Tag: ಚಿತ್ರಾವಳಿ

  • ಅತ್ಯಾಚಾರಗೈದು, ಮುಖ ಜಜ್ಜಿ ಮಹಿಳೆಯ ಬರ್ಬರ ಹತ್ಯೆ

    ಅತ್ಯಾಚಾರಗೈದು, ಮುಖ ಜಜ್ಜಿ ಮಹಿಳೆಯ ಬರ್ಬರ ಹತ್ಯೆ

    ಚಿಕ್ಕಬಳ್ಳಾಪುರ: ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಚಿತ್ರಾವತಿ ಬಳಿ ನಡೆದಿದೆ.

    ಚಿತ್ರಾವತಿ (Chitravali) ಬಳಿಯ ಡಿಎಡ್ ಕಾಲೇಜು ಬಳಿ ರಾಗಿ ಹೊಲದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅರೆ ಬೆತ್ತಲೆಯಾಗಿ ಅಂಗಾತ ಮಲಗಿ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆಯ ಮುಖವನ್ನು ಜಜ್ಜಿ ಕೊಲೆ ಮಾಡಲಾಗಿದೆ. ಇನ್ನೂ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಡಿವೈಎಸ್‍ಪಿ ವಾಸುದೇವ್, ಸಿಪಿಐ ರಾಜು ಹಾದಿಯಾಗಿ ಎಸ್‍ಐ ಪ್ರದೀಪ್ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಯುವತಿಯರ ಗುದ್ದಾಟ – ಜುಟ್ಟು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರು

    ಮೃತ ಮಹಿಳೆ ಸರಿಸುಮಾರು 30 ವರ್ಷ ಪ್ರಾಯದವರಾಗಿದ್ದಾರೆ. ವೇಶ್ಯಾವಾಟಿಕೆಗೆ ಕರೆ ತಂದು ಯಾರಾದರೂ ಕೊಲೆ ಮಾಡಿ ಹೋಗಿದ್ದಾರಾ ಎಂಬ ಅನುಮಾನ ಮೂಡಿದೆ. ಉತ್ತರ ಭಾರತ ಮೂಲದ ಹೆಣ್ಣುಮಗಳ ರೀತಿ ಕಾಣುತ್ತಿದ್ದು ಮೃತಳ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಕಾರಿಗೆ ಅಡ್ಡ ಬಂದ ನಾಯಿ- ಡಿವೈಡರ್‌ಗೆ ಡಿಕ್ಕಿಯಾಗಿ ಮಹಿಳೆಯರಿಬ್ಬರ ದುರ್ಮರಣ

    Live Tv
    [brid partner=56869869 player=32851 video=960834 autoplay=true]