Tag: ಚಿದಾನಂದ್.ಎಂ.ಗೌಡ

  • ಆಗ್ನೇಯ ಪದವೀಧರ ಕ್ಷೇತ್ರದಿಂದ ಚಿದಾನಂದ್.ಎಂ.ಗೌಡ ಜಯ- ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ

    ಆಗ್ನೇಯ ಪದವೀಧರ ಕ್ಷೇತ್ರದಿಂದ ಚಿದಾನಂದ್.ಎಂ.ಗೌಡ ಜಯ- ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ

    ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದಿಂದ ಜಯಗಳಿಸಿದ ಚಿದಾನಂದ್.ಎಂ.ಗೌಡ (ಪ್ರೆಸಿಡೆನ್ಸಿ) ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಹಿರಿಯ ನ್ಯಾಯವಾದಿ ವಿವೇಕ್ ಸುಬ್ಬಾ ರೆಡ್ಡಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

    ಇಂದು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಎಲ್ಲ 4 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆಗ್ನೇಯ ಪದವಿಧರ ಕ್ಷೇತ್ರದ ಚಿದಾನಂದಗೌಡ.ಎಂ.ಗೌಡ ಅವರು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಅವರನ್ನು ಸೋಲಿಸಿದ್ದಾರೆ. ಚಿದಾನಂದ್.ಎಂ.ಗೌಡ ಅವರು 30,976(ಬಿಜೆಪಿ), ಡಿ.ಟಿ.ಶ್ರೀನಿವಾಸ್ 23,851(ಪಕ್ಷೇತರ), ಚೌಡರೆಡ್ಡಿ ತೂಪಲ್ಲಿ 18,810(ಜೆಡಿಎಸ್), ರಮೇಶ್ ಬಾಬು(ಕಾಂಗ್ರೆಸ್) ಮತಗಳನ್ನು ಪಡೆದಿದ್ದಾರೆ.