ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.
ದಿಢೀರ್ ಇಳಿಕೆಗೆ ಕಾರಣ ಏನು?
* ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
* ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
* ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
* ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ
ಗಡಿಯನ್ನು ಹಂಚಿಕೊಂಡಿರುವ ಎರಡು ದೇಶಗಳ ಸೈನಿಕರು ಕಾದಾಟ ಮಾಡುವ ಕಾಲ ಹೋಯ್ತು. ಯುದ್ಧ ವಿಮಾನಗಳು, ಡ್ರೋನ್‌ಗಳು ಈಗ ಸೈನಿಕರ ಸ್ಥಾನವನ್ನು ತುಂಬಿದೆ. ಆದರೆ ಗಡಿಯನ್ನೇ ಹಂಚಿಕೊಳ್ಳದ ದೇಶಗಳು ಈಗ ಕಾದಾಟಕ್ಕೆ ಇಳಿದಿದೆ. ಎರಡು ದೇಶಗಳು ಮಿಲಿಟರಿಯಲ್ಲಿ ಬಲಿಷ್ಠವಾಗಿದ್ದರೂ ಅವುಗಳ ಸೈನಿಕರು ಪರಸ್ಪರ ಕಾದಾಡುತ್ತಿಲ್ಲ. ಬದಲಾಗಿ ಕರೆನ್ಸಿ ವಾರ್‌ನಲ್ಲಿ ಗೋಲ್ಡ್ ಬಾಂಬ್ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗಿದೆ.
ಹೌದು. ಅಮೆರಿಕ ಮತ್ತು ಚೀನಾದ (China) ಕಿತ್ತಾಟ ಈಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ನಮ್ಮ ಒತ್ತಡಕ್ಕೆ ಬಗ್ಗದೇ ಇದ್ದರೆ ಚೀನಾದ ಮೇಲೆ 145% ಸುಂಕ ವಿಧಿಸುತ್ತೇವೆ ಎಂದು ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ. ಟ್ರಂಪ್ ಬೆದರಿಕೆ ಬಗ್ಗದ ಚೀನಾ ಡಾಲರ್ (Dollar) ವಿರುದ್ಧ ಹೋರಾಡಲು ಗೋಲ್ಡ್ ಬಾಂಬ್ ಬಳಸಲು ಮುಂದಾಗಿದೆ. ಈ ʼಬಾಂಬ್ʼ ಪ್ರಯೋಗ ಯಶಸ್ವಿಯಾದರೆ ವಿಶ್ವದ ಆರ್ಥಿಕತೆ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ಏನಿದು ಗೋಲ್ಡ್ ಬಾಂಬ್? ಚೀನಾದ ತಂತ್ರ ಏನು? ಅಮೆರಿಕದ ಡಾಲರ್ (Dollar) ವಿಶ್ವದ ಕರೆನ್ಸಿಯಾಗಿದ್ದು ಹೇಗೆ ಇತ್ಯಾದಿ ವಿಚಾರಗಳನ್ನು ವಿವರಿಸಲಾಗಿದೆ.
ಏನಿದು ಕರೆನ್ಸಿ ವಾರ್?
ವಿಶ್ವದ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಕ್ಕೆ ದೊಡ್ಡಣ್ಣನ ಪಟ್ಟ ಸಿಗಲು ಕಾರಣ ಯಾವುದು ಎಂದರೆ ಅದು ಡಾಲರ್. ಜಗತ್ತಿನ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುತ್ತಿರುವ ಕಾರಣ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಿಲಿಟರಿ ಬಳಸಿ ಅಮೆರಿಕವನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ಡಾಲರ್ ಮೌಲ್ಯವನ್ನೇ ಕುಗ್ಗಿಸಲು ಚೀನಾ ಈಗ ಚಿನ್ನದ ಬಾಂಬ್ ಪ್ರಯೋಗಕ್ಕೆ ಮುಂದಾಗಿದೆ.
ಚೀನಾಗೆ ಸಿಟ್ಟು ಯಾಕೆ?
ನಾವು ಅಭಿವೃದ್ಧಿ ಪಡಿಸಿದ ವಸ್ತುಗಳನ್ನು ಚೀನಾ ನಕಲಿ ಮಾಡಿ ಮೋಸ ಮಾಡುತ್ತಿದೆ ಎಂದು ಹಿಂದಿನಿಂದಲೂ ಅಮೆರಿಕ ಆರೋಪಿಸಿಕೊಂಡೇ ಬಂದಿದೆ. ಈಗ ಟ್ರಂಪ್ ಅಧಿಕಾರಕ್ಕೆ ಏರಿದ ಬಳಿಕ ಭಾರೀ ಪ್ರಮಾಣದಲ್ಲಿ ಲಾಬಿ ಮಾಡುತ್ತಿದ್ದು ಅವರ ಲಾಬಿಗೆ ಮಣಿಯದೇ ಇದ್ದರೆ ಸುಂಕಾಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿಶ್ವದ ಸ್ಟಾಕ್ ಮಾರ್ಕೆಟ್ ಪತನಗೊಳ್ಳುತ್ತಿದೆ. ಈಗ ಮತ್ತೆ ಇರಾನ್‌ನಿಂದ ಕಚ್ಚಾ ತೈಲ, ಎಲ್‌ಎನ್‌ಜಿ ಖರೀದಿ ಮಾಡುವುದನ್ನು ನಿಲ್ಲಿಸದೇ ಇದ್ದರೆ ಚೀನಾದಿಂದ ಆಮದಾಗುವ 155% ಸುಂಕ ವಿಧಿಸುವುದಾಗಿ ಬೆದರಿಸಿದ್ದಾರೆ.
ಟ್ರಂಪ್ (Donald Trump) ಈ ರೀತಿಯ ನಿರಂತರ ಬೆದರಿಕೆಯಿಂದಾಗಿ ಚೀನಾದ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಕಡಿಮೆ ಆಗುತ್ತಿದೆ. ನಿರೀಕ್ಷೆಯ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ದರ ಕಡಿಮೆಯಾಗಿದೆ. ಈ ವರ್ಷ 5% ಬೆಳವಣಿಗೆ ಸಾಧಿಸುವ ಗುರಿಯನ್ನು ಹಾಕಿಕೊಂಡಿದ್ದ ಚೀನಾ ಮೂರನೇ ತ್ರೈಮಾಸಿಕದಲ್ಲಿ 4.8% ಬೆಳವಣಿಗೆ ಸಾಧಿಸಿದೆ. ಇದೇ ರೀತಿ ವ್ಯಾಪಾರ ಸಮರ ಮುಂದುವರಿದರೆ ಚೀನಾದ ಜಿಡಿಪಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಈ ಕಾರಣಕ್ಕೆ ಚೀನಾ ಈಗ ಅಮೆರಕದ ಡಾಲರ್ ಮೌಲ್ಯವನ್ನೇ ಕುಗ್ಗಿಸಲು ಮುಂದಾಗಿದೆ.
ಏನಿದು ಗೋಲ್ಡ್ ಬಾಂಬ್?
ಡಾಲರ್ ಏಕಸ್ವಾಮ್ಯವನ್ನು ಕುಗ್ಗಿಸಲು ಮತ್ತು ಟ್ರಂಪ್ ಅವರ ಮೇಕ್ ಅಮೆರಿಕ ಗ್ರೇಟ್ ಅಗೇನ್ ಯೋಜನೆಯನ್ನು ಕುಸಿಯುವಂತೆ ಮಾಡಲು ಚೀನಾ ಮೂರು ರೀತಿಯ ತಂತ್ರ ಮಾಡಿದೆ. ಒಂದನೇಯದ್ದು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್‌ನಲ್ಲಿರುವ ತನ್ನ ಡಾಲರ್ ಬಾಂಡ್ ಅನ್ನು ಮಾರಾಟ ಮಾಡುತ್ತಿದೆ. 2020 ರಲ್ಲಿ 1,120 ಬಿಲಿಯನ್ ಡಾಲರ್ ಇದ್ದರೆ 2025ರ ವೇಳೆಗೆ ಇದು 760 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಚೀನಾ ಮಾತ್ರವಲ್ಲ ಭಾರತ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳು ಡಾಲರ್ ಬಾಂಡ್ ಮಾರಾಟ ಮಾಡುತ್ತಿದೆ. ಈ ಕ್ರಮದಿಂದಾಗಿ ಚೀನಾದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆಯಾಗುತ್ತದೆ ಮತ್ತು ಅಮೆರಿಕದ ಆರ್ಥಿಕ ಹಿಡಿತವನ್ನು ದುರ್ಬಲಗೊಳಿಸುತ್ತದೆ
ಎರಡನೇಯದ್ದು ಚೀನಾ ಈಗ ಇತರ ದೇಶಗಳಿಗೆ ಶಾಂಘೈ ಚಿನ್ನದ ವಿನಿಮಯ ಕೇಂದ್ರದ ಮೂಲಕ ತಮ್ಮ ಚಿನ್ನವನ್ನು ಸಂಗ್ರಹಿಸುವ ಸೌಲಭ್ಯವನ್ನು ನೀಡುತ್ತಿದೆ. ಇಲ್ಲಿಯವರೆಗೆ ಅಮೆರಿಕ ಮಾತ್ರ ಈ ಸವಲತ್ತನ್ನು ಒದಗಿಸಿತ್ತು. ಇದರಿಂದಾಗಿ ಡಾಲರ್ ಬಲಗೊಳ್ಳುತ್ತಿತ್ತು. ಆದರೆ ಈಗ ಚಿನ್ನದ ಠೇವಣಿ ಇರಿಸುವ ಸೌಲಭ್ಯ ನೀಡಿದ ಕಾರಣ ತನ್ನ ಚೀನಾ ಕರೆನ್ಸಿ ಯುವಾನ್ ಬಲಗೊಳ್ಳಲಿದೆ. ಒಂದು ದೇಶದ ಒಳಗಡೆ ವಿದೇಶಿ ಹೂಡಿಕೆ ಜಾಸ್ತಿಯಾದಂತೆ ಆ ದೇಶದ ಕರೆನ್ಸಿ ಬಲವಾಗುತ್ತದೆ. ವರ್ಷದಿಂದ ವರ್ಷಕ್ಕೆ ಚೀನಾ ತನ್ನ ಚಿನ್ನದ ಮೀಸಲು ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. 2020 ರಲ್ಲಿ ಚೀನಾದ ಬಳಿ 1,948.3 ಮೆಟ್ರಿಕ್ ಟನ್ ಚಿನ್ನ ಇದ್ದರೆ 2025 ರ ವೇಳೆ ಇದು 2,279.6 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಇದನ್ನೂ ಓದಿ: ಭಾರತದ ಬಳಿಕ ಪಾಕ್‌ಗೆ ನೀರಿನ ಹರಿವು ತಡೆಯಲು ಪ್ಲ್ಯಾನ್ – ಅಣೆಕಟ್ಟು ನಿರ್ಮಿಸಲು ಮುಂದಾದ ಅಫ್ಘಾನ್
ಕಮ್ಯೂನಿಸ್ಟ್ ಸರ್ಕಾರ ಆಗಿರುವ ಕಾರಣ ಚೀನಿ ಜನತೆ ಜಾಗದ ಮೇಲೆ ಹೂಡಿಕೆ ಮಾಡುವುದಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಕೋವಿಡ್ ನಂತರ ರಿಯಲ್ ಎಸ್ಟೇಟ್ ಉದ್ಯಮ ಸಮಸ್ಯೆಗೆ ಸಿಲುಕಿದ್ದು ಜನ ಈಗ ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಲು ಆರಂಭಿಸಿದ್ದಾರೆ. ಪರಿಣಾಮ 2024 ರಲ್ಲಿ ಚೀನಾ 103 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿತ್ತು.
ಮೂರನೇಯದ್ದು ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಚೀನಾ ಬ್ರಿಕ್ಸ್ ದೇಶಗಳೊಂದಿಗೆ ಚಿನ್ನದ ಬೆಂಬಲಿತ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸಿದೆ. ಇದರ ಜೊತೆ ಬ್ರಿಕ್ಸ್ ದೇಶಗಳು ಡಾಲರ್‌ಗೆ ಬದಲಾಗಿ ಹೊಸ ಬ್ರಿಕ್ಸ್ ಕರೆನ್ಸಿಯನ್ನು ತರುವ ಪ್ಲ್ಯಾನ್ ಮಾಡಿದೆ. ಒಂದು ವೇಳೆ ಬ್ರೆಜಿಲ್, ರಷ್ಯಾ, ಚೀನಾ, ಭಾರತ, ದಕ್ಷಿಣ ಆಫ್ರಿಕಾ ಒಂದಾಗಿ ಈ ನಿರ್ಧಾರ ಪ್ರಕಟಿಸಿದರೆ ಡಾಲರ್ ಮೌಲ್ಯ ಭಾರೀ ಕುಸಿಯಲಿದೆ.
ವಿಶ್ವದ ಮೇಲೆ ಪರಿಣಾಮ ಏನು?
ಈಗಾಗಲೇ ಭಾರತದ ಸೇರಿದಂತೆ ಹಲವು ದೇಶಗಳು ಚಿನ್ನದ ಮೀಸಲು ನಿಧಿಯನ್ನು ಹೆಚ್ಚಿಸುತ್ತಿದೆ. ಚೀನಾ ಭಾರೀ ಪ್ರಮಾಣದಲ್ಲಿ ಚಿನ್ನದ ಖರೀದಿಸಲು ಮುಂದಾದರೆ ಚಿನ್ನದ ಮೇಲೆ ಮತ್ತಷ್ಟು ಏರಿಕೆಯಾಗಲಿದೆ.
ಡಾಲರ್ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?
1914 ರಿಂದ 1919 ವರೆಗೆ ಮೊದಲ ಮಹಾಯುದ್ಧ ನಡೆದರೆ 1939 ರಿಂದ 1945ರವರೆಗೆ ಎರಡನೇ ಮಹಾಯುದ್ಧ ನಡೆಯಿತು. ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದರೂ ಯುಕೆ, ಯುಎಸ್‌ಎಸ್‌ಆರ್ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ದೊಡ್ಡ ಆನೆ ಬಲ ಬಂತು. ಆದರೆ ಎರಡು ಯುದ್ಧಗಳಿಂದ ಮಿತ್ರ ರಾಷ್ಟ್ರಗಳ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಯ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ ಬ್ರೆಟ್ಟನ್‌ವುಡ್ಸ್ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದವು.
ಈ ಒಪ್ಪಂದದ ಪ್ರಕಾರ ವ್ಯವಹಾರಕ್ಕೆ ಅಮೆರಿಕ ಡಾಲರ್ ಅನ್ನು ಎಲ್ಲಾ ದೇಶಗಳು ಬಳಸಲು ಅಧಿಕೃತ ಒಪ್ಪಿಗೆ ಸಿಕ್ಕಿತು. ಒಂದು ಔನ್ಸ್ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವವೇ ಬಾಸ್ ಎನ್ನುವಂತೆ ಅಮೆರಿಕ ಡಾಲರ್ ವಿಶ್ವದ ಕರೆನ್ಸಿಯಾಗತೊಡಗಿತು. ಇದರಿಂದ ಬೇರೆ ದೇಶಗಳಿಗೆ ಲಾಭ ಇತ್ತು. ಆ ಸಮಯದಲ್ಲಿ ಯಾವ ದೇಶದ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಹೇಳಲು ಸಾಧ್ಯವಿರಲಿಲ್ಲ. ಎರಡು ದೇಶಗಳ ಕರೆನ್ಸಿ ಮಧ್ಯೆ ವ್ಯವಹಾರ ಸಾಧ್ಯವಿರಲಿಲ್ಲ. ಒಂದು ವೇಳೆ ಕರೆನ್ಸಿ ಅಪಮೌಲ್ಯವಾದರೆ ಭಾರೀ ಸಮಸ್ಯೆಯಾಗುವ ಸಾಧ್ಯತೆ ಇತ್ತು.
ಭವಿಷ್ಯದಲ್ಲಿ ಕಚ್ಚಾತೈಲ ವಿಶ್ವವವನ್ನೇ ಆಳಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸೌದಿ ಅರೇಬಿಯಾದ ಜೊತೆ ಅಮೆರಿಕ 1974 ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕೆ ಅಮೆರಿಕ ಷರತ್ತು ವಿಧಿಸಿತ್ತು. ನಿಮ್ಮ ಎಲ್ಲಾ ತೈಲ ಬಾವಿಗಳಿಗೆ ನಾವು ರಕ್ಷಣೆ ನೀಡುತ್ತೇವೆ. ಆದರೆ ಕಚ್ಚಾ ತೈಲ ವ್ಯವಹಾರ ಎಲ್ಲವನ್ನು ಡಾಲರ್‌ನಲ್ಲೇ ನಡೆಸಬೇಕು ಎಂದು ಹೇಳಿತ್ತು. ಈ ಷರತ್ತಿಗೆ ಒಪ್ಪಿಗೆ ನೀಡಿದ್ದರಿಂದ ಡಾಲರ್ ಸುಲಭವಾಗಿ ವಿಶ್ವದ ಕರೆನ್ಸಿಯಾಗತೊಡಗಿತು.
ಸ್ವಿಫ್ಟ್ ಬ್ಯಾಂಕಿಂಗ್- ಡಾಲರ್ ಶೈನಿಂಗ್
ಯೆಟ್ನಾಂ ಯುದ್ಧ, ಚಿನ್ನದ ಬೆಲೆ ಏರಿಕೆ, ಅಮೆರಿಕದ ಚಿನ್ನ ಸಂಗ್ರಹ ಕರಗಿದ ಬೆನ್ನಲ್ಲೇ ಅಮೆರಿಕ 1971ರಲ್ಲಿ ಬ್ರೆಟ್ಟನ್ ವುಡ್ಸ್ ಒಪ್ಪಂದವನ್ನು ರದ್ದು ಮಾಡುತ್ತದೆ. ರದ್ದು ಮಾಡಿದ ಬೆನ್ನಲ್ಲೇ ಇಡಿ ವಿಶ್ವದಲ್ಲಿ ವ್ಯವಹಾರ ಹೇಗೆ ನಡೆಸುವುದು ಎಂಬ ಗಂಭೀರ ಪ್ರಶ್ನೆ ಏಳುತ್ತದೆ. ಈ ಸಂದರ್ಭದಲ್ಲಿ ಯುಕೆಯ ಪೌಂಡ್, ಚೀನಾದ ಯುವಾನ್ ಎಲ್ಲವೂ ಪ್ರವರ್ಧಮಾನಕ್ಕೆ ಬರುತ್ತದೆ. ಕೊನೆಗೆ ದೇಶ ದೇಶಗಳ ಮಧ್ಯೆ ಚರ್ಚೆ ನಡೆದು ಕೊನೆಗೆ 1973 ರಲ್ಲಿ ಒಂದು ಸಂಸ್ಥೆ ಆರಂಭವಾಗುತ್ತದೆ. ಅದುವೇ SWIFT. Society for Worldwide Interbank Financial Telecommunication ಸಂಸ್ಥೆ. ಆರಂಭದಲ್ಲಿ ಇದು ಯುರೋಪ್ ಮತ್ತು ಅಮೆರಿಕದ ಬ್ಯಾಂಕ್‌ಗಳ ಮಧ್ಯೆ ನಡೆದ ಒಪ್ಪಂದ ಆಗಿತ್ತು.
SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಸ್ವಿಫ್ಟ್ ನೆಟ್‍ವರ್ಕ್ ಆರಂಭವಾಯಿತು.
ಇಲ್ಲೂ ಡಾಲರನ್ನೇ ಯಾಕೆ ಪರಿಗಣಸಿಲಾಯಿತು ಎನ್ನುವುದಕ್ಕೂ ಕಾರಣವಿದೆ.ಭವಿಷ್ಯದಲ್ಲಿ ಯುರೋಪ್ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಪರಿಣಾಮ North Atlantic Treaty Organization 1949ರಲ್ಲಿ ಜನ್ಮ ತಾಳಿತ್ತು. ಎರಡನೇ ಮಹಾಯದ್ಧದ ಬಳಿಕ ಯುರೋಪ್ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು ನಿಧನವಾಗಿ ಚೇತರಿಕೆ ಕಾಣುತ್ತಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಈ ಕಾರಣಕ್ಕೆ ಯುರೋಪ್ ರಾಷ್ಟ್ರಗಳು ಸ್ವಿಫ್ಟ್ ನೀತಿಯನ್ನು ಒಪ್ಪಿಕೊಂಡವು.
ಭಾರತೀಯ ಸಂಪ್ರದಾಯದಲ್ಲಿ ಪ್ರತಿ ಹಬ್ಬ ಬಂದಾಗ ಚಿನ್ನ, ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸುವ ಪದ್ದತಿಯಿದೆ. ಅದರಲ್ಲೂ ದೀಪಾವಳಿ (Deepavali) ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ದೀಪಾವಳಿ ಹಬ್ಬದಂದು ಭಾರೀ ಪ್ರಮಾಣದಲ್ಲಿ ಭಾರತದಲ್ಲಿ ಚಿನ್ನ(Gold) ಮಾರಾಟವಾಗುತ್ತದೆ.
ಚಿನ್ನದ ಬೇಡಿಕೆ ಹೆಚ್ಚಿದಂತೆ ಈಗ ದರವೂ ಭಾರೀ ಏರಿಕೆ ಕಾಣುತ್ತಿದ. ಟ್ರಂಪ್ ಒಂದೊಂದು ನಿರ್ಧಾರ ಪ್ರಕಟಿಸುತ್ತಿದ್ದಂತೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಪರಿಣಾಮ ವಿಶ್ವಾದ್ಯಂತ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಮಾಡುತ್ತಿದ್ದತೆ ಈ ಲೋಹಗಳ ಬೆಲೆ ರಾಕೆಟ್ ವೇಗದಂತೆ ಮೇಲಕ್ಕೆ ಏರುತ್ತಿದೆ.
ಚಿನ್ನವನ್ನು ಆಭರಣವನ್ನಾಗಿಯೂ ಖರೀದಿಸಬಹುದು ಅಥವಾ ಹೂಡಿಕೆ ಮಾಡಬಹುದು. ಆಭರಣವಾಗಿ ಚಿನ್ನ ಖರೀದಿ ಮಾಡಿದಾಗ ಮೇಕಿಂಗ್ ಚಾರ್ಜ್ ಬೀಳುತ್ತದೆ. ಒಂದು ವೇಳೆ ಮಾರಾಟ ಮಾಡುವಾಗಲೂ ಅದನ್ನು ಪರಿಶೀಲಿಸುವಾಗ ಇತರ ಕಾರಣಗಳಿಂದ ತೂಕ ಸ್ವಲ್ಪ ಕಡಿಮೆಯಾಗುತ್ತದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಜುವೆಲ್ಲರಿಗಳಲ್ಲಿ ನಾಣ್ಯಗಳನ್ನು ಖರೀದಿ ಮಾಡಿದರೆ ನಂತರ ಮಾರಾಟ ಮಾಡಿದರೂ ಆಗಿನ ಮಾರುಕಟ್ಟೆಯ ಬೆಲೆಯೇ ಸಿಗುತ್ತದೆ.
ಒಂದು ವೇಳೆ ಚಿನ್ನವನ್ನು ಈಗಲೇ ಖರೀದಿಸಬೇಕೆಂದೇ ಇಲ್ಲ. ಹಲವಾರು ಜುವೆಲ್ಲರಿ ಮಳಿಗೆಗೆಗಳು ಪ್ರತಿ ತಿಂಗಳು ನಿಗದಿತ ಪ್ರಮಾಣ ಹಣದ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. 11 ತಿಂಗಳ ನಂತರ ಚಿನ್ನ ಖರೀದಿಸಬಹುದು. ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಕಂಪನಿಗಳು ಹಲವಾರು ರಿಯಾಯಿತಿಗಳನ್ನು ಪ್ರಕಟಿಸುತ್ತವೆ.
ಬಹಳಷ್ಟು ಖಾಸಗಿ ಸಂಸ್ಥೆಗಳು ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತವೆ. ಇಲ್ಲೂ ಈಗ ಹೂಡಿಕೆ ಮಾಡಬಹುದು. ಇದರ ಹೊರತಾಗಿ ಚಿನ್ನದ ಮ್ಯೂಚುಬಲ್ ಫಂಡ್ ಅಥವಾ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ನಲ್ಲಿ(ಗೋಲ್ಡ್ ಇಟಿಎಫ್) ಯೂನಿಟ್ ಲೆಕ್ಕದಲ್ಲಿ ಖರೀದಿ ಮಾಡಬಹುದು. ಆದರೆ ಇಲ್ಲಿ ಖರೀದಿಸಿದ ಚಿನ್ನವನ್ನು ನಿಮಗೆ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದರ ಬದಲಾಗುತ್ತದೆ.
ಚಿನ್ನ, ಬೆಳ್ಳಿ ಯಾವಾಗಲೂ ಒಂದು ಸಮೃದ್ಧಿಯ ಹೊಳಪು. ನೀವು ಎಷ್ಟೇ ಖರೀದಿ ಮಾಡಿದರೂ ಸಾಕೇನಿಸೊಲ್ಲ. ಹಾಗಂತ ಬೇಕಾದಷ್ಟು ಖರೀದಿ ಮಾಡೋಕೂ ಆಗಲ್ಲ. ಆದರೆ ಖರೀದಿ ಮಾಡಿದ್ದು ಯಾವೂದು ಹಾಳಾಗೋದು ಇಲ್ಲ. ಇದೇ ಚಿನ್ನ ಹಾಗೂ ಬೆಳ್ಳಿಯಲ್ಲಿರುವ ಒಂದು ಸೊಬಗು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹಾಗೂ ಚಿನ್ನ ಸ್ಪರ್ಧೆಗಿಳಿಂತಿದೆ. ಪ್ರತಿ ದಿನವೂ ನಾ ಮುಂದು, ತಾ ಮುಂದು ಎಂದು ಓಟವನ್ನು ನಿಲ್ಲಿಸುತ್ತಲೇ ಇಲ್ಲ ಎನ್ನುವಂತಾಗಿದೆ. ಇವೆರಡರ ಓಟಗಳ ನಡುವೆ ಗ್ರಾಹಕರು ಪರದಾಡುವಂತಾಗಿದೆ.
ಹೌದು, ಮೊದಲೆಲ್ಲ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ದರ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಸ್ಥಿರವಾಗಿರುವಂತೆ ಭಾಸವಾಗುತ್ತಿತ್ತು. ಹೆಚ್ಚು ವ್ಯತ್ಯಾಸವೇನು ಕಂಡುಬರುತ್ತಿರಲಿಲ್ಲ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ದರವೂ ಏರಿಕೆಯಾಗುತ್ತಿದೆ. ಆದರೆ ಭಾರತಕ್ಕೆ ಬೆಳ್ಳಿ ಆಮದು ತೀರಾ ಕಡಿಮೆಯಾಗಿದೆ. ಇದರಿಂದ ಬೆಳ್ಳಿ ಕೊರತೆ ಎದ್ದು ಕಾಣುತ್ತಿದೆ. ಹಬ್ಬ ಬಂತೆಂದರೆ ಸಾಕು ಚಿನ್ನ, ಬೆಳ್ಳಿ ಖರೀದಿ ಹೆಚ್ಚಾಗುತ್ತದೆ. ಆದರೆ ಇದೀಗ ವಿಶ್ವದಲ್ಲೇ ಅತಿ ದೊಡ್ಡ ಬೆಳ್ಳಿ ಖರೀದಿ ರಾಷ್ಟ್ರವಾಗಿರುವ ಭಾರತದಲ್ಲಿ ಬೆಳ್ಳಿ ಕೊರತೆ ಉಂಟಾಗಿದೆ. ಇದರ ಪರಿಣಾಮ ವಿಶ್ವದ ಬೇರೆ ದೇಶಗಳಿಗೆ ತುಲನೆ ಮಾಡಿದಾಗ ಭಾರತದಲ್ಲಿ ಬೆಳ್ಳಿ ಬೆಲೆ ಶೇ.10 ರಷ್ಟು ಏರಿಕೆಯಾಗಿದೆ.
ಬೆಳ್ಳಿ ಕೊರತೆಗೆ ಕಾರಣ:
ಸಾಮಾನ್ಯವಾಗಿ ಹಬ್ಬಗಳು ಬಂದಾಗ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶುಭದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಭಾರತೀಯರ ಸಂಪ್ರದಾಯ ಎಂಬ ನಂಬಿಕೆಯಿದೆ. ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನರು ಬೆಳ್ಳಿ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಇನ್ನೂ ಭಾರತಕ್ಕೆ ಚಿನ್ನದ ಆಮದು ಕಡಿಮೆಯಾಗಿದ್ದು, ಶೇ.42ಗೆ ಕುಸಿತಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಲ್ಲಿ ಬೆಳ್ಳಿ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಉತ್ಪಾದಿಸಲಾಗಿದ್ದ ಹೆಚ್ಚುವರಿಯೂ ಬೆಳ್ಳಿಯು ಖಾಲಿಯಾಗದೆ. ಹೀಗಾಗಿ ಈ ವರ್ಷ ಚಿನ್ನದ ಬೆಲೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಳಿಗ್ಗೆ ಹೆಚ್ಚಾಗಿದೆ. ಇದರಿಂದ ಜನರ ಬೇಡಿಕೆಯನ್ನು ಸದ್ಯದ ಪೂರೈಕೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಬೆಳ್ಳಿ ದರ ಏರಿಕೆಗೆ ಕಾರಣ:
ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಸಮರವನ್ನು ಆರಂಭಿಸಿದ್ದಾರೆ. ಟ್ರಂಪ್ ಆರಂಭದಲ್ಲಿ 50ಕ್ಕು ಹೆಚ್ಚು ದೇಶಗಳ ಮೇಲೆ ಸುಂಕ ಸಮರ ಹೇರಿದ್ದರು. ಅಮೆರಿಕ ಹಾಗೂ ಚೀನಾದ ನಡುವಿನ ಸುಂಕ ಸಮರದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದೆ. ಹಿನ್ನೆಲೆ ಜನರು ಬೆಳ್ಳಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಪರಿಣಾಮ ಎರಡರ ಬೆಲೆಯೂ ಏರಿಕೆಯಾಗುತ್ತದೆ.
ಇನ್ನು ಬೆಳ್ಳಿಯಂತೆ ಚಿನ್ನದ ಉತ್ಪಾದನೆಯು ಕೆಲವು ದೇಶಗಳಲ್ಲಿ ಮಾತ್ರವಿದೆ. ಬೆರಳೆಣಿಕೆಯಷ್ಟು ಮಾತ್ರ ಕೆಲ ದೇಶಗಳು ಬೆಳ್ಳಿ ಗಣಿಗಾರಿಕೆ ಮಾಡುತ್ತವೆ. ಮೆಕ್ಸಿಕೊ, ಪೋಲ್ಯಾಂಡ್, ಯುಕೆ, ಆಸ್ಟ್ರೇಲಿಯ ಮಾತ್ರ ಬೆಳ್ಳಿ ಗಣಿಗಾರಿಕೆ ಮಾಡಲಾಗುತ್ತದೆ. ಅಲ್ಲದೆ ಸೌರ ಶಕ್ತಿ , ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಮಾಡಲಾಗುತ್ತಿರುವುದರಿಂದ, ಆ ಕ್ಷೇತ್ರಗಳಲ್ಲೂ ಕೂಡ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಬೆಳ್ಳಿ ದರ ಏರಿಕೆಯಾಗಿದೆ.
ಬೆಳ್ಳಿ ಆಮದು ಎಷ್ಟಿದೆ?
ಕಳೆದ ಐದು ವರ್ಷಗಳ ಹಿಂದೆ ಅಂದರೆ 2020ರಿಂದ 2021ರಲ್ಲಿ 2218 ರಿಂದ 2773 ಟನ್ ಬೆಳ್ಳಿ ಭಾರತಕ್ಕೆ ಆಮದಾಗುತ್ತಿತ್ತು. 2022 ರಲ್ಲಿ ದಾಖಲೆಯ 8000 ದಿಂದ 9450 ಟನ್ ಬೆಳ್ಳಿ ಆಮದಾಗುತ್ತು. ಬಳಿಕ 2023 ರಲ್ಲಿ 3625 ಟನ್, 2024 ರಲ್ಲಿ 7000 ಟನ್ ಸದ್ಯ 2025 ರ ಅಂತ್ಯದವರೆಗೆ 5500 ರಿಂದ 6000 ಟನ್ ಆಮದಾಗುವ ನಿರೀಕ್ಷೆಯಿದ್ದು, ಆಗಸ್ಟ್ ವರೆಗೆ 3,302 ಟನ್ ಆಮದಾಗಿದ್ದು, ಭಾರತಕ್ಕೆ ಬೆಳ್ಳಿ ಆಮದು ಶೇಕಡ 42ಕ್ಕೆ ಕುಸಿದಿದೆ.
ಐದು ವರ್ಷಗಳಿಗೂ ತುಲನೆ ಮಾಡಿದಾಗ ಹೆಚ್ಚೇನು ವ್ಯತ್ಯಾಸವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಕೊರತೆ ಹೆಚ್ಚು ಕಾಣುತ್ತಿದೆ. ಅಲ್ಲದೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಿರುವುದರಿಂದ ಕೊರತೆ ಉಂಟಾದಂತೆ ತೋರುತ್ತಿದೆ.
ಬೆಳ್ಳಿ ಕೊರತೆಯಿಂದ ಸಾಮಾಗ್ರಿಗಳ ತಯಾರಿಕೆಗೆ ಅಥವಾ ಆಭರಣಗಳ ತಯಾರಿಕೆಗೆ ಕಷ್ಟಕರವಾಗುವ ಸಾಧ್ಯತೆಯಿದೆ. ಸದ್ಯ ಚಿನ್ನ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನ ಬೆಳ್ಳಿಯನ್ನು ಖರೀದಿಸುತ್ತಾರೆ. ಹೀಗಾಗಿ ಬೆಳ್ಳಿ ಮಾರಾಟಗಾರರಿಗೂ ಇದರಿಂದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪರದಾಡುವಂತಾಗಿದೆ. ತಮಗೂ ಪೂರೈಕೆಯಿಲ್ಲದೇ ಗ್ರಾಹಕರಿಗೂ ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.
ಸದ್ಯ ಕೆ.ಜಿಗೆ ಬೆಳ್ಳಿಯ ಬೆಲೆ 1,70,000ಕ್ಕೂ ಅಧಿಕವಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳ್ಳಿಯೂ ಅದರ ಬೆನ್ಹಿಂದೆ ಓಟಕ್ಕಿಳಿದಂತಾಗಿದೆ.
ಹಾಸನ: ಚಿನ್ನದ ಮಾಂಗಲ್ಯ ಸರದ (Mangalsutra) ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ (Heart Attack) ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಕುಂತಲ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನ ಮಗಳ ಮನೆಗೆ ಶಿವಮೂರ್ತಿ ಬಂದಿದ್ದ. ಮನೆಗೆ ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ. ಬಳಿಕ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ. ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಪಾಲಾಕ್ಷ ವಾಪಸ್ ಮನೆಗೆ ಬಂದ ವೇಳೆ ಶಕುಂತಲಾ ನೆಲದ ಮೇಲೆ ಬಿದ್ದಿದ್ದಳು. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ
ಪತ್ನಿ ನೆಲದ ಮೇಲೆ ಬಿದ್ದಿರುವ ಬಗ್ಗೆ ಪಾಲಾಕ್ಷ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಶಕುಂತಲಾ ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಪಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಇದೇ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ವೇಳೆ ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಅಲ್ಲದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಗ್ರಾಮದ ಕೆಲವರು ಫೋನ್ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ. ಶಿವಮೂರ್ತಿ ಪತ್ನಿ ಗ್ರಾ.ಪಂ. ಸದಸ್ಯೆ ಆಗಿದ್ದರು. ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ನಂತರ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗಿದೆ. ಚಿನ್ನದ ಸರ ಕದ್ದ ಶಿವಮೂರ್ತಿ ಅದನ್ನು ಜಾವಗಲ್‌ನ ಚಾಮುಂಡೇಶ್ವರಿ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದ. ಸದ್ಯ ಪೊಲೀಸರು ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕಿನಲ್ಲಿ (Bike) ಆಗಮಿಸಿ ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಕಸಿದು ಪರಾರಿಯಾಗುತ್ತಿದ್ದಾರೆ.
ಕೈಯಲ್ಲಿ ಲಾಂಗ್ ಹಿಡಿದು ಮಹಿಳೆಯರನ್ನು ಬೆದರಿಸಿ ಚಿನ್ನದ (Gold) ಸರ ಕಳ್ಳತನ ಮಾಡುವ ಇವರ ಕೃತ್ಯ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತೆ.
ನವದೆಹಲಿ: ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. 2026ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,25,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕಿನ ಎಕನಾಮಿಕ್ ರಿಸರ್ಚ್ ಗ್ರೂಪ್ ತಿಳಿಸಿದೆ.
2025 ರಲ್ಲಿ ಜಾಗತಿಕ ಚಿನ್ನದ ಬೆಲೆಗಳು ಇಲ್ಲಿಯವರೆಗೆ ಶೇ.33 ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ 2025 ರ ಅಂತ್ಯಕ್ಕೆ ಒಂದು ಔನ್ಸ್‌ಗೆ (28.34 ಗ್ರಾಂ) ಸರಾಸರಿ 3,400-3,600 ಡಾಲರ್‌ಗೆ ತಲುಪಲಿದೆ. ಇದು, 2026 ರ ಮೊದಲಾರ್ಧದಲ್ಲಿ ಒಂದು ಔನ್ಸ್‌ಗೆ 3,600-3,800 ಡಾಲರ್‌ಗೆ ತಲುಪಬಹುದು ಎಂದು ವರದಿ ತಿಳಿಸಿದೆ.
ನವದೆಹಲಿ/ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ (Gold Smuggling Case) ಸಂಬಂಧಿಸಿದಂತೆ ರನ್ಯಾ ರಾವ್‌ಗೆ (Ranya Rao) ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ.
ಇಡಿ ಹೇಳಿದ್ದೇನು?
ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಮತ್ತು ಇತರರು ದುಬೈ, ಉಗಾಂಡಾ ಮತ್ತು ಬೇರೆ ದೇಶಗಳಲ್ಲಿರುವ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮಾರ್ಗದ ಮೂಲಕ ನಗದು ಹಣವನ್ನು ಪಾವತಿಸುತ್ತಿದ್ದರು. ಇದನ್ನೂಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ –ಭಾರತೀಯರಿಗೂ ಕಾದಿದೆ ಆಘಾತ
ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಗದು ರೂಪದಲ್ಲಿ ಮಾರಾಟ ಮಾಡಲಾಗಿತ್ತು. ಈ ಹಣ ಮತ್ತೆ ಚಿನ್ನ ತರಲು ಬಳಕೆಯಾಗುತ್ತಿತ್ತು.
ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಮೂಲಕ ವಿದೇಶದಲ್ಲಿರುವ ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ನಿರ್ವಾಹಕರು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗೆ ಆರೋಪಿಗಳು ಸಂವಹನ ನಡೆಸಿರುವುದು ದೃಢಪಟ್ಟಿದೆ ಎಂದು ಇಡಿ ಹೇಳಿದೆ.
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರನ್ಯಾರಾವ್‌ಗೆ (Ranya Rao) ಜೈಲಿನಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆಯಂತೆ.
ಮೊದ ಮೊದಲು ಜೈಲು, ಅಲ್ಲಿನ ಊಟ, ಸೆಟ್ ಆಗದೇ ಪರದಾಡಿದ್ದರು. ಆನಂತರ ದಿನ ಕಳೆದಂತೆ ಜೈಲಿನ ವಾತಾವರಣ, ಅಲ್ಲಿನ ಊಟ, ಅಲ್ಲಿನ ಸಿಬ್ಬಂದಿ ವರ್ತನೆಗೆ ಒಗ್ಗಿಕೊಂಡಿದ್ದಾರೆ. ಎಲ್ಲಾ ಸರಿಯಾಯ್ತು ಎನ್ನುವಷ್ಟರಲ್ಲಿ ರನ್ಯಾ ರಾವ್ ಇರುವ ಜೈಲಿನ ಬ್ಯಾರಕ್‌ನಲ್ಲಿ ಮಹಿಳಾ ಕೈದಿಗಳ ಕಾಟ ಶುರುವಾಗಿದೆ.
ರನ್ಯಾ ರಾವ್‌ಗೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಸಹ ಮಹಿಳಾ ಕೈದಿಗಳಿಂದ ಕಿರುಕುಳ ನಡೆಯುತ್ತಿದೆ ಎಂಬ ಗಂಭೀರ ಆರೋಪ ಬಂದಿದೆ. ಸಹ ಕೈದಿಗಳು ರನ್ಯಾರಾವ್‌ಗೆ ಚಿನ್ನ ಕಳ್ಳಿ, ಏನ್ ಸಮಾಚಾರ? ಹೇಗಿದೆ ಜೈಲು ಅಂತಾ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಇದರಿಂದ ನೊಂದ ನಟಿ ರನ್ಯಾ ರಾವ್ ಜೈಲಿನ ಸಿಬ್ಬಂದಿ ಬಳಿ ಬೇರೆಯೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಿ ಅಂತಾ ಮನವಿ ಮಾಡಿದ್ದಾಳೆ.
ರನ್ಯಾರಾವ್ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬೇರೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಲು ಸಿದ್ದತೆ ನಡೆಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಬೆಂಗಳೂರು: ರನ್ಯಾ ರಾವ್ (Ranya Rao) ಚಿನ್ನ ಕಳ್ಳ ಸಾಗಾಣಿಕೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಜಾರಿ ನಿರ್ದೇಶನಾಲಯದ (ED) ಬಳಿಕ ಈಗ ಆದಾಯ ತೆರಿಗೆ (Income Tax) ಇಲಾಖೆ ಎಂಟ್ರಿಯಾಗಿದೆ.
ರನ್ಯಾ ರಾವ್ ಮತ್ತು ಮೂವರು ಆರೋಪಿಗಳ ವಿರುದ್ಧ ಐಟಿ ಪ್ರಕರಣ ದಾಖಲಿಸಿದೆ ಅಷ್ಟೇ ಅಲ್ಲದೇ 3 ದಿನಗಳ ಕಾಲ ಹೇಳಿಕೆ ದಾಖಲು ಮಾಡಲು ಕೋರ್ಟ್‌ನಿಂದ (Court) ಅನುಮತಿ ಪಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಸನ ಮೂಲದ ಯುವಕ ಹೃದಯಾಘಾತಕ್ಕೆ ಬಲಿ
ಜೂನ್ 11 ರಿಂದ 13 ರವರೆಗೆ ಪರಪ್ಪನ ಅಗ್ರಹಾರದಲ್ಲಿ (Parappana Agrahara) ಹೇಳಿಕೆ ದಾಖಲಿಸಲು ಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಪಿಗಳ ಹೇಳಿಕೆಯನ್ನು ಐಟಿ ದಾಖಲು ಮಾಡಿದೆ.
ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.