ಆಗಾಗ ಕೆಲವು ಹೇಳಿಕೆಗಳಿಂದ ವಿವಾದಕ್ಕೀಡಾಗುವ ಕಾಂಟ್ರವರ್ಸಿ ಕ್ವೀನ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಮತ್ತೊಂದು ಹೇಳಿಕೆ ನೀಡಿ, ವಿವಾದ ಹುಟ್ಟುಹಾಕಿದ್ದಾರೆ. ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ, ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆ ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಬಂದಿರೋದು ಎಂದು ಹೇಳಿದ್ದಾರೆ. ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ
ಈ ರೀತಿ ಹೇಳಿಕೆ ನೀಡುವ ಮೂಲಕ ನಟಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ಕೊಡವ ಸಮುದಾಯದಿಂದ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಹಲವರು ಬಂದಿದ್ದು, ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಮುನ್ನ ನಟಿ ಪ್ರೇಮ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ನೂರಾರು ನಟರು, ಸೂಪರ್ ಸ್ಟಾರ್‌ಗಳು ಬಂದಿದ್ದಾರೆ ಆದರೆ ಡಾ.ರಾಜಕುಮಾರ್ ಏರಿದ ಎತ್ತರಕ್ಕೆ ಎಲ್ಲರೂ ಏರಲು ಕಷ್ಟಸಾಧ್ಯ. ಕನ್ನಡಿಗರಾಗಿ ಡಾ.ರಾಜ್‌ಕುಮಾರ್ (Dr. Rajkumar) ಜನಿಸಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಪುಣ್ಯ. ಅವರು ಕನ್ನಡದ ಸಂಸ್ಕೃತಿಯ ಪ್ರತೀಕವಾಗಿದ್ದರು ಎಂದು ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ 97 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಇತಿಹಾಸದಲ್ಲಿ ಕೆಲವರು ಛಾಪು ಮೂಡಿಸಿರುವಂತೆ ಡಾ.ರಾಜ್ ಕುಮಾರ್ ಅವರು ಚಿತ್ರರಂದಲ್ಲಿ ಛಾಪು ಮೂಡಿಸಿದ್ದಾರೆ. ಜನಸಾಮಾನ್ಯರ ನೋವು ನಲಿವುಗಳಿಗೆ ಡಾ.ರಾಜ್ ಸ್ಪಂದಿಸಿದ ಮಾದರಿಯಲ್ಲಿ ಮತ್ತೊಂದು ಉದಾಹರಣೆ ಇಲ್ಲ ಎಂದರು. ಇದನ್ನೂ ಓದಿ: ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇಡೀ ಜಗತ್ತಿನಾದ್ಯಂತ ಗುರುತಿಸುವಂತೆ ಬೆಳೆದ ಪರಿ ಸಾಮಾನ್ಯವಾದುದಲ್ಲ. ಇಂದಿಗೂ ಅವರ ನಟನೆಗೆ, ಗಾಯನಕ್ಕೆ ಮನಸೋಲದವರೇ ಇಲ್ಲ. ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡದ ಕಾರ್ಯಕರ್ತನಾಗಿ ಮೊದಲು ಧ್ವನಿ ಎತ್ತಿ, ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಹೇಳಿದರು.
ನಟರು ಬದುಕಿದ್ದಾಗ ಅಭಿಮಾನಿಗಳಿರುವುದು ಸಹಜ. ಮರಣದ ನಂತರವೂ ರಾಜ್‌ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿರುವುದು ನೋಡಿದರೆ ಅದೊಂದು ದೇವರು ಕೊಟ್ಟಂತಹ ವರವೇ ಸರಿ. ಯಾವುದೇ ಜಾತಿ, ಯಾವುದೇ ಧರ್ಮ ಎನ್ನುವುದು ಇಲ್ಲ. ಎಲ್ಲರೂ ಸಹ ರಾಜ್‌ಕುಮಾರ್ ಅವರ ಅಭಿಮಾನಿಗಳೇ. ಅವರು ಸರಳ, ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನವನಿರ್ದೇಶಕನ ಸಿನಿಮಾಗೆ ಕೈಜೋಡಿಸಿದ ಶಿವಣ್ಣ
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ರಾಜ್‌ಕುಮಾರ್ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ನಾನಾ ಬಗೆಯ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂಬ ಆಸೆ ಅವರದಾಗಿತ್ತು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ಅವರು ಭೌತಿಕವಾಗಿ ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತವಾಗಿವೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ
ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ ಮಾತನಾಡಿ, ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೂ ಆ ಯಶಸ್ಸಿನ ಅಮಲನ್ನು ತಲೆಗೆ ಏರಿಸಿಕೊಳ್ಳದೇ ಅತ್ಯಂತ ಸರಳವಾಗಿ ಬದುಕಿದವರು ರಾಜ್‌ಕುಮಾರ್. ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ನಾವು ನೋಡಿದ ಅನೇಕ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಂತಹ ವ್ಯಕ್ತಿತ್ವಗಳನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ ಎಂದು ಅವರ ಸಾಧನೆಯನ್ನು ಹಾಡಿಹೊಗಳಿದರು.
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬಾರದಂತೆ ನಿಷೇಧ ತರುವಲ್ಲಿ ರಾಜ್‌ಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಈ ನಿಲುವಿನಿಂದಾಗಿಯೇ ಕನ್ನಡ ಚಿತ್ರರಂಗ, ಚಿತ್ರೋದ್ಯಮ ಉಳಿದು ಅನೇಕ ಕಲಾವಿದರು, ತಂತ್ರಜ್ಞರು ಬೆಳೆಯಲು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ರಾಜ್‌ಕುಮಾರ್ ಇರದಿದ್ದರೆ ಚಿತ್ರೋದ್ಯಮ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಅಂದು ರಾಜ್ಯದಲ್ಲಿ ಇದ್ದ 182 ಚಿತ್ರಮಂದಿಗಳು, ಅವರ ಪರಿಶ್ರಮದಿಂದಾಗಿ ಸುಮಾರು 1800 ಚಿತ್ರ ಮಂದಿರಗಳಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ನೀಡಿ, ಚಿತ್ರೋದ್ಯಮ ಲಾಭದಾಯಕವಾಗಿ ಬೆಳೆಯುವಂತಾಯಿತು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಟೆಂಟ್‌ಗಳು ತಲೆ ಎತ್ತಿದವು ಎಂದರು. ಇದನ್ನೂ ಓದಿ: ‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ
ಇಂದು ಉತ್ತಮ ಚಿತ್ರಗಳ ಕೊರತೆಯಿಂದಾಗಿ ಚಿತ್ರಮಂದಿರಗಳು ಮುಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಚಿತ್ರೋದ್ಯಮದ ಭವಿಷ್ಯ ಆತಂಕ ಹುಟ್ಟಿಸುತ್ತದೆ. ರಾಜ್ ಅಭಿನಯದ ಚಿತ್ರಗಳು ಕನ್ನಡಿಗರನ್ನಷ್ಟೇ ಅಲ್ಲಾ, ಎಲ್ಲಾ ಭಾರತೀಯರನ್ನು ಸೆಳೆದವು. ಶಂಕರ್ ಗುರು ಸೇರಿ ಅನೇಕ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ತಲುಪಿವೆ. ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಅವರು ನಟಿಸಿದ ಎಲ್ಲಾ 205 ಚಿತ್ರಗಳು ‘ಯು’ ಸರ್ಟಿಫಿಕೇಟ್ ಪಡೆದದ್ದು ಈಗ ಇತಿಹಾಸ. ಅವರ ಸಮಕಾಲೀನರಾಗಿ ನಾವೆಲ್ಲಾ ಜೀವಿಸಿದ್ದು ಹೆಮ್ಮೆ ಹಾಗೂ ಸಾರ್ಥಕ ಸಂಗತಿ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲಕ್ಕಾಗಿ ದುಡಿದ ಮೇರು ಚೇತನ ಡಾ.ರಾಜ್‌ಕುಮಾರ್ ಆಗಿದ್ದರು. ಅವರ ಬೆನ್ನ ಹಿಂದಿನ ಶಕ್ತಿಯಾಗಿ ಅವರ ಸಹೋದರ ಎಸ್.ಪಿ.ವರದರಾಜ್ ನಿರ್ವಹಿಸಿದ ಕಾರ್ಯವೂ ಸ್ಮರಣೀಯ ಎಂದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ಡಾ.ರಾಜ್, ಅಮಿತಾಬ್ ಬಚ್ಚನ್, ಶಿವಾಜಿ ಗಣೇಶನ್ ಮೊದಲಾದ ಹಿರಿಯ ನಟರು ಪ್ರೇಕ್ಷಕರೊಂದಿಗೆ ನೇರ ಸಂಬಂಧ, ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿ ದೊಡ್ಡ ಹೆಸರು, ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಮರಾಠಿ ಮಾಧ್ಯಮದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದ ತಾವು ಕರ್ನಾಟಕ ಕೇಡರ್‌ಗೆ ಐಪಿಎಸ್ ಅಧಿಕಾರಿಯಾಗಿ ಬಂದಾಗ ಕನ್ನಡ ಕಲಿಯಲು ಡಾ.ರಾಜ್‌ಕುಮಾರ್ ಚಲನಚಿತ್ರಗಳೇ ಗುರುವಾದವು. ಡಾ.ರಾಜ್ ಸಂಭಾಷಣೆಗಳೇ ಸ್ಫೂರ್ತಿ, ಪ್ರೇರಣೆಯಾದವು ಎಂದರು.
ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ, 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು. ಅಂದಿನಿಂದ ರಾಜ್‌ಕುಮಾರ್ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಪ್ರತಿ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ
ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ರಾಮಚಂದ್ರ ಹಡಪದ, ಸ್ಪರ್ಶ ಹಾಗೂ ತಂಡದವರಿಂದ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.
ಲೈಮಾ: ವಯಸ್ಕರ ಚಲನಚಿತ್ರ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದ ಪೆರುವಿನ ನೀಲಿ ಚಿತ್ರತಾರೆ ಥೈನಾ ಫೀಲ್ಡ್ಸ್(24) (Thaina Fields) ಅದಾದ ಒಂದೇ ತಿಂಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆಕೆಯ ಆಪ್ತ ಸ್ನೇಹಿತ ಅಲೆಜಾಂಡ್ರಾ ಸ್ವೀಟ್ (Alejandra Sweet) ಅವರು ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ಸ್ನೇಹಿತೆಯ ಸಾವಿನಿಂದ ದುಃಖಿತನಾಗಿದ್ದೇನೆ, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆಕೆಯನ್ನು ಪ್ರೀತಿಸುವವರೆಲ್ಲರೂ ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು
ಫೀಲ್ಡ್ ನೊಂದಿಗೆ ಕೆಲಸ ಮಾಡಿದ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಮಿಲ್ಕಿ ಪೆರು, ಥೈನಾ ಫೀಲ್ಡ್ಸ್‌ಗೆ ಸಂತಾಪ ಸೂಚಿಸಿದೆ. ವಯಸ್ಕ ಉದ್ಯಮದಲ್ಲಿ (Film Industry) ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಥೈನಾ ಫೀಲ್ಡ್ಸ್ ಇತ್ತೀಚೆಗೆ ಹೇಳಿಕೊಂಡಿದ್ದಳು. ಅಡಲ್ಟ್ಸ್ ಕಂಟೆಂಟ್‌ನಲ್ಲಿ ನಟಿಸಲು ಪ್ರಾರಂಭಿಸಿದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ. ತನ್ನನ್ನು ನೇಮಿಸಿಕೊಂಡವರು ತಮಗೆ ಬೇಕಾದುದ್ದನ್ನು ಮಾಡಬೇಕು ಎಂದು ಬಯಸುತ್ತಾರೆ. ಮಹಿಳೆಯರು ವಯಸ್ಕರ ಚಿತ್ರಗಳಲ್ಲಿ ನಟಿಸುವುದು ತುಂಬಾ ಕಷ್ಟಕರವಾಗಿತ್ತು. ಈ ಆರೋಪಗಳನ್ನು ಮಾಡಿದ ಕೆಲ ತಿಂಗಳ ನಂತರ, ಥೈನಾ ಫೀಲ್ಡ್ಸ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರಕ್ಕೆ ಯತ್ನ ಆರೋಪ – ರೊಚ್ಚಿಗೆದ್ದ ಗ್ರಾಮಸ್ಥರು
ಸದ್ಯ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯಲ್ಲಿ, ಪೆರುವಿಯನ್ ವಯಸ್ಕ ಚಲನಚಿತ್ರ ತಾರೆ- ಥೈನಾ ಫೀಲ್ಡ್ ಎಂಬ ಹೆಸರಿನಿಂದ ಕೆಲಸ ಮಾಡುತ್ತಿದ್ದು, ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ 24 ವರ್ಷದ ನಟಿಯ ದೇಹವು ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಪತ್ತೆಯಾಗಿದೆ. ಲೈಂಗಿಕ ಉದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ. ಆಕೆಯ ಉದ್ಯಮದಲ್ಲಿ ತೊಡಗಿದ್ದ ಮಿಲ್ಕಿ ಪೆರು ಕಂಪನಿಯೂ ನಟಿಯ ಸಾವಿಗೆ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್
ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚಲನಚಿತ್ರ ನಟರದ್ದೇ ಅಬ್ಬರ. ರೆಬೆಲ್ ಸ್ಟಾರ್ ಅಂಬರೀಶ್ (Ambareesh), ನಟಿ ರಮ್ಯಾ (Ramya), ಹಿರಿಯ ನಟಿ ಸುಮಲತಾ (Sumalatha), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೀಗೆ ಸ್ಟಾರ್ ಗಳ ಚುನಾವಣಾ ಸ್ಪರ್ಧೆಯ ಪಟ್ಟಿ ದೊಡ್ಡದಿದೆ.
ಸೋತು ಗೆದ್ದವರು ಬಳಷ್ಟು ಜನ ಮಂಡ್ಯ ಚುನಾವಣಾ (Mandya Election) ಅಖಾಡದಲ್ಲಿ ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ ಅವಿಭಜಿತ ಮೈಸೂರು ಜಿಲ್ಲೆಯ ಮತದಾರ ಚಲನಚಿತ್ರ ರಂಗದವರಿಗೆ ಮನ್ನಣೆಯೇ ನೀಡಿಲ್ಲ. ಮೈಸೂರಿನವರಾದ ಖ್ಯಾತ ನಟ, ನಿರ್ಮಾಪಕ ಎಂ.ಪಿ. ಶಂಕರ್ (MP Shankar), ಮೂಲತಃ ಹುಣಸೂರಿನವರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (Dwarakeesh), ಕೊಳ್ಳೇಗಾಲದವರಾದ ನಟ, ನಿರ್ದೇಶಕ ಎಸ್. ಮಹೇಂದರ್ (S Mahender) ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಇದನ್ನೂ ಓದಿ: ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ
ಎಂ.ಪಿ. ಶಂಕರ್ ಅವರು 1994 ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಎಸ್. ಬಂಗಾರಪ್ಪ ಅವರ ಕೆಸಿಪಿ ಅಭ್ಯರ್ಥಿಯಾಗಿ ಕೇವಲ 785 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಆಗ ಗೆದ್ದಿದ್ದು ಬಿಜೆಪಿ ಎ. ರಾಮದಾಸ್ (A Ramdas). 2004 ರಲ್ಲಿ ದ್ವಾರಕೀಶ್ ಅವರು ಹುಣಸೂರಿನಿಂದ ವಿಜಯಸಂಕೇಶ್ವರರ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, 2264 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್‍ನ ಜಿ.ಟಿ. ದೇವೇಗೌಡ ಗೆದ್ದರು.
2008 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಎಸ್. ಮಹೇಂದರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25,533 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ಗೆದ್ದಿದ್ದು ಕಾಂಗ್ರೆಸ್. ಇದಾದ ನಂತರ ಮಹೇಂದರ್ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದರು. ಆದರೆ ಬಿಜೆಪಿಯಲ್ಲಿದ್ದಷ್ಟು ರಾಜಕೀಯವಾಗಿ ಸಕ್ರಿಯರಾಗಿಲ್ಲ.
ದಕ್ಷಿಣ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ (Remuneration) ಪಡೆಯುವ ನಟರ ಪಟ್ಟಿಯಲ್ಲಿ ತಮಿಳು ಮತ್ತು ತೆಲುಗು (Telugu) ನಟರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರವೊಂದಕ್ಕೆ ಕನಿಷ್ಠ ಹತ್ತು ಕೋಟಿಯಿಂದ ಗರಿಷ್ಠ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರು ಅಲ್ಲಿದ್ದಾರೆ. ಹಾಗಾಗಿ ಸಂಭಾವನೆ ವಿಚಾರ ಬಂದರೆ ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಪವನ್ ಕಲ್ಯಾಣ್ (Pawan Kalyan) , ಚಿರಂಜೀವಿ, ಜ್ಯೂನಿಯರ್ ಎನ್.ಟಿ.ಆರ್ ಹೀಗೆ ಪ್ರಮುಖ ನಟರ ಹೆಸರು ಕೇಳಿ ಬರುತ್ತವೆ. ಇವರ ಸಂಭಾವನೆ ವಿಚಾರ ನಾನಾ ರೀತಿಯಲ್ಲೂ ಚರ್ಚೆ ಆಗಿದ್ದಿದೆ. ಆದರೆ, ಈವರೆಗೂ ಅಧಿಕೃತವಾಗಿ ಯಾರೂ ತಮ್ಮ ಸಂಭಾವನೆ ಬಗ್ಗೆ ಮಾತನಾಡಿರಲಿಲ್ಲ.
ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅಧಿಕೃತವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತೇನೆ ಮತ್ತು ಎಷ್ಟು ದಿನ ಕಾಲ್ ಶೀಟ್ ನೀಡುತ್ತೇನೆ ಎನ್ನುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ತಮ್ಮ ಸಂಭಾವನೆ ಎಷ್ಟು ಮತ್ತು ಹೇಗೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?
ಪವನ್ ಕಲ್ಯಾಣ್ ಜನಸೇನಾ (Janasena) ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಚಾರವಾಗಿ ವಿರೋಧಿಗಳು ಮಾತನಾಡುತ್ತಲೇ ಇದ್ದರು. ಅಭಿಮಾನಿಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಕಟ್ಟುತ್ತಿದ್ದಾರೆ. ಆ ಪಕ್ಷದ ಹಿಂದೆ ಹಣ ಮಾಡುವ ಉದ್ದೇಶವಿದೆ ಎಂದು ಟೀಕೆ ಮಾಡಿದ್ದೂ ಇದೆ. ಅದೆಲ್ಲದಕ್ಕೂ ಉತ್ತರ ನೀಡಿರುವ ಪವನ್ ಕಲ್ಯಾಣ್, ‘ನನಗೆ ದುಡ್ಡಿನ ಚಿಂತೆ ಇಲ್ಲ. ನಾನು ದುಡ್ಡು ಮಾಡುವುದಕ್ಕೂ ಬಂದಿಲ್ಲ. ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಒಂದು ಚಿತ್ರಕ್ಕೆ 22 ದಿನಗಳ ಕಾಲ್ ಶೀಟ್ ಕೊಡುವೆ. 44 ಕೋಟಿ ರೂಪಾಯಿ ಬರುತ್ತದೆ. ಊಟ ಮಾಡುವುದೇ ದಿನಕ್ಕೆ ಒಂದೇ ಸಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ತಮ್ಮ ಭಾಷಣದಲ್ಲಿ ಸಂಭಾವನೆಯ ವಿಚಾರವಷ್ಟೇ ಅಲ್ಲ, ತಾವು ಚಿತ್ರಕ್ಕೆ ಕೊಡುವ ಡೇಟ್ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕೋಟಿ ಕೋಟಿ ಸಂಪಾದನೆಯನ್ನು ಸಿನಿಮಾದಲ್ಲೇ ಮಾಡುತ್ತೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಜನಸೇವೆಗೆ ತಾವು ಜನಸೇನಾ ಪಕ್ಷ ಕಟ್ಟಿರುವುದಾಗಿಯೂ ತಿಳಿಸಿದ್ದಾರೆ.
ಟಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಅಕ್ಕಿನೇನಿ ನಾಗಾರ್ಜುನ (Akkineni nagarjuna) ಇದೀಗ ರಾಜಕೀಯದತ್ತ ಮುಖ ಮಾಡಲಿದ್ದಾರೆ. ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡಕ್ಕೆ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ.
ಸಿನಿಮಾ ಸ್ಟಾರ್‌ಗಳು ರಾಜಕೀಯ (Politics) ರಂಗಕ್ಕೆ ಎಂಟ್ರಿ ಕೊಡುವುದು ಹೊಸ ವಿಚಾರವಲ್ಲ. ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಮಿಂಚಿದ ಹಾಗೆ ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿರುವವರಿದ್ದಾರೆ. ಇದೀಗ ಸಿನಿಮಾರಂಗದಿಂದ ರಾಜಕೀಯಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ ಹಾಗಂತ ಟಿಟೌನ್ ಈ ವಿಚಾರ ಸಖತ್ ಸದ್ದು ಮಾಡಿದೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್
ಟಾಲಿವುಡ್‌ನ ಸ್ಟಾರ್ ಆಗಿ ಮಿಂಚ್ತಿರುವ ನಾಗಾರ್ಜುನ (Nagarjuna) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ನಾಗಾರ್ಜುನ ಅವರು ಪೊಲಿಟಿಕ್ಸ್ ಕಡೆಗೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಆಸಕ್ತಿಯಿದೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ. ಇನ್ನೂ ಈ ವಿಚಾರದ ಬಗ್ಗೆ ನಾಗಾರ್ಜುನ ಅವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ನಾಗಾರ್ಜುನ ಅವರು ಮುಂಬರುವ ಆಂಧ್ರ ಪ್ರದೇಶ ಚುನಾವಣೆಯಲ್ಲಿ ವಿಜಯವಾಡ ಕ್ಷೇತ್ರದಿಂದ ನಿಲ್ಲುವ ಸಾಧ್ಯತೆಯಿದೆ. ವೈಸಿಪಿ ಪಕ್ಷದಿಂದ ನಿಲ್ಲುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರರಂಗದಲ್ಲಿ ಇದೀಗ ಬೇಡಿಕೆ ಇರುವಾಗಲೇ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ತಮಿಳು ಚಿತ್ರರಂಗದಲ್ಲಿ ನಟಿ, ನಿರೂಪಕಿಯಾಗಿ ಗಮನ ಸೆಳೆದಿದ್ದ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇಬ್ಬರೂ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಗಮನ ಸೆಳೆದಿದ್ದ ಮಹಾಲಕ್ಷ್ಮೀ, ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದರು. ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್
ರವೀಂದರ್ ಚಂದ್ರಶೇಖರನ್ ಅವರು ಕೂಡ `ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಇಬ್ಬರೂ ಸಹ ತಮ್ಮ ವಿವಾಹಮಹೋತ್ಸವದ ಫೋಟೋಗಳನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಹಾಲಕ್ಷ್ಮೀ ಅವರು, ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 12 ವರ್ಷ ಕಳೆದಿದೆ. ಸದ್ಯ ಇದೇ ಖುಷಿಯಲ್ಲಿರುವ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸದ್ಯ ಕಾತುವಾಕುಲ ರೆಂಡು ಕಾದಲ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾ, 2010ರಲ್ಲಿ ತೆಲುಗಿನ ರೋಮ್ಯಾಂಟಿಕ್ ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಂದಿಗೆ 12 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿರುವ ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಜೇಮ್ಸ್ ಸಿನಿಮಾ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್
ಫೋಟೋ ಜೊತೆಗೆ ಇಂದು ಬೆಳಗ್ಗೆ ಎದ್ದ ಕೂಡಲೇ ನಾಣು ಚಿತ್ರರಂಗದಲ್ಲಿ 12 ವರ್ಷ ಪೂರೈಸಿರುವ ವಿಚಾರ ನೆನೆಪಾಯಿತು. ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್ ಮತ್ತು ಮರೆಯಲಾದ 12 ವರ್ಷಗಳ ಕ್ಷಣಗಳು ನನ್ನನ್ನು ಸತ್ತುವರೆಯಿತು. ಈ ಜರ್ನಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾದ ಬಗೆಗಿರುವ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಮತ್ತು ದಿನದಿಂದ ದಿನಕ್ಕೆ ಪ್ರೀತಿ ಹೆಚ್ಚಾಗುತ್ತಲೇ ಇರುತ್ತದೆ ಎಂದು ಆಶಿಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್
ಪ್ರಸ್ತುತ ಸಮಂತಾ ಗುಣಶೇಖರ್ ಅವರ ಶಾಕುಂತಲಂ ಮತ್ತು ವಿಘ್ನೇಶ್ ಶಿವನ್ ಅವರ ಕಾತುವಾಕುಲ ರೆಂಡು ಕಾದಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಈ ಸಿನಿಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಪುಷ್ಪಾ ಸಿನಿಮಾದ ಊ ಅಂಟಾವಾ ಸಾಂಗ್‍ನಲ್ಲಿ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದರು. ಇನ್ನೂ ಈ ಸಾಂಗ್ ಎಲ್ಲೆಡೆ ಭಾರೀ ಸದ್ದು ಮಾಡಿತ್ತು.
ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ಅಂತ ಕರೆಯಲ್ಪಡುವ ಪ್ರದೀಪ್ ಕೆ. ಆರ್ (61) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ಅವರು ಕೊಟ್ಟಾಯಂ ಎಂಬ ತಮ್ಮ ಸ್ಥಳೀಯ ಸ್ಥಳದ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು. ಜೂನಿಯರ್ ಕಲಾವಿದರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು ರಂಗಭೂಮಿ ಮತ್ತು ದೂರದರ್ಶನ ಉದ್ಯಮದ ಭಾಗವಾಗಿದ್ದರು.
ಪ್ರದೀಪ್ ಅವರಿಗೆ ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ತಮ್ಮ ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 10 ನೇ ತರಗತಿಯಲ್ಲಿದ್ದಾಗ, ಅವರು ಎನ್‍ಎನ್ ಪಿಳ್ಳೈ ಅವರ ನಾಟಕದಲ್ಲಿ ಬಾಲ ಕಲಾವಿದರಾಗಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್
ಪ್ರದೀಪ್ ಅವರು ನಟನೆಯಲ್ಲದೇ ಎಲ್‍ಐಸಿ ಜೀವ ವಿಮಾ ನಿಗಮದ ಎಜೆಂಟ್ ಆಗಿ ಸಹ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ನಂತರವೂ ತಮ್ಮ ನಟನಾ ಪ್ರವೃತ್ತಿಯನ್ನು ಮುಂದುವರಿಸಿದ್ದರು. 90ರ ದಶಕದ ಆರಂಭದಲ್ಲಿ, ಟಿವಿ ಧಾರಾವಾಹಿಯೊಂದರಲ್ಲಿ ಸ್ಕ್ರೀನ್ ಟೆಸ್ಟ್‍ಗಾಗಿ ಅವರು ತಮ್ಮ ಮಗನ ಜೊತೆ ಹೋಗಿದ್ದರು. ಈ ವೇಳೆ ಧಾರಾವಾಹಿಯ ನಿರ್ಮಾಪಕರು ಅವರಿಗೆ ಅದೇ ಧಾರಾವಾಹಿಯಲ್ಲಿ ಪಾತ್ರವನ್ನು ನೀಡಿದ್ದರು. ಇದನ್ನೂ ಓದಿ: ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ
1999 ರಲ್ಲಿ ಅವರು ಹಿರಿಯ ಐ.ವಿ.ಶಶಿ ನಿರ್ದೇಶನದ ಚಲನಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದರು. ನಂತರ ಅವರು 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರದೀಪ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ನಟಿಸಿರುವ ಸಣ್ಣ ಪಾತ್ರಗಳಿಂದಲೇ ಚಿತ್ರರಂಗದಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಂಡಿದ್ದರು.
ಐವಿ ಶಶಿಯವರ ಈ ನಾಡು ಇನ್ನಲೇ ವರೇ (2001) ಅವರ ಮೊದಲ ಚಿತ್ರವಾಗಿದೆ. ಅವರು ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ 70ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅವರ ಕೆಲವು ಪಾತ್ರಗಳು ಮತ್ತು ಸಂಭಾಷಣೆಗಳು ಇಂದಿಗೂ ಜನಪ್ರಿಯವಾಗಿವೆ.
ಗೌತಮ್ ಮೆನನ್ ಅವರ ವಿನೈತಾಂಡಿ ವರುವಾಯಾ ಮತ್ತು ಅದರ ಹಿಂದಿ, ತಮಿಳು ಮತ್ತು ತೆಲುಗು ರಿಮೇಕ್‍ಗಳ ಮೂಲಕ ಅವರು ಬೆಳಕಿಗೆ ಬಂದಿದ್ದರು. 2 ನೇ ಏಷ್ಯಾನೆಟ್ ಕಾಮಿಡಿ ಅವಾಡ್ರ್ಸ್ 2016 ರಲ್ಲಿ ವಿವಿಧ ಪಾತ್ರಗಳಿಗಾಗಿ ಪ್ರದೀಪ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬರುವ ಮೋಹನ್ ಲಾಲ್ ಅಭಿನಯದ ಚಿತ್ರ ‘ಆರಟ್ಟು’ ಅವರ ಕೊನೆಯ ಸಿನಿಮಾವಾಗಿದೆ.
ಗುರುವಾರದಂದು ಪ್ರದೀಪ್ ಅವರ ಅಂತ್ಯಕ್ರಿಯೆ ನಡೆಯಲಿದೆ, ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇವರಿಗೆ ಸಿನಿಮಾ ರಂಗದ ಬಗ್ಗೆ ತಿಳಿಯದ ವಿಚಾರವಿಲ್ಲ. ನಟ ರಜನಿಕಾಂತ್, ಡಾ.ವಿಷ್ಣುವರ್ಧನ್, ಡಾ.ರಾಜ್‍ಕುಮಾರ್, ಚಲನಚಿತ್ರ ನಿದೇರ್ಶಕ ಪುಟ್ಟಣ್ಣಕಣಗಲ್, ನಟ ಕಲ್ಯಾಣ್‍ಕುಮಾರ್ ಇವರೊಡನೆ ಉತ್ತಮ ಒಡನಾಟವನ್ನು ಹೊಂದಿದ್ದರು ಹಾಗೂ ಈ ಎಲ್ಲಾ ವ್ಯಕ್ತಿಗಳ ಬಗ್ಗೆ ನನಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ
ಚಲನಚಿತ್ರರಂಗದ ಹಳೆ ತಲೆಮಾರಿನವರನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಚಂದನವನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ನಟಿ ತಾರಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.