದ. ನಂತರದಲ್ಲಿ ರಂಗನಾಥ್ ಅವರನ್ನು ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮಕ್ಕೆ ಬರುವಂತೆ ತಿಳಿಸಿ, 5 ಲಕ್ಷ ರೂ. ಪಡೆದು ಕಾಲು ಕೆ.ಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಪರಾರಿಯಾಗಿದ್ದ. ಬಳಿಕ ರಂಗನಾಥ್ ಅವರು ಅದನ್ನು ಪರೀಕ್ಷಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದು ಬಂದಿದೆ.

    ಮೋಸ ಹೋದ ರಂಗನಾಥ್ ತಕ್ಷಣವೇ ಹತ್ತಿರದ ಹದಡಿ ಠಾಣೆಗೆ ಭೇಟಿ ನೀಡಿ, ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: J&K | ಬೆಳ್ಳಂಬೆಳಗ್ಗೆ ಅವಘಡ – ಸಿಂಧ್ ನದಿಗೆ ಬಿದ್ದ ITBP ಯೋಧರನ್ನು ಕರೆದೊಯ್ಯುತ್ತಿದ್ದ ಬಸ್

  • 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್ (Kirti Suresh), ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳು ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು (Gold Coin) ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

    ಮಹಾನಟಿ ಸಿನಿಮಾ ಮೂಲಕ ಚಿತ್ರ ಜಗತ್ತಿಗೆ ಪರಿಚಯವಾದ ಕೀರ್ತಿ ಸುರೇಶ್, ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಸಾಕಷ್ಟು ಹೆಸರು ಮಾಡಿದ್ದು ತೆಲುಗು ಮತ್ತು ತಮಿಳಿನಲ್ಲಿ. ಇದೀಗ ಅವರ ನಟನೆಯ ತೆಲುಗಿನ ದಸರಾ (Dasara) ಸಿನಿಮಾ ರಿಲೀಸ್‍ ಗೆ ರೆಡಿಯಾಗಿದೆ. ನಾನಿ (Nani) ಜೊತೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಅವರು, ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೂ ಮುಂದಾಗಿದ್ದಾರೆ. ಈ ಸಮಯದಲ್ಲಿ ಉಡುಗೊರೆ ನೀಡಿ ಸಖತ್ ಸುದ್ದಿ ಆಗಿದ್ದಾರೆ.

    ದಸರಾ ಸಿನಿಮಾದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ 130 ಜನರಿಗೆ ತಲಾ ಹತ್ತು ಗ್ರಾಂ ಚಿನ್ನದ ನಾಣ್ಯಗಳನ್ನು ಕೊಡುವ ಮೂಲಕ ಯುಗಾದಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ ಕೀರ್ತಿ ಸುರೇಶ್. ಸಿನಿಮಾದ ಕೊನೆಯ ದಿನದ ಶೂಟಿಂಗ್ ನಲ್ಲಿ ಸೆಟ್ ನಲ್ಲಿದ್ದ ಬಹುತೇಕರು ಭಾವುಕರಾಗಿದ್ದರಂತೆ. ಅಷ್ಟೊಂದು ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಎಲ್ಲರಿಗೂ ಚಿನ್ನದ ಉಡುಗೊರೆ ಸಿಕ್ಕಿದೆ.

  • ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಲಂಡನ್: ಮನೆಯನ್ನು ನವೀಕರಿಸುವಾಗ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಅಪಾರ ಮೊತ್ತದ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

    ಇಂಗ್ಲೆಂಡ್‍ನ ಉತ್ತರ ಯಾರ್ಕ್‍ಷೈರ್‌ನಲ್ಲಿ ನೆಲೆಸಿರುವ ದಂಪತಿ ಮನೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆ ದಂಪತಿ ಕಳೆದ 10 ವರ್ಷಗಳಿಂದ ಆ ಮನೆಯಲ್ಲಿ ನೆಲೆಸಿದ್ದರು. ಮನೆ ತುಂಬಾ ಹಳೆಯದಾಗಿದೆ ಎಂದು ನವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಒಂದು ಲೋಹದ ಡಬ್ಬಿ ದೊರಕಿದೆ. ಅದನ್ನು ತೆರೆದಾಗ ಅವರಿಗೆ ಆಶ್ಚರ್ಯವೊಂದು ಕಾದಿದ್ದು, ಬರೋಬ್ಬರಿ 264 ಚಿನ್ನದ ನಾಣ್ಯಗಳು ಪತ್ತೆ ಆಗಿವೆ.

    ಈ ಬಗ್ಗೆ ಚಿನ್ನದ ನಾಣ್ಯ ಸಿಕ್ಕಿರುವ ದಂಪತಿ ಮಾತನಾಡಿ, ಈ ಎಲ್ಲಾ ನಾಣ್ಯಗಳು ಕಾಂಕ್ರೀಟ್ ಅಡಿಯಲ್ಲಿ ಕೇವಲ 6 ಇಂಚುಗಳಷ್ಟಿರುವ ಲೋಹದ ಡಬ್ಬಿಯಲ್ಲಿ ಪತ್ತೆಯಾಗಿವೆ. ಈ ಪ್ರಾಚೀನ ನಾಣ್ಯಗಳನ್ನು ಹರಾಜು ಮಾಡಿದ್ದೇವೆ. 250,000 ಫೌಂಡ್‍ಗಳಿಗೆ(2.3ಕೋಟಿ ರೂ.) ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಈ ಎಲ್ಲಾ ಚಿನ್ನದ ನಾಣ್ಯವು 400 ವರ್ಷಕ್ಕಿಂತಲೂ ಹಳೆಯದ್ದಾಗಿದ್ದು, 1610 ರಿಂದ 1726ರ ಆಡಳಿತದಲ್ಲಿದ್ದ ಚಿನ್ನದ ನಾಣ್ಯಗಳಾಗಿವೆ. ಜೊತೆಗೆ ಈ ಎಲ್ಲಾ ನಾಣ್ಯಗಳನ್ನು ಜೇಮ್ಸ್ 1 ಮತ್ತು ಚಾರ್ಲ್ಸ್‌ 1ರ ಆಳ್ವಿಕೆಯಲ್ಲಿ ತಯಾರಿಸಲ್ಪಟ್ಟಿದ್ದವು ಎನ್ನಲಾಗುತ್ತಿದೆ. ಈ ಎಲ್ಲಾ ನಾಣ್ಯಗಳು ಪ್ರಭಾವಿ ವ್ಯಾಪಾರಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಬೆಂಗಳೂರು/ಅನೇಕಲ್: ಮಳೆ ಬರೋವಾಗ ಚಿನ್ನದ ನಾಣ್ಯ ಬಿದ್ದಿದೆ ಎಂಬ ವದಂತಿಯನ್ನು ನಂಬಿದ ಜನರು ಒಂದೇಡೆ ಜಮಾಯಿಸಿ ಚಿನ್ನದ ನಾಣ್ಯ ಹುಡುಕಾಟ ನಡೆಸಿರುವ ಘಟನೆ ಕರ್ನಾಟಕದ ಗಡಿಯ ತಮಿಳುನಾಡಿನ ಬಾಗಲೂರಿನಲ್ಲಿ ನಡೆದಿದೆ.

    ನಿನ್ನೆ ಮಧ್ಯಾಹ್ನ ನಾಲ್ಕು ಗಂಟೆ ಸಮಯಕ್ಕೆ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಬಾಗಲೂರು ಪೊಲೀಸ್ ಕ್ವಾಟ್ರಸ್ ಎದುರು ಮಳೆ ಬಂದಾಗ ನಾಣ್ಯ ಬಿದ್ದಿದೆ ಎನ್ನುವ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಅಕ್ಕಪಕ್ಕದ ಜನರೆಲ್ಲ ಜಮಾಯಿಸಿ ಚಿನ್ನದ ನಾಣ್ಯದ ಹುಡುಕಾಟ ಮಾಡಿದ್ದಾರೆ. ಈ ವೇಳೆ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದು, ಇನ್ನು ಕೆಲವರು ಹುಡುಕಾಟ ನಡೆಸಿ ಬೇಸರದಿಂದ ಮನೆಗೆ ಹೋಗಿದ್ದಾರೆ. ಆ ವೇಳೆಗಾಗಲೇ ಮಾಹಿತಿ ತಿಳಿದ ಬಾಗಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ನಾಣ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

    ಚಿನ್ನದ ನಾಣ್ಯ ಸಿಗುತ್ತಿದೆ ಎಂದಾಕ್ಷಣ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲದೆ ಸರ್ಜಾಪುರ-ಬಾಗಲೂರು ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಕೂಡ ಸ್ಥಳಕ್ಕೆ ತೆರಳಿದ್ದರು. ಈ ವದಂತಿಯನ್ನು ನಂಬಿದ್ದ ಜನರು ಇಂದು ಬೆಳಗ್ಗೆಯೂ ನಾಣ್ಯವನ್ನು ಹುಡುಕಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

    ಘಟನೆ ಕುರಿತಂತೆ ಪೊಲೀಸರು ಈಗಾಗಲೇ ಘಟನೆ ವೇಳೆ ಸಿಕ್ಕಿರುವ ನಾಣ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ ಪರಿಶೀಲನೆ ನಡೆಸಿದಾಗ ಇದು ಚಿನ್ನದ ನಾಣ್ಯ ಎನ್ನುವುದು ಗೊತ್ತಾಗಿದ್ದು, ನಾಣ್ಯವನ್ನು ತೆಗೆದುಕೊಂಡು ಮನೆಗೆ ಹೋದವರಲ್ಲಿಯೂ ಕೂಡ ಆತಂಕ ಪ್ರಾರಂಭವಾಗಿದೆ. ಈ ಬಗ್ಗೆ ಕೆಲ ಸ್ಥಳೀಯರು ಹೇಳುವ ಪ್ರಕಾರ ಹಳೆಯ ಕಾಲದಲ್ಲಿ ಈ ಭಾಗದಲ್ಲಿ ಚಿನ್ನದ ನಿಕ್ಷೇಪ ಆಗಿರಬಹುದು ಅಥವಾ ರಾಜಮಹಾರಾಜರ ಕಾಲದಲ್ಲಿ ನಾಣ್ಯಗಳನ್ನು ಭೂಮಿಯಲ್ಲಿ ಇಟ್ಟಿರಬಹುದು, ಮಳೆ ಬಂದಾಗ ಇದು ಮಣ್ಣಿನಲ್ಲಿ ಇರುವುದು ಕೊಚ್ಚಿಕೊಂಡು ಹೀಗೆ ಬಂದಿರಬಹುದು ಎನ್ನುತ್ತಿದ್ದಾರೆ.

    ಚಿನ್ನದ ನಾಣ್ಯ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ತನಿಖೆಯ ನಂತರವಷ್ಟೇ ಇದು ಎಲ್ಲಿಂದ ಬಂದ ನಾಣ್ಯಗಳು ಎನ್ನುವ ಬಗ್ಗೆ ಮಾಹಿತಿ ತಿಳಿಸಬೇಕಿದೆ. ಕೆಲ ನಾಣ್ಯಗಳಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವ ಲಿಪಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಬಾಗಲೂರಿನಲ್ಲಿ ಸಿಕ್ಕ ನಾಣ್ಯಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದ್ದು, ಮಳೆಯಲ್ಲಿ ಸಿಡಿಲಿನಿಂದ ಬಂದ ನಾಣ್ಯಗಳೋ ಅಥವಾ ಭೂಮಿಯಿಂದ ಹೊರ ಬಂದ ನಾಣ್ಯಗಳು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

  • ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರ್ಲಿನ್: ಜರ್ಮನ್‍ನ ಚಿನ್ನದ ವ್ಯಾಪಾರ ನಡೆಸುವ ಪ್ರೋ ಔರಮ್ ಕಂಪನಿಯು ಬರೋಬ್ಬರಿ ಚಿನ್ನದ ನಾಣ್ಯಗಳನ್ನು ಬಳಸಿ 186.5 ಕೋಟಿ ರೂ ವೆಚ್ಚದಲ್ಲಿ ಕ್ರಿಸ್ಮಸ್ ಟ್ರೀಯೊಂದನ್ನು ನಿರ್ಮಿಸಿದೆ.

    ಯುರೋಪ್ ಖಂಡದಲ್ಲಿಯೇ ಇಷ್ಟೊಂದು ದುಬಾರಿ ವೆಚ್ಚದ ಕ್ರಿಸ್ಮಸ್ ಟ್ರೀ ಈವರೆಗೂ ತಯಾರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸುಮಾರು 186.5 ಕೋಟಿ ರೂ. (2.3 ಮಿಲಿಯನ್ ಯುರೋ) ವೆಚ್ಚದಲ್ಲಿ, 63 ಕೆ.ಜಿಯ ಶುದ್ದ ಚಿನ್ನದಲ್ಲಿ ತಯಾರಿಸಿದ 2,018 ಚಿನ್ನದ ನಾಣ್ಯಗಳನ್ನು ಬಳಸಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಕ್ರಿಸ್ಮಸ್ ಟ್ರೀಯ ತುದಿಯಲ್ಲಿ ಇಟ್ಟಿರುವ ನಕ್ಷತ್ರ ಆಕಾರದ ಚಿನ್ನದ ನಾಣ್ಯವೊಂದಕ್ಕೆ ಸುಮಾರು 17 ಲಕ್ಷ ರೂ. (21,000 ಯುರೋ) ಖರ್ಚಾಗಿದೆ

    ಈ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀ ಪಿರಾಮಿಡ್ ಆಕಾರದಲ್ಲಿದ್ದು, ಟ್ರೀ ತುದಿಯಲ್ಲಿ ಒಂದು ಚಿನ್ನದ ನಕ್ಷತ್ರವನ್ನು ಕೂಡ ಇರಿಸಲಾಗಿದೆ. ಯುರೋಪ್‍ನಲ್ಲಿಯೇ ಅತೀ ದುಬಾರಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಿದ ಹೆಗ್ಗಳಿಕೆಗೆ ಪ್ರೋ ಔರಮ್ ಕಂಪನಿ ಪಾತ್ರವಾಗಿದೆ.

    ಪ್ರೋ ಔರಮ್ ಕಂಪನಿಯ ಸಿಬ್ಬಂದಿ ಬೆಂಜಮಿನ್ ಸುಮ್ಮ ಮಾತನಾಡಿ, ಇತ್ತಿಚಿಗೆ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಇಳಿಮುಖವಾಗಿದೆ. ಇಲ್ಲದಿದ್ದರೆ ಈ ಕ್ರಿಸ್ಮಸ್ ಟ್ರೀ ಮೌಲ್ಯ ಇನ್ನೂ ಜಾಸ್ತಿಯಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಯುರೋಪ್‍ನಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾರ್ವಜನಿಕ ಸಾಲ ಹೆಚ್ಚಾಗಿದೆ. ಆದರಿಂದ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಮೇಲೆ ಹಾಕುತ್ತಿದ್ದಾರೆ. ಹೀಗಾಗಿ ಚಿನ್ನದ ಮೌಲ್ಯ ಕುಸಿದಿದೆ ಎಂದು ಹೇಳಿದರು.

    ಕಂಪನಿಯ ಮ್ಯೂನಿಚ್ ಶಾಖೆಯಲ್ಲಿ ಸುಮಾರು 10 ಅಡಿ ಎತ್ತರದ ಅತೀ ದುಬಾರಿ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀಯನ್ನು ಡಿ. 15 ರಿಂದ ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಪ್ರೋ ಔರಮ್ ಸಿಬ್ಬಂದಿ ತಿಳಿಸಿದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಮಗಾರಿ ವೇಳೆ ಪತ್ತೆಯಾದ್ವು 900 ವರ್ಷ ಹಳೆಯ ಚಿನ್ನದ ನಾಣ್ಯಗಳು!

    ಕಾಮಗಾರಿ ವೇಳೆ ಪತ್ತೆಯಾದ್ವು 900 ವರ್ಷ ಹಳೆಯ ಚಿನ್ನದ ನಾಣ್ಯಗಳು!

    ರಾಯ್ಪುರ: ರಸ್ತೆ ಕಾಮಗಾರಿ ವೇಳೆ ಸುಮಾರು 12 ನೇ ಶತಮಾನದ ಚಿನ್ನದ ನಾಣ್ಯಗಳು ಛತ್ತೀಸ್‍ಗಡ ರಾಜ್ಯದ ಕೊಂಡಗಾನ್ ಜಿಲ್ಲೆಯಲ್ಲಿ ದೊರೆತಿದೆ.

    ಕೊಂಡಗಾನ್ ಜಿಲ್ಲೆಯ ಕೊರ್ಕೋಟಿ ಮತ್ತು ಬೆದ್ಮಾ ಗ್ರಾಮಗಳ ನಡುವೆ ರಸ್ತೆ ಕಾಮಗಾರಿ ಪ್ರಯುಕ್ತ ನೆಲ ಅಗೆಯುವ ವೇಳೆ ಮಡಿಕೆಯೊಂದು ಸಿಕ್ಕಿದೆ. ಈ ಮಡಿಕೆಯನ್ನು ತೆರೆದು ನೋಡಿದಾಗ ಮಡಿಕೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಕೂಡಲೇ ಕಾರ್ಮಿಕರು ಕೊರ್ಕೋಟಿ ಗ್ರಾಮದ ಸರ್ ಪಂಚ್‍ಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸರ್ ಪಂಚ್ ನೆಹರುಲಾಲ್ ಬರ್ಗೆಲ್ ರವರು ಮಡಿಕೆಯನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿಗೆ ವಿಷಯ ಮುಟ್ಟಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕೊಂಡಗಾನ್ ಜಿಲ್ಲಾಧಿಕಾರಿಯಾದ ನೀಲಕಂಠ ಟೇಕಂ, ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ 12 ನೇ ಶತಮಾನದ ಚಿನ್ನದ ನಾಣ್ಯಗಳು ದೊರೆತಿದೆ. ಕೊರ್ಕೋಟಿ ಹಾಗೂ ಬೇದ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಈ ವೇಳೆ ಮಹಿಳಾ ಕಾರ್ಮಿಕರಿಗೆ ಒಂದು ಮಡಿಕೆ ಸಿಕ್ಕಿದ್ದು ಅದರಲ್ಲಿ 57 ಚಿನ್ನದ ನಾಣ್ಯಗಳು ಸೇರಿದಂತೆ ಬೆಳ್ಳಿ ನಾಣ್ಯಗಳು, ಚಿನ್ನದ ಕಿವಿಯೋಲೆಯೂ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಈ ನಾಣ್ಯಗಳನ್ನು 12 ಅಥವಾ 13ನೇ ಶತಮನಕ್ಕೆ ಸೇರಿವೆ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ನಾಣ್ಯಗಳ ಮೇಲೆ ಯಾದವ ರಾಜವಂಶ ವಿದರ್ಭವನ್ನು ಆಳುತ್ತಿದ್ದಾಗ ಜಾರಿಯಲ್ಲಿದ್ದ ಲಿಪಿಯು ಕಂಡುಬಂದಿದ್ದು, ಇದು ಯಾದವ ರಾಜವಂಶದ ಕಾಲದ್ದು ಎಂದು ನೀಲಕಂಠರವರು ಹೇಳಿದ್ದಾರೆ.